- Home
- Astrology
- Vaastu
- ಹಿಟ್ಟು ನಾದಿದ ನಂತರ ಒಂದು ಸಣ್ಣ ತುಂಡನ್ನ ಏಕೆ ಮುರಿಯುತ್ತಾರೆ? ಹಿರಿಯರು ಹೇಳಿಕೊಟ್ಟ ಈ ಸಂಪ್ರದಾಯ ಮೂಢನಂಬಿಕೆಯಲ್ಲ
ಹಿಟ್ಟು ನಾದಿದ ನಂತರ ಒಂದು ಸಣ್ಣ ತುಂಡನ್ನ ಏಕೆ ಮುರಿಯುತ್ತಾರೆ? ಹಿರಿಯರು ಹೇಳಿಕೊಟ್ಟ ಈ ಸಂಪ್ರದಾಯ ಮೂಢನಂಬಿಕೆಯಲ್ಲ
Why break dough before making roti: ಹಿಟ್ಟು ನಾದಿದ ತಕ್ಷಣ ರೊಟ್ಟಿ ಅಥವಾ ಚಪಾತಿ ಮಾಡಬಾರದು ಎನ್ನುವುದಕ್ಕೆ ಬಲವಾದ ವೈಜ್ಞಾನಿಕ ಕಾರಣ ಇದೆ. ಹಾಗಾದರೆ ಆ ರಹಸ್ಯಗಳೇನು ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ.
ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಎರಡೂ ಕಾರಣಗಳಿವೆ
ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಎರಡೂ ಕಾರಣಗಳಿವೆ
ಭಾರತೀಯ ಸಂಸ್ಕೃತಿಯಲ್ಲಿ ಅಡುಗೆಮನೆಯು ಕೇವಲ ಆಹಾರ ತಯಾರಿಸುವ ಜಾಗವಲ್ಲ; ಅದು ಮನೆಯ ಶಕ್ತಿ, ಸಂಪ್ರದಾಯ ಮತ್ತು ಸಮೃದ್ಧಿಯ ಕೇಂದ್ರಬಿಂದು. ಹಿಟ್ಟು ನಾದುವುದರಿಂದ ಹಿಡಿದು ಚಪಾತಿ ಮಾಡುವವರೆಗೆ ನಾವು ಅನುಸರಿಸುವ ಪ್ರತಿಯೊಂದು ಸಣ್ಣ ಕೆಲಸದ ಹಿಂದೆಯೂ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದ ಕೆಲವು ಸಂಗತಿಗಳು ಇಲ್ಲಿವೆ.
1. ಹಿಟ್ಟು ನಾದಿದ ನಂತರ ಸ್ವಲ್ಪ ಮುರಿಯುವುದು ಏಕೆ?
1. ಹಿಟ್ಟು ನಾದಿದ ನಂತರ ಸ್ವಲ್ಪ ಮುರಿಯುವುದು ಏಕೆ?
ಅನೇಕ ಮನೆಗಳಲ್ಲಿ ಗೃಹಿಣಿಯರು ಹಿಟ್ಟು ನಾದಿದ ನಂತರ ಆ ಉಂಡೆಯ ಒಂದು ಬದಿಯಿಂದ ಸಣ್ಣ ತುಂಡನ್ನು ಮುರಿದು ಇಡುತ್ತಾರೆ. ಇದರ ಹಿಂದೆ ಒಂದು ಬಲವಾದ ನಂಬಿಕೆಯಿದೆ. ಹೀಗೆ ಮಾಡುವುದರಿಂದ ಮನೆಯ ಸಮೃದ್ಧಿಯು ಒಂದೇ ಕಡೆ ಕಟ್ಟುಬೀಳದೆ, ಮನೆಯ ಮೂಲೆ ಮೂಲೆಗೂ ಹರಡುತ್ತದೆ ಎಂಬುದು ಹಿರಿಯರ ಮಾತು. ಅಡುಗೆಮನೆಯಲ್ಲಿ ಈ ಸಣ್ಣ ವಿಷಯವನ್ನು ಪಾಲಿಸುವ ಮನೆಯಲ್ಲಿ ಎಂದಿಗೂ ಅನ್ನ-ಧನಕ್ಕೆ ಕೊರತೆಯಾಗುವುದಿಲ್ಲ ಎಂದು ನಂಬಲಾಗಿದೆ.
2. ನಾದಿದ ಹಿಟ್ಟನ್ನು ಸ್ವಲ್ಪ ಸಮಯ ಸಮಯ ಏಕಿಡಬೇಕು?
2. ನಾದಿದ ಹಿಟ್ಟನ್ನು ಸ್ವಲ್ಪ ಸಮಯ ಸಮಯ ಏಕಿಡಬೇಕು?
ಹಿಟ್ಟು ನಾದಿದ ತಕ್ಷಣ ಚಪಾತಿ ಮಾಡದೆ, ಸ್ವಲ್ಪ ಸಮಯ ಮುಚ್ಚಿಡುವುದು ಒಳ್ಳೆಯದು.
*ಆಧ್ಯಾತ್ಮಿಕ ದೃಷ್ಟಿಯಿಂದ ನೋಡುವುದಾದರೆ ಹಿಟ್ಟನ್ನು ಸ್ವಲ್ಪ ಸಮಯ ಸ್ಥಿರವಾಗಿಟ್ಟಾಗ ಅದರಲ್ಲಿ 'ಸಾತ್ವಿಕ ಶಕ್ತಿ' ವೃದ್ಧಿಯಾಗುತ್ತದೆ. ಇದರಿಂದ ತಯಾರಾದ ಆಹಾರವು ಮನಸ್ಸಿಗೆ ಶಾಂತಿ ನೀಡುತ್ತದೆ.
*ಇನ್ನು ವೈಜ್ಞಾನಿಕ ಕಾರಣವನ್ನು ನೋಡುವುದಾದರೆ ಹಿಟ್ಟು ನಾದಿದ ನಂತರ ವಿಶ್ರಾಂತಿ ನೀಡಿದಾಗ ಅದರಲ್ಲಿರುವ 'ಗ್ಲುಟನ್' (Gluten) ಅಂಶವು ಸ್ಥಿರಗೊಳ್ಳುತ್ತದೆ. ಇದರಿಂದ ಚಪಾತಿ ಅತ್ಯಂತ ಮೃದುವಾಗಿ ಬರುತ್ತದೆ ಮತ್ತು ಜೀರ್ಣಕ್ರಿಯೆಗೂ ಸುಲಭವಾಗುತ್ತದೆ.
3. ಅಡುಗೆ ಮಾಡುವಾಗ ಗೃಹಿಣಿಯ ಮನಸ್ಥಿತಿ ಹೇಗಿರಬೇಕು?
3. ಅಡುಗೆ ಮಾಡುವಾಗ ಗೃಹಿಣಿಯ ಮನಸ್ಥಿತಿ ಹೇಗಿರಬೇಕು?
ಅಡುಗೆ ಮಾಡುವವರ ಮನಸ್ಥಿತಿ ಆಹಾರದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಗೃಹಿಣಿಯು ತನ್ನ ಕುಟುಂಬದ ಮೇಲೆ ಪ್ರೀತಿ ಮತ್ತು ಸಕಾರಾತ್ಮಕ ಭಾವನೆ ಹೊಂದಿರುತ್ತಾಳೆ. ಆಕೆ ಶಾಂತ ಮನಸ್ಸಿನಿಂದ ಅಡುಗೆ ಮಾಡಿದರೆ, ಆ ಆಹಾರವು ಅಮೃತದಂತಾಗುತ್ತದೆ. ಕೋಪ, ಒತ್ತಡ ಅಥವಾ ಜಗಳವಾಡುತ್ತಾ ಅಡುಗೆ ಮಾಡಿದರೆ, ಆ ನಕಾರಾತ್ಮಕ ಶಕ್ತಿಯು ಆಹಾರದ ಮೂಲಕ ಕುಟುಂಬದ ಸದಸ್ಯರ ದೇಹವನ್ನು ಸೇರುತ್ತದೆ. ಇದು ಆರೋಗ್ಯ ಮತ್ತು ಮನೆಯ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
4. ಅಡುಗೆಮನೆಯಲ್ಲಿ ಪಾಲಿಸಬೇಕಾದ ಶಿಸ್ತು
4. ಅಡುಗೆಮನೆಯಲ್ಲಿ ಪಾಲಿಸಬೇಕಾದ ಶಿಸ್ತು
ಶುಚಿತ್ವ: ಹಿಟ್ಟನ್ನು ಎಂದಿಗೂ ತೆರೆದಿಡಬಾರದು. ಇದು ಅಶುಭ ಮಾತ್ರವಲ್ಲ, ಅಸ್ವಚ್ಛತೆಯೂ ಹೌದು.
ಎಂಜಲು ಪಾತ್ರೆಗಳು: ಅಡುಗೆಮನೆಯಲ್ಲಿ ಎಂಜಲು ಪಾತ್ರೆಗಳನ್ನು ದೀರ್ಘಕಾಲದವರೆಗೆ ಇಡಬಾರದು. ಇದು ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಸಕಾರಾತ್ಮಕತೆ: ಅಡುಗೆ ಮಾಡುವಾಗ ಕೆಟ್ಟ ಶಬ್ದಗಳನ್ನು ಬಳಸಬಾರದು. ದೇವರ ನಾಮ ಸ್ಮರಣೆ ಅಥವಾ ಒಳ್ಳೆಯ ಆಲೋಚನೆಗಳೊಂದಿಗೆ ಅಡುಗೆ ಮಾಡುವುದು ಮನೆಯಲ್ಲಿ ಸಮೃದ್ಧಿ ತರುತ್ತದೆ.
ಮೂಢನಂಬಿಕೆಯಲ್ಲಇದು ಶಿಸ್ತು, ಆರೋಗ್ಯ
ಮೂಢನಂಬಿಕೆಯಲ್ಲಇದು ಶಿಸ್ತು, ಆರೋಗ್ಯ
ನಮ್ಮ ಹಿರಿಯರು ಹಾಕಿಕೊಟ್ಟ ಈ ಸಂಪ್ರದಾಯಗಳು ಕೇವಲ ಮೂಢನಂಬಿಕೆಗಳಲ್ಲ. ಅವುಗಳ ಹಿಂದೆ ಶಿಸ್ತು, ಆರೋಗ್ಯ ಮತ್ತು ಮನೆಯ ಏಳಿಗೆಯ ರಹಸ್ಯ ಅಡಗಿದೆ. ಈ ಸಣ್ಣ ಬದಲಾವಣೆಗಳನ್ನು ನಿಮ್ಮ ಅಡುಗೆಮನೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುವಂತೆ ಮಾಡಬಹುದು.
