ಸಂಜೆ ಮನೆಯಲ್ಲಿ ಎಷ್ಟು ದೀಪ ಹಚ್ಚಬೇಕು? ಇದರಲ್ಲಿ ವಿಜ್ಞಾನ-ಶಾಸ್ತ್ರ ಎರಡೂ ಇದೆ
Deeparadhana rules: ಮನೆಯಲ್ಲಿ ದೀಪ ಹಚ್ಚುವುದು ಕೇವಲ ಸಂಪ್ರದಾಯವಲ್ಲ, ಅದೊಂದು ಜೀವನದ ಸಕಾರಾತ್ಮಕ ಶಕ್ತಿಯ ಮೂಲ. ಸಂಜೆ ವೇಳೆ ದೀಪ ಹಚ್ಚುವಾಗ ಮಾಡುವ ಸಣ್ಣ ತಪ್ಪುಗಳು ದೋಷಕ್ಕೆ ಕಾರಣವಾಗಬಹುದು.
ಒತ್ತಡವನ್ನು ಕಡಿಮೆ ಮಾಡುತ್ತೆ
ಒತ್ತಡವನ್ನು ಕಡಿಮೆ ಮಾಡುತ್ತೆ
ಸನಾತನ ಹಿಂದೂ ಸಂಪ್ರದಾಯದಲ್ಲಿ ಅಗ್ನಿಯನ್ನು ಅತ್ಯಂತ ಪವಿತ್ರ ಮತ್ತು ದೈವ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಹಚ್ಚುವ ಒಂದು ಪುಟ್ಟ ದೀಪವು ಕೇವಲ ಕತ್ತಲನ್ನು ಮಾತ್ರವಲ್ಲ, ನಮ್ಮ ಜೀವನದ ಅಜ್ಞಾನ ಮತ್ತು ನಕಾರಾತ್ಮಕ ಶಕ್ತಿಗಳನ್ನು ಹೊಡೆದೋಡಿಸುತ್ತದೆ. ದೀಪದ ಬೆಳಕು ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೆ, ಒತ್ತಡವನ್ನು ಕಡಿಮೆ ಮಾಡಿ ಸಕಾರಾತ್ಮಕ ಆಲೋಚನೆಗಳನ್ನು ಮೂಡಿಸುತ್ತದೆ.
ಲಕ್ಷ್ಮಿ ಕಟಾಕ್ಷ
ಮನೆಯಲ್ಲಿ ಪ್ರತಿದಿನ ಭಕ್ತಿಶ್ರದ್ಧೆಯಿಂದ ದೀಪಾರಾಧನೆ ಮಾಡುವುದರಿಂದ ಮಹಾಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ. ಇದರಿಂದ ಮನೆಯಲ್ಲಿರುವ ಆರ್ಥಿಕ ಸಂಕಷ್ಟಗಳು ದೂರವಾಗಿ, ಆದಾಯದ ಮೂಲಗಳು ಹೆಚ್ಚುತ್ತವೆ. ಅನಗತ್ಯ ಖರ್ಚುಗಳು ಕಡಿಮೆಯಾಗಿ ಸಿರಿ-ಸಂಪತ್ತು ಮತ್ತು ಧಾನ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.
ವಾಸ್ತು ದೋಷಕ್ಕೆ ದೀಪವೇ ಮದ್ದು
ವಾಸ್ತು ದೋಷಕ್ಕೆ ದೀಪವೇ ಮದ್ದು
ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೇವರ ಕೋಣೆಯಲ್ಲಿ ದೀಪ ಹಚ್ಚುವುದರಿಂದ ವಾಸ್ತು ದೋಷದ ಪ್ರಭಾವಗಳು ನಾಶವಾಗುತ್ತವೆ. ಅದರಲ್ಲೂ ವಿಶೇಷವಾಗಿ ಸಂಜೆ ಸಮಯದಲ್ಲಿ ದೇವರ ಮುಂದೆ ಎರಡು ದೀಪಗಳನ್ನು ಹಚ್ಚುವುದು ಅತ್ಯಂತ ಶುಭಪ್ರದ. ಇದರಲ್ಲಿ ಒಂದು ತುಪ್ಪದ ದೀಪವಾದರೆ, ಇನ್ನೊಂದು ಎಣ್ಣೆಯ ದೀಪವಾಗಿರಲಿ.
ತುಪ್ಪದ ದೀಪ ಮತ್ತು ಎಣ್ಣೆಯ ದೀಪ (ಇಡುವ ಕ್ರಮ)
ತುಪ್ಪದ ದೀಪ ಮತ್ತು ಎಣ್ಣೆಯ ದೀಪ (ಇಡುವ ಕ್ರಮ)
ದೀಪಗಳನ್ನು ಇಡುವ ಕ್ರಮದಲ್ಲಿ ವಿಜ್ಞಾನ ಮತ್ತು ಶಾಸ್ತ್ರ ಎರಡೂ ಅಡಗಿದೆ
ತುಪ್ಪದ ದೀಪ (Ghee Lamp): ದೇವರ ಫೋಟೋ ಅಥವಾ ವಿಗ್ರಹಕ್ಕೆ ಬಲಗಡೆ ತುಪ್ಪದ ದೀಪವನ್ನು ಇಡಬೇಕು. ಇದನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಹಚ್ಚುವುದರಿಂದ ಮನೆಯಲ್ಲಿ ಶಾಂತಿ ಮತ್ತು ಅದೃಷ್ಟ ನೆಲೆಸುತ್ತದೆ.
ಎಣ್ಣೆಯ ದೀಪ (Oil Lamp): ದೇವರ ಫೋಟೋ ಎಡಗಡೆ ಎಣ್ಣೆಯ ದೀಪವನ್ನು ಇಡಬೇಕು (ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆ ಬಳಸಬಹುದು). ಇದು ಮನೆಗೆ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ. ನಕಾರಾತ್ಮಕ ಶಕ್ತಿ, ದೃಷ್ಟಿ ದೋಷ ಮತ್ತು ವಾಸ್ತು ದೋಷಗಳನ್ನು ನಿವಾರಿಸಲು ಇದು ಸಹಕಾರಿ.
ದಿಕ್ಕುಗಳ ಮಹತ್ವ
ದಿಕ್ಕುಗಳ ಮಹತ್ವ
ದೀಪಾರಾಧನೆಯಲ್ಲಿ ದಿಕ್ಕಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ:
ಪೂರ್ವ: ಕುಟುಂಬದ ಸದಸ್ಯರ ಆಯುರಾರೋಗ್ಯ ಮತ್ತು ಶ್ರೇಯಸ್ಸಿಗಾಗಿ ದೀಪ ಪೂರ್ವಕ್ಕೆ ಮುಖ ಮಾಡಿರಲಿ.
ಉತ್ತರ: ಸಂಪತ್ತು ಮತ್ತು ವ್ಯವಹಾರದ ವೃದ್ಧಿಗಾಗಿ ದೀಪ ಉತ್ತರ ದಿಕ್ಕಿಗೆ ಮುಖ ಮಾಡಿರಲಿ.
ಗಮನಿಸಿ: ದೀಪವನ್ನು ಎಂದಿಗೂ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಹಚ್ಚಬಾರದು, ಇದು ಅಶುಭ ಎಂದು ಪರಿಗಣಿಸಲಾಗುತ್ತದೆ.
ವಿಶೇಷ ದಿನಗಳಲ್ಲಿ ಎಷ್ಟು ದೀಪ?
ವಿಶೇಷ ದಿನಗಳಲ್ಲಿ ಎಷ್ಟು ದೀಪ?
ಸಾಮಾನ್ಯ ದಿನಗಳಲ್ಲಿ ಸಂಜೆ ಎರಡು ದೀಪಗಳನ್ನು ಹಚ್ಚುವುದು ಶ್ರೇಯಸ್ಕರ. ಆದರೆ ಅಮಾವಾಸ್ಯೆ, ಪೌರ್ಣಮಿ, ದೀಪಾವಳಿ ಅಥವಾ ಇತರ ವಿಶೇಷ ಹಬ್ಬಗಳ ದಿನಗಳಲ್ಲಿ ದೇವರ ಮುಂದೆ ಐದು ಅಥವಾ ಏಳು ದೀಪಗಳನ್ನು ಹಚ್ಚುವುದು ಮಹಾ ಶುಭಪ್ರದ. ಈ ರೀತಿ ಮಾಡುವುದರಿಂದ ಮನೆಗೆ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತವೆ ಎಂದು ಪಂಡಿತರು ಹೇಳುತ್ತಾರೆ.