- Home
- Entertainment
- TV Talk
- Seetha Rama Serial ಕೊನೇ ದಿನ ಕೇಕ್ ಕಟ್ ಮಾಡಿ, ಕಣ್ಣೀರಿಡುತ್ತ ಶೂಟಿಂಗ್‌ನಲ್ಲಿ ಭಾಗಿಯಾದ ಕಲಾವಿದರು! PHOTOS
Seetha Rama Serial ಕೊನೇ ದಿನ ಕೇಕ್ ಕಟ್ ಮಾಡಿ, ಕಣ್ಣೀರಿಡುತ್ತ ಶೂಟಿಂಗ್‌ನಲ್ಲಿ ಭಾಗಿಯಾದ ಕಲಾವಿದರು! PHOTOS
ಸೀತಾರಾಮ ಧಾರಾವಾಹಿ ಈಗಾಗಲೇ 400 ಎಪಿಸೋಡ್‌ಗಳನ್ನು ಪೂರೈಸಿದೆ. ಈಗ ಈ ಧಾರಾವಾಹಿ ಅಂತ್ಯ ಆಗಲಿದೆ. ಇನ್ನು ಮೇ 20ರಂದು ಈ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್ ಮುಗಿಸಿದೆ.

ಇಡೀ ತಂಡದವರು ಕೇಕ್ ಕಟ್ ಮಾಡಿ, ಸೀರಿಯಲ್‌ಗೆ ಮುಕ್ತಾಯ ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಎಲ್ಲರೂ ಭಾವುಕರಾಗಿದ್ದಾರೆ.
"ಈ ಅಂತ್ಯವು ಉತ್ತಮವಾದದ್ದರ ಆರಂಭ ಮಾತ್ರ. ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಯೋಜನೆಗಳಲ್ಲಿ ಒಂದಾಗಿದೆ. ಇದನ್ನು ಮಾಡಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಆದರೆ ಶೀಘ್ರದಲ್ಲೇ ಅದ್ಭುತವಾದ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭರವಸೆ ನೀಡುತ್ತೇನೆ" ಎಂದು ನಟಿ ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟ ಅಶೋಕ್ ಕೂಡ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, "ಸೀತಾರಾಮ' ಈ ಪ್ರಾಜೆಕ್ಟ್ ಬಗ್ಗೆ ಎಷ್ಟು ಹೇಳಿದ್ರೂ ಸಾಲ್ದು. ನನಗೆ ಕೆಲಸ, ಅನುಭವ, ಜನರ ಪ್ರೀತಿ, ಗೆಳೆಯರು, ಮರೆಯಲಾಗದ ನೆನಪುಗಳನ್ನು ಕೊಟ್ಟು ನನ್ನ ಜೀವನದಲ್ಲಿ ಒಂದು ಹೊಸ ಭರವಸೆ ಮೂಡಿಸಿದ ಪ್ರಾಜೆಕ್ಟ್. ಅಶೋಕನಿಗೆ ನೀವು ಕೊಟ್ಟoಥ ಪ್ರೀತಿ ಅಪಾರ. ಎಂದಿಗೂ ನಾನು ನಿಮ್ಮೆಲ್ಲರಿಗೂ ಚಿರಋಣಿ. ಈ ಪುಟ್ಟ ಕಲಾವಿದನಿಗೆ ಪ್ರೀತಿ ತೋರಿ, ಧೈರ್ಯ ತುಂಬಿ ಇಲ್ಲಿಯವರೆಗೂ ಕರೆ ತಂದ್ದಿದ್ದೀರಿ ಇನ್ನೂ ಮುಂದೆ ನಡೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮದು" ಎಂದಿದ್ದಾರೆ.
"ನನ್ನನ್ನು ನಂಬಿ ನನಗೆ ಈ ಅವಕಾಶವನ್ನು ಒದಗಿಸಿ ಕೊಟ್ಟ ಜೀ ವಾಹಿನಿ, ತಂಡ ಮತ್ತು ತಂತ್ರಜ್ಞರಿಗೆ ಧನ್ಯವಾದಗಳು. ನನ್ನ ಸಹ ನಟರು, ನಿರ್ದೇಶಕ, ನಿರ್ಮಾಪಕರಿಗೆ ನನ್ನ ನಮನಗಳು. ಹೀಗೆ ಇನ್ನೂ ಹಲವಾರು ಪಾತ್ರಗಳಲ್ಲಿ ನಿಮ್ಮನ್ನು ಮನೊರಂಜಿಸುವ ಮಹಾತ್ವಕಾಂಕ್ಷೆಯೊಂದಿಗೆ ನಿಮ್ಮೆಲ್ಲರ ಪ್ರೀತಿಯ ಅಶೋಕನಿಗೆ ಬೀಳು ಕೊಡುವ ಸಮಯ" ಎಂದಿದ್ದಾರೆ ಅಶೋಕ್.
"ಹೋಗುವೆ ಆದರೆ ಅಶೋಕನಾಗಿ ಬರುವುದಿಲ್ಲ. ಹೊಸದೊಂದು ತಂಡದ ಜೊತೆ ಹೊಸದೊಂದು ಪಾತ್ರದ ಮುಖಾಂತರ, ಹೊಸದೊಂದು ಭರವಸೆಯೊಂದಿಗೆ ಬರುವೆ" ಎಂದು ಅಶೋಕ್ ಹೇಳಿದ್ದಾರೆ.
ನಟಿ ವೈಷ್ಣವಿ ಗೌಡ ಅವರು ಮುಂಬರುವ ದಿನಗಳಲ್ಲಿ ಯಾವ ಧಾರಾವಾಹಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಇನ್ನು ಅವರು ಮದುವೆ ತಯಾರಿಯಲ್ಲಿದ್ದಾರೆ.
ಜೂನ್ ಮೊದಲ ವಾರದಲ್ಲಿ ನಟಿ ವೈಷ್ಣವಿ ಗೌಡ, ಅನುಕೂಲ್ ಮಿಶ್ರಾ ಮದುವೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಗಡೆ ಬೀಳಬೇಕಿದೆ.
ಕನ್ನಡ ನಟಿ ಪೂಜಾ ಲೋಕೇಶ್ ಅವರು ಈ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಭಾರ್ಗವಿ ಎಂಬ ಪಾತ್ರಕ್ಕೆ ಇವರು ಬಣ್ಣ ಹಚ್ಚಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಅಶೋಕ್ ಶರ್ಮ ಅವರು ಸಾಕಷ್ಟು ವರ್ಷಗಳ ನಂತರದಲ್ಲಿ ಈ ಧಾರಾವಾಹಿಯಲ್ಲಿ ನಟಿಸಿದ್ದರು.