ಮಾಡರ್ನ್ ಲಕ್ಷ್ಮೀ ಆದ್ರು Shravani Subramanya ಸೀರಿಯಲ್ ಧನಲಕ್ಷ್ಮಿ Shilpa Shailesh
ಕನ್ನಡ ಕಿರುತೆರೆ ನಟಿ, ಸದ್ಯ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಸುಬ್ಬು ಅಕ್ಕ ಧನಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರುವ ನಟಿ ಶಿಲ್ಪಾ ಶೈಲೇಶ್ ಅವರು ಮಾಡರ್ನ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸೀರಿಯಲ್ ವೀಕ್ಷಕರು ನಟಿಯ ಲುಕ್ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಶ್ರಾವಣಿ ಸುಬ್ರಹ್ಮಣ್ಯ
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಶ್ರಾವಣಿ ಸುಬ್ರಹ್ಮಣ್ಯ. ಈ ಧಾರಾವಾಹಿಯಲ್ಲಿ ನಾಯಕ ಸುಬ್ಬು ಅಕ್ಕ ಧನಲಕ್ಷ್ಮೀಯಾಗಿ ನಟಿಸುತ್ತಿರುವ ನಟಿ ಶಿಲ್ಪಾ ಶೈಲೇಶ್. ಇವರು ಧಾರಾವಾಹಿಯಲ್ಲಿ ಹಳ್ಳಿ ಹೆಂಗಸಾಗಿ, ಅಮ್ಮನ ಮನೆಯಲ್ಲಿ ತನ್ನ ಗಂಡ, ಅತ್ತೆ, ಮಾವನ ಜೊತೆ ನೆಲೆಸಿರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಇವರು ರಿಯಲ್ ಲೈಫಲ್ಲಿ ಹೇಗಿದ್ದಾರೆ ನೋಡಿ.
ಶಿಲ್ಪಾ ಶೈಲೇಶ್
ಹೌದು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಸದಾ ಕಾಟನ್ ಸೀರೆಯುಡುವ ಧನಲಕ್ಷ್ಮೀಯಾಗಿ ಶಿಲ್ಪಾ ಶೈಲೇಶ್ ಕಾಣಿಸಿಕೊಳ್ಳುತ್ತಾರೆ. ಆದರೆ ರಿಯಲ್ ಆಗಿ ಇವರು ಮಾಡರ್ನ್ ಮಹಾಲಕ್ಷ್ಮೀ. ಇತ್ತೀಚೆಗೆ ನಟಿ ಸ್ನೇಹಿತರ ಜೊತೆ ಮೇಘಾಲಯಕ್ಕೆ ಭೇಟಿ ನೀಡಿದ್ದು, ಅಲ್ಲಿನ ಫೋಟೊಗಳನ್ನು ಶೇರ್ ಮಾಡಿದ್ದು, ಶಿಲ್ಪಾ ಸಖತ್ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಡರ್ನ್ ಅವತಾರದಲ್ಲಿ ಶಿಲ್ಪಾ
ಶಿಲ್ಪಾ ಶೈಲೇಶ್ ಶೇರ್ ಮಾಡಿರುವ ಫೋಟೊಗಳಲ್ಲಿ ಅವರು ಟೈಟ್ ಆಗಿರುವ ಮಿನಿ ಸ್ಕರ್ಟ್ ಜೊತೆಗೆ ಕ್ರಾಪ್ ಟಾಪ್ ಧರಿಸಿದ್ದು, ತುಂಬಾನೆ ಬೋಲ್ಡ್ ಆಂಡ್ ಬ್ಯೂಟಿ ಫುಲ್ ಆಗಿ ಕಾಣಿಸುತ್ತಿದ್ದಾರೆ. ಇವರನ್ನ ನೋಡಿದ್ರೆ ಇವರೇನಾ ಸೀರಿಯಲ್ ಧನಲಕ್ಷ್ಮಿ ಎನ್ನುವಂತಿದೆ.
ಶಿಲ್ಪಾ ಶೈಲೇಶ್ ಕರಿಯರ್
ಶಿಲ್ಪಾ ಶೈಲೇಶ್ ಈ ಹಿಂದೆ ಅವರು ಉದಯ ವಾಹಿನಿಯ ‘ಮಹಾಸತಿ’, ಕಲರ್ಸ್ ಕನ್ನಡ ವಾಹಿನಿಯ ‘ಗೃಹಪ್ರವೇಶ’, ‘ಶಾಂತಂ ಪಾಪಂ’ ಶೋಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಇದೀಗ ಶ್ರಾವಣಿ ಸುಬ್ರಹ್ಮಣ್ಯದಲ್ಲಿ ನಟಿಸುತ್ತಿದ್ದಾರೆ.
ರಿಯಾಲಿಟಿ ಶೋಗಳನ್ನು ಸ್ಪರ್ಧಿ
ಶಿಲ್ಪಾ ಶೈಲೇಶ್ ಅವರು ರಿಯಾಲಿಟಿ ಶೋಗಳನ್ನು ಸ್ಪರ್ಧಿಸಿದ್ದಾರೆ. ಮೊದಲಿಗೆ ತಮ್ಮ ಮಗ ವಿಯಾನ್ ಜೊತೆಗೆ ಕಲರ್ಸ್ ಕನ್ನಡದ ‘ನಮ್ಮಮ್ಮ ಸೂಪರ್ ಸ್ಟಾರ್’ ನಲ್ಲಿ ನಟಿಸಿ ಎರಡನೇ ರನ್ನರ್ ಅಪ್ ಆಗಿದ್ದರು. ಇತ್ತೀಚೆಗೆ ಮುಕ್ತಾಯ ಕಂಡ ನಾವು ನಮ್ಮವರು ರಿಯಾಲಿಟಿ ಶೋನಲ್ಲೂ ಗಂಡ ಮತ್ತು ಮಗನೊಂದಿಗೆ ಸ್ಪರ್ಧಿಸಿದ್ದರು.
ಶಿಲ್ಪಾ-ಶೈಲೇಶ್ ಮದುವೆ
ಶಿಲ್ಪಾ ಶೈಲೇಶ್ ಉತ್ತರ ಕರ್ನಾಟಕದವರು. ಮದುವೆ ಬಳಿಕ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಂಪೆನಿಯೊಂದರಲ್ಲಿ ಕೆಲಸ ಮಾಡುವಾಗ ಶೈಲೇಶ್, ಶಿಲ್ಪಾ ಅವರ ನಡುವೆ ಸ್ನೇಹ ಬೆಳೆದು, ಪ್ರೀತಿ ಹುಟ್ಟಿತ್ತು, ಕುಟುಂಬದವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಈ ಜೋಡಿಯ ಮಗ ವಿಯಾನ್. ಈತ ಕೆಲವು ಸೀರಿಯಲ್ ಗಳಲ್ಲಿ ನಟಿಸಿದ್ದಾನೆ.