ಮಾಜಿ ಬಿಗ್‌ಬಾಸ್ ಸ್ಪರ್ಧಿ ಸೂರಜ್ ಸಿಂಗ್ ಬಾರಿಯ ಸೀಸನ್ ಬಗ್ಗೆ ಮನಬಿಚ್ಚಿ ಮಾತನ್ನಾಡಿದ್ದಾರೆ. ಜೊತೆಗೆ ಆಪ್ತ ಸ್ನೇಹಿತ ಯಶಸ್ ಆಟದ ಬಗ್ಗೆಯೂ ತಿಳಿಸಿದ್ದಾರೆ. ಏನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಸ್ಟೋರಿ ಓದಿ.
ಬಿಗ್‌ಬಾಸ್ ಸೀಸನ್ 13ರ ಬಗ್ಗೆ ಮಾಜಿ ಸ್ಪರ್ಧಿ ಸೂರಜ್ ಸಿಂಗ್ ಮುಕ್ತವಾಗಿ ಮಾತನ್ನಾಡಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ಮಾತ್ನಾಡಿರುವ ಅವರು, ಪ್ರಸ್ತುತ ಸೀಸನ್‌ನ ಆಟ, ಕಾಮನ್ ಮ್ಯಾನ್ ಎಂಟ್ರಿ ಹಾಗೂ ತಮ್ಮ ಆಪ್ತ ಯಶಸ್ ಆಟದ ಶೈಲಿ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿರುವ ಕಾಮನ್ ಮ್ಯಾನ್ ಸ್ಪರ್ಧಿಗಳ ಬಗ್ಗೆ ಮೊದಲು ಮಾತನ್ನಾಡಿ.. ನನಗೆ ಪೂರ್ತಿಯಾಗಿ ಶೋ ನೋಡಲು ಸಮಯ ಸಿಗುತ್ತಿಲ್ಲ. ಟೈಂ ಸಿಕ್ಕಾಗ ಮಧ್ಯೆ ಮಧ್ಯೆ ಎಪಿಸೋಡ್‌ಗಳನ್ನು ನೋಡುತ್ತಿದ್ದೇನೆ. ಜನ ನಮ್ಮನ್ನು ಈಸಿಯಾಗಿ ಮತ್ತು ಬೇಗ ಜಡ್ಜ್ ಮಾಡುವ ಜಾಗವೇ ಬಿಗ್‌ಬಾಸ್. ಸ್ಪರ್ಧಿಗಳು ತಮ್ಮ ಮಾತಿನ ಮೇಲೆ ಮತ್ತು ವರ್ತನೆಯ ಮೇಲೆ ಹಿಡಿತ ಸಾಧಿಸಬೇಕು. ತಾವು ಮನೆಯಲ್ಲಿಲ್ಲ, ಕೋಟ್ಯಂತರ ಜನ ತಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಎಚ್ಚರವಿರಬೇಕು. ಶೋ ಮುಗಿದ ಮೇಲೆ ಅವರಿಗೊಂದು ಕರಿಯರ್ ಮತ್ತು ಜೀವನವಿದೆ ಎಂಬುದನ್ನ ಮರೆಯಬಾರದು. ಮಾತಿನ ಮೇಲೆ ಕಂಟ್ರೋಲ್ ಇಟ್ಟುಕೊಂಡರೆ ಅವರು ದೀರ್ಘಕಾಲ ಉಳಿಯಲು ಸಾಧ್ಯ ಎಂದಿದ್ದಾರೆ.
ಧನುಷ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನ್ನಾಡಿರುವ ಅವರು.. ಧನುಷ್ ಹಲವು ಸಂದರ್ಭಗಳಲ್ಲಿ ಸೆನ್ಸಿಬಲ್ ಆಗಿ ಮಾತನಾಡಿದ್ದಾರೆ. ವರ್ತನೆಯಲ್ಲೂ ಉಳಿದವರಿಗಿಂತ ಉತ್ತಮ ಅನ್ನಿಸುತ್ತಾರೆ. ಆದರೆ ಉಳಿದವರು ತಮ್ಮ ಮಾತಿನ ಮೇಲೆ ಸ್ವಲ್ಪ ಹಿಡಿತ ಸಾಧಿಸುವುದು ಒಳ್ಳೆಯದು ಅಂತಾ ಸಲಹೆ ನೀಡಿದ್ದಾರೆ.
ಯಶಸ್ ಆಟಕ್ಕೆ ಫುಲ್ ಮಾರ್ಕ್ಸ್
ಸೀರಿಯಲ್‌ನಲ್ಲಿ ತಮ್ಮ ಸಹ ಕಲಾವಿದ ಯಶಸ್ ಕುರಿತು ಮಾತನ್ನಾಡಿ.. ಸಾಮಾನ್ಯವಾಗಿ ಆರ್ಟಿಸ್ಟ್ ಬಿಗ್‌ಬಾಸ್‌ಗೆ ಹೋದಾಗ ನಾನು ಹೀರೋ, ನಾನೇ ಡಾಮಿನೇಟ್ ಮಾಡಬೇಕು ಎಂಬ ಮನಸ್ಥಿತಿ ಹೊಂದಿರುತ್ತಾರೆ. ಯಶಸ್‌ನಲ್ಲಿ ಆ ಗುಣವೇ ಇಲ್ಲ. ಶೂಟಿಂಗ್ ಸೆಟ್‌ನಲ್ಲಿ ನಮ್ಮ ಜೊತೆ ಎಷ್ಟು ಪ್ರೀತಿಯಿಂದ, ಫ್ರೆಂಡ್ಲಿಯಾಗಿ ಇರುತ್ತಿದ್ದನೋ, ಬಿಗ್‌ಬಾಸ್ ಮನೆಯಲ್ಲೂ ಹಾಗೇ ಇದ್ದಾನೆ. ಆರಂಭದಲ್ಲಿ ಆತ ಇನ್ನಷ್ಟು ಓಪನ್ ಅಪ್ ಆಗಬೇಕಿತ್ತು ಎನಿಸಿತ್ತು. ಆದರೆ 18 ದಿನಗಳ ನಂತರ ಚೆನ್ನಾಗಿ ಹೊಂದಿಕೊಂಡಿದ್ದಾನೆ. ಟಾಸ್ಕ್ ಆಡುವಾಗ ನಾಲಿಗೆ ಕಟ್ ಆಗಿ ರಕ್ತ ಬರುತ್ತಿದ್ದರೂ ಆಟ ಬಿಡದೆ ಶ್ರಮ ಹಾಕುತ್ತಿದ್ದಾನೆ. ಇನ್ನೊಬ್ಬರ ಭಾವನೆಗಳಿಗೆ ಸ್ಪಂದಿಸುತ್ತಿದ್ದಾನೆ. ಎಲ್ಲೋ ಚಿಪ್ಸ್ ಬಚ್ಚಿಟ್ಟು ಸಿಕ್ಕಿಬಿದ್ದಾಗ ಒಂದು ಪುಟ್ಟ ಮಗುವಿನಂತೆ ಕಂಡ. ಅವನು ಯಾವುದೇ ಮುಖವಾಡವಿಲ್ಲದೆ ರಿಯಲ್ ಆಗಿ ಆಡುತ್ತಿದ್ದಾನೆ. ಅದಕ್ಕಾಗಿಯೇ ಎರಡು ವಾರವಾದರೂ ಮನೆಯವರಾರೂ ಆತನನ್ನು ನಾಮಿನೇಟ್ ಮಾಡಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಗ್‌ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿರುವ ಜೋಡಿಗಳ ಕುರಿತು ಮಾತನಾಡಿದ ಸೂರಜ್.. ಬಿಗ್‌ಬಾಸ್ ಮುಗಿದ ಮೇಲೆ ಯಶಸ್ ಹಾಗೂ ಆಸ್ಯ ಜೊತೆಯಾಗಿ ಒಂದು ಧಾರಾವಾಹಿ ಮಾಡಿದರೆ ಆನ್-ಸ್ಕ್ರೀನ್ ಮೇಲೆ ಅದ್ಭುತವಾದ ಜೋಡಿಯಾಗುತ್ತಾರೆ. ಇಬ್ಬರೂ ಸದ್ಯ ತುಂಬಾ ಚೆನ್ನಾಗಿ ಗೇಮ್ ಆಡುತ್ತಿದ್ದಾರೆ ಎಂದು. ಬಿಗ್‌ಬಾಸ್ ಅನ್ನೋದು ಕೇವಲ ಆಟವಲ್ಲ, ಅದು ವ್ಯಕ್ತಿತ್ವದ ಕನ್ನಡಿ. ದಿನ ಕಳೆದಂತೆ ಯಾರು ಹೇಗಿದ್ದಾರೆ ಎಂಬುದು ಜನರಿಗೂ ಸ್ಪಷ್ಟವಾಗಿ ತಿಳಿಯುತ್ತದೆ ಎಂದಿದ್ದಾರೆ.


