MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare: ಶಕುಂತಲಾಗೆ ಒಳಗೊಳಗೆ ತೊಳಲಾಟ; ಜೈದೇವ್‌ ಬೆನ್ನ ಹಿಂದೆಯೇ ಆಪತ್ತು

Amruthadhaare: ಶಕುಂತಲಾಗೆ ಒಳಗೊಳಗೆ ತೊಳಲಾಟ; ಜೈದೇವ್‌ ಬೆನ್ನ ಹಿಂದೆಯೇ ಆಪತ್ತು

ಭೂಮಿಕಾಗೆ ಕ್ಯಾನ್ಸರ್ ಇರುವುದು ಗೌತಮ್‌ಗೆ ಗೊತ್ತಾಗಿ ಆತ ಮಂಕಾಗಿದ್ದಾನೆ. ಈ ನಡುವೆ, ಮನೆಯಲ್ಲಿ ಏನೋ ನಡೆಯುತ್ತಿದೆ ಎಂದು ಶಕುಂತಲಾಗೆ ಅನುಮಾನ ಮೂಡಿದ್ದು, ಸತ್ಯ ತಿಳಿಯಲು ಪ್ರಯತ್ನಿಸುತ್ತಿದ್ದಾಳೆ. ಇತ್ತ ಭೂಮಿಕಾ ವೈರಾಗ್ಯದಿಂದ ತನ್ನ ಜವಾಬ್ದಾರಿಗಳನ್ನು ಹಸ್ತಾಂತರಿಸುತ್ತಿದ್ದಾಳೆ.

1 Min read
Author : Mahmad Rafik
Published : Jul 25 2026, 10:50 AM IST
Share this Photo Gallery
  • FB
  • TW
  • Linkdin
  • Whatsapp
15
ಜೀ ಕನ್ನಡ ಧಾರಾವಾಹಿ ಅಮೃತಧಾರೆ
Image Credit : Zee Kannada

ಜೀ ಕನ್ನಡ ಧಾರಾವಾಹಿ ಅಮೃತಧಾರೆ

ಅಮೃತಧಾರೆ ಸೀರಿಯಲ್‌ನಲ್ಲಿ ಶೋಕದ ಛಾಯೆ ಆವರಿಸಿದ್ರೆ, ಶಕುಂತಲಾಗೆ ಮಾತ್ರ ತನ್ನ ಬೆನ್ನ ಹಿಂದೆ ಏನೋ ನಡೀತಾ ಇದೆ ಎಂಬ ಬಲವಾದ ಅನುಮಾನ ಮೂಡಿದೆ. ಗೌತಮ್ ಜೊತೆ ಮಾತನಾಡಿದ್ರೂ ಶಕುಂತಲಾಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ವಿಷಯ ತಿಳಿಯದ ಕಾರಣ ಶಕುಂತಲಾ ವಿಲವಿಲ ಅಂತ ಒದ್ದಾಡುತ್ತಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕ್ಯಾನ್ಸರ್ ವಿಷಯ ಬಯಲಾಗುತ್ತಾ?
Image Credit : Zee Kannada

ಕ್ಯಾನ್ಸರ್ ವಿಷಯ ಬಯಲಾಗುತ್ತಾ?

ಇಲ್ಲಿವರೆಗಿನ ಸಂಚಿಕೆಗಳ ಪ್ರಕಾರ, ಭೂಮಿಕಾಗೆ ಕ್ಯಾನ್ಸರ್ ಇರೋ ವಿಷಯ ಗೌತಮ್, ಮಲ್ಲಿ, ಆನಂದ್ ಮತ್ತು ಅಪರ್ಣಾಗೆ ಮಾತ್ರ ತಿಳಿದಿದೆ. ಮಗ ಜೈದೇವ್‌ನನನ್ನು ಮನೆಗೆ ಕರೆದುಕೊಂಡು ಬರಲು ಮತ್ತು ಎಲ್ಲಾ ಆಸ್ತಿಯನ್ನು ಆತನ ಹೆಸರಿಗೆ ಮಾಡಿಸಲು ಶಕುಂತಲಾ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾಳೆ. ಭೂಮಿಕಾಳ ಕ್ಯಾನ್ಸರ್ ವಿಷಯ ತಿಳಿದ್ರೆ ಶಕುಂತಲಾ ಅದನ್ನು ಲಾಭಕ್ಕೆ ಬಳಸಿಕೊಳ್ಳೋದು ಗ್ಯಾರಂಟಿಯಾಗಿದೆ.

Related Articles

Related image1
Amruthadhaare: ಗೌತಮ್​, ಭೂಮಿಕಾ ಕೈ ಕೊರವಂಜಿ ನೋಡಾಯ್ತು- ಮುಂದೇನಾಗತ್ತೆ ಸೂಚನೆ ಸಿಕ್ಕೇಬಿಟ್ಟಿತು
Related image2
Amruthadhaare ಟ್ವಿಸ್ಟ್​- ಡಾಕ್ಟರ್​ vs ಕೊರವಂಜಿ; ಗೆಲ್ಲೋರು ಯಾರು? ಮಂಜುನಾಥನ ಸನ್ನಿಧಿಯಲ್ಲಿ ಪವಾಡ
35
ಭೂಮಿಕಾಗೆ ವೈರಾಗ್ಯ, ಗೌತಮ್ ಮಂಕು
Image Credit : Zee Kannada

ಭೂಮಿಕಾಗೆ ವೈರಾಗ್ಯ, ಗೌತಮ್ ಮಂಕು

ಕ್ಯಾನ್ಸರ್ ಅಂತ ಗೊತ್ತಾಗುತ್ತಿದ್ದಂತೆ ಭೂಮಿಕಾಗೆ ವೈರಾಗ್ಯ ಉಂಟಾಗಿದ್ದು, ತನ್ನೆಲ್ಲಾ ಜವಾಬ್ದಾರಿಗಳನ್ನು ಹಸ್ತಾಂತರಿಸುತ್ತಿದ್ದಾಳೆ. ಹಾಗೆಯೇ ಮಕ್ಕಳಿಗೂ ತಮ್ಮ ಕೆಲಸಗಳನ್ನು ಹೇಗೆ ಮಾಡಿಕೊಳ್ಳಬೇಕೆಂದು ಕಲಿಸುತ್ತಿದ್ದಾಳೆ. ಇತ್ತ ಪತ್ನಿಯ ಅನಾರೋಗ್ಯದ ವಿಷಯ ತಿಳಿದು ಗೌತಮ್ ಸಹ ಮಂಕಾಗಿ ಕುಳಿತಿದ್ದಾನೆ.

45
ಶಕುಂತಲಾ ಪ್ರಶ್ನೆಗೆ ಗೌತಮ್ ಹಾರಿಕೆ ಉತ್ತರ
Image Credit : Instagram

ಶಕುಂತಲಾ ಪ್ರಶ್ನೆಗೆ ಗೌತಮ್ ಹಾರಿಕೆ ಉತ್ತರ

ನಿದ್ದೆಯಿಲ್ಲದೇ ಯೋಚನೆಯಲ್ಲಿ ಮಗ್ನನಾಗಿದ್ದ ಗೌತಮ್ ಬಾಯಿಬಿಡಿಸಲು ಶಕುಂತಲಾ ಪ್ರಯತ್ನಿಸಿದ್ದಾಳೆ. ಭೂಮಿಕಾ ಶಾಲೆಯ ಕೆಲಸ ಬಿಟ್ಟಿದ್ಯಾಕೆ? ನಿಮ್ಮಿಬ್ಬರ ನಡುವೆ ಎಲ್ಲವೂ ಸರಿಯಾಗಿದೆಯಾ ಎಂದು ಶಕುಂತಲಾ ಪ್ರಶ್ನೆ ಮಾಡಿದ್ದಾಳೆ. ಆದ್ರೆ ಗೌತಮ್ ತಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾನೆ. ಆದರೆ ಗೌತಮ್ ನೀಡಿರುವ ಉತ್ತರ ಶಕುಂತಲಾಗೆ ಸಮಾಧಾನ ತಂದಿಲ್ಲ.

55
ಜೈದೇವ್ ಹಿಂದೆಯೇ ಆಪತ್ತು
Image Credit : Zee Kannada

ಜೈದೇವ್ ಹಿಂದೆಯೇ ಆಪತ್ತು

ಇತ್ತ ಜೈದೇವ್ ಬೆನ್ನಹಿಂದೆಯೇ ಜೀವ ನಿಂತಿದ್ದು, ಆತನ ಪ್ರೇಯಸಿ ದಿಯಾ ಬೇಬಿ ಎಲ್ಲಿ ಹೋದ್ಳು ಎಂದು ಹುಡುಕಾಟ ನಡೆಸುತ್ತಿದ್ದಾನೆ. ಜೈದೇವ್ ಕುತಂತ್ರದಿಂದ ಜೈಲುಪಾಲಾಗಿರುವ ದಿಯಾ ಪ್ರಿಯಕರ ಮತ್ತು ಗೆಳೆಯ ಗೋಕುಲ್‌ಗಾಗಿ ಜೀವ ಹುಡುಕಾಟ ನಡೆಸುತ್ತಿದ್ದಾನೆ. ಈ ಕೆಲಸಕ್ಕೆ ಐಪಿಎಸ್ ಮಲ್ಲಿ ಎಂಟ್ರಿ ಕೊಟ್ರೆ ಜೈದೇವ್ ಜೈಲು ಪಾಲಾಗೋದು ಗ್ಯಾರಂಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Annayya Serial: ಅಳಿಯನ ಮುಂದೆ ಸೋತ ಮಾವ! ಮಾರಿಗುಡಿಗೆ ಈಗ ಶಿವುನೇ ‘ಜನನಾಯಕ’
Recommended image2
ಕಾಕ್ರೋಚ್‌ ಪ್ರತಿಭಟನೆಯಲ್ಲಿ ಭಾಗವಹಿಸಲು ಹಣದ ಆಮಿಷ: ನಟಿ ಆಕಾಂಕ್ಷಾ ಪುರಿ ಗಂಭೀರ ಆರೋಪ!
Recommended image3
ಮೈಸೂರು ಹುಡುಗನ ಕೈಹಿಡಿದ ಮಹಾನಟಿ ಖ್ಯಾತಿಯ ದಿವ್ಯಾಂಜಲಿ, ಅನಾಥೆಯ ಬಾಳಲ್ಲಿ ಸಂಭ್ರಮದ ಅಧ್ಯಾಯ!
Related Stories
Recommended image1
Amruthadhaare: ಗೌತಮ್​, ಭೂಮಿಕಾ ಕೈ ಕೊರವಂಜಿ ನೋಡಾಯ್ತು- ಮುಂದೇನಾಗತ್ತೆ ಸೂಚನೆ ಸಿಕ್ಕೇಬಿಟ್ಟಿತು
Recommended image2
Amruthadhaare ಟ್ವಿಸ್ಟ್​- ಡಾಕ್ಟರ್​ vs ಕೊರವಂಜಿ; ಗೆಲ್ಲೋರು ಯಾರು? ಮಂಜುನಾಥನ ಸನ್ನಿಧಿಯಲ್ಲಿ ಪವಾಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved