Amruthadhaare: ಜೈದೇವ್‌ಗೆ ಸಿಕ್ಳು ಹೊಸ ಗರ್ಲ್ ಫ್ರೆಂಡ್; ವೀಕ್ಷಕರು ಫುಲ್ ಖುಷ್
ಹೊಸ ಗೆಳತಿಯೊಂದಿಗೆ ಕಾಣಿಸಿಕೊಂಡ ಜೈದೇವ್‌ಗೆ, ಕೇಕ್‌ನಲ್ಲಿ ಬಾಂಬ್ ಇಟ್ಟ ವಿಚಾರವಾಗಿ ಮಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾಳೆ. ಇದರಿಂದ ಕೋಪಗೊಂಡ ಜೈದೇವ್ ತನ್ನ ಹೊಸ ಗೆಳತಿಯ ಮೇಲೆಯೇ ರೇಗಾಡಿದ್ದಾನೆ. ಇತ್ತ ಸೀರಿಯಲ್ ವೀಕ್ಷಕರು ಇಂದಿನ ಸೀನ್‌ನಿಂದ ವೀಕ್ಷಕರು ಖುಷಿಯಾಗಿದ್ದಾರೆ.

ಹೊಸ ಗರ್ಲ್‌ಫ್ರೆಂಡ್
ಅಮೃತಧಾರೆಯ ಕೆಡಿ ಜೈದೇವ್‌ಗೆ ಹೊಸ ಗರ್ಲ್‌ಫ್ರೆಂಡ್ ಸಿಕ್ಕಿದ್ದಾಳೆ. ಹೊಸ ಗೆಳತಿ ಜೊತೆ ಮಾತನಾಡುತ್ತಿದ್ದ ಜೈದೇವ್ ಬಳಿ ಹೋಗಿರುವ ಮಲ್ಲಿ, ನಾನು ಕಾಣಿಸಿಲ್ಲ ಅಂತ ಚಿಗುರುಕೊಂಡಿದ್ದೀಯಾ ಅಂತೆ. ಇಷ್ಟು ದಿನ ನಿನ್ನ ಟೈಮ್, ಈಗ ನನ್ನ ಸಮಯ. ಸ್ವಲ್ಪ ಕೆಮ್ಮಿದ್ರೂ ಖೇಲ್ ಖತಂ.ಬಾಂಬ್ ಹಿಂದೆ ನಿನ್ನ ಕೈವಾಡ ಇರೋ ವಿಷ್ಯ ಗೊತ್ತಾದ್ರೆ ಜೈಲಿನೊಳಗೆ ಹಾಕ್ತೀನಿ ಎಂದು ಎಚ್ಚರಿಕೆ ನೀಡಿದ್ದಾಳೆ.
ಮಲ್ಲಿ ಖಡಕ್ ವಾರ್ನಿಂಗ್
ಬರ್ತ್ ಡೇ ದಿನ ಕೇಕ್‌ನಲ್ಲಿ ಬಾಂಬ್ ಇಟ್ಟಿರೋ ವಿಷಯವನ್ನು ಮಕ್ಕಳು ಮಲ್ಲಿಗೆ ಹೇಳಿದ್ದರು. ಇದಾದ ನಂತರ ಎದುರಾದ ಜೈದೇವ್‌ಗೆ ಮಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾಳೆ. ಮಲ್ಲಿ ಮಾತುಗಳನ್ನು ಕೇಳಿ ಜೈದೇವ್ ಪೆಟ್ಟು ತಿಂದ ಹಾವಿನಂತಾಗಿದೆ. ಈ ಮೊದಲೇ ಮಲ್ಲಿ ತಂಟೆಗೆ ಹೋಗದಂತೆ ಮಗ ಜೈದೇವ್‌ಗೆ ಶಕುಂತಲಾ ಎಚ್ಚರಿಕೆ ನೀಡಿದ್ದಳು. ಆಕೆ ಮೊದಲಿನ ಮಲ್ಲಿ ಅಲ್ಲ ಎಂಬ ಸಲಹೆಯನ್ನು ಶಕುಂತಲಾ ಹೇಳಿದ್ದಳು.
ಹೊಸ ಗೆಳತಿ ಮೇಲೆ ಕೆಡಿ ಕಿಡಿ ಕಿಡಿ
ಮಲ್ಲಿ ಹೋಗ್ತಿದ್ದಂತೆ ಹೊಸ ಗರ್ಲ್‌ಫ್ರೆಂಡ್, ಇಷ್ಟೊತ್ತು ನಗುತ್ತಿದ್ದವರು ಆಕೆ ಬಂದು ಹೋದ್ಮೇಲೆ ಎಲ್ಲಾ ಬದಲಾಯ್ತು. ಯಾರು ಆಕೆ ಎಂದು ಪ್ರಶ್ನೆ ಮಾಡ್ತಾಳೆ. ಇದಕ್ಕೆ ಜೈದೇವ್, ಅದು ನನ್ನ ಪರ್ಸನಲ್ ವಿಷಯ. ನನ್ನ ಪರ್ಸನಲ್ ವಿಷಯದ ಬಗ್ಗೆ ಬೇರೆಯವರು ಮಾತನಾಡೋದು ನನಗೆ ಇಷ್ಟ ಆಗಲ್ಲ ಎಂದು ಹೊಸ ಗೆಳತಿ ಮೇಲೆ ಕೆಡಿ ಗುಡುಗಿದ್ದಾನೆ.
Honey Honey
ಜೈದೇವ್‌ನಲ್ಲಿ ಬದಲಾವಣೆ ಕಂಡ ಹೊಸ ಗೆಳತಿ, ನಾನು ಪ್ರಶ್ನೆ ಮಾಡಬಾರದಾ? ನೀನು ಕರೆದಾಗೆಲ್ಲಾ ಬರೋದು? ನಿನಗೆ ಬೇಕಾದಾಗ ಟೈಂ ಕೊಡೋದು ನನ್ನ ಕೆಲಸನಾ? ನಿನ್ನ ಮತ್ತೊಂದು ಮುಖ ನೋಡಿದೆ ಎಂದು ಹೇಳಿ ಆಕೆ ಅಲ್ಲಿಂದ ಹೋಗಿದ್ದಾಳೆ. ಹೊಸ ಗೆಳತಿ ಹೋಗ್ತಿದ್ದಂತೆ Honey Honey ಎಂದು ಜೈದೇವ್ ಕೂಗಿ ತಲೆ ಕೆಡಿಸಿಕೊಂಡಿದ್ದಾನೆ.
ವೀಕ್ಷಕರು ಫುಲ್ ಖುಷ್
ಇತ್ತ ಹೊಸ ಗೆಳತಿ ಮೊದಲ ಸೀನ್‌ನಲ್ಲಿಯೇ ಜೈದೇವ್‌ನಿಂದ ದೂರವಾಗಿದ್ದಕ್ಕೆ ವೀಕ್ಷಕರು ನಿಟ್ಟುಸಿರು ಬಿಟ್ಟಿದ್ದು, ಮತ್ತೊಮ್ಮೆ ಕೆಡಿ ಸಹವಾಸಕ್ಕೆ ಬರಬೇಡಮ್ಮಾ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಮಲ್ಲಿಗೆ ಮೋಸ ಮಾಡಿ ದಿಯಾ ಬೇಬಿಯನ್ನು ಜೈದೇವ್ ಮದುವೆಯಾಗಿದ್ದ. ನಂತರ ಆಕೆಯನ್ನು ಕೊಂದು ಸುಟ್ಟು ಹಾಕಿದ್ದನು. ಇದೀಗ ಹೊಸದಾಗಿ ಬಂದ ಗೆಳತಿಯೂ ದೂರವಾಗಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

