- Home
- Entertainment
- TV Talk
- ಬಾಲಿವುಡ್ ಸ್ಟಾರ್ ಸೋನಾಲಿ ಬೇಂದ್ರೆ ಆಗ್ತಾಳಾ Amruthadhaare ಭೂಮಿಕಾ? ಏಕೀ ಇಬ್ಬರ ಹೋಲಿಕೆ
ಬಾಲಿವುಡ್ ಸ್ಟಾರ್ ಸೋನಾಲಿ ಬೇಂದ್ರೆ ಆಗ್ತಾಳಾ Amruthadhaare ಭೂಮಿಕಾ? ಏಕೀ ಇಬ್ಬರ ಹೋಲಿಕೆ
'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ವೈದ್ಯರು ಕೆಲವೇ ತಿಂಗಳ ಗಡುವು ನೀಡಿದ್ದಾರೆ. ಆದರೆ, ಕೊರವಂಜಿ ಭವಿಷ್ಯ ಮತ್ತು ಗೌತಮ್‌ನ ಭರವಸೆಯಿಂದ ಆಕೆ ಬದುಕುಳಿಯುವ ಸೂಚನೆ ಇದ್ದು, ಇದನ್ನು ಕ್ಯಾನ್ಸರ್ ಗೆದ್ದ ನಟಿ ಸೋನಾಲಿ ಬೇಂದ್ರೆಗೆ ಹೋಲಿಸಲಾಗುತ್ತಿದೆ.

ಭೂಮಿಕಾಗೆ ಕ್ಯಾನ್ಸರ್
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಸದ್ಯ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಎಂದು ವೈದ್ಯರು ಹೇಳಿದ್ದಾರೆ. ಆಕೆಗೆ ಬದುಕಲು ಇನ್ನು ಕೆಲವೇ ತಿಂಗಳು ಎಂದು ಹೇಳಿ ಆಗಿದೆ. ಅದರ ನಡುವೆಯೇ ಭೂಮಿಕಾಗೆ ರಕ್ತವಾಂತಿ ಎಲ್ಲವೂ ಆಗುತ್ತಿದೆ. ಬ್ರೆಸ್ಟ್ ಕ್ಯಾನ್ಸರ್ ಸೇರಿದಂತೆ ಯಾವುದೇ ಕ್ಯಾನ್ಸರ್ ಅನ್ನೂ ಯಾವುದೇ ಹಂತದಲ್ಲಿ ಸೂಕ್ತ ವೈದ್ಯರ ಚಿಕಿತ್ಸೆಯ ಮೂಲಕ ಗುಣಪಡಿಸಿಕೊಂಡಿರುವ ಹಲವಾರು ಉದಾಹರಣೆಗಳು ಇವೆ. ಆದರೆ ಸೀರಿಯಲ್ನಲ್ಲಿ ರೋಚಕತೆ ತುರುಕಲು ವೈದ್ಯರು ಭೂಮಿಕಾಗೆ ಕೆಲವೇ ತಿಂಗಳುವಳ ಗಡುವು ನೀಡಿದ್ದಾರೆ.
ಕೊರವಂಜಿ ಭವಿಷ್ಯ
ಆದರೆ, ವೀಕ್ಷಕರಿಗೆ ಒಂದಷ್ಟು ಸಮಾಧಾನದ ಸಂಗತಿ ಎಂದರೆ, ದೇವಾಲಯದ ಬಳಿ ಇರುವ ಕೊರವಂಜಿ ಭೂಮಿಕಾ ಮತ್ತು ಗೌತಮ್ ನೂರ್ಕಾಲ ಚೆನ್ನಾಗಿ ಬಾಳುತ್ತೀರಿ ಎಂದು ಹೇಳಿದ್ದಾಳೆ. ಅದೇ ರೀತಿ, ಗೌತಮ್ಗೆ ಭೂಮಿಕಾಳ ಕ್ಯಾನ್ಸರ್ ವಿಷ್ಯ ಗೊತ್ತಾಗಿ, ನಿಮ್ಮನ್ನು ನಾನು ಉಳಿಸಿಕೊಳ್ತೇನೆ ಎನ್ನುವ ಭರವಸೆ ನೀಡಿದ್ದಾನೆ. ಅಲ್ಲಿಗೆ ಭೂಮಿಕಾಗೆ ಏನೂ ಆಗುವುದಿಲ್ಲ ಎನ್ನುವುದು ತಿಳಿದಿದೆ.
ನಟಿ ಸೋನಾಲಿ ಬೇಂದ್ರೆ ಹೋಲಿಕೆ
ಇದೇ ವೇಳೆ, ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ, ಹಲವು ನೆಟ್ಟಿಗರು ಬಾಲಿವುಡ್ ನಟಿ ಸೋನಾಲಿ ಬೇಂದ್ರೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಮೊದಲೇ ಹೇಳಿದಂತೆ ಎಲ್ಲಾ ರೀತಿಯ ಕ್ಯಾನ್ಸರ್ ಗೆದ್ದವರು ಹಲವರಿದ್ದಾರೆ. ಆದರೆ ಸೆಲೆಬ್ರಿಟಿಗಳ ವಿಷಯ ಬಹುಬೇಗ ವೈರಲ್ ಆಗುತ್ತದೆ. ಸಿನಿಮಾ ತಾರೆಯರನ್ನೇ ದೇವರೆಂದು ನಂಬಿಕೊಂಡಿರುವ ಹಲವು ಅಭಿಮಾನಿಗಳು ಇರುವ ನಡುವೆ ಸೋನಾಲಿ ಬೇಂದ್ರೆಯವರಂಥ ತಾರೆಯರು ತಮ್ಮ ಕ್ಯಾನ್ಸರ್ ಸಕ್ಸಸ್ ಸ್ಟೋರಿಯನ್ನು ಹೇಳಲು ಮುಂದೆ ಬಂದರೆ, ರೋಗಿಗಳಲ್ಲಿ ಹೊಸ ಚೈತನ್ಯ ಮೂಡುವುದು ಸಹಜ. ಅದೇ ರೀತಿ ಸೋನಾಲಿ ಬೇಂದ್ರೆ ಕೂಡ ಇದಾಗಲೇ ಮಾಡಿದ್ದಾರೆ.
ಏನಿದು ನಟಿಯ ಸ್ಟೋರಿ?
2018ರಲ್ಲಿ ನಟಿ ಸೋನಾಲಿ ಬೇಂದ್ರೆ ಅವರಿಗೆ 4 ನೇ ಹಂತದ ಮೆಟಾಸ್ಟಾಟಿಕ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇದು ಕೂಡ ಒಂದು ರೂಪದ ಬ್ರೆಸ್ಟ್ ಕ್ಯಾನ್ಸರೇ. ಆದರೆ ಸಕಾಲಿಕ ಚಿಕಿತ್ಸೆ, ಭಾವನಾತ್ಮಕ ಶಕ್ತಿ ಮತ್ತು ಆಶಾವಾದಿ ಮನೋಭಾವದಿಂದ, ಅವರು ಈ ರೋಗದ ವಿರುದ್ಧ ಹೋರಾಡಿ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರ ಚೇತರಿಕೆಯ ಪ್ರಯಾಣದಲ್ಲಿ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ.
ಕ್ಯಾನ್ಸರ್ ಗೆದ್ದವರು ಹಲವರು
ಅದೇ ರೀತಿ ಯೋಗ, ಧ್ಯಾನದ ಮೂಲಕ, ಹೋಮಿಯೋಪಥಿ ಔಷಧದ ಮೂಲಕ ಈ ಕ್ಯಾನ್ಸರ್ ವಿರುದ್ಧ ಹೋರಾಡಿದವರು, ಅದರ ವಿರುದ್ಧ ಗೆದ್ದವರು ಸಾಕಷ್ಟು ಮಂದಿ ಇದ್ದು, ಜಾಲತಾಣಗಳಲ್ಲಿ ಕೆಲವರು ಮಾತ್ರ ತಮ್ಮ ಸಕ್ಸಸ್ ಸ್ಟೋರಿ ಹಂಚಿಕೊಳ್ಳುತ್ತಾರೆ. ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅಮೃತಧಾರೆ ಸೀರಿಯಲ್ನ ವೈದ್ಯರು ಹೇಳಿದಂತೆ ನಿಮಗೆ ಇರೋದು ಕೆಲವೇ ತಿಂಗಳು ಎಂದು ಹೇಳಿ ರೋಗಿಗಗಳ ಆತ್ಮಸ್ಥೈರ್ಯ ಕುಗ್ಗಿಸಿದರೆ ಮಾತ್ರ ಚೇತರಿಕೆ ಕಾಣುವವರೂ ಬೇಗನೇ ಇಹಲೋಹ ತ್ಯಜಿಸಬಹುದೇನೋ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಆದರೆ, ಇದೀಗ ಸೀರಿಯಲ್ನಲ್ಲಿ ಇಂಥ ಸೂಕ್ಷ್ಮ ವಿಷಯದಲ್ಲಿ ರೋಚಕತೆ ತಂದರೂ, ಕಣಿ ಹೇಳಿದ ಭವಿಷ್ಯ ಹಾಗೂ ಗೌತಮ್ ಭೂಮಿಕಾಗೆ ನೀಡಿರುವ ಭರವಸೆಯಂತೆ ಭೂಮಿಕಾಗೆ ಏನೂ ಆಗುವುದಿಲ್ಲ ಎನ್ನುವುದು ಕನ್ಫರ್ಮ್ ಆಗಿದೆ. ಇದೇ ಕಾರಣಕ್ಕೆ ಸದ್ಯ ಸೋನಾಲಿ ಬೇಂದ್ರೆಗೆ ಭೂಮಿಕಾರನ್ನು ಹೋಲಿಕೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳು ವೈರಲ್ ಆಗುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

