- Home
- Entertainment
- TV Talk
- 5ನೇ ಬಾರಿಗೆ ತಂದೆ ಆಗ್ತಿದ್ದಾರಾ ಈ ಬಿಗ್ ಬಾಸ್ ಸ್ಪರ್ಧಿ? ಸಾಕು..ನಿಲ್ಲಿಸ್ರೋ ಎಂದ ನೆಟ್ಟಿಗರು!
5ನೇ ಬಾರಿಗೆ ತಂದೆ ಆಗ್ತಿದ್ದಾರಾ ಈ ಬಿಗ್ ಬಾಸ್ ಸ್ಪರ್ಧಿ? ಸಾಕು..ನಿಲ್ಲಿಸ್ರೋ ಎಂದ ನೆಟ್ಟಿಗರು!
ಬಿಗ್ ಬಾಸ್ ಖ್ಯಾತಿಯ ಅರ್ಮಾನ್ ಮಲಿಕ್ ಈಗ ಐದನೇ ಬಾರಿಗೆ ತಂದೆ ಆಗ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಇಬ್ಬರು ಹೆಂಡ್ತಿಯರಿಂದ ಈಗ ಅವರಿಗೆ ನಾಲ್ಕು ಮಕ್ಕಳಿವೆ. ಈಗ ಐದನೇ ಮಗು ಬರಲಿದೆಯಾ ಎಂಬ ಪ್ರಶ್ನೆ ಮೂಡಿದೆ.

ಹಿಂದಿ ಬಿಗ್ ಬಾಸ್ ಒಟಿಟಿ ಶೋನಲ್ಲಿ ಅರ್ಮಾನ್ ಮಲಿಕ್ ಅವರು ತಮ್ಮ ಇಬ್ಬರು ಪತ್ನಿಯರಾದ ಕೃತಿಕಾ, ಪಾಯಲ್ ಜೊತೆ ಭಾಗವಹಿಸಿದ್ದರು. ಅಲ್ಲಿಂದ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಿದೆ.
ಅರ್ಮಾನ್ ಮಲಿಕ್ ಅವರು ಈ ಹಿಂದೆ 2011ರಲ್ಲಿ ಪಾಯಲ್ ಅವರನ್ನು ಮದುವೆಯಾಗಿದ್ದರು. ಅವರಿಗೆ ಚಿರಾಗ್ ಮಲಿಕ್ ಎಂಬ ಮಗನಿದ್ದನು. ಆಮೇಲೆ ಪಾಯಲ್ ಅವರ ಸ್ನೇಹಿತೆ ಕೃತಿಕಾರನ್ನು ಏಳು ದಿನಗಳಲ್ಲಿ ಪ್ರೀತಿಸಿ 2018ರಲ್ಲಿ ಮದುವೆಯಾದರು. ಆ ವೇಳೆ ಅರ್ಮಾನ್‌ಗೂ, ಪಾಯಲ್‌ಗೂ ಡಿವೋರ್ಸ್ ಆಗಿರಲಿಲ್ಲ.
ಅರ್ಮಾನ್ ಮಲಿಕ್ ಮಾಡಿದ ಮೋಸಕ್ಕೆ ಒಂದು ವರ್ಷಗಳ ಕಾಲ ಪಾಯಲ್ ಅವರಿಂದ ದೂರ ಇದ್ದರು. ಆಮೇಲೆ ಗಂಡನಿಂದ ದೂರ ಇರಲಾಗದೆ ಮತ್ತೆ ಪಾಯಲ್, ಅರ್ಮಾನ್, ಕೃತಿಕಾ ಮೂವರು ಒಂದೇ ಮನೆಯಲ್ಲಿ ಒಟ್ಟಿಗೆ ಬದುಕುತ್ತಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಮಾತನಾಡಿದ್ದ ಕೃತಿಕಾ, “ನಾನು ಮಾಡಿದ್ದು ತಪ್ಪು, ಪಾಯಲ್ ಜಾಗದಲ್ಲಿ ನಾನು ಇದ್ದಿದ್ರೆ ಇದನ್ನು ನಾನು ಕ್ಷಮಿಸುತ್ತಿರಲಿಲ್ಲ” ಎಂದು ಹೇಳಿದ್ದರು.
2023ರಲ್ಲಿ ಅರ್ಮಾನ್ ಮಲಿಕ್ ಅವರು ಪಾಯಲ್, ಕೃತಿಕಾ ಇಬ್ಬರೂ ಗರ್ಭಿಣಿ ಎಂದು ಘೋಷಣೆ ಮಾಡಿದ್ದರು. ಈ ಸುದ್ದಿ ಸಿಕ್ಕಾಪಟ್ಟೆ ಚರ್ಚೆ ಮಾಡಿತ್ತು. ಅಷ್ಟೇ ಅಲ್ಲದೆ ಮೊದಲು ಕೃತಿಕಾ ಓರ್ವ ಮಗನಿಗೆ ಜನ್ಮ ನೀಡಿದರೆ, ಪಾಯಲ್ ಅವರು ಓರ್ವ ಮಗ, ಓರ್ವ ಮಗಳಿಗೆ ಜನ್ಮ ನೀಡಿದ್ದಾರೆ. ಈಗ ಕೃತಿಕಾ ಮಗನಿಗೆ ಎರಡು ವರ್ಷ. ಈಗ ಅವರು ಮತ್ತೆ ಪ್ರಗ್ನೆಂಟ್ ಆಗಿದ್ದಾರಾ ಎಂಬ ಡೌಟ್ ಬಂದಿದೆ.
ಬೆಳಗ್ಗೆಯಿಂದ ಸಂಜೆವರೆಗೆ ಏನು ಮಾಡ್ತಿದ್ದೀವಿ ಎನ್ನೋದನ್ನು Vlog ಮಾಡಿ ಹಾಕುವ ಈ ಕುಟುಂಬ ಈಗ ಪ್ರಗ್ನೆನ್ಸಿ ವಿಷಯವನ್ನು ಕೂಡ ಫ್ರಾಂಕ್ ಮಾಡಿದೆ. ಹೌದು, ಎರಡು ಪ್ರಗ್ನೆನ್ಸಿ ಟೆಸ್ಟ್ ಕಿಟ್ ಬಳಸಿ ಇವರು ಫ್ರಾಂಕ್ ಮಾಡಿದ್ದರು. ಜೈದ್ ಪ್ರಗ್ನೆನ್ಸಿ ಇದ್ದಾಗ ಬಳಸಿದ್ದ ಕಿಟ್‌ನ್ನು ಅವರು ಮೆಮೊರಿ ಎಂದು ಇಟ್ಟುಕೊಂಡಿದ್ದರಂತೆ. ಈಗ ಅದನ್ನೇ ಇಟ್ಕೊಂಡು ಎಲ್ಲರಿಗೂ ಚಮಕ್ ಕೊಟ್ಟಿದ್ದಾರೆ.
ಪದೇ ಪದೇ ಕೃತಿಕಾಳ ಎರಡನೇ ಪ್ರಗ್ನೆನ್ಸಿ ಬಗ್ಗೆ ಪ್ರಶ್ನೆ ಬರುವುದು. ಆಗೆಲ್ಲ ಕೃತಿಕಾ ನನ್ನ ಮಗ ಏಳು ವರ್ಷ ಆಗೋವರೆಗೂ ಎರಡನೇ ಮಗು ಮಾಡಿಕೊಳ್ಳಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸದ್ಯ ಈ ಮನೆಯಲ್ಲಿ ಒಂದೇ ವಯಸ್ಸಿನ ಮೂವರು ಮಕ್ಕಳಿದ್ದು, ಅವರನ್ನು ಹ್ಯಾಂಡಲ್ ಮಾಡೋದು ಕಷ್ಟ ಆಗಿದೆಯಂತೆ.
ಅರ್ಮಾನ್ ಮಲಿಕ್ ಅವರು ಐದನೇ ಬಾರಿಗೆ ತಂದೆ ಆಗ್ತಿದ್ದಾರೆ ಎಂದು ತಿಳಿದು ಅನೇಕರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಸಾಕು ನಿಲ್ಲಿಸ್ರೋ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.