- Home
- Entertainment
- Toxic: ರಾಧಿಕಾ ಒಂದೇ ಸೆಕೆಂಡ್ನಲ್ಲಿ ಮಾಡಿದ ಟಾರ್ಗೆಟ್, ಯಶ್ 2 ಗಂಟೆ ತಗೊಂಡ್ರು- ಡೆಡಿಕೇಷನ್ ಕುರಿತು ಯೋಗರಾಜ್ ಭಟ್
Toxic: ರಾಧಿಕಾ ಒಂದೇ ಸೆಕೆಂಡ್ನಲ್ಲಿ ಮಾಡಿದ ಟಾರ್ಗೆಟ್, ಯಶ್ 2 ಗಂಟೆ ತಗೊಂಡ್ರು- ಡೆಡಿಕೇಷನ್ ಕುರಿತು ಯೋಗರಾಜ್ ಭಟ್
'ಟಾಕ್ಸಿಕ್' ಚಿತ್ರದ ಕುರಿತು ಮಾತನಾಡಿದ ಯೋಗರಾಜ್ ಭಟ್, ನಟ ಯಶ್ ಅವರ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದ್ದಾರೆ. ಹಿಂದೆ ಯಶ್ ಒಂದು ಟಾರ್ಗೆಟ್ ರೀಚ್ ಆಗಲು ಸುಮಾರು ಎರಡು ಗಂಟೆಗಳ ಕಾಲ ಅಭ್ಯಾಸ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.

ಟಾಕ್ಸಿಕ್ ಹವಾ
ನಟ ಯಶ್ ನಟನೆಯ ಟಾಕ್ಸಿಕ್ ಚಿತ್ರ (Toxic Movie) ಕುರಿತು ಇದಾಗಲೇ ಸಾಕಷ್ಟು ಹವಾ ಸೃಷ್ಟಿಯಾಗಿದೆ. ಅದರಲ್ಲಿಯೂ ಈ ಚಿತ್ರದ ಪ್ರೊಮೋ ಬಿಡುಗಡೆ ಮಾಡಿದಾಗಿನಿಂದಲಂತೂ ಯಶ್ ಫ್ಯಾನ್ಸ್ ಚಿತ್ರಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.
ಆಗಸ್ಟ್26ರಂದು ಬಿಡುಗಡೆ
ಪದೇ ಪದೇ ಮುಂದೂಡುತ್ತಾ ಸಾಗುತ್ತಿದ್ದ ಸಿನಿಮಾ ಆಗಸ್ಟ್26ರಂದು ಬಿಡುಗಡೆಯಾಗಲಿದೆ. ಕೆಜಿಎಫ್ ಬಳಿಕ, ಯಶ್ ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಭರ್ಜರಿ ಯಶಸ್ಸು ಗಳಿಸಲಿದ್ದಾರೆ ಎನ್ನುವ ನಿರೀಕ್ಷೆ ಇದೆ.
ಯಶ್ ಡೆಡಿಕೇಷನ್
ಈ ಚಿತ್ರದ ಕುರಿತು ಹಾಗೂ ಸಿನಿಮಾ ಶೂಟಿಂಗ್ನಲ್ಲಿ, ಯಶ್ ಅವರ ಡೆಡಿಕೇಷನ್ ಬಗ್ಗೆ ಇದಾಗಲೇ ಹಲವಾರು ಸಿನಿಮಾ ಸೆಲೆಬ್ರಿಟಿಗಳು ಮಾತನಾಡಿದ್ದಾರೆ. ಇದೀಗ ಈ ಚಿತ್ರದ ಹಾಡಿಗೆ ಸಾಹಿತ್ಯ ಬರೆದಿರುವ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಗೀತರಚನೆಕಾರ ಯೋಗರಾಜ್ ಭಟ್ ಮಾತನಾಡಿದ್ದಾರೆ. ಕೆಲಸದಲ್ಲಿ ಯಶ್ ಅವರ ಸಮರ್ಪಣಾ ಮನೋಭಾವದ ಕುರಿತು ಅವರು ವಿವರಿಸಿದ್ದಾರೆ.
ಯೋಗರಾಜ್ ಭಟ್ ಹೇಳಿದ್ದೇನು?
ಡ್ರಾಮಾ ಒಂದರ ಪ್ರಮೋಷನ್ ವೇಳೆ ಯಶ್ ಮತ್ತು ರಾಧಿಕಾ ಅವರಿಗೆ ನಾನೊಂದು ಟಾರ್ಗೆಟ್ ಕೊಟ್ಟಿದ್ದೆ. ಒಂದಿಷ್ಟು ಬಾಣಗಳನ್ನಿಟ್ಟು ಗೋಡೆಯ ಮೇಲೆ ಇರುವ ಚಿತ್ರದ ನಡುವೆ ಅದನ್ನು ಹೊಡೆಯುವ ಟಾರ್ಗೆಟ್ ಅದಾಗಿತ್ತು. ರಾಧಿಕಾ ಅವರು ಒಂದೇ ಸೆಕೆಂಡ್ನಲ್ಲಿ ಅದನ್ನು ಸಾಧಿಸಿ ಬಿಟ್ಟರು ಎನ್ನುತ್ತಲೇ ಯಶ್ ಕುರಿತು ಯೋಗರಾಜ್ ಭಟ್ ಮಾತನಾಡಿದ್ದಾರೆ.
ಟಾರ್ಗೆಟ್ ರೀಚ್
'ಯಶ್ ಅವರಿಗೆ ಅದು ಸುಲಭ ಆಗಿರಲಿಲ್ಲ. ತುಂಬಾ ಟ್ರೈ ಮಾಡಿದ್ರು. ಆಗಲೇ ಇಲ್ಲ. ಆದರೆ ಅವರು ಛಲವನ್ನು ಬಿಡಲಿಲ್ಲ. ಸುಮಾರು ಒಂದೂಮುಕ್ಕಾಲು ಗಂಟೆ ಪ್ರ್ಯಾಕ್ಟೀಸ್ ಮಾಡಿ ಟಾರ್ಗೆಟ್ ರೀಚ್ ಆದರು. ಅದು ಅವರ ಕೆಲಸದಲ್ಲಿನ ಡೆಡಿಕೇಷನ್ ತೋರಿಸುತ್ತದೆ. ಒಮ್ಮೆ ಛಲ ತೊಟ್ಟರೆ ಕೆಲಸ ಮುಗಿಯುವವರೆಗೂ ಅವರು ಅದನ್ನು ಬಿಡಲ್ಲ. ಅಷ್ಟೊಂದು ಶ್ರದ್ಧೆ, ಭಕ್ತಿ ಅವರ ಕೆಲಸದಲ್ಲಿ ಇದೆ' ಎಂದಿದ್ದಾರೆ.
ಶ್ರದ್ಧೆಯಿಂದ ಕೆಲಸ
ಟಾಕ್ಸಿಕ್ನಲ್ಲಿ ಕೂಡ ಅದೇ ಶ್ರದ್ಧೆ ಭಕ್ತಿಯಿಂದ ಅವರು ಕೆಲಸ ಮಾಡಿದ್ದಾರೆ. ಆದ್ದರಿಂದ ಸಿನಿಮಾ ಚೆನ್ನಾಗಿ ಓಡುವುದರಲ್ಲಿ ಸಂದೇಹವೇ ಇಲ್ಲ. ಯಶ್ ಅವರ ನಿಷ್ಠೆ ಅವರಿಗೆ ಕೈಹಿಡಿಯಲಿದೆ ಎಂದು ಯೋಗರಾಜ್ ಭಟ್ (Yogaraj Bhat) ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

