- Home
- Entertainment
- TV Talk
- ಕನ್ನಡ ಫಿಲಂ ಇಂಡಸ್ಟ್ರಿಯಿಂದಾನೆ ರಿಟೈರ್ಡ್ ಆದ್ರ ರಕ್ಷಿತ್ ಶೆಟ್ಟಿ…. ಎಲ್ಲಿ ಕಾಣೆಯಾಗಿದ್ದಾರೆ ಶೆಟ್ರು?
ಕನ್ನಡ ಫಿಲಂ ಇಂಡಸ್ಟ್ರಿಯಿಂದಾನೆ ರಿಟೈರ್ಡ್ ಆದ್ರ ರಕ್ಷಿತ್ ಶೆಟ್ಟಿ…. ಎಲ್ಲಿ ಕಾಣೆಯಾಗಿದ್ದಾರೆ ಶೆಟ್ರು?
ರಕ್ಷಿತ್ ಶೆಟ್ಟಿ ಕನ್ನಡ ಫಿಲಂ ಇಂಡಷ್ಟ್ರಿಯಿಂದಾನೆ ರಿಟೈರ್ಡ್ ಆಗ್ಬಿಟ್ರಾ ಎನ್ನುವ ಚರ್ಚೆಯೊಂದು ಇದೀಗ ಸೋಶಿಯಸ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ರಕ್ಷಿತ್ ಎಲ್ಲೂ ಕಾಣಿಸಿಕೊಳ್ಳದೇ ಇರೋದು.

ರಕ್ಷಿತ್ ಶೆಟ್ಟಿ (Rakshith Shetty) ಕನ್ನಡ ಸಿನಿಮಾ ಇಂಡಷ್ಟ್ರಿಯ ಅಧ್ಬುತವಾದ ಪ್ರತಿಭೆ. ಅವರ ನಟನೆಯೇ ಆಗಿರಬಹುದು ಅಥವಾ ಅವರ ಸಿನಿಮಾಗಳೇ ಆಗಿರಬಹುದು ಅಧ್ಬುತವಾಗಿರುತ್ತೆ. ರಕ್ಷಿತ್ ಕಡಿಮೆ ಸಿನಿಮಾಗಳಲ್ಲಿ ನಟಿಸಿದ್ದರು, ನಿರ್ದೇಶನ ಮಾಡಿರುವ ಸಿನಿಮಾಗಳು ಕಡಿಮೆಯಾಗಿದ್ದರೂ ಅವು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು.
ನಮ್ ಏರಿಯಾದಲ್ಲಿ ಒಂದ್ ದಿನ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಕ್ಷಿತ್ ಶೆಟ್ಟಿ ಬಳಿಕ ತುಘ್ಹಲಕ್, ಉಳಿದವರು ಕಂಡಂತೆ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (Simple ag ondu love story), ವಾಸ್ತು ಪ್ರಕಾರ, ರಿಕ್ಕಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ, ಸಪ್ತ ಸಾಗರದಾಚೆ ಎಲ್ಲೋ ಎ ಮತ್ತು ಬಿಯಲ್ಲಿ ನಟಿಸಿದ್ದಾರೆ.
ಇವುಗಳಲ್ಲಿ ಉಳಿದವರು ಕಂಡಂತೆ ಮತ್ತು ಅವನೇ ಶ್ರೀಮನ್ನಾರಾಯಣ ಸಿನಿಮಾಗಳು ರಕ್ಷಿತ್ ನಿರ್ದೇಶನದ ಸಿನಿಮಾಗಳು. ಉಳಿದವರು ಕಂಡಂತೆ (Ulidavaru Kandante) ಸಿಕ್ಕಾಪಟ್ಟೆ ಹಿಟ್ ಆಗಿತ್ತು, ಆದರೆ ಅವನೇ ಶ್ರೀಮನ್ನಾರಾಯಣ ಸಿನಿಮಾ ಹಲವು ವರ್ಷಗಳ ಶೂಟಿಂಗ್ ಬಳಿಕ ಬಹು ನಿರೀಕ್ಷೆ ಹುಟ್ಟಿಸಿಕೊಂಡು ಬಿಡುಗಡೆಯಾಗಿತ್ತು ಆದರೆ ಅಷ್ಟೊಂದು ಯಶಸ್ಸು ಕಾಣಲಿಲ್ಲ.
ರಕ್ಷಿತ್ ಶೆಟ್ಟಿ ಕೊನೆಯದಾಗಿ 2022 ರಲ್ಲಿ 777 ಚಾರ್ಲಿ ಮತ್ತು 2023ರಲ್ಲಿ ಸಪ್ತ ಸಾಗರದಾಚೆ ಎಲ್ಲೋ ಎ ಮತ್ತು ಬಿ ಸಿನಿಮಾಗಳಲ್ಲಿ ನಟಿಸಿದ್ದೇ ಕೊನೆ ಕಳೆದ ಎರಡು ವರ್ಷಗಳಿಂದ ಬೇರೆ ಯಾವುದೇ ಸಿನಿಮಾಗಳಲ್ಲೂ ರಕ್ಷಿತ್ ನಟಿಸಿಲ್ಲ. ಸಪ್ತಸಾಗರದಾಚೆ ಬಳಿಕ ರಕ್ಷಿತ್ ಎಲ್ಲೂ ಕಾಣಿಸಿಕೊಂಡಿಲ್ಲ.
ಉಳಿದವರು ಕಂಡಂತೆ ಸಿನಿಮಾದ ಪ್ರೀಕ್ವಲ್ ಆಗಿರುವ ರಿಚರ್ಡ್ ಆಂಟನಿ (Richard Antony) ಸಿನಿಮಾ ಮೂಲಕ ರಕ್ಷಿತ್ ಮತ್ತೆ ಬರುತ್ತಾರೆ ಎನ್ನುವ ಸುದ್ದಿ ೪ ವರ್ಷದ ಹಿಂದೆ ಸದ್ದು ಮಾಡಿತ್ತು. ಈ ಸಿನಿಮಾದ ಟೀಸರ್ ಕೂಡ ಹೊಸ ಹವಾ ಸೃಷ್ಟಿಸಿತ್ತು, ಆದರೆ ಇದೆಲ್ಲಾ ಆಗಿ ನಾಲ್ಕು ವರ್ಷ ಕಳೆದರೂ ಕೂಡ ಸಿನಿಮಾ ಯಾವಾಗ ಬರುತ್ತೆ? ಯಾವ ಹಂತಕ್ಕೆ ಶೂಟಿಂಗ್ ಮುಟ್ಟಿದೆ ಎನ್ನುವ ಸುದ್ದಿ ಕೂಡ ಹೊರ ಬಂದಿಲ್ಲ.
ಇದಲ್ಲದೇ ಇನ್ನೆರಡು ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ನಟಿಸುವ ಸುದ್ದಿ ಕೂಡ ಬಂದಿತ್ತು. ಆದರೆ ಅದರ ವಿಚಾರ ಕೂಡ ಏನಾಯ್ತು ಅನ್ನೋದು ಗೊತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ರಕ್ಷಿತ್ ಶೆಟ್ಟಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಜೊತೆಗೆ ಯಾವುದೇ ವಿಚಾರದ ಬಗ್ಗೆ, ಯಾಕೆ ತಡವಾಗುತ್ತಿದೆ ಎನ್ನುವ ಬಗ್ಗೆ ಕೂಡ ಮಾಹಿತಿ ನೀಡದೇ ಇರುವ ಬಗ್ಗೆ ಅಭಿಮಾನಿಗಳು ಗರಂ ಆಗಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ (social media) ಭಾರಿ ಚರ್ಚೆ ನಡೆಯುತ್ತಿದ್ದು, ರಕ್ಷಿತ್ ಶೆಟ್ಟಿ ಕನ್ನಡ ಫಿಲಂ ಇಂಡಷ್ಟ್ರಿಯಿಂದ ರಿಟೈರ್ಡ್ ಆಗಿದ್ದಾರಾ? ಎಲ್ಲಿ ಕಾಣೆಯಾಗಿದ್ದಾರೆ ರಕ್ಷಿತ್? ಎಂದು ಕೇಳಿದ್ದಾರೆ. ಯಾವಾಗ ರಿಚರ್ಟ್ ಆಂಟನಿ ಬರುತ್ತೆ? ಪುಣ್ಯಕೋಟಿ ಯಾವಾಗ ಬರುತ್ತೆ? ಈ ಸಿನಿಮಾಗಳಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಎಲ್ಲಾದಕ್ಕೂ ರಕ್ಷಿತ್ ಶೆಟ್ಟಿ ನೇರವಾಗಿ ಬಂದು ಉತ್ತರ ಕೊಡಬೇಕು.