ಶಿವು- ಮಾನಸಾ ಒಂದಾಗಲು ವಂಶಿಕಾ ಕಾರಣ ! ಮೊದಲು ಪ್ರಫೋಸ್ ಮಾಡಿದ್ಯಾರು?
ಕಾಮಿಡಿ ಮೂಲಕವೇ ವೀಕ್ಷಕರ ಮನಸ್ಸು ಗೆದ್ದಿರುವ ಮಾನಸಾ ಹಾಗೂ ಶಿವು ಮದುವೆ ಆಗ್ತಿದ್ದಾರೆ. ಈಗಾಗಲೇ ಎಂಗೇಜ್ಮೆಂಟ್ ನಡೆದಿದೆ. ಇಬ್ಬರು ಬಚ್ಚಿಟ್ಟಿದ್ದ ಐದು ವರ್ಷದ ಪ್ರೀತಿ ಈಗ ಬಹಿರಂಗವಾಗಿದೆ.

ಟ್ರೆಂಡಿಂಗ್ ಜೋಡಿ
ಮಜಾ ಭಾರತ ಹಾಗೂ ಗಿಚ್ಚಿ ಗಿಲಿ ಗಿಲಿ ಸೂಪರ್ ಜೋಡಿ ಶಿವು ಹಾಗೂ ಮಾನಸಾ ಎಂಗೇಜ್ ಆಗಿದ್ದಾರೆ. ಅವರ ಎಂಗೇಜ್ಮೆಂಟ್ ಎಂದಾಗ ಅನೇಕರು ಅಚ್ಚರಿಗೊಳಗಾಗಿದ್ರು. ಅದ್ರಲ್ಲಿ ಅವ್ರ ಆಪ್ತರೂ ಸೇರಿದ್ದಾರೆ. ಅದಕ್ಕೆ ಕಾರಣ ಗುಟ್ಟಾಗಿದ್ದ ಅವರ ಪ್ರೀತಿ. ಸತತ 5 ವರ್ಷಗಳಿಂದ ಪ್ರೀತಿ ಮಾಡ್ತಿದ್ದ ಜೋಡಿ ಗುಟ್ಟನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ.
ಇದೇ ವರ್ಷ ಮದುವೆ
ಮಾನಸಾ ಹಾಗೂ ಶಿವಕುಮಾರ್ ಎಂಗೇಜ್ಮೆಂಟ್ ರಾಯಲ್ ಇಂದ್ರಪ್ರಸ್ತದಲ್ಲಿ ನಡೆದಿದೆ. ನವೆಂಬರ್, 2025ರಲ್ಲಿ ರಿಂಗ್ ಬದಲಿಸಿಕೊಂಡ ಜೋಡಿ ಇದೇ ವರ್ಷ 2026ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆ ದಟ್ಟವಾಗಿದೆ.
ಮಾನಸಾ – ಶಿವು ಮೊದಲ ಭೇಟಿ
ಮಾನಸಾ ಹಾಗೂ ಶಿವು ಮೊದಲು ಭೇಟಿಯಾಗಿದ್ದು ಮಜಾ ಭಾರತ ಸೆಟ್ ನಲ್ಲಿ. ಮಜಾ ಭಾರತ ಸೀಸನ್ 2 ನಲ್ಲಿ ಶಿವು ಮೊದಲ ಬಾರಿ ಮಾನಸಾ ಅವರನ್ನು ನೋಡಿದ್ದರು. ಆಗ ಇದ್ದಿದ್ದು ಪರಿಚಯ, ಸ್ನೇಹ ಮಾತ್ರ. ಮಾನಸಾ, ಸೆಟ್ ನಲ್ಲಿದ್ದ ಎಲ್ಲರನ್ನೂ ಅಣ್ಣ ಅಂತ ಕರೆದ್ರೂ ಶಿವು ಅವರನ್ನು ಕರೆಯುತ್ತಿರಲಿಲ್ಲ. ಈಗ್ಲೂ ಶಿವು ಅವರೇ ಅಂತ ಮಾನಸಾ ಕರೆಯುತ್ತಾರೆ.
ಪ್ರಪೋಸ್ ಮಾಡಿದ್ದು ಶಿವು
ಮಜಾ ಭಾರತ ಶೋ ನಡೆಯುತ್ತಿರುವಾಗ್ಲೇ ಶಿವು, ಮಾನಸಾ ಅವರಿಗೆ ಪ್ರಪೋಸ್ ಮಾಡಿದ್ರು. ನಾಗರಭಾವಿಯಲ್ಲಿರುವ ಸ್ವಾತಿ ಹೊಟೇಲ್ ನಲ್ಲಿ ಪ್ರೇಮ ನಿವೇದನೆ ನಡೆದಿತ್ತು. ಮಜಾ ಭಾರತ ಶೋ ಟೈಂನಲ್ಲಿ ಮಾನಸಾ ಬಳಿ ಬಂದ ಶಿವು, ಲಂಚ್ ಗೆ ಕರೆದಿದ್ದರು. ಊಟ ಮಾಡುವಾಗ ಮಾನಸಾಗೆ ಒಂದು ಗಿಫ್ಟ್ ತಳ್ಳಿದ್ದರು ಶಿವು.
ಶಿವು ನೀಡಿದ ಗಿಫ್ಟ್ ನಲ್ಲಿ ಏನಿತ್ತು?
ಪ್ರಪೋಸ್ ಮಾಡಲು ಮುಂದಾಗಿದ್ದ ಶಿವು ಗಿಫ್ಟ್ ನಲ್ಲಿ ಚಾಕೋಲೇಟ್, ಕೀ ಚೈನ್ ಹಾಗೂ ರಿಂಗ್ ಇತ್ತು. ಸಿಲ್ವರ್ ರಿಂಗ್ ನೋಡಿದ ತಕ್ಷಣ ಮಾನಸಾ ಸ್ವಲ್ಪ ಶಾಕ್ ಆದ್ರೂ ನಾರ್ಮಲ್ ಆಗಿ ಮಾತನಾಡಿದ್ರು. ಆದ್ರೆ ಅಲ್ಲೇ ಶಿವು ಅವರ ಪ್ರಪೋಸ್ ನಿರಾಕರಿಸಿದ್ದರು ಮಾನಸಾ. ಶಿವು ಬಗ್ಗೆ ಸರಿಯಾಗಿ ಗೊತ್ತಿಲ್ಲ ಎನ್ನುವ ಕಾರಣಕ್ಕೆ ಶಿವು ಅವರನ್ನು ರಿಜೆಕ್ಟ್ ಮಾಡಿದ್ದ ಮಾನಸಾ ಬಳಿ ಈಗ್ಲೂ ಆ ಸಿಲ್ವರ್ ರಿಂಗ್ ಇದೆ.
ಮಾನಸಾ ಕಾಡಿದ್ದ ಶಿವು
ಮಾನಸಾ, ಪ್ರೀತಿಯನ್ನು ಒಪ್ಪಿಕೊಳ್ಳುವವರೆಗೂ ಶಿವು ಬಿಡಲಿಲ್ಲ. ಫೋನ್, ಮೆಸ್ಸೇಜ್ ಮಾಡಿ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿದ್ದರು. ನೀವು ಒಪ್ಪುವವರೆಗೂ ನಾನು ಕಾಯ್ತೇನೆ ಎನ್ನುವ ಭರವಸೆ ನೀಡಿದ್ದರು.
ಶಿವು ಮಾನಸಾ ಒಂದು ಮಾಡಿದ ವಂಶಿಕಾ
ಗಿಚ್ಚಿ ಗಿಲಿಗಿಲಿ ಸೆಟ್ ನಲ್ಲಿ ಮಾನಸಾ ಮತ್ತು ಶಿವು ಮತ್ತಷ್ಟು ಹತ್ತಿರವಾದ್ರು. ಇಬ್ಬರು ಪರಸ್ಪರ ಅರಿಯಲು ಈ ಸೆಟ್ ಹಾಗೂ ವಂಶಿಕಾ ಕಾರಣವಾದ್ರು. ವಂಶಿಕಾ ಜೊತೆ ಪ್ರಾಕ್ಟೀಸ್ ಮಾಡುವಾಗ ಶಿವು ಮನಸ್ಸನ್ನು ಮಾನಸ ಅರಿತಿದ್ದಲ್ಲದೆ, ಶಿವು ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರು.
ಕುಟುಂಬಸ್ಥರ ಒಪ್ಪಿಗೆ
ಮಾನಸಾ ಹಾಗೂ ಶಿವು ಪ್ರೀತಿ ಮನೆಯಲ್ಲಿ ಗೊತ್ತಿದ್ರೂ, ಅಧಿಕೃತವಾಗಿ ಒಪ್ಪಿಗೆ ನೀಡಿದ್ದು ನವೆಂಬರ್ 9 ರಂದು. ಶಿವು ಕುಟುಂಬ ಸಮೇತ ಮಾನಸಾ ಮನೆಗೆ ಹೋಗಿ ಹೆಣ್ಣು ಕೇಳಿದ್ದರು. ಅದಕ್ಕೆ ಇಬ್ಬರ ಮನೆಯಿಂದಲೂ ಒಪ್ಪಿಗೆ ಸಿಕ್ಕಿತ್ತಲ್ದೆ ಎಂಗೇಜ್ಮೆಂಟ್ ನಡೀತು. ಶಿವುಗಿಂತ ಮಾನಸಾ ಒಂದು ವರ್ಷ ದೊಡ್ಡವರು. ಮಾನಸಾ ಹಾಗೂ ಶಿವು ಸ್ವಭಾವ ಒಂದೇ ರೀತಿ ಇದೆ. ಇಬ್ಬರ ಮಧ್ಯೆ ಸಾಕಷ್ಟು ಹೊಂದಾಣಿಕೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

