ಮೀನಾಕ್ಷಿ ಕಣ್ಣಿಗೆ ಬೆಚ್ಚಿದ ಭಾಗ್ಯಾ, ಹೊರ ಬರ್ತಿದೆ ಅಸಲಿ ವಿಲನ್ ಬಣ್ಣ
Colors Kannada Bhagyalakshmi Serial : ಭಾಗ್ಯಲಕ್ಷ್ಮಿ ಸೀರಿಯಲ್ ಹೊಸ ಟ್ವಿಸ್ ಪಡೆದುಕೊಂಡಿದೆ. ಇಷ್ಟು ದಿನ ಬರೀ ತಾಂಡವ್, ಶ್ರೇಷ್ಠಾಳಿಂದ ಸುಸ್ತಾಗಿದ್ದ ಭಾಗ್ಯಾಗೆ ಈಗ ಆದಿ ಮನೆಯಲ್ಲಿ ದೊಡ್ಡ ಶಾಕ್ ಸಿಗುವ ಸಾಧ್ಯತೆ ಇದೆ.

ಮೀನಾಕ್ಷಿಗೆ ಇನ್ನೊಂದು ಮುಖ ಇದ್ಯಾ?
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ಹೊಸ ದಾರಿ ಹಿಡಿದು ತುಂಬಾ ದಿನವಾಯ್ತು. ತಾಂಡವ್ ಜೈಲು ಸೇರಿದ್ದಾಯ್ತು. ಈಗ ಭಾಗ್ಯಾ, ಆದಿ ಮದುವೆ ಆಗಿ ಆದಿ ಮನೆಯಲ್ಲಿ ಹೊಸ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಮೀನಾಕ್ಷಿ ಹಾಗೂ ಆದಿ ತಂಗಿಯೇ ಭಾಗ್ಯಗೆ ವಿಲನ್. ಈ ಮಧ್ಯೆ ಇಂದು ಪ್ರಸಾರವಾಗ್ತಿರುವ ಪ್ರೋಮೋ ಹೊಸ ಗುಟ್ಟು ಬಿಟ್ಟುಕೊಡ್ತಿದೆ. ಮೀನಾಕ್ಷಿ ಬರೀ ವಿಲನ್ ಅಲ್ಲ ಖತರ್ನಾಕ್ ವಿಲನ್ ಅನ್ನೋದನ್ನು ತೋರಿಸಲಾಗ್ತಿದೆ.
ಮೀನಾಕ್ಷಿ ಕಣ್ಣಿಗೆ ಹೆದರಿದ ಸ್ವಾಮಿ
ಭಾಗ್ಯ ಎಂದಿನಂತೆ ಆದಿ ಮನೆಯಲ್ಲೂ ಮನೆ ಜವಾಬ್ದಾರಿ ವಹಿಸಿಕೊಂಡಿದ್ದಾಳೆ. ಸ್ವಾಮಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳ್ತಿದ್ದಾಳೆ. ಭಾಗ್ಯಾ ಸ್ವಭಾವ, ಸ್ವಾಮಿಗೆ ಕಾಮತ್ ಹೆಂಡತಿಯ ನೆನಪು ತರಿಸಿದೆ. ಸ್ವಾಮಿ, ನೀವು ದೊಡ್ಡ ಯಜಮಾನಿ ತರ ಅಂತ ಸ್ವಾಮಿ ಹೇಳಿದ್ದಾರೆ. ಕಾಮತ್ ಹೆಂಡ್ತಿ ಸತ್ತ ಮೇಲೆ ಏನೆಲ್ಲ ಆಯ್ತು ಅಂತ ಹೇಳೋ ಮುನ್ನವೇ ಮೀನಾಕ್ಷಿ ಎಂಟ್ರಿಯಾಗಿದೆ. ಮೀನಾಕ್ಷಿ ದೊಡ್ಡ ಕಣ್ಣು ಬಿಡ್ತಿದ್ದಂತೆ ಸ್ವಾಮಿ ಬೆಚ್ಚಿದ್ದು, ಅಲ್ಲಿಂದ ಓಡಿ ಹೋಗಿದ್ದಾನೆ.
ಭಾಗ್ಯಾಗೆ ವಾರ್ನಿಂಗ್
ಸ್ವಾಮಿ ಅಲ್ಲಿಂದ ಓಡಿ ಹೋಗ್ತಿದ್ದಂತೆ ಭಾಗ್ಯಾಗೆ ಮೀನಾಕ್ಷಿ ವಾರ್ನಿಂಗ್ ಮಾಡಿದ್ದಾಳೆ. ಆದಿಗೆ ಸದ್ಯ ಎಚ್ಚರವಾಗಿದೆ. ಮುಂದೆ ಮನೆಯವರಿಗೆ ತೊಂದ್ರೆ ಆದ್ರೆ ನಿನ್ನನ್ನು ಕ್ಷಮಿಸೋದಿಲ್ಲ. ನನ್ನ ಇನ್ನೊಂದು ಮುಖ ನೋಡ್ಬೇಕು ಎಂದಿದ್ದಾಳೆ.
ವೀಕ್ಷಕರ ಕಮೆಂಟ್
ಮೀನಾಕ್ಷಿ ಭಯದ ಕಣ್ಣನ್ನು ನೋಡಿದ ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮೀನಾಕ್ಷಿ ಸಾಮಾನ್ಯದವಳಲ್ಲ. ಅವಳೇ ಕಾಮತ್ ಹೆಂಡತಿಯನ್ನು ಕೊಂದಿರಬೇಕು. ಇನ್ಮುಂದೆ ಎಲ್ಲ ಒಂದೊಂದೆ ಹೊರಗೆ ಬರಬೇಕು. ಭಾಗ್ಯ ಎಲ್ಲ ಸತ್ಯ ಹೊರಗೆಳೆಯುತ್ತಾಳೆ ಅಂತ ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಎಚ್ಚರಗೊಂಡ ಆದಿ
ಸಿಹಿಕುಂಬಳಕಾಯಿ ತಿಂದು ಆದಿ ಪ್ರಜ್ಞೆ ತಪ್ಪಿದ್ದ. ಇದು ಭಾಗ್ಯಾಗೆ ಮತ್ತಷ್ಟು ಸಂಕಷ್ಟ ತಂದಿತ್ತು. ಮದುವೆಯಾಗಿ ಹೊಸ ಮನೆಗೆ ಬಂದಾಗಿಂದ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರುವ ಭಾಗ್ಯಾ ಆದಿ ವಿಷ್ಯದಲ್ಲಿ ಬಚಾವ್ ಆಗಿದ್ದಾಳೆ. ಕೊನೆಗೂ ಆದಿಗೆ ಪ್ರಜ್ಞೆ ಬಂದಿದೆ.
ಆದಿ ಮನೆಗೆ ಬರ್ತಾಳಾ ತನ್ವಿ?
ಭಾಗ್ಯಾ ಜೊತೆ ಭಾಗ್ಯಾ ಮಕ್ಕಳನ್ನು ಆದಿ ಒಪ್ಪಿಕೊಂಡಾಗಿದೆ. ಇವರು ನನ್ನ ಮಕ್ಕಳು ಅಂತ ಗುಂಡಣ್ಣ ಹಾಗೂ ತನ್ವಿಗೆ ಮಕ್ಕಳ ಸ್ಥಾನ ನೀಡಿದ್ದಾರೆ. ಗುಂಡಣ್ಣನ ಮನವೊಲಿಸುವಲ್ಲಿ ಆದಿ ಯಶಸ್ವಿ ಆಗಿದ್ದಾನೆ ಕೂಡ. ಅಮ್ಮನಿಗಾಗಿ ಇದೇ ಮನೆಯಲ್ಲಿರಲು ಗುಂಡಣ್ಣ ಒಪ್ಪಿದ್ದಾನೆ. ಆದ್ರೆ ತನ್ವಿ ಒಪ್ಪುತ್ತಿಲ್ಲ. ತನ್ವಿಯನ್ನು ಮನೆಗೆ ಕರೆಯುವ ಪ್ರಯತ್ನ ಮಾಡಿ ಭಾಗ್ಯಾ ಸೋತಿದ್ದಾಳೆ. ಅವಳಿಗೆ ಸಮಾಧಾನ ಹೇಳಿದ ಆದಿ ಇನ್ನೆರಡು ದಿನಗಳಲ್ಲಿ ತನ್ವಿ ನಮ್ಮ ಮನೆಗೆ ಬರ್ತಾಳೆ ಅಂತ ಭರವಸೆ ನೀಡಿದ್ದಾನೆ. ಸದ್ಯ, ತನ್ವಿಯನ್ನು ಆದಿ ಹೇಗೆ ಕರೆತರ್ತಾನೆ ಎಂಬ ಕುತೂಹಲ ವೀಕ್ಷಕರಿಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

