- Home
- Entertainment
- TV Talk
- Hindi Actress Nia Sharma: ಮದುವೆ ಯಾವಾಗ ಅಂತ ಕೇಳಿದ್ರೆ… ಶಾಕಿಂಗ್ ಉತ್ತರ ಕೊಟ್ಟ ಕಿರುತೆರೆಯ ಬೋಲ್ಡ್ ಬ್ಯೂಟಿ
Hindi Actress Nia Sharma: ಮದುವೆ ಯಾವಾಗ ಅಂತ ಕೇಳಿದ್ರೆ… ಶಾಕಿಂಗ್ ಉತ್ತರ ಕೊಟ್ಟ ಕಿರುತೆರೆಯ ಬೋಲ್ಡ್ ಬ್ಯೂಟಿ
ಟಿವಿ ನಟಿ ಹಾಗೂ ಬೋಲ್ಡ್ ಅವತಾರಗಳಿಂದಲೇ ಜನಪ್ರಿಯತೆ ಪಡೆದಿರುವ ನಟಿ ನಿಯಾ ಶರ್ಮಾ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಕೇಳಿದಾಗ ನೀಡಿರುವ ಹೇಳಿಕೆ ಈಗ ವೈರಲ್ ಆಗಿದ್ದೆ.

ಟಿವಿ ನಟಿ ನಿಯಾ ಶರ್ಮಾ (Nia Sharma) ಗೊತ್ತೆ ಇದೆ ಅಲ್ವಾ? ಹಿಂದಿ ದೂರ ದರ್ಶನದ ಮೂಲಕ ಮನೆಮಾತಾದ ಬೆಡಗಿ, ಸದ್ಯ ತಮ್ಮ ಬೋಲ್ಡ್ ಅವತಾರಗಳಿಂದ ದೇಶ -ವಿದೇಶದಲ್ಲೂ ಜನಪ್ರಿಯ ಪಡೆದಿದ್ದಾರೆ. ಹಿಂದಿ ಸೀರಿಯಲ್ ಮಾತ್ರವಲ್ಲದೇ, ರಿಯಾಲಿಟಿ ಶೋ, ವೆಬ್ ಸೀರೀಸ್, ಮ್ಯೂಸಿಕ್ ವಿಡಿಯೋಗಳಲ್ಲು ನಿಯಾ ಶರ್ಮಾ ನಟಿಸಿದ್ದಾರೆ.
ನಿಯಾ ಶರ್ಮಾಗೆ 34 ವರ್ಷ ವಯಸ್ಸು, ಅನೇಕ ಜನರು ಆಕೆಯ ಬೋಲ್ಡ್ ಲುಕ್ ಗೆ (bold look of Nia) ಫಿದಾ ಆಗಿದ್ದಾರೆ. ಇದರ ಹೊರತಾಗಿಯೂ, ನಿಯಾ ಇನ್ನೂ ಸಿಂಗಲ್ ಆಗಿರೋದು ಅಚ್ಚರಿಯ ವಿಷ್ಯ. ಕಾರ್ಯಕ್ರಮವೊಂದರಲ್ಲಿ ನಿಯಾ ಶರ್ಮಾಗೆ ನಿಮ್ಮ ಮದುವೆ ಯಾವಾಗ ಎಂದು ಕೇಳಿದಾಗ ಆಕೆ ಶಾಕಿಂಗ್ ಉತ್ತರ ನೀಡಿದ್ದರು. ಹಾಗಿದ್ರೆ ನಿಯಾ ಶರ್ಮಾ ಹೇಳಿದ್ದೇನು ನೋಡೋಣ.
ಕಳೆದ ವರ್ಷ ಕಾಮಿಡಿಯನ್ ಭಾರತಿ ಸಿಂಗ್ (Bharti Singh) ಮತ್ತು ಹರ್ಷ್ ಲಿಂಬಾಚಿಯಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ನಿಯಾ ಶರ್ಮಾ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಭಾರತಿ ನಿಯಾ ಬಳಿ ನೀವು ಯಾವಾಗ ಮದುವೆಯಾಗುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ನಿಯಾ ಬೆಳಿಗ್ಗೆ ಎದ್ದ ನಂತರ ಎಷ್ಟು ಸಮಯದವರೆಗೆ ಒಬ್ಬನೇ ವ್ಯಕ್ತಿಯ ಮುಖ ನೋಡಿಕೊಂಡು ಇರೋದಕ್ಕೆ ಸಾಧ್ಯ ಆಗುತ್ತೆ? ಎಂದಿದ್ದಾರೆ.
ಅಷ್ಟೇ ಅಲ್ಲ ಮದುವೆಯಾದ ಮೇಲೆ ನಮಗೆ ಇಷ್ಟವಾಗಿರೋದನ್ನು ಮಾಡೋದಕ್ಕೆ ಪತಿ ಬಿಡದೇ ಇದ್ದರೆ, ನಮ್ಮ ಒಳಗಿನ ವ್ಯಕ್ತಿತ್ವ ಸತ್ತು ಹೋಗುತ್ತೆ. ಸತ್ತ ವ್ಯಕ್ತಿ ಯಾರನ್ನೂ ಸಂತೋಷಪಡಿಸುವುದಿಲ್ಲ. ನನಗೆ ಮದುವೆಯಾಗಲು ಯಾವುದೇ ಆತುರವಿಲ್ಲ. ನಾನು ನನ್ನ ಜೀವನವನ್ನು ನಡೆಸಲು ಬಯಸುತ್ತೇನೆ. ನನ್ನ ವೃತ್ತಿಜೀವನದ (career) ಮೇಲೆ ಗಮನಹರಿಸಬೇಕು. ಒಳ್ಳೆಯ ಸಂಗಾತಿ ಸಿಗದಿದ್ದರೆ ನಿಮ್ಮ ಜೀವನ ವ್ಯರ್ಥ ಆಗೋದು ಖಚಿತಾ ಎಂದಿದ್ದಾರೆ ನಿಯಾ ಶರ್ಮಾ.
ಅಲ್ಲದೇ ನಾನು ಎಂದಿಗೂ ನನ್ನ ಕೆಲಸವನ್ನು ಬಿಡಲು ಬಯಸುವುದಿಲ್ಲ. ಕೆಲಸವೇ ನನ್ನ ಜೀವನ ಎಂದಿದ್ದಾರೆ. ನಿಯಾ ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ (social media) ವೈರಲ್ ಆಗುತ್ತಿದೆ. ಅಭಿಮಾನಿಗಳು ಇದನ್ನು ಅವರ ಸ್ವತಂತ್ರ ಚಿಂತನೆ ಮತ್ತು ದಿಟ್ಟತನಕ್ಕೆ ಉದಾಹರಣೆ ಎಂದು ಹೇಳುತ್ತಿದ್ದಾರೆ.
ನಿಯಾ ಅವರ ಈ ಹೇಳಿಕೆಯು X ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅನೇಕ ಬಳಕೆದಾರರು ಅವರ ಸ್ವತಂತ್ರ ಚಿಂತನೆಯನ್ನು ಹೊಗಳಿದರು. ಒಬ್ಬ ಬಳಕೆದಾರರು, "ನಿಯಾ ಶರ್ಮಾ ಹೇಳಿದ್ದು ಸಂಪೂರ್ಣವಾಗಿ ಸರಿ. ಮದುವೆ ಅಗತ್ಯವಿಲ್ಲ, ನಿಮ್ಮ ಸಂತೋಷ ಮೊದಲು" ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅಟೆಂಶನ್ ಸೀಕಿಂಗ್ (attention seeking) ಹುಡುಗಿ ಎಂದು ಟ್ರೋಲ್ ಮಾಡಿದ್ದಾರೆ. .
ಅಂದ ಹಾಗೇ ನಿಯಾ ಶರ್ಮಾ 'ಏಕ್ ಹಜಾರೋ ಮೇ ಮೇರಿ ಬೆಹ್ನಾ ಹೈ', 'ನಾಗಿನ್ 4' ಮತ್ತು 'ಜಮೈ ರಾಜಾ' (Jamai Raja) ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು, ತಮ್ಮ ಬೋಲ್ಡ್ ಮತ್ತು ಬಿಂದಾಸ್ ಇಮೇಜ್‌ಗಾಗಿ ಯಾವಾಗಲೂ ಸುದ್ದಿಯಲ್ಲಿದ್ದಾರೆ .