MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Sugar Prices
AKKA Kannada Film Festival
Hubballi Pune AC Sleeper Bus
Government KPS Schools
Tomato & Coriander Price Crash
Central Government Jobs
Minister B Nagendra vs BJP
Karnataka SIR 2026
2027 State Elections India
Mangalore Railway Jurisdiction
  • Home
  • Entertainment
  • TV Talk
  • Bigg Boss ಅಗ್ನಿ ಪರೀಕ್ಷೆಯಲ್ಲಿ ಸ್ಪರ್ಧಿಗೆ ಗೆಟ್​ ಔಟ್​ ಎಂದ ವಿನಯ್​ ಗೌಡ: ಮುಂದೇನಾಯ್ತು ನೋಡಿ

Bigg Boss ಅಗ್ನಿ ಪರೀಕ್ಷೆಯಲ್ಲಿ ಸ್ಪರ್ಧಿಗೆ ಗೆಟ್​ ಔಟ್​ ಎಂದ ವಿನಯ್​ ಗೌಡ: ಮುಂದೇನಾಯ್ತು ನೋಡಿ

ಬಿಗ್​ಬಾಸ್​ 13ರ ಅಗ್ನಿ ಪರೀಕ್ಷೆಯಲ್ಲಿ ತೀರ್ಪುಗಾರ ವಿನಯ್​ ಗೌಡ ಅವರು, ಇನ್ನೊಬ್ಬರಿಗಾಗಿ ಟಾಸ್ಕ್ ಬಿಟ್ಟುಕೊಡಲು ಮುಂದಾದ ಸ್ಪರ್ಧಿ ಶ್ರೇಯಸ್​ಗೆ 'ಗೆಟ್​ಔಟ್' ಎಂದು ಹೇಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಘಟನೆಯು ವಿನಯ್ ಗೌಡರ ವರ್ತನೆಯ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

2 Min read
Author : Suchethana D
Published : Aug 23 2026, 06:47 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​​ ಅಗ್ನಿಪರೀಕ್ಷೆಯಲ್ಲಿ ಅವಮಾನ
Image Credit : Colors Kannada Instagram

ಬಿಗ್​ಬಾಸ್​​ ಅಗ್ನಿಪರೀಕ್ಷೆಯಲ್ಲಿ ಅವಮಾನ

ಬಿಗ್​ಬಾಸ್​ 13 ರಲ್ಲಿ ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗಿದ್ದು, ಇದಾಗಲೇ ಕೆಲವರನ್ನು ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ನಡೆದ ಅಗ್ನಿ ಪರೀಕ್ಷೆ ಸ್ಪರ್ಧೆಯಲ್ಲಿ ತೀರ್ಪುಗಾರರ ಪೈಕಿ, ವಿನಯ್​ ಗೌಡ ಅವರು ನಡೆದುಕೊಂಡ ರೀತಿಗೆ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವಿನಯ್​ ಗೌಡ ವರ್ತನೆಗೆ ಆಕ್ರೋಶ
Image Credit : Colors Kannada Instagram

ವಿನಯ್​ ಗೌಡ ವರ್ತನೆಗೆ ಆಕ್ರೋಶ

ಖುದ್ದು ಕಿಚ್ಚ ಸುದೀಪ್​ ಅವರೇ ಈ ರೀತಿಯ ವರ್ತಿಸುವುದಿಲ್ಲ. ವಿನಯ್​ ಗೌಡ ಅವರದ್ದು ಅತಿಯಾಯಿತು ಎನ್ನುತ್ತಿದ್ದರೆ, ಮತ್ತೆ ಕೆಲವರು ಅದು ಅವರ ಮಾತಲ್ಲ, ಬದಲಿಗೆ ಅವರಿಗೆ ಬರುವ ಇನ್​ಸ್ಟ್ರಕ್ಷನ್​ ಪ್ರಕಾರ, ಅವರು ಮಾತನಾಡುತ್ತಾರಷ್ಟೇ. ಇಂಥ ಷೋಗಳಲ್ಲಿ ನಡೆಯುವುದು ಎಲ್ಲವೂ, ಅವರ ಹಾವ ಭಾವ, ರಿಯಾಕ್ಷನ್​, ಮಾತು ಎಲ್ಲವೂ ಕಂಟ್ರೋಲ್​​ ಆಗಿರುತ್ತದೆ. ಅವರಿಗೆ ಹೇಳಿದಂತೆ ಆ್ಯಕ್ಟ್​ ಮಾಡಬೇಕಷ್ಟೇ. ವಿನಾ ಕಾರಣ, ಅವರನ್ನು ದೂರಿ ಪ್ರಯೋಜನ ಇಲ್ಲ. ಇದಕ್ಕಾಗಿಯೇ ಅವರಿಗೆ ಹಣ ನೀಡೋದು, ಎಲ್ಲರೂ ಟಿಆರ್​ಪಿಗಾಗಿ ಎಂದು ಕಮೆಂಟ್​ ಮಾಡುತ್ತಿದ್ದಾರೆ.

Related Articles

Related image1
ಆರಂಭಕ್ಕೂ ಮುನ್ನವೇ ದಾಖಲೆ ಬರೆಯಿತು Bigg Boss 13: ಕಿಚ್ಚ ಸುದೀಪ್​ ಕಮಾಲ್​ ಎಂದ ಫ್ಯಾನ್ಸ್​
Related image2
Bigg Boss 13 ಮನೆ ಹೇಗಿದೆ ನೋಡ್ಬೇಕಾ? ಹಾಗಿದ್ರೆ ನಿಮಗಿದೆ ಇಲ್ಲೊಂದು ಸೂಪರ್​ ಅವಕಾಶ
36
ಟ್ರೋಲ್​ ಎಂಜಾಯ್​
Image Credit : Colors Kannada Instagram

ಟ್ರೋಲ್​ ಎಂಜಾಯ್​

ಈ ಬಗ್ಗೆ ಖುದ್ದು ವಿನಯ್​ ಗೌಡ ಅವರೇ ಹೇಳಿದ್ದು, ನಾನು ಟ್ರೋಲ್​ಗಳನ್ನು ತುಂಬಾ ಎಂಜಾಯ್​ ಮಾಡುತ್ತೇನೆ. ಹೆಚ್ಚು ಟ್ರೋಲ್​ ಆದಷ್ಟೂ ನನಗೆ ಖುಷಿ, ಡಿಮಾಂಡ್​ ಜಾಸ್ತಿಯಾಗುತ್ತದೆ ಎಂದಿದ್ದಾರೆ.

46
ಗೆಟ್​ಔಟ್​ ಎಂದ ವಿನಯ್​ ಗೌಡ
Image Credit : Colors Kananda Instagram

ಗೆಟ್​ಔಟ್​ ಎಂದ ವಿನಯ್​ ಗೌಡ

ಆದರೆ, ಇದೀಗ ವಿನಯ್​ ಗೌಡ ಅವರು ಸ್ಪರ್ಧಿಯೊಬ್ಬರಿಗೆ ಗೆಟ್​ಔಟ್​ ಎನ್ನುವ ಮೂಲಕ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಶ್ರೇಯಸ್ ಎಂಬ ಸ್ಪರ್ಧಿಯೊಬ್ಬರು, ತಮಗಿಂತಲೂ ಅಭಿಷೇಕ್ ಎಂಬ ಸ್ಪರ್ಧಿಗೆ ಈ ಶೋನಲ್ಲಿ ಮುಂದುವರಿಯುವ ಅಗತ್ಯತೆ ಹೆಚ್ಚಿದೆ ಎಂಬ ಕಾರಣ ನೀಡಿ ತಮ್ಮ ಟಾಸ್ಕ್ ಬಿಟ್ಟುಕೊಡಲು ಮುಂದಾದರು.

56
ಅಲ್ಲಿ ಆಗಿದ್ದೇನು?
Image Credit : Colors Kannada Instagram

ಅಲ್ಲಿ ಆಗಿದ್ದೇನು?

ಇದನ್ನು ಕಂಡು ಕೋಪದಿಂದ ವಿನಯ್ ಗೌಡ, ʻಈ ವೇದಿಕೆಯನ್ನು ಇನ್ಸಲ್ಟ್ ಮಾಡಬೇಡಿ, ಪ್ಲೀಸ್ ಗೆಟ್ ಔಟ್ʼ ಎಂದರು. ಅದಕ್ಕೆ ಶ್ರೇಯಸ್​, ಇನ್ನೊಬ್ಬ ಸ್ಪರ್ಧಿಗೋಸ್ಕರ ನಾನು ಟಾಸ್ಕ್‌ ಗೀವ್‌ ಅಪ್‌ ಮಾಡಬಹುದಾ ಎಂದು ಪ್ರಶ್ನಿಸಿದರು. ಜೊತೆಗೆ ಗೆಟ್​ಔಟ್ ಎಂದದ್ದಕ್ಕೆ, ನಾನಿಲ್ಲಿ ಗೆಟ್‌ ಔಟ್‌ ಅನಿಸಿಕೊಳ್ಳೋದಕ್ಕೆ ಬಂದಿಲ್ಲ. ನನಗೂ ನಿಮಗೂ ಏನಾದರೂ ವಾದ-ವಿವಾದ ಇದ್ರೆ ಗೆಟ್‌ ಔಟ್‌ ಅನ್ಬಹುದು ಎಂದರು.

66
ಟೀಕೆಗೆ ವಿನಯ್​ ಗೌಡ ವರ್ತನೆ
Image Credit : Colors Kannada Instagram

ಟೀಕೆಗೆ ವಿನಯ್​ ಗೌಡ ವರ್ತನೆ

ಅದಕ್ಕೆ ವಿನಯ್‌ ಗೌಡ ಅವರು, ಈ ವೇದಿಕೆ ಕೊಟ್ಟಿರೋದು, ನಿಮಗೆ ಬೇಕಾದವರಿಗೆಲ್ಲಾ ಕೊಟ್ಟು ಕೊಟ್ಟು ಹೋಗ್ತಾ ಇರೋದಕ್ಕೆ ಅಲ್ಲ ಡೋಂಟ್‌ ಇನ್ಸಲ್ಟ್‌ ದಿಸ್‌ ಸ್ಟೇಜ್ ಎಂದಾಗ ಶ್ರೇಯಸ್​, ನಾನು ಇನ್ಸಲ್ಟ್‌ ಮಾಡ್ತಿಲ್ಲ ಎಂದು ಹೇಳಿ ಶೋನಿಂದ ಹೊರಕ್ಕೆ ಬಂದರು. ವಿನಯ್​ ಗೌಡ ವರ್ತನೆ ಸಿಕ್ಕಾಪಟ್ಟೆ ಟೀಕೆಗೆ ಒಳಗಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಬಿಗ್ ಬಾಸ್ ಕನ್ನಡ
ಟಿವಿ ಶೋ

Latest Videos
Recommended Stories
Recommended image1
ನೇಹಾಗೆ ಸ್ಯಾಮ್‌ ಸಮೀರ್‌ ಕೊಟ್ಟ ‘ವರ್ಲ್ಡ್ ಲಾರ್ಜೆಸ್ಟ್‌’ ಬೊಕ್ಕೆ; ಕನ್ನಡ ಯುಟ್ಯೂಬರ್‌ ಪ್ರಪೋಸಲ್‌ ವಿಡಿಯೋ ವೈರಲ್‌
Recommended image2
Bigg Boss TRP ಪ್ರಶ್ನೆಗೆ ಸಂಗೀತಾ ಶೃಂಗೇರಿ ಗರಂ: ಇಷ್ಟ ಇಲ್ಲಾಂದ್ರೆ ನೋಡ್ಬೇಡಿ, ನಿಮಗ್ಯಾಕೆ ಅದೆಲ್ಲಾ ಎಂದು ಕಿಡಿ
Recommended image3
2014ರ TRP ಕ್ವೀನ್ ಗಳಾದ ಸೂಪರ್ ಹಿಟ್ ಸೀರಿಯಲ್ ನಟಿಯರು… ಇದೀಗ ಮತ್ತೆ ಪೈಪೋಟಿ ಕೊಡಲು ಬಂದ್ರು
Related Stories
Recommended image1
ಆರಂಭಕ್ಕೂ ಮುನ್ನವೇ ದಾಖಲೆ ಬರೆಯಿತು Bigg Boss 13: ಕಿಚ್ಚ ಸುದೀಪ್​ ಕಮಾಲ್​ ಎಂದ ಫ್ಯಾನ್ಸ್​
Recommended image2
Bigg Boss 13 ಮನೆ ಹೇಗಿದೆ ನೋಡ್ಬೇಕಾ? ಹಾಗಿದ್ರೆ ನಿಮಗಿದೆ ಇಲ್ಲೊಂದು ಸೂಪರ್​ ಅವಕಾಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved