- Home
- Entertainment
- TV Talk
- ಸೀರಿಯಲ್’ಗಳಲ್ಲಿ ಯಾವುದೇ ತೊಂದ್ರೆ ಇಲ್ಲದೇ ಮದುವೆ ಆಗಿರೋ ಇತಿಹಾಸನೆ ಇಲ್ಲ... ವೀಕ್ಷಕರು ಗರಂ
ಸೀರಿಯಲ್’ಗಳಲ್ಲಿ ಯಾವುದೇ ತೊಂದ್ರೆ ಇಲ್ಲದೇ ಮದುವೆ ಆಗಿರೋ ಇತಿಹಾಸನೆ ಇಲ್ಲ... ವೀಕ್ಷಕರು ಗರಂ
ಕನ್ನಡದ ಯಾವುದೇ ವಾಹಿನಿ ನೋಡಿದ್ರೂ, ಎಲ್ಲೂ ಕೂಡ ಸರಿಯಾಗಿ ಮದುವೆಯಾದ ಇತಿಹಾಸನೇ ಇಲ್ಲ. ಯಾಕೀಗೆ? ನಿರ್ದೇಶಕರಿಗೆ ಈ ಮದುವೆ ಮೇಲೆ ಇಷ್ಟೊಂದು ಜಿಗುಪ್ಸೆ ಬಂದಿರೋದು ಯಾಕೆ?

ಬೇರೆ ಭಾಷೆಯ ಧಾರಾವಾಹಿಗಳ ಬಗ್ಗೆ ಗೊತ್ತಿಲ್ಲ. ಆದರೆ ಕನ್ನಡದ ಧಾರಾವಾಹಿಗಳ ಬಗ್ಗೆ ಹೇಳೋದಾದ್ರೆ, ಅದು ಕಲರ್ಸ್ ಕನ್ನಡವೇ ಇರಲಿ, ಝೀ ಕನ್ನಡವೇ ಇರಲಿ, ಉದಯ ಟಿವಿ, ಸ್ಟಾರ್ ಸುವರ್ಣ ಯಾವುದೇ ಇರಲಿ… ಎಲ್ಲಾ ಚಾನೆಲ್ (kannada tv channels) ಗಳಲ್ಲೂ ಮದುವೆಯಾಗುತ್ತೆ, ಆದ್ರೆ ತೊಂದ್ರೆ ಮಾತ್ರ ತಪ್ಪಿದ್ದಲ್ಲ.
ಹೌದು, ಯಾವುದೇ ಚಾನೆಲ್ ಗಳನ್ನು ತೆಗೆದುಕೊಂಡರೂ ಎಲ್ಲಾ ಚಾನೆಲ್ ಗಳಲ್ಲೂ ಮದುವೆಯೇನೋ ಆಗುತ್ತೆ. ಆದರೆ ಅಡ್ಡಿ, ಆತಂಕ ತಪ್ಪಿದ್ದೇ ಇಲ್ಲ. ಒಬ್ಬರಿಗೆ ಮದುವೆ ಇಷ್ಟ ಇರಲ್ಲ, ಮತ್ತೊಬ್ಬರಿಗೆ ಮದುವೆ ಆಗ್ತಿರೋದೆ ಗೊತ್ತಿರಲ್ಲ, ಇನ್ನೊಬ್ಬರಿಗೆ ಸಡನ್ ಆಗಿ ತಾಳಿ ಕಟ್ಟುತ್ತಾರೆ. ಹೀಗೆ ಒಂದಲ್ಲ ಒಂದು ಸಮಸ್ಯೆಯ ನಡುವೆ ಮದುವೆ ಆಗುತ್ತೆ.
ಮದುವೆ ಸಿದ್ಧತೆಯಂತೂ ತಿಂಗಳ ಕಾಲ ನಡೆಯುತ್ತೆ, ಪ್ರತಿಯೊಂದು ಶಾಸ್ತ್ರಗಳು, ಸಂಪ್ರದಾಯಗಳು ಎಲ್ಲವೂ ನಡೆಯುತ್ತೆ, ಆದರೆ ಮದುವೆ ಮಾತ್ರ ಅಂದುಕೊಂಡಂತೆ ಆಗೋದಿಲ್ಲ. ಈ ಕುರಿತು ವೀಕ್ಷಕರು ಗರಂ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ (social media) ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ಸೀರಿಯಲ್ ನಲ್ಲೂ ಇದನ್ನು ನೋಡಿ ನೋಡಿ ಸಾಕಾಗೋಗಿದೆ ಎನ್ನುತ್ತಿದ್ದಾರೆ.
ಕಲರ್ಸ್ ಕನ್ನಡದ ಸೀರಿಯಲ್ (Colors Kannada Serials) ಗಳ ಬಗ್ಗೆ ಹೇಳೊದಾದ್ರೆ ಕರಿಮಣಿ ಧಾರಾವಾಹಿಯಲ್ಲಿ ಎರಡು ಸಲ ಮದುವೆ ನಿಂತು, ಕೊನೆಗೆ ಇಷ್ಟವಿಲ್ಲದೇ ತಾಳಿ ಕಟ್ಟಿಸಿಕೊಳ್ಳುತ್ತಾಳೆ ಸಾಹಿತ್ಯ. ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ದತ್ತನ ದ್ವೇಷಕ್ಕೆ ದೃಷ್ಟಿ ಕುತ್ತಿಗೆಗೆ ತಾಳಿ ಬಿತ್ತು. ಲಕ್ಷ್ಮೀ ಬಾರಮ್ಮದಲ್ಲಿ ಇಷ್ಟವಿಲ್ಲದ ಮದುವೆ. ಇದೀಗ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠಾ -ತಾಂಡವ್ ಮದುವೆ ಹೇಗೇಗೋ ಆಯ್ತು, ಹಲವು ಅಡ್ಡಿ ಆತಂಕಗಳನ್ನು ಎದುರಿಸಿ ಸದ್ಯ ನಡೆಯುತ್ತಿರುವ ಪೂಜಾ ಮದುವೆಯನ್ನು ಇದೀಗ ಸ್ವತಃ ಭಾಗ್ಯಾಳೆ ನಿಲ್ಲಿಸುತ್ತಿದ್ದಾಳೆ.
ನಿನಗಾಗಿ ಧಾರಾವಾಹಿಯಲ್ಲಿ ಸುಳ್ಳು ಮದುವೆ, ರಾಮಾಚಾರಿಯಲ್ಲಿ ಯಾರಿಗೂ ಗೊತ್ತಾಗದೆ ಮದುವೆ, ಯಜಮಾನದಲ್ಲಿ ಕಾಂಟ್ರಾಕ್ಟ್ ಮ್ಯಾರೇಜ್, ನಂದ ಗೋಕುಲದಲ್ಲಿ ಓಡಿ ಹೋಗಿ ಮದುವೆಯಾಗಿದ್ದಾರೆ. ಸ್ಟಾರ್ ಸುವರ್ಣದ (Star Suvarna)ಬಗ್ಗೆ ಹೇಳೋದಾದ್ರೆ ನಿನ್ನ ಜೊತೆ ನನ್ನ ಕಥೆಯಲ್ಲಿ ಕಾಂಟ್ರಾಕ್ಟ್ ಮ್ಯಾರೇಜ್, ಆಸೆಯಲ್ಲಿ ಅಣ್ಣ ಓಡಿ ಹೋದುದರಿಂದ ತಮ್ಮ ತಾಳಿ ಕಟ್ಟಿದ್ದು, ನೀನಾದೆನಾ ಧಾರಾವಾಹಿಯಲ್ಲಿ ಹುಡುಗಿಗೆ ಗೊತ್ತಿಲ್ಲದೇ ತಾಳಿ ಕಟ್ಟಿರೋದು. ಗೌರಿ ಶಂಕರದಲ್ಲಿ ಕಿಡ್ನಾಪ್ ಮಾಡಿ ತಾಳಿ ಕಟ್ಟಿರೋದು ಇದೆಲ್ಲಾ ಸೀರಿಯಲ್ ಗಳ ಇತಿಹಾಸ.
ಇನ್ನು ಜನರ ಮೆಚ್ಚಿನ ಸೀರಿಯಲ್ ಗಳ ಝೀ ಕನ್ನಡ (Zee Kannada) ವಾಹಿನಿ ನೋಡಿದ್ರೆ ಅದರಲ್ಲೂ ಹಾಗೆ. ಅಮೃತಧಾರೆಯಲ್ಲಿ ಮಹಿಮಾ ಮತ್ತು ಜೀವ ಬಿಟ್ಟರೆ ಮತ್ತೆ ಯಾರೂ ಸರಿಯಾಗಿ ಮದುವೆಯಾಗಿಯೇ ಇಲ್ಲ. ಗೌತಮ್ ಮತ್ತು ಭೂಮಿ ಮನೆಯವರ ಒತ್ತಾಯಕ್ಕೆ ಇಷ್ಟವಿಲ್ಲದೆ ಮದುವೆಯಾದರು, ಅಪೇಕ್ಷಾ - ಪಾರ್ಥ ಓಡಿ ಹೋಗಿ ಮದುವೆ, ಜೈದೇವ್ ಮತ್ತು ಮಲ್ಲಿ, ಜೈದೇವ್ - ದಿಯಾ ಮದುವೆ ಹೇಗೆ ಆಯಿತು ಅನ್ನೋದನ್ನು ನೀವೇ ನೋಡಿದ್ದೀರಿ.
ಇದಿಷ್ಟೇ ಅಲ್ಲ ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು - ಶಿವು ಮದುವೆ ಕೂಡ ಬಲವಂತದಿಂದಲೇ ಆಗಿರೋದು, ಗುಂಡಮ್ಮನ ಮದುವೆ ನಿಲ್ಲುವ ಸಂದರ್ಭ ಬಂದಾಗ, ಸೀನಾ ತಾಳಿ ಕಟ್ಟುವಂತಾಯಿತು. ಬ್ರಹ್ಮಗಂಟು ಧಾರಾವಾಹಿಯಲ್ಲಿ ಅಕ್ಕ ಓಡಿ ಹೋಗಿದ್ದಕ್ಕೆ ತಂಗಿಯ ಕತ್ತಿಗೆ ತಾಳಿ, ಶ್ರೀರಸ್ತು ಶುಭಮಸ್ತುವಿನಲ್ಲಿ ಯಾರಿಗೂ ಗೊತ್ತಿಲ್ಲದೇ ದತ್ತನ ನೇತೃತ್ವದಲ್ಲಿ ಮಾಧವ -ತುಳಸಿ ಮದುವೆ.
ಹೀಗೆ ಹೇಳುತ್ತಾ ಹೋದರೆ ಲಿಸ್ಟ್ ದೊಡ್ಡದಾಗುತ್ತಾ ಹೋಗುತ್ತದೆ. ಪ್ರತಿಯೊಂದು ಧಾರಾವಾಹಿಯಲ್ಲೂ ಮದುವೆಯನ್ನು ಇಷ್ಟೊಂದು ಕೀಳಾಗಿ ತೋರಿಸುತ್ತಿರುವುದಕ್ಕೆ ವೀಕ್ಷಕರು ಕಿಡಿ ಕಾರಿದ್ದಾರೆ. ಯಾವುದಾದರು ಒಂದು ಮದುವೆಯನ್ನು ಸರಿಯಾದ ರೀತಿಯಲ್ಲಿ ಮಾಡಿ ಎಂದಿದ್ದಾರೆ. ಅಷ್ಟಕ್ಕೂ ಯಾವುದೇ ಅಡ್ಡಿ ಆತಂಕ, ಸಮಸ್ಯೆ ಇಲ್ಲದೇ ಮದುವೆಯಾದರೆ ಆ ಸೀರಿಯಲ್ ನಲ್ಲಿ ಇಂಟ್ರೆಸ್ಟಿಂಗ್, ಟ್ವಿಸ್ಟ್ ಆನ್ನೋದು ಇಲ್ಲದೇ ಇದ್ದರೆ ಜನರು ಅದಕ್ಕೂ ಕಾಮೆಂಟ್ ಮಾಡಬಹುದು ಅಲ್ವಾ?