Amruthadhaare Serial: 'ಅಮೃತಧಾರೆ' ಧಾರಾವಾಹಿಯಲ್ಲಿ ಸುಧಾ ಹಾಗೂ ನಟರಾಜ್ ಒಂದೇ ಅಲ್ಲದೆ, ಇನ್ನೊಂದು ಡಿವೋರ್ಸ್ ಆಗುವ ಲಕ್ಷಣ ಕಾಣುತ್ತಿದೆ. ಹಾಗಾದರೆ ಯಾರದು?
Amruthadhaare Kannada Serial Episode: 'ಅಮೃತಧಾರೆ' ಧಾರಾವಾಹಿಯಲ್ಲಿ ನಟರಾಜ್ ತನ್ನ ಮಗುವನ್ನು ಮುಟ್ಟಲು ಬಂದಾಗಲೇ ಭೂಮಿಗೆ ಫುಲ್ ಟೆನ್ಶನ್ ಆಗೋಯ್ತು. ಇನ್ನು ತನ್ನ ಮಗಳು ಕೂಡ ಮಿಸ್ ಆಗಿದ್ದಾಳೆ ಅಂತ ಗೊತ್ತಾದರೆ ಭೂಮಿ ಕಥೆ ಏನು ಅಂತ ಗೌತಮ್‌ಗೆ ಚಿಂತೆಯಾಗಿದೆ.
ಸುಧಾ-ಸೃಜನ್ ಮದುವೆ ಆಗ್ತಾರಾ?
ಸುಧಾ ಗಂಡ ನಟರಾಜ್ ದೊಡ್ಡ ಕುಡುಕ. ಹೆಂಡ್ತಿಯು ತಾಯಿ, ಮಗಳನ್ನು ಸಾಕುವುದಲ್ಲದೆ ಅವನಿಗೆ ಕುಡಿಯೋಕೆ ಕೂಡ ದುಡ್ಡು ಕೊಡಬೇಕು. ಇವನ ಹಣೆಬರಹ ಏನು ಅಂತ ಸುಧಾ ತನ್ನ ಮನೆಯವರ ಬಳಿ ಹೇಳಿಕೊಂಡಿದ್ದಾಳೆ. ಈಗ ಮಗಳು ಲಕ್ಷ್ಮೀ, ಸುಧಾ ಬಳಿಯೇ ಇರಬೇಕು ಅಂತ ಗೌತಮ್ ಫಿಕ್ಸ್ ಆಗಿದ್ದಾನೆ. ಇನ್ನೊಂದು ಕಡೆ ಸೃಜನ್ ಮೇಲೆ ಸುಧಾಗೆ ಆಸಕ್ತಿ ಇದೆ, ಇವರಿಬ್ಬರು ಮದುವೆ ಆಗೋ ಪ್ಲ್ಯಾನ್‌ನಲ್ಲಿದ್ದಾರೆ ಎನ್ನೋದು ಭೂಮಿಗೆ ಗೊತ್ತಾಗಿದೆ.
ಆ ಮಗು ಎಲ್ಲೋಯ್ತು?
ಅಂದಹಾಗೆ ಭೂಮಿಗೆ ಹೆರಿಗೆಯಾದಾಗ ಮೊದಲು ಮಗಳು ಹುಟ್ಟಿದ್ದಳು. ಆಗ ತಾನೇ ಹುಟ್ಟಿದ ಮಗುವನ್ನು ವಾಶ್ ಮಾಡಬೇಕು ಅಂತ ನರ್ಸ್ ತೆಗೆದುಕೊಂಡು ಹೋದಾಗ ಜಯದೇವ್ ಬಂದು, ಆ ಮಗುವನ್ನು ಹೊತ್ತೊಯ್ದನು. ಆಮೇಲೆ ಆ ಮಗುವನ್ನು ಅವನು ಎಸೆದನು. ಹೀಗಾಗಿ ಆ ಮಗು ಎಲ್ಲಿ ಹೋಗಿದೆ ಎನ್ನೋದು ಯಾರಿಗೂ ಗೊತ್ತಾಗ್ತಿಲ್ಲ.
ಮಗುವಿನ ಹುಡುಕಾಟ ನಡೆಯುತ್ತಿದೆ!
ಅರಣ್ಯಾಧಿಕಾರಿಗಳು, ಪೊಲೀಸರು ಕೂಡ ಆ ಮಗುವಿನ ಹುಡುಕಾಟ ನಡೆಸುತ್ತಿದ್ದಾರೆ. ಈ ವಿಷಯವನ್ನು ಗೌತಮ್ ಯಾರಿಗೂ ಹೇಳಿಕೊಳ್ಳದೆ, ಒದ್ದಾಡುತ್ತಿದ್ದಾನೆ. ಈ ವಿಷಯ ಭೂಮಿಗೆ ಗೊತ್ತಾದರೆ ಅಷ್ಟೇ ಕಥೆ. ನನ್ನ ಮಗುವನ್ನು ನಿಮಗೆ ಕಾಪಾಡಿಕೊಳ್ಳೋಕೆ ಆಗಲಿಲ್ಲ? ನಮ್ಮ ಮಗುವನ್ನು ಇನ್ಯಾವನೋ ಹೊತ್ತೋಯ್ಯೋಕೆ ಹೇಗೆ ಬಿಟ್ರಿ? ನನ್ನ ಮಗು ಕಳುವಾದ ಬಗ್ಗೆ ಯಾಕೆ ಹೇಳಲಿಲ್ಲ? ಹೀಗೆ ಅವಳು ಸಾಕಷ್ಟು ಪ್ರಶ್ನೆಗಳನ್ನು ಕೇಳಬಹುದು. ಇದಕ್ಕೆ ಗೌತಮ್ ಉತ್ತರ ಕೊಟ್ಟರೂ ಕೂಡ ಅವಳು ಸುಮ್ಮನಿರೋದು ಡೌಟ್.
ಈ ವಿಷಯ ಇಟ್ಟುಕೊಂಡು ಈ ಜೋಡಿ ದೂರ ಆದರೂ ಆಶ್ಚರ್ಯ ಇಲ್ಲ. ಮುಂದಿನ ದಿನಗಳಲ್ಲಿ ಈ ಧಾರಾವಾಹಿ ಕಥೆ ಯಾವ ರೂಪ ಪಡೆಯಲಿದೆ ಎಂದು ಕಾದು ನೋಡಬೇಕಿದೆ.
ಕಥೆ ಏನು?
ಮನೆಯವರ ಖುಷಿಗೋಸ್ಕರ ಗೌತಮ್ ದಿವಾನ್ ಹಾಗೂ ಭೂಮಿಕಾ ಸದಾಶಿವ ಮದುವೆಯಾಗಿದ್ದಾರೆ. ಗೌತಮ್ ಮಲತಾಯಿಗೆ ಇವನು ಮದುವೆ ಆಗೋದು ಇಷ್ಟವೇ ಇರಲಿಲ್ಲ. ಅವಳ ಪ್ಲ್ಯಾನ್ ವಿರುದ್ಧವಾಗಿ ಗೌತಮ್‌ಗೆ ಮದುವೆಯಾಗಿದೆ, ಈಗ ಮಗು ಕೂಡ ಹುಟ್ಟಿದೆ. ಅಷ್ಟೇ ಅಲ್ಲದೆ ಆ ಮಗು ಆರಾಮಾಗಿದೆ. ಶಕುಂತಲಾಗೆ ಇಡೀ ಆಸ್ತಿ ಹೊಡೆಯುವ ಆಸೆ. ಹೀಗಾಗಿ ಅವಳು ದಿನಕ್ಕೊಂದು ಕುತಂತ್ರ ಮಾಡ್ತಾಳೆ. ಅಷ್ಟೇ ಅಲ್ಲದೆ ಇವಳ ಮಗ ಜಯದೇವ್ ಕೂಡ ಮಹಾ ನೀಚ.
ಗೌತಮ್ ಮಗಳನ್ನು ಜಯದೇವ್ ಹೊತ್ತೊಯ್ದು ಎಸೆದಿದ್ದಾನೆ. ಈಗ ಆ ಮಗು ಬದುಕಿದೆಯೋ ಇಲ್ಲವೋ ಎನ್ನೋದು ಅರ್ಥ ಆಗ್ತಿಲ್ಲ. ಇನ್ನೊಂದು ಕಡೆ ಈ ವಿಷಯ ಭೂಮಿಗಾಗಲೀ, ಮನೆಯವರಿಗಾಗಲೀ ಗೊತ್ತೇ ಆಗಿಲ್ಲ. ಒಟ್ಟಿನಲ್ಲಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಆ ಮಗು ಜಯದೇವ್‌ಗೆ ಸಿಕ್ಕಿದರೆ ಅವನು ಏನು ಮಾಡ್ತಾನೋ ಏನೋ! ಆ ಮಗು ಬದುಕಿದೆಯಾ? ಇಲ್ಲವಾ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ!
ಪಾತ್ರಧಾರಿಗಳು
ಭೂಮಿ ಪಾತ್ರದಲ್ಲಿ ನಟಿ ಛಾಯಾ ಸಿಂಗ್, ಗೌತಮ್ ದಿವಾನ್ ಪಾತ್ರದಲ್ಲಿ ನಟ ರಾಜೇಶ್ ನಟರಂಗ, ಜಯದೇವ್ ಪಾತ್ರದಲ್ಲಿ ನಟ ರಾಣವ್, ಮಲ್ಲಿ ಪಾತ್ರದಲ್ಲಿ ನಟಿ ಅನ್ವಿತಾ ಸಾಗರ್ ಅವರು ನಟಿಸುತ್ತಿದ್ದಾರೆ.
