‘ಕರ್ಣ’ ಸೀರಿಯಲ್ ಮೇಕರ್ಸ್ ವಿರುದ್ಧ ವೀಕ್ಷಕರು ಗರಂ… ಅಷ್ಟಕ್ಕೂ ಆಗ್ತಿರೋದು ಏನು?
Karna Serial: ಕನ್ನಡ ಕಿರುತೆರೆಯಲ್ಲಿ ಆರಂಭದಿಂದಲೂ ನಂ 1 ಸ್ಥಾನದಲ್ಲಿದ್ದ ಜನಪ್ರಿಯ ‘ಕರ್ಣ’ ಧಾರಾವಾಹಿ ಬಗ್ಗೆ ವೀಕ್ಷಕರು ಇದೀಗ ಬೇಸರವನ್ನು ವ್ಯಕ್ತಪಡಿಸಿದ್ದು, ಸೀರಿಯಲ್ ಮೇಕರ್ಸ್ ವಿರುದ್ಧ ಗರಂ ಆಗಿದ್ದಾರೆ. ಕಾಮೆಂಟ್ ಸೆಕ್ಷನ್ ಪೂರ್ತಿ ಜನ ಮೇಕರ್ಸ್ ವಿರುದ್ಧ ಕಿಡಿ ಕಾರಿದ್ದಾರೆ. ಯಾಕೆ ಗೊತ್ತಾ?

ಕರ್ಣ ಧಾರಾವಾಹಿ
ಕನ್ನಡ ಕಿರುತೆರೆಯಲ್ಲಿ ಆರಂಭದಿಂದ ನಂ 1 ಸ್ಥಾನದಲ್ಲಿ ಮೂಡಿ ಬರುತ್ತಿದ್ದ ಧಾರಾವಾಹಿ ಕರ್ಣ. ಕರ್ಣ ಹಾಗೂ ನಿಧಿಯ ಲವ್ ಸ್ಟೋರಿ, ಸ್ವಾಭಿಮಾನಿ ನಿತ್ಯಾ ಬದುಕಿನ ಕಥೆ, ಎಲ್ಲಾ ಸೇರಿ ವೀಕ್ಷಕರು ಒಂದು ದಿನವೂ ಬಿಡದೆ ನೋಡುವಂತೆ ಮಾಡಿದ್ದ ಧಾರಾವಾಹಿ ಕರ್ಣ. ಆದರೆ ಈಗ ವೀಕ್ಷಕರು ಮುನಿಸು ತೋರುತ್ತಿದ್ದಾರೆ.
ಸೀರಿಯಲ್ ಮೇಲೆ ವೀಕ್ಷಕರಿಗ್ಯಾಕೆ ಮುನಿಸು?
ಅಂದ ಹಾಗೆ ಕಳೆದ ಒಂದೆರಡು ವಾರದಿಂದ ಕರ್ಣ ಧಾರಾವಾಹಿಯಲ್ಲಿ ಕಥೆಯಲ್ಲಿ ಯಾವುದೇ ತಿರುವುಗಳಿಲ್ಲದೆ ಪ್ರಸಾರವಾಗುತ್ತಿದೆ. ನಿಧಿ ಮತ್ತು ಕರ್ಣನ ಮದುವೆ ಬಳಿಕ, ನಿತ್ಯಾ ಮತ್ತು ಅಜ್ಜಿ ತಮ್ಮ ಮನೆಗೆ ಹಿಂದಿರುಗಿದ್ದಾರೆ. ಆ ಮೂಲಕ ನಿತ್ಯಾ ಕಥೆಯನ್ನೆ ಅಲ್ಲಿಗೆ ಮುಗಿಸಿದ್ದು, ಸದ್ಯ ಕರ್ಣನ ಫ್ಯಾಮಿಲಿ ಸ್ಟೋರಿ ಶುರುವಾಗಿದೆ.
ಕರ್ಣ-ನಿಧಿಯ ಸೀನ್ ಗಳೇ ಇಲ್ಲ
ಯಾವಾಗ ಕರ್ಣ ಮತ್ತು ನಿಧಿಯ ಮದುವೆಯಾಗಿತ್ತೋ, ಅಂದಿನಿಂದ ಮತ್ತೊಂದು ದ್ವೇಷದ ಕಥೆ, ಮತ್ತು ಸೇಡಿನ ಕತೆ ಶುರುವಾಗಿದೆ. ಸದ್ಯ ಕರ್ಣ ತನ್ನ ಕುಟುಂಬವನ್ನು ರಕ್ಷಿಸಲು ಸೇಡು ತೀರಿಸುವವರ ಹಿಂದೆ ಅಲೆಯುತ್ತಾ, ತನ್ನ ಕುಟುಂಬಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದಾನೆ. ಹಾಗಾಗಿ ಕರ್ಣ-ನಿಧಿಯ ಮುದ್ದಾದ ದೃಶ್ಯಗಳೆ ಇತ್ತೀಚೆಗೆ ಪ್ರಸಾರವಾಗುತ್ತಿಲ್ಲ.
ಕತೆಯಲ್ಲಿ ತಿರುವುಗಳೇ ಇಲ್ಲ ಎನ್ನುತ್ತಿದ್ದಾರೆ ವೀಕ್ಷಕರು
ಇನ್ನು ಬೇರೆ ಸೀರಿಯಲ್ ಗಳಲ್ಲಿ ಹಲವಾರು ತಿರುವುಗಳನ್ನು ತರುವ ಮೂಲಕ ಸೀರಿಯಲ್ ಗಳು ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಆದರೆ ಕರ್ಣ ಧಾರಾವಾಹಿಯಲ್ಲಿ ಯಾವುದೇ ತಿರುವುಗಳಿಲ್ಲ. ದಯವಿಟ್ಟು ಮೇಕರ್ಸ್ ಈ ಬಗ್ಗೆ ಗಮನ ಹರಿಸಿ, ಒಂದಷ್ಟು ಟ್ವಿಸ್ಟ್ ಗಳನ್ನು ಸೇರಿ, ಮತ್ತೆ ಮೊದಲಿನಂತೆ ಆಸಕ್ತಿಯಿಂದ ಜನ ಕುಳಿತು ನೋಡುವಂತೆ ಮಾಡಿ ಎನ್ನುತ್ತಿದ್ದಾರೆ.
ನಿತ್ಯಾ ಎಲ್ಲೊದಳು, ವಾಪಾಸ್ ಕರೆಯಿಸಿ
ಇನ್ನು ನಿತ್ಯಾ ಧಾರಾವಾಹಿಯಲ್ಲಿ ಇದ್ದಾಗ ಜನ ತುಂಬಾನೆ ಇಂಟ್ರೆಸ್ಟಿಂಗ್ ಆಗಿ ಧಾರಾವಾಹಿ ನೋಡುತ್ತಿದ್ದರು. ಕರ್ಣ ನಿತ್ಯಾಳನ್ನು ಮದುವೆಯಾಗುತ್ತಾನೋ ಅಥವಾ ತಾನು ಪ್ರೀತಿಸಿದ ನಿಧಿಯನ್ನೆ ಮದುವೆಯಾಗ್ತಾನೋ ಎನ್ನುವ ಕುತೂಹಲ ಹೆಚ್ಚಾಗಿತ್ತು.. ಆದರೆ ನಿತ್ಯಾ ಕಥೆಗೆ ಬ್ರೇಕ್ ಕೊಟ್ಟ ಮೇಲೆ ಧಾರಾವಾಹಿಯಲ್ಲಿ ಯಾವುದೇ ಅಸಕ್ತಿ ಇಲ್ಲ. ಮತ್ತೆ ನಿತ್ಯಾಳನ್ನು ವಾಪಾಸ್ ಕರೆಯಿಸಿ ಎನ್ನುತ್ತಿದ್ದಾರೆ ಜನ.
ಕರ್ಣ ಧಾರಾವಾಹಿ ನಟರು
ಕರ್ಣ ಧಾರಾವಾಹಿಯಲ್ಲಿ ಜನಪ್ರಿಯ ನಟರಾದ ಕಿರಣ್ ರಾಜ್, ನಮೃತಾ ಗೌಡ, ಭವ್ಯಾ ಗೌಡ, ಅಭಿಜಿತ್, ಆಶಲತಾ ಸೇರಿ ಹಲವಾರು ನಟ, ನಟಿಯರು ಅಭಿನಯಿಸುತ್ತಿದ್ದಾರೆ. ಬೀದಿಯಲ್ಲಿ ಸಿಕ್ಕಿದ ಮಗು ಎಂದು ತನ್ನದೆ ಮನೆಯಲ್ಲಿ ಅನಾಥನಾಗಿ ಬೆಳೆಯುವ ‘ಕರ್ಣ’ನ ಹುಟ್ಟಿನ ನಿಜವಾದ ಕಥೆ ಮನೆ ಮಂದಿ ಮುಂದೆ ಯಾವಾಗ ಬಯಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

