PHOTOS: ಕನ್ನಡ ರಿಯಾಲಿಟಿ ಶೋಗೆ ಬಂದು ದುಬಾರಿ ಕಾರ್ ಖರೀದಿಸಿದ ನಟರು ಇವರು!
ಕನ್ನಡ ಕಿರುತೆರೆಯಲ್ಲಿ ಮಜಾ ಭಾರತ, ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ಸ್ ಶೋ, ಗಿಚ್ಚಿ ಗಿಲಿಗಿಲಿ ಮುಂತಾದ ರಿಯಾಲಿಟಿ ಶೋಗಳು ಪ್ರಸಾರ ಆಗುತ್ತಿವೆ. ಈ ಶೋನಲ್ಲಿ ಭಾಗವಹಿಸಿದ ಕೆಲ ನಟರು ದುಬಾರಿ ಕಾರ್ ಖರೀದಿಸಿದ್ದಾರೆ.

ಕನ್ನಡದ ಕೆಲ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಕೆಲ ನಟರು ಹೊಸ ಕಾರ್ ಖರೀದಿ ಮಾಡಿದ್ದಾರೆ. ಅವರು ಯಾರು? ಯಾರು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಮುಂತಾದ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಜಗ್ಗಪ್ಪ, ಸುಷ್ಮಿತಾ ಅವರು ಪ್ರೀತಿ ಮಾಡಿ ಮದುವೆಯಾಗಿದ್ದಾರೆ. ಈ ಜೋಡಿ ಹೊಸ ಕಾರ್ ಖರೀದಿ ಮಾಡಿದೆ.
ಸದ್ಯ ʼಬಾಯ್ಸ್ v/s ಗರ್ಲ್ಸ್ʼ, ʼಮಜಾ ಭಾರತʼ, ʼಗಿಚ್ಚಿ ಗಿಲಿಗಿಲಿʼ ಶೋನಲ್ಲಿ ಭಾಗವಹಿಸಿದ್ದ ಪ್ರಶಾಂತ್ ಕಲಾವಿದ ಅವರು ಹೊಸ ಕಾರ್ ಖರೀದಿ ಮಾಡಿದ್ದಾರೆ.
ನಿರಂಜನ್ ದೇಶಪಾಂಡೆ ಅವರು ರಿಯಾಲಿಟಿ ಶೋಗಳ ನಿರೂಪಕ ಎಂದು ಹೆಸರು ಮಾಡಿದ್ದಾರೆ. ಇವರ ಮನೆಯಲ್ಲಿ ದುಬಾರಿ ಎರಡು ಕಾರ್‌ಗಳಿವೆ.
ಕಲರ್ಸ್ ಕನ್ನಡ ವಾಹಿನಿಯ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡಿರೋ ಚಿಲ್ಲರ್ ಮಂಜು ಕೂಡ ಹೊಸ ಕಾರ್ ಖರೀದಿ ಮಾಡಿದ್ದಾರೆ. ಕಾರ್ ಸಲುವಾಗಿ ಅವರು ಅದ್ದೂರಿ ವಿಡಿಯೋ ಮಾಡಿದ್ದರು.
ಗಿಲ್ಲಿ ನಟ ಅವರು ಒಂದಾದ ಮೇಲೆ ಒಂದರಂತೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಳ್ಳಿಯಿಂದ ಬಂ ಗಿಲ್ಲಿ ಈಗ ಕಾರ್ ಒಡೆಯರಾಗಿದ್ದಾರೆ.
ತುಕಾಲಿ ಸ್ಟಾರ್ ಸಂತು ಹಾಗೂ ಮಾನಸ ಅವರು ಈಗಾಗಲೇ ಎರಡು ಕಾರ್ ಖರೀದಿ ಮಾಡಿದ್ದಾರೆ. ಹೊಸ ಕಾರ್ ತಗೊಂಡ ಬಳಿಕ ಒಮ್ಮೆ ಅಪಘಾತ ಆಗಿ ಒಂದು ವಿವಾದ ಕೂಡ ಆಗಿತ್ತು.