- Home
- Entertainment
- TV Talk
- ಬಿಗ್ ಬಾಸ್‌ನಿಂದ 2-3 ಸಲ ಆಫರ್ ಬಂದರೂ 'ರಾಮಾಚಾರಿ' ನಟ ರಿತ್ವಿಕ್ ಹೋಗದಿರುವ ಸೀಕ್ರೆಟ್ ಕೊನೆಗೂ ಬಯಲಾಯ್ತು!
ಬಿಗ್ ಬಾಸ್‌ನಿಂದ 2-3 ಸಲ ಆಫರ್ ಬಂದರೂ 'ರಾಮಾಚಾರಿ' ನಟ ರಿತ್ವಿಕ್ ಹೋಗದಿರುವ ಸೀಕ್ರೆಟ್ ಕೊನೆಗೂ ಬಯಲಾಯ್ತು!
‘ಬಿಗ್ ಬಾಸ್ ಕನ್ನಡ’ ಸೀಸನ್ 12 ಇತ್ತೀಚೆಗಷ್ಟೇ ಮುಕ್ತಾಯ ಕಂಡಿದೆ. ಈ ಸೀಸನ್‌ನಲ್ಲಿ ರಿತ್ವಿಕ್ ಕೃಪಾಕರ್ ಸ್ಪರ್ಧಿಯಾಗಿ ಬರುತ್ತಾರೆ ಎಂಬ ಬಲವಾದ ವದಂತಿಗಳಿದ್ದವು. ಈ ಬಗ್ಗೆ ಮಾತನಾಡಿರುವ ಅವರು, "ನನಗೆ ಕೇವಲ ಈ ಸೀಸನ್ ಮಾತ್ರವಲ್ಲದೆ, ಸೀಸನ್ 10 ಮತ್ತು 11ಕ್ಕೆ ಕೂಡ ಕರೆ ಬಂದಿತ್ತು'.' ಎಂದಿದ್ದಾರೆ.

ಅಭಿಮಾನಿಗಳಿಗಾಗಿ ‘ಬಿಗ್ ಬಾಸ್’ ಆಫರ್ ಬೇಡವೆಂದ ರಾಮಾಚಾರಿ! ರಿತ್ವಿಕ್ ಕೃಪಾಕರ್ ಬಿಚ್ಚಿಟ್ಟ ಸೀಕ್ರೆಟ್ ಏನು?
ಕನ್ನಡ ಕಿರುತೆರೆಯ ಇತಿಹಾಸದಲ್ಲಿ ‘ರಾಮಾಚಾರಿ’ ಧಾರಾವಾಹಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಈ ಸೀರಿಯಲ್ ಮೂಲಕ ಮನೆಮಾತಾಗಿರುವ ನಟ ರಿತ್ವಿಕ್ ಕೃಪಾಕರ್ ಇಂದು ಕನ್ನಡಿಗರ ನೆಚ್ಚಿನ ನಟ. ರಾಮಾಚಾರಿ ಪಾತ್ರಕ್ಕೆ ಅವರು ನೀಡಿದ ಜೀವ ಅಂತಹದ್ದು.
ಸದ್ಯ ಈ ಜನಪ್ರಿಯ ಧಾರಾವಾಹಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದರೂ, ರಿತ್ವಿಕ್ ಬಗ್ಗೆ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಅಭಿಮಾನಿಗಳು ಅವರ ಮುಂದಿನ ನಡೆ ಏನು? ಅವರು ಬಿಗ್ ಬಾಸ್ ಮನೆಗೆ ಹೋಗುತ್ತಾರಾ? ಎಂದು ಕಾತರದಿಂದ ಕಾಯುತ್ತಿದ್ದರು. ಈಗ ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ರಿತ್ವಿಕ್ ಉತ್ತರ ನೀಡಿದ್ದಾರೆ.
ಬಿಗ್ ಬಾಸ್ ಆಫರ್ ತಿರಸ್ಕರಿಸಿದ್ದು ಯಾಕೆ?
ರಿಯಾಲಿಟಿ ಶೋಗಳ ರಾಜ ‘ಬಿಗ್ ಬಾಸ್ ಕನ್ನಡ’ ಸೀಸನ್ 12 ಇತ್ತೀಚೆಗಷ್ಟೇ ಮುಕ್ತಾಯ ಕಂಡಿದೆ. ಈ ಸೀಸನ್‌ನಲ್ಲಿ ರಿತ್ವಿಕ್ ಕೃಪಾಕರ್ ಸ್ಪರ್ಧಿಯಾಗಿ ಬರುತ್ತಾರೆ ಎಂಬ ಬಲವಾದ ವದಂತಿಗಳಿದ್ದವು. ಈ ಬಗ್ಗೆ ಮಾತನಾಡಿರುವ ಅವರು, "ನನಗೆ ಕೇವಲ ಈ ಸೀಸನ್ ಮಾತ್ರವಲ್ಲದೆ, ಸೀಸನ್ 10 ಮತ್ತು 11ಕ್ಕೆ ಕೂಡ ಕರೆ ಬಂದಿತ್ತು. ಸೀಸನ್ 12ರಲ್ಲಿ ನನ್ನ ಗೆಳೆಯ ಧನುಷ್ ಜೊತೆ ನಾನೂ ಬಿಗ್ ಬಾಸ್ ಮನೆಗೆ ಹೋಗಬೇಕಿತ್ತು. ಆದರೆ ಕೆಲವು ವೈಯಕ್ತಿಕ ಕಾರಣಗಳು ಮತ್ತು ಪ್ರಮುಖವಾಗಿ 'ರಾಮಾಚಾರಿ' ಧಾರಾವಾಹಿಯಿಂದಾಗಿ ಅದು ಸಾಧ್ಯವಾಗಲಿಲ್ಲ" ಎಂದಿದ್ದಾರೆ.
ಅಭಿಮಾನಿಗಳ ಮೇಲಿರುವ ಪ್ರೀತಿಯೇ ರಿತ್ವಿಕ್ ಅವರನ್ನು ಬಿಗ್ ಬಾಸ್‌ನಿಂದ ದೂರ ಉಳಿಸಿತ್ತು. "ನಾನು ಬಿಗ್ ಬಾಸ್ ಮನೆಗೆ ಹೋದರೆ ರಾಮಾಚಾರಿ ಧಾರಾವಾಹಿಯನ್ನು ಅರ್ಧಕ್ಕೇ ನಿಲ್ಲಿಸಬೇಕಿತ್ತು. ಅಷ್ಟೊಂದು ಪ್ರೀತಿ ಕೊಟ್ಟ ಅಭಿಮಾನಿಗಳಿಗೆ ಬೇಸರ ಮಾಡುವುದು ನನಗೆ ಇಷ್ಟವಿರಲಿಲ್ಲ. ಸೀರಿಯಲ್ ಮುಗಿಯುವವರೆಗೆ ನಾನು ಅಲ್ಲಿಗೆ ಹೋಗದಿರಲು ನಿರ್ಧರಿಸಿದೆ" ಎಂದು ತಮ್ಮ ವೃತ್ತಿ ಬದ್ಧತೆಯನ್ನು ಮೆರೆದಿದ್ದಾರೆ.
ಅರ್ಹತೆಯ ಬಗ್ಗೆ ರಿತ್ವಿಕ್ ವಿನಮ್ರ ಮಾತು:
ಇಷ್ಟು ದೊಡ್ಡ ಜನಪ್ರಿಯತೆ ಇದ್ದರೂ ರಿತ್ವಿಕ್ ಅವರಲ್ಲಿ ಗರ್ವವಿಲ್ಲ. ಬಿಗ್ ಬಾಸ್ ವೇದಿಕೆಯ ಬಗ್ಗೆ ಮಾತನಾಡುತ್ತಾ, "ನಾನು ಇನ್ನೂ ಒಂದು ಧಾರಾವಾಹಿ ಮಾಡಿದ್ದೇನಷ್ಟೇ. ಅಷ್ಟು ದೊಡ್ಡ ವೇದಿಕೆಗೆ ಹೋಗಲು ನಾನಿನ್ನೂ ಅರ್ಹನಲ್ಲ ಎಂದು ನನಗೆ ಅನ್ನಿಸುತ್ತದೆ. ಕನಿಷ್ಠ ಐದಾರು ಪ್ರಾಜೆಕ್ಟ್ ಮಾಡಿದ ಮೇಲೆ ಆ ಬಗ್ಗೆ ಯೋಚಿಸಬಹುದು. ಭವಿಷ್ಯದಲ್ಲಿ ಅವಕಾಶ ಸಿಕ್ಕರೆ ಖಂಡಿತ ನೋಡೋಣ" ಎನ್ನುವ ಮೂಲಕ ತಮ್ಮ ಸರಳತೆಯನ್ನು ಸಾಬೀತುಪಡಿಸಿದ್ದಾರೆ.
ಗಿಲ್ಲಿ ನಟನ ಗೆಲುವಿಗೆ ಹರ್ಷ:
ಬಿಗ್ ಬಾಸ್ ವಿಜೇತ 'ಗಿಲ್ಲಿ ನಟ' ಶಿವರಾಜ್ ಬಗ್ಗೆ ಮಾತನಾಡಿದ ರಿತ್ವಿಕ್, "ಶಿವರಾಜ್ ಆರಂಭದಿಂದಲೂ ಅದ್ಭುತವಾಗಿ ಆಡಿದ್ದಾರೆ. ಅವರ ಮನರಂಜನೆ ಎಲ್ಲರಿಗೂ ಇಷ್ಟವಾಗಿದೆ. ಅವರು ಗೆದ್ದಿರುವುದು ನನಗೆ ತುಂಬಾ ಖುಷಿ ತಂದಿದೆ. ಹಾಗೆಯೇ ನನ್ನ ಗೆಳೆಯ ಧನುಷ್ ಕೂಡ ಟಾಸ್ಕ್ ಮಾಸ್ಟರ್ ಆಗಿ ಹೆಸರು ಮಾಡಿದ್ದು ಹೆಮ್ಮೆಯ ವಿಷಯ" ಎಂದು ಸಹನಟರ ಯಶಸ್ಸನ್ನು ಕೊಂಡಾಡಿದ್ದಾರೆ.
ಮುಂದಿನ ಪ್ಲಾನ್ ಏನು?
ರಾಮಾಚಾರಿಯಾಗಿ ಮಿಂಚಿದ್ದ ರಿತ್ವಿಕ್ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಶೀಘ್ರದಲ್ಲೇ ಹೊಸ ಧಾರಾವಾಹಿಯೊಂದರ ಮೂಲಕ ಅವರು ತೆರೆಗೆ ಬರಲಿದ್ದು, ಅಲ್ಲಿ ಅವರ ಲುಕ್ ಸುದೀಪ್ ಅವರ ‘ಹುಚ್ಚ’ ಸಿನಿಮಾ ಶೈಲಿಯಲ್ಲಿ ಇರಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಇದರ ಜೊತೆಗೆ ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಲು ಅವರು ಸಿದ್ಧತೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ, ರಾಮಾಚಾರಿ ಖ್ಯಾತಿಯ ಈ ನಟನ ಮುಂದಿನ ಇನ್ನಿಂಗ್ಸ್ ಮೇಲೆ ಅಭಿಮಾನಿಗಳು ಕೋಟಿ ಕಣ್ಣು ಇಟ್ಟಿದ್ದಾರೆ. ಕಿರುತೆರೆಯಲ್ಲಿ ಮೋಡಿ ಮಾಡಿದ ಈ ಪ್ರತಿಭೆ ಬೆಳ್ಳಿತೆರೆಯ ಮೇಲೂ ಧೂಳೆಬ್ಬಿಸಲಿ ಎಂಬುದು ಎಲ್ಲರ ಹಾರೈಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

