ಮೂರು ಧಾರಾವಾಹಿಗಳ ಸಂಗಮ; ಭರ್ಜರಿ ಟ್ವಿಸ್ಟ್ ಕೊಟ್ಟ ಸ್ಟಾರ್ ಸುವರ್ಣ ವಾಹಿನಿ!
Star Suvarna Serials: ಸಾಮಾನ್ಯವಾಗಿ ಎರಡು ಧಾರಾವಾಹಿಗಳು ಒಂದಾಗುವುದನ್ನು 'ಮಹಾಸಂಗಮ' ಎಂದು ಹೇಳಲಾಗುತ್ತದೆ. ಆದರೆ ಕಿರುತೆರೆಯಲ್ಲಿ ಮೂರೂ ಧಾರಾವಾಹಿಗಳನ್ನು ಸೇರಿಸಿ ತ್ರಿವೇಣಿ ಸಂಗಮ ಮಾಡುತ್ತಿರುವುದು ಇದೇ ಮೊದಲು. ಈ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ.

ನೀ ಇರಲು ಜೊತೆಯಲ್ಲಿ ಧಾರಾವಾಹಿ ಕಥೆ ಏನು?
'ನೀ ಇರಲು ಜೊತೆಯಲ್ಲಿ' ಧಾರಾವಾಹಿಯ ಕಥೆಯಲ್ಲಿ ಇದೀಗ 5 ವರ್ಷಗಳೇ ಕಳೆದಿದೆ, ಕಾಲಚಕ್ರ ಬದಲಾಗಿದೆ. ನಾಯಕ ಕೃಷ್ಣ ತನ್ನ ದುಡಿಮೆಯಿಂದ ಶ್ರೀಮಂತನಾಗಿದ್ದು, ರಚನಾಳ ನೆನಪಿನಲ್ಲಿ ಬದುಕುತ್ತಿದ್ದಾನೆ. ಕೃಷ್ಣನ ಈ ಪರಿಸ್ಥಿತಿ ನೋಡಿ ಮಗನಿಗೆ ಇನ್ನೊಂದು ಮದುವೆ ಮಾಡಬೇಕೆಂಬ ಹಂಬಲ ಹೆತ್ತವರದ್ದು.
ಮದುವೆಯಾಗಲು ಕೃಷ್ಣ ರೆಡಿ
ಮತ್ತೊಂದೆಡೆ ಕಥೆಗೆ ಹೊಸ ನಾಯಕಿಯಾಗಿ ಎಂಟ್ರಿ ಕೊಟ್ಟಿರೋ ರಾಧಾ, ಮಧ್ಯಮ ಕುಟುಂಬದಲ್ಲಿ ಬೆಳೆದಿರೊಳು, ತನ್ನ ಜೀವನದಲ್ಲಿ ನಡೆದಿರುವ ಒಂದು ಘಟನೆಯಿಂದಾಗಿ ನೋಡಲು ಬರುವ ಹುಡುಗರು ಈಕೆಯನ್ನು ಮದುವೆಯಾಗಲು ನಿರಾಕರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಊರ್ಮಿಳಾ ರಚಿಸುವ ತಂತ್ರಗಾರಿಕೆಯಿಂದಾಗಿ ಕೃಷ್ಣ- ರಾಧಾರ ಮದುವೆ ನಿಶ್ಚಯವಾಗುತ್ತದೆ. ಇಷ್ಟವಿಲ್ಲದಿದ್ದರು ಹೆತ್ತವರಿಗಾಗಿ ಮದುವೆಯಾಗಲು ಸಿದ್ಧನಾಗುತ್ತಾನೆ ಕೃಷ್ಣ.
ರಾಧಾ ಕೃಷ್ಣ ಕಲ್ಯಾಣ ಶುರು
ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ 'ಗೌರಿಶಂಕರ' ಹಾಗು 'ಶಾರದೆ' ಧಾರಾವಾಹಿ ಕುಟುಂಬ. ಕಥೆಯಲ್ಲಿ ರೋಚಕ ತಿರುವುಗಳಿದ್ದು ಇವರ ಆಗಮನ ಹೇಗೆ ಆಗಲಿದೆ ಎಂಬುದನ್ನು ನೀವು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಗೌರಿ-ಶಂಕರರ ಸಾರಥ್ಯದಲ್ಲಿ, ಸಿದ್ದು- ಶಾರದಾ ಆತಿಥ್ಯದಲ್ಲಿ ಅದ್ದೂರಿಯಾಗಿ ನಡೀತಿದೆ ರಾಧಾ -ಕೃಷ್ಣ ಕಲ್ಯಾಣ.
ತ್ರಿವೇಣಿ ಸಂಗಮ
ಗೌರಿಶಂಕರ, ನೀ ಇರಲು ಜೊತೆಯಲ್ಲಿ ಹಾಗು ಶಾರದೆ "ತ್ರಿವೇಣಿ ಸಂಗಮ".. ಇಂದಿನಿಂದ ಸಂಜೆ 6 ರಿಂದ 7.30 ರವರೆಗೆ, ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೆ ವೀಕ್ಷಿಸಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

