- Home
- Entertainment
- TV Talk
- Snehada Kadalalli Serial: ಗಂಡನನ್ನು ಬಿಟ್ಟು ಬಂದಿರೋ ಪಲ್ಲವಿ ಸ್ನೇಹಿತನ ಜೊತೆ ಇರೋದು ಸರಿಯೇ?
Snehada Kadalalli Serial: ಗಂಡನನ್ನು ಬಿಟ್ಟು ಬಂದಿರೋ ಪಲ್ಲವಿ ಸ್ನೇಹಿತನ ಜೊತೆ ಇರೋದು ಸರಿಯೇ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ʼಸ್ನೇಹದ ಕಡಲಲ್ಲಿʼ ಎನ್ನುವ ಹೊಸ ಧಾರಾವಾಹಿ ಶುರು ಆಗಲಿದೆ. ಈ ಧಾರಾವಾಹಿ ಕಥೆ ಏನು? ಬಹುಭಾಷಾ ನಟ ಸುಮನ್ ಕೂಡ ಈ ಧಾರಾವಾಹಿಯಲ್ಲಿ ನಟಿಸ್ತಿರೋದು ವಿಶೇಷ.

ಮಧ್ಯಮ ಕುಟುಂಬದಲ್ಲಿ ಬೆಳೆದಿರೋ ಸಿಂಪಲ್ ಹುಡುಗಿ ಹೀರೋಯಿನ್ ಪಲ್ಲವಿ, ಹೆಚ್ಚು ಓದಿರೋ ಈಕೆ ಸೌಮ್ಯ ಗುಣದವಳು. ಮನೆಯವರ ಇಚ್ಛೆಯಂತೆ ಮದುವೆಯಾಗೋ ಪಲ್ಲವಿಗೆ ಮೊದಲ ರಾತ್ರಿಯಲ್ಲಿ ಗಂಡನ ನಿಜ ಮುಖದ ಅರಿವಾಗುತ್ತೆ, ಅದೇ ಕ್ಷಣದಲ್ಲಿ ಗಂಡನ ಮನೆ ಬಿಟ್ಟು ಡಿವೋರ್ಸ್ ಕೊಡೋಕೆ ಮುಂದಾಗುತ್ತಾಳೆ. ಇಂತಹ ಸಮಯದಲ್ಲಿ ಸ್ನೇಹಿತನಾಗಿ ಶಿವರಾಜ್ ಅರಸ್ ಸಾಥ್ ಕೊಡ್ತಾನೆ.
ಹೀರೋ ಶಿವರಾಜ್ ಅರಸ್ ಈ ಮದುವೆಗೆ ಇವೆಂಟ್ ಮ್ಯಾನೇಜ್‌ಮೆಂಟ್‌ನ ಜವಾಬ್ದಾರಿಯನ್ನು ಹೊತ್ತಿರುತ್ತಾನೆ. ಈತ ಖ್ಯಾತ ಉದ್ಯಮಿ ಮಾಧವ ಅರಸ್‌ನ ಮಗ. ಕಾರಣಾಂತರಗಳಿಂದಾಗಿ ಅಪ್ಪ- ಮಗನ ನಡುವೆ ಬಾಂಧವ್ಯ ಸರಿ ಇರಲ್ಲ. ಜೊತೆಗೆ ಅಣ್ಣನನ್ನು ದ್ವೇಷಿಸೋ ತಂಗಿಯರು. ಹೀಗೆ ಸಂಬಂಧಗಳ ಸುಳಿಯಲ್ಲಿ ಸಿಲುಕಿರುವ ಶಿವರಾಜ್‌ಗೆ ಸಾಥ್ ಕೊಡೋ ಪಲ್ಲವಿಯ ಸ್ನೇಹ ಸೇತುವೆಯಾಗುತ್ತಾ? ಗಂಡನನ್ನು ಬಿಟ್ಟು ಬಂದಿರೋ ಪಲ್ಲವಿಗೆ ಆಸರೆಯಾಗುವ ಶಿವರಾಜ್‌ನ ಈ ಸ್ನೇಹವನ್ನು ಸಮಾಜ ಒಪ್ಪುತ್ತಾ? ಸ್ನೇಹದ ಕಡಲಲ್ಲಿರೋ ಇವರಿಬ್ಬರ ಜೀವನದ ದಿಕ್ಕು ಮುಂದೆ ಯಾವ ರೀತಿ ತಿರುವು ಪಡೆಯಲಿದೆ? ಎಂಬುದೇ ಧಾರಾವಾಹಿಯ ಮುಖ್ಯ ಕಥೆ.
ಇನ್ನು ಈ ಸೀರಿಯಲ್‌ನ ಪ್ರಮುಖ ಆಕರ್ಷಣೆ ಅಂದ್ರೆ ದಕ್ಷಿಣ ಭಾರತದ ಸುಪ್ರಸಿದ್ದ ಖ್ಯಾತ ನಟ, 700ಕ್ಕೂ ಹೆಚ್ಚು ಸಿನಿಮಾಗಳು, 11 ಭಾಷೆಗಳಲ್ಲಿ ನಟಿಸಿರೋ 'ಸುಮನ್ ತಲ್ವಾರ್' ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣದ ಮೂಲಕ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲತಃ ಮಂಗಳೂರಿನವರಾಗಿರೋ ಇವರು 'ಸ್ನೇಹದ ಕಡಲಲ್ಲಿ' ಧಾರಾವಾಹಿಯಲ್ಲಿ ಮಾಧವ ಅರಸ್ ಎಂಬ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಅತ್ಯದ್ಭುತ ತಾರಾಬಳಗವನ್ನು ಹೊಂದಿರೋ ಈ ಧಾರಾವಾಹಿಯಲ್ಲಿ ನಾಯಕನಾಗಿ ಚಂದು ಗೌಡ ಹಾಗು ನಾಯಕಿಯಾಗಿ ಕಾವ್ಯ ಮಹದೇವ್ ನಟಿಸುತ್ತಿದ್ದಾರೆ. ಜೊತೆಗೆ ಅನನ್ಯ ಕಾಸರವಳ್ಳಿ, ಹೇಮಾ ಬೆಳ್ಳೂರು, ಸಮೀಪ್ ಆಚಾರ್ಯ, ಅಭಿಜ್ಞಾ ಭಟ್, ನಯನ ಸೇರಿದಂತೆ ಇನ್ನು ಅನೇಕರು ಅಭಿನಯಿಸುತ್ತಿದ್ದಾರೆ.
'ಪಿಂಗಾರ ಪ್ರೊಡಕ್ಷನ್ಸ್' ಎಂಬ ಸಂಸ್ಥೆಯಡಿ ನಿರ್ದೇಶಕ ಪ್ರೀತಮ್ ಶೆಟ್ಟಿ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಸ್ನೇಹದ ಕಡಲಲ್ಲಿ ಧಾರಾವಾಹಿ ಇದೇ ಸೋಮವಾರದಿಂದ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರ ಆಗಲಿದೆ.