'ಸ್ನೇಹದ ಕಡಲಲ್ಲಿ.. ನೆನಪಿನ ದೋಣಿಯಲಿ' ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಾನಮ್ಮ....!!
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಬಾಲ್ಯದ ಸ್ನೇಹಿತರ ಜೊತೆ ಬೆಂಗಳೂರಲ್ಲಿ ಸೇರಿದರು. ಒಂದಷ್ಟು ಹರಟೆ, ಒಂದಷ್ಟು ಹಾಸ್ಯ.. ಊಟ, ಎಲ್ಲರೂ ಒಟ್ಟಾಗಿ ಸೇರಿ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದರು.

ಹುಬ್ಬಳ್ಳಿ (ಮಾ.15): 'ಏನ್ ದೋಸ್ತ...ಹೆಂಗ ಇದ್ದಿ...ಎಷ್ಟ ದಿವಸದ ಮ್ಯಾಲೆ ಭೇಟಿ...ಏನ್ತಾನ...ಎಲ್ಲಾ ಆರಾಮ ಅಲಾ ಮತ್ತ...' 'ಮತ್ತೇನಪಾ...ಮಕ್ಕಳದೇಲ್ಲಾ ಲಗ್ನ ಆತ ಇಲ್ಲ...ಎಷ್ಟ ಮೊಮ್ಮಕ್ಕಳ ಈಗ....' 'ಹೆಂಗಿದ್ದಿ ದೋಸ್ತ...ಏನ ಎಲ್ಲಾರೂ ಮಕ್ಕಳ ಜೊತಿ ಬೆಂಗಳೂರ ಸೇರಿ...ಹುಬ್ಬಳ್ಳಿ ಮರತ ಬಿಟ್ಟಿರಿ ಕಾಣ್ತದ...' 'ನೀ ಏನಪಾ...ದೊಡ್ಡ ಮನಷ್ಯಾ ಈಗ..... Union Minister ನಮ್ಮ ಕೈಯಾಗ ಎಲ್ಲಿ ಸಿಗ್ತಿ....'
ಇದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಮ್ಮ ಜೀಗರಿ ದೋಸ್ತರ ಜೊತೆ ಸೇರಿ ಹರಟೆ ಹೊಡೆದ ರಸಗಳಿಗೆಯ ಮಾತುಗಳಿವು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಬಾಲ್ಯದ ಸ್ನೇಹಿತರ ಜೊತೆ ಬೆಂಗಳೂರಲ್ಲಿ ಸೇರಿದರು. ಒಂದಷ್ಟು ಹರಟೆ, ಒಂದಷ್ಟು ಹಾಸ್ಯ.. ಊಟ, ಎಲ್ಲರೂ ಒಟ್ಟಾಗಿ ಸೇರಿ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದರು. ಈ ಬಗ್ಗೆ ಸ್ವತಃ ಪ್ರಲ್ಹಾದ್ ಜೋಶಿಯವರೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ, ಮಾನ್ಯ ಕೇಂದ್ರ ಸಚಿವರು ಏನ್ ಬರೆದಿದ್ದಾರೆ ನೀವು ಓದಿ.
ಇದ ಇವತ್ತ ನಾ 1978ರಾಗ ಮ್ಯಾಟ್ರಿಕ್ ಕಲಿಬೇಕಾರ ನನ್ನ ಜೊತಿ ನ್ಯೂ ಇಂಗ್ಲೀಷ್ ಸ್ಕೂಲ ಒಳಗ ಕಲಿತಿದ್ದ ದೋಸ್ತರ ಬೆಂಗಳೂರಾಗ ಸಿಕ್ಕಾಗ ನಡೆದ ಹರಟೆ. ಒಂದಿಷ್ಟ ದೋಸ್ತರನ್ನಂತೂ ಭೇಟ್ಟಿ ಆಗಲಾರದ ಎಷ್ಟ ವರ್ಷ ಆಗಿತ್ತೋ ಏನೋ...ಆದರ ಆತ್ಮೀಯತೆ ಏನ ಕಡಮಿ ಇರಲಿಲ್ಲಾ...ಎಷ್ಟಂದರೂ ದೋಸ್ತರ ದೋಸ್ತರ...ಯಾರ ಯಾ ಪೋಸ್ಟನಾಗ ಇದ್ದರೇನ ’ಬಾಲ್ಯದ ಆಟ.... ಆ ಹುಡುಗಾಟ... ಇನ್ನು ಮಾಸಿಲ್ಲಾ!’
ಸೀಮಿತ ಅವಧಿಯಲ್ಲೇ ಸೇವಾ ಭಾರತಿ ಮಹೋನ್ನತ ಕಾರ್ಯ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಅಂತಾರಲಾ ಹಂಗ ಇವತ್ತ ನನ್ನ ಹಳೇ ದೋಸ್ತರನ್ನ ಎಲ್ಲಾ ಭೇಟ್ಟಿ ಆಗಿ ಭಾರಿ ಖುಶಿ ಆತ.....ಹಂಗ ಎಲ್ಲಾರೂ ಸೇರಿ ಹಳೇದನ್ನ ಎಲ್ಲಾ ನೆನಸಿಗೊಂಡ ಅದರಾಗ ನಮಗ ಕಲಿಸಿದ್ದ ಗುರುಗಳ... ಲಕ್ಷ್ಮೇಶ್ವರ ಸರ್, ಕೊಪ್ಪರ ಸರ್ , ಭುಜಂಗ ಸರ್ ...ನಾತು ಸರ್ ....ಏನ್ ಜಿ ರಾಯಚೂರು ಸರ್. ಮುದಕವಿ ಸರ್ ಎಲ್ಲಾರನೂ ನೆನಸಿಕೊಂಡ, ನಮಿಸಿಕೊಂಡ ಅಗದಿ ಸಂತೋಷ ಆತ ಅನ್ನರಿ. ಏನಾ ಅನ್ನರಿ...’ ಸ್ನೇಹದ ಕಡಲಲ್ಲೀ..ನೆನಪಿನ ದೋಣಿಯಲೀ ’ ಮನಷ್ಯಾ ಆವಾಗ ಇವಾಗ ಟೈಮ್ ತಗದ ಪ್ರಯಾಣ ಮಾಡಬೇಕ. ಆವಾಗ ನಾವ ಎಷ್ಟ ದೂರ ಜೀವನದಾಗ ನಡದೇವಿ ಅನ್ನೋದ ಗೊತ್ತಾಗೋದ.