- Home
- Entertainment
- TV Talk
- ಮದುವೆಯಾಗಿ ಮಗಳಿರೋ ಮಹಿಳೆಯನ್ನು ವರಿಸಿರೋ 'ಶುಭ ವಿವಾಹ' ಹೀರೋ; ಟೀಕಿಸಿದವ್ರ ಮುಂದೆ ಗೆದ್ದ ಕನ್ನಡ ನಟ ವಿರಾಟ್
ಮದುವೆಯಾಗಿ ಮಗಳಿರೋ ಮಹಿಳೆಯನ್ನು ವರಿಸಿರೋ 'ಶುಭ ವಿವಾಹ' ಹೀರೋ; ಟೀಕಿಸಿದವ್ರ ಮುಂದೆ ಗೆದ್ದ ಕನ್ನಡ ನಟ ವಿರಾಟ್
Shubha Vivaha Serial Actor Viraat: ‘ಶುಭ ವಿವಾಹ’ ಧಾರಾವಾಹಿ ಹೀರೋ ವಿರಾಟ್ ಈಗ ಬೇರೆ ಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಇವರ ಮದುವೆ ವಿಷಯ ದೊಡ್ಡ ಮಟ್ಟದಲ್ಲಿ ಸೌಂಡ್ ಆಯ್ತು, ಆದರೆ ಈಗ ಈ ಜೋಡಿ ಎಲ್ಲರ ಟೀಕೆ, ಸವಾಲಿಗೆ ಸೆಡ್ಡು ಹೊಡೆದು ಬದುಕುತ್ತಿದೆ.

ಕನ್ನಡದ ನಟ ವಿರಾಟ್
ಕೆಲ ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ‘ಶುಭ ವಿವಾಹ’ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಈ ಧಾರಾವಾಹಿಯ ಹೀರೋ ವಿರಾಟ್. ಇವರ ಮದುವೆ ವಿಷಯವೇ ದೊಡ್ಡ ಚರ್ಚೆ ಕೂಡ ಮೂಡಿಸಿತ್ತು.
ನವೀನಾ ಶಿವಾನಿ ಜೊತೆ ಲವ್
ನವೀನಾ ಶಿವಾನಿ ಎನ್ನುವವರ ಜೊತೆ ವಿರಾಟ್ ಮದುವೆಯಾಗಿದೆ. ನವೀನಾ ಅವರು ಮೇಕಪ್ ಆರ್ಟಿಸ್ಟ್ ಆಗಿದ್ದವರು. ಕಾಮನ್ ಫ್ರೆಂಡ್ಸ್ ಮೂಲಕ ಈ ಜೋಡಿ ಭೇಟಿಯಾಗಿತ್ತು. ಮೂರು ವರ್ಷಗಳ ಪರಿಚಯಕ್ಕೆ ಕೊನೆಗೂ 2024ರಲ್ಲಿ ಮದುವೆ ಎಂಬ ಅಧಿಕೃತ ಮುದ್ರೆ ಬಿದ್ದಿತ್ತು.
ಚೈಲ್ಡ್ ಅಂದುಕೊಂಡ್ರು...
ನವೀನಾ ಶಿವಾನಿ ಅವರು ಒಮ್ಮೆ ಟಿವಿಯಲ್ಲಿ ವಿರಾಟ್ ನೋಡಿದಾಗ, “ಚೈಲ್ಡ್” ಎಂದು ಅಂದುಕೊಂಡು ಸುಮ್ಮನಿದ್ದರಂತೆ, ಆಮೇಲೆ ಇವರಿಬ್ಬರು ಕಾಮನ್ ಫ್ರೆಂಡ್ ಮೂಲಕ ಪರಿಚಯ ಆಯ್ತು, ಪ್ರೀತಿ ಆಯ್ತು, ಮದುವೆಯೂ ಆಯ್ತು.
ಅಂದುಕೊಂಡಂತೆ ಮದುವೆ ಆಯ್ತು
ಮೊದಲ ಬಾರಿಗೆ ವಿರಾಟ್ ಅವರನ್ನು ಟಿವಿಯಲ್ಲಿ ನೋಡಿದಾಗ ನವೀನಾ ಅವರು ನಾನು ಮದುವೆ ಆದರೆ ಹುಡುಗ ಈ ರೀತಿ ಇರಬೇಕು ಎಂದುಕೊಂಡಿದ್ದರಂತೆ. ಈಗ ಅವರೇ ಪತಿಯಾಗಿರೋದು ನಿಜಕ್ಕೂ ವಿಧಿ ಎಂದು ಕಾಣುತ್ತದೆ. ನವೀನಾ ತಾಯಿ ಕೂಡ ವಿರಾಟ್ ಚಿಕ್ಕವನು ಎಂದು ಆರಂಭದಲ್ಲಿ ಮದುವೆಗೆ ಒಪ್ಪಿಗೆ ಕೊಟ್ಟಿರಲಿಲ್ಲ.
ನವೀನಾಗೆ ಮದುವೆಯಾಗಿ ಮಗಳಿದ್ದಾಳೆ
ನವೀನಾಗೆ ಮೊದಲೇ ಮದುವೆಯಾಗಿ 10 ವರ್ಷಕ್ಕಿಂತ ದೊಡ್ಡ ವಯಸ್ಸಿನ ಮಗಳು ಇದ್ದಳು. ಅಷ್ಟೇ ಅಲ್ಲದೆ ವಿರಾಟ್ ಅವರಿಗಿಂತ ನವೀನಾ ವಯಸ್ಸಿನಲ್ಲಿ 10 ವರ್ಷ ದೊಡ್ಡವರು. ಹೀಗಾಗಿ ಈ ಮದುವೆಗೆ ಭಾರೀ ಟೀಕೆ ಇತ್ತು. ವಿರಾಟ್ ಮನೆಯವರೇ ಇದನ್ನು ಮೊದಲು ತಿರಸ್ಕಾರ ಮಾಡಿದ್ದರು.
ಮದುವೆ ಬೇಡ ಎಂದ್ರು
ಆರಂಭದಲ್ಲಿ ತನ್ನ ತಾಯಿ ಮದುವೆಗೆ ಒಪ್ಪಲ್ಲ ಎಂದು ವಿರಾಟ್ ಅವರು ಕೆಲವು ತಿಂಗಳುಗಳ ಕಾಲ ಬೆಂಗಳೂರಿನ ಮನೆಗೆ ಬಂದಿರಲಿಲ್ಲ. ಆಮೇಲೆ ತಾಯಿಯೂ ಒಪ್ಪಿದ ನಂತರ ಎರಡು ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು. “ಆರಂಭದಲ್ಲಿ ಚೆನ್ನಾಗಿ ಕಾಣತ್ತೆ, ನಾಳೆ ಸಮಸ್ಯೆ ಆಗತ್ತೆ” ಎಂದು ಸಲಹೆ ಕೊಟ್ಟವರಿಗೆ ವಿರಾಟ್ ಅವರು, “ಬದುಕಿ ತೋರಸ್ತೀನಿ” ಎಂದು ಉತ್ತರ ಕೊಟ್ಟಿದ್ದಾರಂತೆ.
ಕುಟುಂಬದ ಜೊತೆ ಸಮಯ ಕಳೆಯುತ್ತಿರೋ ಜೋಡಿ
ಇತ್ತೀಚೆಗೆ ವಿರಾಟ್ ಹಾಗೂ ನವೀನಾ ಶಿವಾನಿ ಅವರು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆದಿದ್ದಾರೆ. ವಿರಾಟ್ ತಾಯಿಯ ಜೊತೆಗೆ ನವೀನಾ ಇರುವ ಫೋಟೋಗಳನ್ನು ಕೂಡ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಪರಿಚಯಕ್ಕೆ 4 ವರ್ಷ
ಕಳೆದ ಆಗಸ್ಟ್‌ನಲ್ಲಿ ಈ ಜೋಡಿ ಭೇಟಿಯಾಗಿ ನಾಲ್ಕು ವರ್ಷಗಳಾಗಿವೆ, ಈ ಬಗ್ಗೆ ವಿರಾಟ್ ಅವರು ಸೋಶಿಯಲ್ ಮೀಡಿಯಾದಲ್ಲಿ, “4 ವರ್ಷಗಳ ಹಿಂದೆ ನೀನು ನನ್ನ ಜೀವನಕ್ಕೆ ಬಂದೆ. ನಾನು ಕಲ್ಪನೆ ಮಾಡದ ರೀತಿಯಲ್ಲಿ ನೀನು ಬದಲಾಯಿಸಿದ್ದೀಯಾ. ನಿನ್ನ ಪ್ರತಿ ನಗು, ಪ್ರತಿ ಮಾತು, ನಾವಿಬ್ಬರು ಹಂಚಿಕೊಂಡ ಪ್ರತಿಯೊಂದು ಕ್ಷಣವೂ ನನ್ನ ಹೃದಯದಲ್ಲಿ ಅಚ್ಚಾಗಿ ಉಳಿದಿದೆ" ಎಂದಿದ್ದಾರೆ.
ಜೀವನ ಸಂಗಾತಿ ಅಷ್ಟೇ ಅಲ್ಲ...
"ನಾವು ನಕ್ಕಿದ್ದೇವೆ, ನಾವು ಬೆಳೆಯುತ್ತಿದ್ದೇವೆ, ಎಲ್ಲದರ ಮಧ್ಯದಲ್ಲಿಯೂ ಒಬ್ಬರನ್ನೊಬ್ಬರು ಬೆಂಬಲ ಕೊಟ್ಟು ಬದುಕುತ್ತಿದ್ದೇವೆ, ಇದು ನಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡುತ್ತದೆ. ನೀನು ನನ್ನ ಜೀವನ ಸಂಗಾತಿಯಷ್ಟೇ ಅಲ್ಲ, ನನ್ನ ಅತ್ಯುತ್ತಮ ಸ್ನೇಹಿತೆ, ನನ್ನ ಸೇಫ್ ಪ್ಲೇಸ್, ನನ್ನ ಸದಾಕಾಲದ ಜೊತೆಗಾರ. ನೀನು ನನ್ನನ್ನು ಪ್ರೀತಿಸುವ ರೀತಿಗೆ ಧನ್ಯವಾದಗಳು. ಮುಂದೆಯೂ ಇನ್ನಷ್ಟು ಪ್ರೀತಿ, ಇನ್ನಷ್ಟು ಸಾಹಸದ ದಿನಗಳಿಗೆ ಶುಭವಾಗಲಿ” ಎಂದು ಬರೆದುಕೊಂಡಿದ್ದಾರೆ"