ಹ್ಯಾಪಿ ಫಾದರ್ಸ್ ಡೇ 2025: ಇಂದು ಅಂದರೆ ಜೂನ್ 15 ರಂದು ಫಾದರ್ಸ್ ಡೇ 2025 ಆಚರಿಸಲಾಗುತ್ತಿದೆ. ಅನುಷ್ಕಾ ಶರ್ಮಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅವರ ಮಗಳು ವಾಮಿಕಾಗೆ ಸಂಬಂಧಿಸಿದೆ.
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋದಿಲ್ಲ, ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳು ಜನರ ಗಮನ ಸೆಳೆಯುತ್ತವೆ. ಇಂದು, ಜೂನ್ 15, ಫಾದರ್ಸ್ ಡೇ. ಕಿಂಗ್ ಕೊಹ್ಲಿಗೆ ಈ ವಿಶೇಷ ಕ್ಷಣವನ್ನು ಅನುಷ್ಕಾ ಶರ್ಮಾ ಮರೆಯಲಾಗದಂತೆ ಮಾಡಿದ್ದಾರೆ. ಬೆಸ್ಟ್ ಕಪಲ್ ಪರಿಗಣಿಸಲ್ಪಟ್ಟಿರುವ ಇವರಿಬ್ಬರೂ ಇತರರಿಗೆ ಸ್ಫೂರ್ತಿ. ಇಬ್ಬರಿಗೂ ಬಿಡುವಿಲ್ಲದಷ್ಟು ಕೆಲಸವಿದ್ರೂ ಕೂಡ, ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಮರೆಯುವುದಿಲ್ಲ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಕೆಲಸವನ್ನು ನಿಭಾಯಿಸುತ್ತಲೇ ಮಕ್ಕಳೊಂದಿಗೆ ಸಂತೋಷದಿಂದಿರುತ್ತಾರೆ. ವಾಮಿಕ ಮತ್ತು ಅಕಾಯ್ ಜೊತೆ ಸಮಯ ಕಳೆಯೋದನ್ನು ನಾವು ಆಗಾಗ್ಗ ನೋಡಬಹುದು. ಅದಕ್ಕಾಗಿಯೇ ಅವರನ್ನು ಅತ್ಯುತ್ತಮ ಪೋಷಕರೆಂದು ಕರೆಯಲಾಗುತ್ತದೆ. ಸಾರ್ವಜನಿಕ ಲೈಫ್‌ನಲ್ಲಿ ವಿರಾಟ್ ಮತ್ತು ಅನುಷ್ಕಾ ತಮ್ಮ ಮಕ್ಕಳ ಮುಖವನ್ನು ತೋರಿಸಲು ಇಷ್ಟಪಡದಿದ್ದರೂ, ಕೆಲವೊಮ್ಮೆ ಅವರ ಮಕ್ಕಳ ಮುಖ ಕಾಣದ ಫೋಟೋಗಳು ಕೂಡ ಅಭಿಮಾನಿಗಳ ಹೃದಯವನ್ನು ತುಂಬುತ್ತದೆ. ಅನುಷ್ಕಾ ಈ ಬಾರಿಯೂ ಅದನ್ನೇ ಮಾಡಿದ್ದಾರೆ. ಅವರು ತಮ್ಮ ಮಗಳು ವಮಿಕಾಳ ಬಗ್ಗೆ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ.
