ಸತ್ಯ ಸೀರಿಯಲ್​ ಕೀರ್ತನಾ ಪಾತ್ರಧಾನಿ ಅನು ಜನಾರ್ದನ ಸೀರಿಯಲ್​ ಬಿಟ್ಟಿದ್ದಾರೆ. ರೀಲ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಹೇಳ್ತಿರೋದೇನು? 

ಜೀ ಟಿ.ವಿಯಲ್ಲಿ ನಿತ್ಯ ಪ್ರಸಾರವಾಗ್ತಿರೋ ಸತ್ಯ (Sathya) ಧಾರಾವಾಹಿ. ಈ ಧಾರಾವಾಹಿ ಕಳೆದ ಎರಡೂವರೆ ವರ್ಷಗಳಿಂದ ಜನಮನ ಗೆದ್ದಿದೆ. 2020ರ ಡಿಸೆಂಬರ್​ನಿಂದ ಪ್ರಸಾರವಾಗ್ತಿರೋ ಈ ಧಾರಾವಾಹಿಗೆ ಅದರದ್ದೇ ಆದ ಪ್ರೇಕ್ಷಕರಿದ್ದಾರೆ. ಮಾಮೂಲು ಧಾರಾವಾಹಿಗಳಂತೆ ನಾಯಕಿ, ಮನೆಯಲ್ಲೊಬ್ಬಳು ವಿಲನ್​ ಕಥಾ ವಸ್ತು ಇದ್ದರೂ ಬೇರೆ ಧಾರಾವಾಹಿಗಳಿಗಿಂತಲೂ ತುಸು ಭಿನ್ನ ಎನ್ನುವಂಥ ಪಾತ್ರ ಇದರಲ್ಲಿ ಇರುವ ಕಾರಣ ಜನರಿಗೆ ಇದು ತುಂಬಾ ಇಷ್ಟವಾಗುತ್ತಿದೆ. ಗಂಡುಬೀರಿಯಂತಿದ್ದ ನಾಯಕಿ ಸತ್ಯ ಅನಿವಾರ್ಯವಾಗಿ ಮದುವೆಯಾಗಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹೊಂದಿಕೊಳ್ಳಲು ಹೆಣಗಾಡುವುದು, ಇವಳು ಹೊಂದಿಕೊಳ್ಳಲು ನೋಡಿದರೂ ಅತ್ತೆಗೆ ಇವಳನ್ನು ಕಂಡರೆ ಆಗಿರುವುದು, ಪತ್ನಿಯನ್ನು ಕಂಡರೆ ಸಿಡಿಮಿಡಿ ಎನ್ನುತ್ತಿರುವ ಗಂಡ ಕಾರ್ತೀಕ್​ಗೆ ಕೊನೆಗೂ ಪತ್ನಿ ಮೇಲೆ ಲವ್​ ಆಗುವುದು... ಹೀಗೆ ಒಂದು ಸಂಸಾರದ ಸುತ್ತಲೂ ಹೆಣೆದಿರುವ ಈ ಕಥೆಯಲ್ಲಿ ನಾಯಕಿಯಂತೆಯೇ ಎಲ್ಲರ ಗಮನ ಸೆಳೆಯುವುದು ವಿಲನ್​ ಪಾತ್ರಧಾರಿ ಕೀರ್ತನಾ. 

ಇದೀಗ ಈ ಸೀರಿಯಲ್​ ಇನ್ನೊಂದು ಹಂತ ತಲುಪಿದೆ. ಸತ್ಯ ಇದೀಗ ಇನ್ಸ್​ಪೆಕ್ಟರ್​ ಸತ್ಯ ಆಗಿದ್ದಾಳೆ. ಎಲ್ಲಾ ಅಡೆತಡೆಗಳನ್ನು ಮೀರಿ ಇನ್ಸ್​ಪೆಕ್ಟರ್​ ಆಗಿದ್ದಾಳೆ. ಇದನ್ನು ನೋಡಿ ಅಭಿಮಾನಿಗಳು ಮತ್ತಷ್ಟು ಕ್ಯೂರಿಯಸ್​ ಆಗಿದ್ದಾರೆ. ಆದರೆ ಇಲ್ಲಿಯವರೆಗಿನ ಕಥೆಯಲ್ಲಿ ಸತ್ಯನಷ್ಟೇ ಫೇಮಸ್​ ಆಗಿದ್ದ ಪಾತ್ರಧಾರಿ ಎಂದರೆ ವಿಲನ್​ ರೋಲ್​. ಅದುವೇ ಕೀರ್ತನಾ.

ಕೊಟ್ಟ ಮಾತು ಉಳಿಸಿಕೊಂಡ ಉರ್ಫಿ ಜಾವೇದ್​: ನಟಿಯ ವಿಶೇಷ ಉಡುಗೊರೆಗೆ ಫ್ಯಾನ್ಸ್​ ಫಿದಾ

ಮದುವೆಯಾದರೂ ತವರಿನಲ್ಲಿಯೇ ಇದ್ದು, ತಮ್ಮನ ಪತ್ನಿಯ (ನಾಯಕಿ ಸತ್ಯ) ಮೇಲೆ ಸದಾ ಕುತಂತ್ರ ಹೆಣೆಯುತ್ತಾ ಇರುವ ಈ ಕೀರ್ತನಾ ಪಾತ್ರಧಾರಿಯಾಗಿದ್ದವರು ಅನು ಜನಾರ್ದನ. ಆದರೆ ಕೆಲ ಸಂಚಿಕೆಗಳಿಂದ ಅನು ಜನಾರ್ದನ ಕಾಣಿಸಿಕೊಂಡಿರಲಿಲ್ಲ. ಆದರೆ ಬಳಿಕ ದಿಢೀರ್​ ಎಂದು ಕೀರ್ತನಾ ಪಾತ್ರಧಾರಿ ಬದಲಾಗಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಸಕತ್​ ಬೇಸರವಾಗಿದೆ. ಹಲವು ತಿಂಗಳುಗಳಿಂದ ಒಂದೇ ಮುಖವನ್ನು ಒಂದು ಪಾತ್ರದಲ್ಲಿ ನೋಡುತ್ತಿರುವ ಅಭಿಮಾನಿಗಳಿಗೆ ಇಂಥದ್ದೊಂದು ಬೇಸರ ಸಹಜವಾದದ್ದೇ. ಅದರಲ್ಲಿಯೂ ಸ್ಟೈಲಿಷ್​ ಆಗಿ, ಕೀರ್ತನಾ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಿದ್ದ ಅನು ಜನಾರ್ದನ ಅವರು ಹೀಗೆ ದಿಢೀರ್​ ನಾಪತ್ತೆಯಾಗಿರುವುದು ಅಭಿಮಾನಿಗಳಿಗೆ ಶಾಕ್​ ಆಗಿದೆ. 

ವೈಯಕ್ತಿಕ ಕಾರಣಗಳಿಂದ ಅನು ಅವರು ಸತ್ಯ ಸೀರಿಯಲ್​ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಇವರು ಸೀರಿಯಲ್​ ಬಿಟ್ಟು ಹೋಗಿರುವ ಹಿಂದಿನ ಸತ್ಯ ಇನ್ನೂ ಬಯಲಾಗಿಲ್ಲ. ಇವರಿಗೆ ಬೇರೆ ಒಳ್ಳೆಯ ಅವಕಾಶಗಳು ಸಿಕ್ಕವೇ ಅಥವಾ ಇನ್ನೇನು ಕಾರಣವೇ ಎನ್ನುವುದು ತಿಳಿದುಬಂದಿಲ್ಲ. ಸತ್ಯ ಸೀರಿಯಲ್​ ತಂಡ ಕೂಡ ಅನು ಜನಾರ್ದನ ಅವರಿಗೆ ಬೀಳ್ಕೊಡುಗೆ ಕೊಟ್ಟಿದೆ ಎನ್ನಲಾಗುತ್ತಿದ್ದು, ಅದರ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ಅನು, ರೀಲ್ಸ್​ ಶೇರ್​ ಮಾಡುತ್ತಲೇ ಇರುತ್ತಾರೆ. ಇದೀಗ ಇನ್ನೊಂದು ರೀಲ್ಸ್​ ಶೇರ್​ ಮಾಡಿದ್ದಾರೆ. ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಇದಕ್ಕೆ ಕಮೆಂಟ್​ಗಳ ಸುರಿಮಳೆಯೇ ಆಗುತ್ತಿದೆ. ಆದರೆ ಕಮೆಂಟಿಗರು ರೀಲ್ಸ್​ ಬಗ್ಗೆಯಲ್ಲ, ಬದಲಿಗೆ ಸತ್ಯ ಸೀರಿಯಲ್​ ಬಿಟ್ಟ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ನೀವಿಲ್ಲದ ಸತ್ಯ ಸೀರಿಯಲ್​ ನೆನೆಪಿಸಿಕೊಳ್ಳುವುದೂ ಕಷ್ಟ. ನಿಮ್ಮ ಸುಂದರ ಮುಖವನ್ನು ನಾವು ಮಿಸ್​ ಮಾಡಿಕೊಳ್ಳುತ್ತಿದ್ದೇವೆ ಎಂದೆಲ್ಲಾ ಇಂದಿಗೂ ಹೇಳುತ್ತಿದ್ದಾರೆ. ಪ್ಲೀಸ್​ ವಾಪಸ್​ ಬನ್ನಿ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ.

ಇನ್ನು ಅನು ಜನಾರ್ದನ ಕುರಿತು ಹೇಳುವುದಾದರೆ, 'ರಂಗನಾಯಕಿ' ಧಾರಾವಾಹಿಯಲ್ಲಿ ಖಳನಾಯಕಿ ವಿಭಾ ಆಗಿ ನಟಿಸಿದ್ದ ಇವರು ಸಕತ್​ ಫೇಮಸ್​ ಆಗಿದ್ದರು. 'ರಂಗನಾಯಕಿ'ಯ ವಿಭಾ ಎಂದೇ ಈಗಲೂ ಗುರುತಿಸಿಕೊಂಡಿದ್ದಾರೆ. 'ರಂಗನಾಯಕಿ' ಧಾರಾವಾಹಿ ಬಳಿಕ ನಟಿ ಅನು 'ಸತ್ಯ'ದಲ್ಲಿ ನಟಿಸಿದ್ದರು. ಖಡಕ್ ಕೀರ್ತನಾ ಆಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದ ಅನು ಅವರು ಧಾರಾವಾಹಿಯಿಂದ ಹೊರಬಂದಿದ್ದು ಇನ್ನೂ ಹಲವು ಪ್ರೇಕ್ಷಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. 

ಬೀದೀಲಿ ಹೋಗ್ತಿರೋ ಮಾರಿಯನ್ನು ಮನೆಗೇ ಕರ್ಕೊಂಡು ಬಿಟ್ಯಲ್ಲಮ್ಮಾ ಭೂಮಿಕಾ ಅಂತಿದ್ದಾರೆ ಫ್ಯಾನ್ಸ್​!

View post on Instagram