- Home
- Entertainment
- TV Talk
- ಜೈಲಿನ ಸೀರೆ ಬಿಟ್ಟು ಬೋಲ್ಡ್ ಅವತಾರದಲ್ಲಿ 'ರಾಣಿ' ಸೀರಿಯಲ್ ಕಾವೇರಿ: ಮದ್ವೆಯಾಗದೇ ಮಗು ಪಡೆದ ನಟಿ ಸ್ಟೋರಿ ಕೇಳಿ
ಜೈಲಿನ ಸೀರೆ ಬಿಟ್ಟು ಬೋಲ್ಡ್ ಅವತಾರದಲ್ಲಿ 'ರಾಣಿ' ಸೀರಿಯಲ್ ಕಾವೇರಿ: ಮದ್ವೆಯಾಗದೇ ಮಗು ಪಡೆದ ನಟಿ ಸ್ಟೋರಿ ಕೇಳಿ
ಜೀ ಕನ್ನಡದ 'ರಾಣಿ' ಧಾರಾವಾಹಿಯಲ್ಲಿ, ಮಾಡದ ತಪ್ಪಿಗೆ ಜೈಲು ಸೇರಿ ಮಗಳನ್ನು ಕಳೆದುಕೊಳ್ಳುವ ಕಾವೇರಿ ಪಾತ್ರದಲ್ಲಿ ನಟಿ ಐಶ್ವರ್ಯ ಎಚ್ ಮನೋಜ್ಞವಾಗಿ ನಟಿಸುತ್ತಿದ್ದಾರೆ. ತೆರೆಮೇಲೆ ಸೀರೆಯುಟ್ಟು ಕಾಣಿಸಿಕೊಳ್ಳುವ ಐಶ್ವರ್ಯ, ಇದೀಗ ತಮ್ಮ ಬೋಲ್ಡ್ ಫೋಟೋಶೂಟ್ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.

ಮಾಡದ ತಪ್ಪಿಗೆ ಜೈಲು
ಮಾಡದ ತಪ್ಪಿಗೆ ಜೈಲು ಸೇರಿ ಜೈಲಿನಲ್ಲಿಯೇ ಮಗುವನ್ನು ಹೆತ್ತು, ಜೈಲಿನ ನಿಯಮದ ಪ್ರಕಾರ ಆರು ವರ್ಷ ಆದ ಮೇಲೆ ಮಗಳನ್ನು ಜೈಲಿನಿಂದ ಹೊರಗಡೆ ಬಿಡಬೇಕಾದ ಪ್ರಸಂಗ... ಅಮ್ಮ-ಮಗಳ ಕಣ್ಣೀರಿನ ಸ್ಟೋರಿ ಹೊತ್ತು, ಎಲ್ಲರನ್ನೂ ಭಾವುಕ ಆಗಿಸ್ತಿರೋ ಸೀರಿಯಲ್ ಜೀ ಕನ್ನಡದ ರಾಣಿ.
ರಾಣಿ ಪಾತ್ರದಲ್ಲಿ ಧನ್ವಿ
ರಾಣಿ ಪಾತ್ರದಲ್ಲಿ ಪುಟಾಣಿ ಧನ್ವಿ ಮನೋಜ್ಞ ಅಭಿನಯ ನೀಡುತ್ತಿದ್ದಾಳೆ. ತನ್ನ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾಳೆ ಬಾಲಕಿ ಧನ್ವಿ. ಈಕೆಯ ಅಮ್ಮನ ಪಾತ್ರದಲ್ಲಿ, ಅರ್ಥಾತ್ ಸೀರಿಯಲ್ ನಾಯಕಿಯಾಗಿ ಮಿಂಚುತ್ತಿರುವ ನಟಿ ಐಶ್ವರ್ಯ ಎಚ್.
ಅಮ್ಮನಾಗಿ ಕಾವೇರಿ
ಜೈಲಿನಲ್ಲಿ ಇರುವಾಗ ಮಗುವನ್ನು ಪಡೆದು, ನಂತರ ಆ ಮಗಳನ್ನು ತನ್ನಿಂದ ದೂರ ಮಾಡುವ ಆ ಸನ್ನಿವೇಶಕ್ಕೆ ವೀಕ್ಷಕರನ್ನು ಕಣ್ಣೀರಿನಲ್ಲಿ ತೇಲಿಸುವ ನಟನೆ ಮಾಡಿದ್ದಾರೆ ನಟಿ ಐಶ್ವರ್ಯ. ತಪ್ಪೇ ಮಾಡದೇ ಶಿಕ್ಷೆ ಅನುಭವಿಸುತ್ತಿರುವ ಕಾವೇರಿಯ ಪಾತ್ರ, ಎಲ್ಲರನ್ನೂ ಭಾವುಕ ಆಗಿಸುತ್ತಿದೆ.
ನಟಿ ಐಶ್ವರ್ಯ ಸ್ಟೋರಿ
ಇಂತಿಪ್ಪ ನಟಿ ಐಶ್ವರ್ಯ ರಿಯಲ್ ಲೈಫ್ನಲ್ಲಿ ಇನ್ನೂ ಅವಿವಾಹಿತೆ. ಸಂದರ್ಶನವೊಂದರಲ್ಲಿ ಅವರು ತಮಾಷೆ ಮಾಡುತ್ತಾ, ನನಗಿನ್ನೂ ರಿಯಲ್ ಲೈಫ್ನಲ್ಲಿ ಮದ್ವೆನೇ ಆಗಿಲ್ಲ. ಆದ್ರೆ ಸೀರಿಯಲ್ನಲ್ಲಿ ಆರು ವರ್ಷದ ಮಗಳ ಅಮ್ಮನೂ ಆಗಿಬಿಟ್ಟೆ. ಅದೂ ನನ್ನ ಬಾಲ್ಯದ ಫ್ರೆಂಡ್ ಆರವ್ ಸೂರ್ಯ (ಸೀರಿಯಲ್ ನಾಯಕ)ನಿಂದ ಎಂದು ತಮಾಷೆ ಮಾಡಿದ್ದಾರೆ.
ಬಾಲ್ಯ ಸ್ನೇಹಿತನೇ ನಾಯಕ
ಅಂದಹಾಗೆ ಆರವ್ ಮತ್ತು ಐಶ್ವರ್ಯ ಬಾಲ್ಯದ ಸ್ನೇಹಿತರಂತೆ. ಆದರೆ ಈ ಸೀರಿಯಲ್ ಒಪ್ಪಿಕೊಂಡಾಗ ಅದರಲ್ಲಿ ತಾವಿಬ್ಬರೂ ಪತಿ-ಪತ್ನಿ ಎನ್ನುವುದು ಗೊತ್ತೇ ಇರಲಿಲ್ಲ, ಸೆಟ್ಗೆ ಬಂದಾಗ ನೋಡಿ ಆಶ್ಚರ್ಯ ಆಗೋಯ್ತು ಎಂದಿದ್ದರು.
ನಟಿಯ ಬೋಲ್ಡ್ ಫೋಟೋಶೂಟ್
ಇಂತಿಪ್ಪ ನಟಿ ಐಶ್ವರ್ಯ ಇದೀಗ ಹಾಟ್ ಆ್ಯಂಡ್ ಬೋಲ್ಡ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸೀರಿಯಲ್ನಲ್ಲಿ ಇಷ್ಟು ದಿನ ಜೈಲಿನ ಬಿಳಿ ಸೀರೆ, ಹೊರಗೆ ಬಂದ ಮೇಲೆ ಒಂದಿಷ್ಟು ಸೀರೆಯಲ್ಲಿ ವೀಕ್ಷಕರನ್ನು ರಂಜಿಸ್ತಿರೋ ಕಾವೇರಿ ಉರ್ಫ್ ನಟಿ ಐಶ್ವರ್ಯ ಅವರ ಈ ಬೋಲ್ಡ್ ಫೋಟೋಶೂಟ್ಗೆ ಅಭಿಮಾನಿಗಳೂ ಬೋಲ್ಡ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

