- Home
- Entertainment
- TV Talk
- Ramachari Serial Update: ಇನ್ಮುಂದೆ ಆ ರೀತಿ ಎಪಿಸೋಡ್ ತೋರಿಸಬೇಡಿ, ಪ್ಲೀಸ್.. ಎಂದು ಬೇಡಿಕೆಯಿಟ್ಟ ವೀಕ್ಷಕರು!
Ramachari Serial Update: ಇನ್ಮುಂದೆ ಆ ರೀತಿ ಎಪಿಸೋಡ್ ತೋರಿಸಬೇಡಿ, ಪ್ಲೀಸ್.. ಎಂದು ಬೇಡಿಕೆಯಿಟ್ಟ ವೀಕ್ಷಕರು!
'ರಾಮಾಚಾರಿ' ಧಾರಾವಾಹಿಯಲ್ಲಿ ರಾಮಾಚಾರಿ ಸಾವು ಸಿಕ್ಕಾಪಟ್ಟೆ ಜನರಿಗೆ ಶಾಕ್ ನೀಡಿದೆ. ಹಾಗಾದರೆ ಮುಂದೆ ಏನಾಗುವುದು?

ಗೋಳಾಡ್ತಿರೋ ತಾಯಿ, ಅಜ್ಜಿ
'ರಾಮಾಚಾರಿ' ಧಾರಾವಾಹಿಯಲ್ಲಿ ( Ramachari Serial ) ರಾಮಾಚಾರಿ ಕೊಲೆಯಾಗಿದ್ದಾನೆ. ತನ್ನ ಗಂಡ ಬರುತ್ತಾನೆ ಅಂತ ಚಾರುಲತಾ ಕಾದು ಕುಳಿತಿದ್ದಾಳೆ. ಅವನ ಸಾವಿನ ವಿಷಯ ಕೇಳಿ ತಾಯಿ, ಅಜ್ಜಿ ಗೋಳಾಡುತ್ತಿದ್ದಾರೆ. ಹಾಗಾದರೆ ಮುಂದೇನು?
ರಾಮಾಚಾರಿ ಸಾಯೋದು ನಿಜಾನಾ?
ಇದು ಪುರುಷ ಪ್ರಧಾನ ಧಾರಾವಾಹಿ. ಇಲ್ಲಿ ರಾಮಾಚಾರಿಯೇ ಹೀರೋ. ಹೀಗಾಗಿ ರಾಮಾಚಾರಿ ಸಾಯೋದು ಡೌಟ್ ಎನ್ನಲಾಗಿದೆ. ಇಷ್ಟು ವರ್ಷಗಳಿಂದ ದೇವರನ್ನು ಪೂಜಿಸಿಕೊಂಡು ಬಂದಿರೋ, ಮೌಲ್ಯಗಳಿಂದ ಬದುಕ್ತಿರೋ ರಾಮಾಚಾರಿ ಸಾಯೋದು ಡೌಟ್. ಏನಾದರೊಂದು ಮ್ಯಾಜಿಕ್ ಆಗಿ ರಾಮಾಚಾರಿ ಬದುಕ್ತಾನೆ. ಇಲ್ಲಿ ಕಥೆಗಾರರು ಯಾವ ರೀತಿಯ ಟ್ವಿಸ್ಟ್ ಕೊಡ್ತಾರೆ ಎಂದು ಕಾದು ನೋಡಬೇಕಿದೆ.
ರಾಮಾಚಾರಿ ಧಾರಾವಾಹಿಯಲ್ಲಿ ಮುಂದೆ ಏನಾಗಬಹುದು?
ಒಂದುವೇಳೆ ರಾಮಾಚಾರಿ ಸತ್ತರೆ ಅಂತ್ಯಕ್ರಿಯೆ ಎಪಿಸೋಡ್‌ಗಳನ್ನು ತೋರಿಸ್ತಾರಾ ಎಂದು ಕಾದು ನೋಡಬೇಕಿದೆ. ಈ ಹಿಂದೆ ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮನ ಪ್ರತಿಯೊಂದು ಅಂತ್ಯಕ್ರಿಯೆ ಎಪಿಸೋಡ್‌ಗಳನ್ನು ತೋರಿಸಿದ್ದರು. ಅದರಂತೆ ಇಲ್ಲಿಯೂ ಹಾಗೆ ಮಾಡಿದರೆ ವೀಕ್ಷಕರಿಗೆ ತಡೆದುಕೊಳ್ಳುವ ಶಕ್ತಿಯಂತೂ ಇಲ್ಲ.
ಚಾರುಲತಾ ಸುಮ್ಮನೆ ಇರುತ್ತಾಳಾ?
ರಾಮಾಚಾರಿ ಸತ್ತರೆ, ಅದಕ್ಕೆ ಮಾನ್ಯತಾ ಕಾರಣ ಅಂತ ಚಾರುಗೆ ಗೊತ್ತಾದರೆ ಅವಳಂತೂ ಸುಮ್ಮನೆ ಇರೋದಿಲ್ಲ. ಏಕಾಂಗಿಯಾಗಿ ಹೋರಾಟ ಮಾಡಿ ತನ್ನ ಗಂಡನ ಸಾವಿಗೆ ನ್ಯಾಯ ಕೊಡಿಸುತ್ತಾಳೆ. ಒಟ್ಟಿನಲ್ಲಿ ಮುಂದೆ ಏನಾಗುವುದು ಎಂಬ ಕುತೂಹಲ ಜಾಸ್ತಿಯಿದೆ.
ಸೀರಿಯಲ್ ಮುಗಿಯುತ್ತಿದ್ಯಾ?
ರಾಮಾಚಾರಿ ಧಾರಾವಾಹಿಯ ಎಪಿಸೋಡ್‌ಗಳನ್ನು ನೋಡಿದ್ರೆ ಈ ಸೀರಿಯಲ್ ಅಂತ್ಯ ಆಗುವ ಹಾಗೆ ಕಾಣಿಸ್ತಿದೆ. ಈಗಾಗಲೇ 907 ಎಪಿಸೋಡ್‌ಳು ಪ್ರಸಾರ ಆಗಿವೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶುರು ಆಗುತ್ತಿರೋದರಿಂದ ಈ ಸೀರಿಯಲ್ ಅಂತ್ಯ ಆದರೂ ಆಶ್ಚರ್ಯ ಇಲ್ಲ.