- Home
- Entertainment
- TV Talk
- 'ರಾಧಾ ರಮಣ' ನಟಿ ಕಾವ್ಯಾ ಗೌಡ ಮೇಲೆ ಹಲ್ಲೆ; 5 ವರ್ಷದಿಂದ ಸೀರಿಯಲ್, ಸಿನಿಮಾ ಇಲ್ಲ; ಜನಪ್ರಿಯತೆ ಹೆಚ್ಚಾಗ್ತಿರೋದ್ಯಾಕೆ?
'ರಾಧಾ ರಮಣ' ನಟಿ ಕಾವ್ಯಾ ಗೌಡ ಮೇಲೆ ಹಲ್ಲೆ; 5 ವರ್ಷದಿಂದ ಸೀರಿಯಲ್, ಸಿನಿಮಾ ಇಲ್ಲ; ಜನಪ್ರಿಯತೆ ಹೆಚ್ಚಾಗ್ತಿರೋದ್ಯಾಕೆ?
Actress Kavya Gowda: ರಾಧಾ ರಮಣ, ಗಾಂಧಾರಿ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ ಹಾಗೂ ಪತಿ ಮೇಲೆ ಹಲ್ಲೆ ಆಗಿದ್ದು, ಇದೀಗ ಪ್ರಕರಣ ಪೊಲೀಸ್ ಠಾಣೆಮ ಮೆಟ್ಟಿಲೇರಿದೆ. ಕಾವ್ಯಾ ಗೌಡ ಜನಪ್ರಿಯತೆ ಸಹಿಸಲಾಗದೆ ಈ ಹಲ್ಲೆ ಮಾಡಲಾಗಿದೆಯಂತೆ. ಸಿನಿಮಾ, ಸೀರಿಯಲ್ ಮಾಡದೆ ಹೀಗೆ ಬದುಕುತ್ತಿರುವುದು ಹೇಗೆ?

ಏನಿದು ಹಲ್ಲೆ?
ನಟಿ ಕಾವ್ಯಾ ಗೌಡ ಮತ್ತು ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದೆ. ಸೋಮಶೇಖರ್ ಅತ್ತಿಗೆಯ ತಂದೆಯಿಂದಲೇ ಈ ಹಲ್ಲೆಯು ನಡೆದಿದೆ. ನಟಿ ಕಾವ್ಯಾ ಗೌಡ ಜನಪ್ರಿಯತೆಯನ್ನು ಸಹಿಸದೇ ಈ ಹಲ್ಲೆ ಮಾಡಲಾಗಿದೆಯಂತೆ. ಕಾವ್ಯ ಗೌಡ ಅಕ್ಕ ಭವ್ಯ ಗೌಡ ಅವರಿಂದಲೇ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಮಶೇಖರ್ ಅತ್ತಿಗೆಯ ತಂದೆ ರವಿಕುಮಾರ್ ವಿರುದ್ಧ ರೇ*ಪ್ ಮಾಡ್ತೇನೆ ಎಂದು ಬೆದರಿಕೆ ಹಾಕಲಾಗಿದೆಯಂತೆ. ನಂದಿಶ್, ಪ್ರಿಯಾ, ರವಿಕುಮಾರ್ ಎನ್ನುವವರ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಕಾವ್ಯಾ ಗೌಡ ಹಾಗೂ ಅವರ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಂಧಾರಿ, ರಾಧಾ ರಮಣ ಸೀರಿಯಲ್ ನಟಿ ಕಾವ್ಯಾ ಗೌಡ, ಪತಿ ಸೋಮಶೇಖರ್ ಮೇಲೆ ಸಂಬಂಧಿಯಿಂದಲೇ ಹಲ್ಲೆ!
ಕಾವ್ಯ ಗೌಡ ಕುಟುಂಬ
ಕಾವ್ಯ ಗೌಡ ಪತಿ ಸೋಮಶೇಖರ್ ಅವರು ಉದ್ಯಮಿ, ಗಂಡನ ತಂದೆ ರಾಜಕೀಯ ಹಿನ್ನಲೆ ಉಳ್ಳವರು. 2021ರಲ್ಲಿ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಇವರ ಮದುವೆ ಆಗಿತ್ತು.
1992ರಲ್ಲಿ ಕಾವ್ಯಾ ಗೌಡ ಅವರು ಜನಿಸಿದ್ದಾರೆ. ಇವರಿಗೆ ಭವ್ಯಾ ಗೌಡ ಎನ್ನುವ ಸಹೋದರಿ ಜೊತೆಗೆ ಅಣ್ಣ ಕೂಡ ಇದ್ದಾನೆ ಎನ್ನಲಾಗಿದೆ.
ಧಾರಾವಾಹಿ, ಸಿನಿಮಾ
ಕಾವ್ಯಾ ಗೌಡ ಅವರು ಮೀರಾ ಮಾಧವ, ಗಾಂಧಾರಿ, ರಾಧಾ ರಮಣ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಬಕಾಸುರ ಎನ್ನುವ ಸಿನಿಮಾ ಕೂಡ ಮಾಡಿದ್ದು, ರೋಹಿತ್ ಅವರು ಈ ಚಿತ್ರದಲ್ಲಿ ಹೀರೋ ಆಗಿದ್ದರು.
ಮದುವೆ
ಉದ್ಯಮಿ ಸೋಮಶೇಖರ್ ಅವರನ್ನು ಕಾವ್ಯಾ ಮದುವೆ ಆಗಿದ್ದಾರೆ. ಸೋಮಶೇಖರ್ ಅವರ ಜೊತೆ ಮದುವೆ ಆಗುವಾಗಲೇ ಕಾವ್ಯಾ ಅವರು ದುಬೈನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಬಹಳ ಅದ್ದೂರಿಯಾಗಿ ಮದುವೆ ನಡೆದಿತ್ತು.
ಮಗಳು ಜನನ
ಎರಡು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ದಿನವೇ ಇವರಿಗೆ ಮಗಳು ಹುಟ್ಟಿದ್ದಳು. ಈಗ ಇವರ ಮಗಳು ಸಿಯಾಗೆ ಎರಡು ವರ್ಷದ ಸಂಭ್ರಮ. ಇತ್ತೀಚೆಗಷ್ಟೇ ಅವರು ಮಗಳ ಜನ್ಮದಿನವನ್ನು ಆಚರಿಸಿದ್ದರು.
ಮ್ಯಾನಿಫೆಸ್ಟೇಶನ್ ಕ್ಲಾಸ್
ಕಾವ್ಯಾ ಗೌಡ ಅವರು ಮ್ಯಾನಿಫೆಸ್ಟೇಶನ್ ಕ್ಲಾಸ್ ನಡೆಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಈಗಾಗಲೇ ಅನೇಕರಿಗೆ ಈ ತರಗತಿ ನೀಡಿದ್ದು, ಅನೇಕರು ಇದರ ಪ್ರಯೋಜನ ಪಡೆದುಕೊಂಡಿರುವುದಾಗಿ ವಿಡಿಯೋ ಮೂಲಕ ಹೇಳಿದ್ದರು.
ಭವ್ಯಾ ಗೌಡ ಬ್ಯೂಟಿಕ್
ಕಾವ್ಯಾ ಗೌಡ ಸಹೋದರಿ ಭವ್ಯಾ ಗೌಡ ಅವರ ಬ್ಯೂಟಿಕ್ ಇದೆ. ಇವರ ಡ್ರೆಸ್‌ಗಳಿಗೆ ಕಾವ್ಯಾ ಗೌಡ ಅವರೇ ಮಾಡೆಲ್ ಎನ್ನಬಹುದು. ಹೀಗಾಗಿ ಕಾವ್ಯಾ ಗೌಡ ಅವರು ಸದಾ ಒಂದಿಲ್ಲೊಂದು ಅದ್ಭುತವಾದ, ದುಬಾರಿ ಬಟ್ಟೆಗಳನ್ನು ಧರಿಸುತ್ತಲೇ ಇರುತ್ತಾರೆ, ಹಾಗೆಯೇ ಫೋಟೋಶೂಟ್ ಆಗುವುದು.
ವಿದೇಶಿ ಟ್ರಿಪ್‌ಗಳು
ಕಾವ್ಯಾ ಗೌಡ ಅವರು ಪತಿ, ಮಗಳು ಹಾಗೂ ಭವ್ಯಾ ಗೌಡ ಕುಟುಂಬದ ಜೊತೆ ಆಗಾಗ ದುಬಾರಿ ರೆಸಾರ್ಟ್, ಹೋಟೆಲ್, ವಿದೇಶಿ ಟ್ರಿಪ್‌ಗಳನ್ನು ಮಾಡುತ್ತಾರೆ. ಕಾವ್ಯಾ ಗೌಡ ಅವರ ವಿದೇಶಿ ಟ್ರಿಪ್‌ಗಳು ಅನೇಕರ ಕಣ್ಣು ಕುಕ್ಕಿದ್ದುಂಟು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ. ಅಂದಹಾಗೆ ಇವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 1.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಸಾಯಿಬಾಬಾ ಭಕ್ತೆ
ಕಾವ್ಯಾ ಗೌಡ ಅವರು ಸಾಯಿಬಾಬಾ ಭಕ್ತೆಯಾಗಿದ್ದು, ಯಾವಾಗಲೂ ಬಾಬಾ ಅವರನ್ನು ನಂಬುವುದುಂಟು, ಆರಾಧನೆ ಮಾಡುತ್ತಾರೆ, ಅಷ್ಟೇ ಅಲ್ಲದೆ ಹಬ್ಬ ಹರಿದಿನಗಳನ್ನು ಕೂಡ ಗ್ರ್ಯಾಂಡ್ ಆಗಿ ಆಚರಿಸುತ್ತಾರೆ.
ವಿಜಯಲಕ್ಷ್ಮೀ ದರ್ಶನ್ ಆಪ್ತೆ
ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮೀಗೂ, ಕಾವ್ಯಾ ಅವರಿಗೆ ಸ್ನೇಹವಿದೆ. ಈ ಸ್ನೇಹ ಹೇಗೆ ಶುರುವಾಯಿತು? ಹೇಗೆ ಇವರು ಪರಿಚಯಸ್ಥರು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಕಾವ್ಯಾ ಮನೆಯ ಕಾರ್ಯಕ್ರಮಗಳಿಗೆ ವಿಜಯಲಕ್ಷ್ಮೀ ಸದಾ ಹಾಜರಿ ಹಾಕುತ್ತಾರೆ.
ಆಭರಣ ಡಿಸೈನ್
2021ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಆಭರಣ ಡಿಸೈನ್ ಮಾಡುವ ಆಸಕ್ತಿ ಹೊಂದಿದ್ದ ಕಾವ್ಯಾ ಗೌಡ ಅವರು ಇದರಲ್ಲೇ ಮುಂದುವರೆಯೋದಾಗಿ ಹೇಳಿದ್ದರು. ಈಗ ಇವರು ಇದರ ಬಗ್ಗೆ ಗಮನ ಕೊಡುತ್ತಿದ್ದಾರಾ? ಇಲ್ಲವಾ ಎಂಬ ಬಗ್ಗೆ ಮಾಹಿತಿ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

