- Home
- Entertainment
- TV Talk
- BBK 12: ನಟಿ ಕಾವ್ಯಾಗೆ ಬಕೆಟ್ ಪೆಟ್ಟು ಕೊಟ್ಟೇಬಿಟ್ಟ ಅಶ್ವಿನಿ ಗೌಡ; ಜಗಳ ಬಿಡಿಸಲು ಹೋದ ಸ್ಪಂದನಾ ತಬ್ಬಿಬ್ಬು!
BBK 12: ನಟಿ ಕಾವ್ಯಾಗೆ ಬಕೆಟ್ ಪೆಟ್ಟು ಕೊಟ್ಟೇಬಿಟ್ಟ ಅಶ್ವಿನಿ ಗೌಡ; ಜಗಳ ಬಿಡಿಸಲು ಹೋದ ಸ್ಪಂದನಾ ತಬ್ಬಿಬ್ಬು!
ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ನಡುವೆ ಜವಾಬ್ದಾರಿ ವಿಚಾರವಾಗಿ ತೀವ್ರ ಜಗಳ ನಡೆದಿದೆ. ಈ ಗಲಾಟೆಯು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಅಶ್ವಿನಿ ಅವರು ಕಾವ್ಯಾ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎನ್ನುವಂತಹ ದೃಶ್ಯ ವೈರಲ್ ಆಗುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ ಅವರು ನಟಿ ಕಾವ್ಯಾ ಶೈವ ಅವರೊಂದಿಗೆ ಜೋರಾಗಿ ಗಲಾಟೆ ಮಾಡುತ್ತಾ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ದೃಶ್ಯ ವೈರಲ್ ಆಗಿದ್ದು, ಸಣ್ಣವರ ಮೇಲೆಯೇ ಇವರು ಕೂಗಾಡುವುದು ಎಂಬ ಅಭಿಪ್ರಾಯ ಕೇಳಿಬಂದಿದೆ. ಇನ್ನು ಅಶ್ವಿನಿ ಗೌಡ, ನಾಮಿನೇಟ್ ಆಗದೇ ಯಾರಿಗಾದರೂ ಹಲ್ಲೆ ಮಾಡಿ ಮಧ್ಯದಲ್ಲಿಯೇ ಮನೆಯೊಂದ ಹೊರಗೆ ಬರುವ ಲಕ್ಷಣ ಕಾಣುತ್ತಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 12ರ ಮನೆಯಲ್ಲಿ ಸ್ಪರ್ಧಿಗಳ ಪ್ರವೇಶದ ಬೆನ್ನಲ್ಲಿಯೇ ರಾಜಮಾತೆ ಎಂಬ ಬಿರುದು ಪಡೆದು ಮನೆಯ ಸದಸ್ಯರ ಮೇಲೆ ಅಧಿಕಾರ ಮಾಡಿದ ಅಶ್ವಿನಿ ಗೌಡ ಅವರು ಅದೇಕೋ ಅತಿರೇಕದಿಂದ ವರ್ತನೆ ತೋರುತ್ತಿದ್ದಾರೆ.
ಇಷ್ಟು ದಿನ ರಕ್ಷಿತಾ ಶೆಟ್ಟಿಗೆ ಕಾಡುತ್ತಿದ್ದ ಅಶ್ವಿನಿ ಗೌಡ, ಇದೀಗ ಮನೆಯ ಜವಾಬ್ದಾರಿ ವಿಚಾರದಲ್ಲಿ ಗಿಲ್ಲಿಯೊಂದಿಗೆ ಮಾತನಾಡುತ್ತಾ ನಟಿ ಕಾವ್ಯಾ ಶೈವ ಜೊತೆಗೆ ಫೈಟಿಂಗ್ ಮಾಡುತ್ತಿದ್ದಾರೆ. ಇನ್ನೇನು ಕೈ-ಕೈ ಮಿಲಾಯಿಸುವ ಹಂತಕ್ಕೆ ಇವರ ಜಗಳ ಅತಿರೇಕವಾಗಿದ್ದು, ಸ್ಪಂದನಾ ಇರದಿದ್ದರೆ ಕಾವ್ಯಾಗೆ ಹೊಡೆದೇ ಬಿಡುತ್ತಿದ್ದರು ಎಂಬುದಂತೂ ಸ್ಪಷ್ಟವಾಗುತ್ತಿದೆ.
ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ನಟಿ ಅಶ್ವಿನಿ ಗೌಡ ಅವರು ಮಾತನಾಡುತ್ತಾ, 'ಈಗ ನಾನು ಕೇಳುವುದು ಕೆಲಸಗಳು ಎಲ್ಲರಿಗೂ ಹಂಚಿಕೆ ಆಗಬೇಕು. ಇಲ್ಲಿ ಅಡುಗೆ ಮಾಡಿಬಿಟ್ಟು, ಗಿಲ್ಲಿ ಕೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿಸಿಬಿಟ್ಟರೆ ಹೇಗ ಆಗುತ್ತದೆ. ಎಲ್ಲರಿಗೂ ವಹಿಸಿದ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನಿಮಗೆ ಅಡುಗೆ ಮಾಡೋರು ಯಾರು ಇಲ್ಲ ಅಂತಾ ನಿಮಗೆ ಯಾರು ಹೇಳಿದ್ದು? ನಿಮಗೆ ನಾವೇನಾದರೂ ಅಡುಗೆ ಮಾಡುವುದಕ್ಕೆ ಹೇಳಿದ್ದೀವಾ? ಎಂದು ಗಿಲ್ಲಿ ನಟ ಪ್ರಶ್ನೆ ಮಾಡುತ್ತಾನೆ. ಆಗ ಅಶ್ವಿನಿ ಗೌಡ ಇಲ್ಲಿ ಯಾರೂ ಇಲ್ವಲ್ಲಪ್ಪ ಅಡುಗೆ ಮಾಡೋರು ಎಂದು ಹೇಳುತ್ತಾರೆ.
ಈ ಚರ್ಚೆಯ ನಡುವೆ ಬರುವ ನಟಿ ಕಾವ್ಯ ಅವರು, ಅದನ್ನು ನೀವು ಹೇಳಿದ್ರಲ್ಲ ಇವಾಗ ಎಂದು ಕೇಳುತ್ತಾರೆ. ಇದಕ್ಕೆ ಸಿಟ್ಟಿಗೆದ್ದ ನಟಿ ಅಶ್ವಿನಿ ಗೌಡ, ಕಾವ್ಯಾಗೆ ಬೆರಳು ತೋರಿಸಿ ನಿನ್ಯಾರು ಇದರ ಮಧ್ಯದಲ್ಲಿ ಮಾತನಾಡೋದಕ್ಕೆ ಎಂದು ಕಿಡಿಕಾರುತ್ತಾರೆ. ಆಗ ಕಾವ್ಯಾ ಕೂಡ ಬೇರೆಯವರ ವಿಷ್ಯಕ್ಕೆ ನೀವು ಬರಬೇಡಿ ಎಂದು ಟಾಂಗ್ ಕೊಡುತ್ತಾರೆ.
ಕಾವ್ಯಾಗೆ ನಾನು ಗಿಲ್ಲಿ ಜೊತೆಗೆ ಮಾತನಾಡುವಾಗ ನೀನ್ಯಾಕೆ ಮಧ್ಯದಲ್ಲಿ ಬಂದು ಮಾತನಾಡಿದೆ ಎಂದು ಅಶ್ವಿನಿ ಗೌಡ ಅವಾಜ್ ಹಾಕುತ್ತಾರೆ. ಆಗ ಇಬ್ಬರ ನಡುವಿನ ಜನಗಳ ತಾರಕಕ್ಕೇರುತ್ತದೆ. ನಿನ್ನ ವಿಷ್ಯಕ್ಕೆ ಬಂದಿಲ್ಲ ನಾನು ಎಂದು ಕಾವ್ಯ ಕೂಡ ಸಿಂಗುಲರ್ ಪದದಲ್ಲಿಯೇ ಬೆರಳು ತೋರಿಸಿ ಜೋರಾಗಿ ಮಾತನಾಡುತ್ತಾರೆ.
ಇದಾದ ನಂತರ ಮಲ್ಲಮ್ಮ ಅವರು ಮಧ್ಯಸ್ಥಿಕೆವಹಿಸಿ ಇಬ್ಬರನ್ನೂ ಸಮಾಧಾನ ಮಾಡಿ ಕಳುಹಿಸಿದ್ದಾರೆ. ಆಗ ಪುನಃ ಅಶ್ವಿನಿ ಗೌಡ ಅವರು ಕಾವ್ಯಾಗೆ ಏ... ಗೀ... ಎಲ್ಲ ಮತಾಡಬೇಡ ಎಂದು ಅವಾಜ್ ಹಾಕುತ್ತಾರೆ. ಇದಕ್ಕೆ ಮತ್ತೆ ಸಿಟ್ಟಿಗೆದ್ದ ಕಾವ್ಯಾ, ನೀವು ಏನು ಮಾತನಾಡಿದರೂ ಸರಿನಾ..? ಎಂದು ಕೇಳುತ್ತಾರೆ.
ಇದಕ್ಕೆ ಪುನಃ ಅಶ್ವಿನಿ ಗೌಡ ಅವರು, ನೀನು ನನ್ನತ್ರ ಏ.. ಗೀ.. ಅಂತಾ ಮಾತನಾಡಬೇಡ. ನೀನು ಗಿಲ್ಲಿಯ ಹತ್ತಿರ ಏನಾದ್ರೂ ಮಾತಾಡು. ಬೇಕಾದ್ರೆ ಗಿಲ್ಲಿಗೆ ಬಕೆಟ್ ಹಿಡಿ ಎಂದು ಹೇಳುತ್ತಾರೆ.
ಇದರಿಂದ ಮತ್ತಷ್ಟು ಕೆರಳಿದ ಕಾವ್ಯಾ ಶೈವ ಅವರು, 'ಯಾರು ಬಕೆಟ್ ಹಿಡಿದಿದ್ದು? ಎಂದು ಪ್ರಶ್ನೆ ಮಾಡುತ್ತಾರೆ. ಆಗ ತಮ್ಮ ತಪ್ಪಿನ ಅರಿವಾದ ಅಶ್ವಿನಿ ಗೌಡ, ತಮ್ಮ ಮಾತನ್ನು ಮರೆಸಲು ನನ್ನ ವಿಷ್ಯ ಮಾತಾಡೋಕೆ ನೀನ್ಯಾರು? ಏ... ಏ... ಏಯ್... ಎಂದು ಅವಾಜ್ ಹಾಕುತ್ತಾರೆ. ಆಗ ಧ್ರುವಂತ್ ಮತ್ತು ಸ್ಪಂದನಾ ಬಂದು ಇಬ್ಬರ ಜಗಳ ಬಿಡಿಸುವ ಪ್ರಯತ್ನ ಮಾಡುತ್ತಾರೆ.