ಸದಾ ಸೀರೆಯಲ್ಲೆ ಕಾಣಿಸೋ ‘ಪುಟ್ಟಕ್ಕನ ಮಕ್ಕಳು’ ಖ್ಯಾತಿಯ ಸಹನಾ ನಿಜ ಜೀವನದಲ್ಲಿ ಹೇಗಿದ್ದಾರೆ?
ಪುಟ್ಟಕ್ಕನ ಮಕ್ಕಳು ಸೀರಿಯಲ್ ಖ್ಯಾತಿಯ ಸಹನಾ ಅವರನ್ನು ನೋಡಿದಾಗ, ವಾವ್ ಎಂತಹಾ ಮಗಳು ಇವಳು, ಇವರಂತಹ ಒಬ್ಬ ಮಗಳು ನಮಗಿದ್ರೆ ಚೆನ್ನಾಗಿರುತ್ತೆ, ಅಥವಾ ಇವರಂಥ ಹುಡುಗಿ ಹೆಂಡ್ತಿಯಾಗಿ ಬಂದ್ರೆ ಚೆನ್ನಾಗಿರುತ್ತೆ ಅಂತ ಹೆಚ್ಚಿನ ಜನ ಅಂದುಕೊಂಡಿರ್ತಾರೆ, ಅಂತಹ ಮುಗ್ಧ ಸ್ವಭಾವದ ಹುಡುಗಿ ಸಹನಾ. ಆದ್ರೆ ನಿಜ ಜೀವನದಲ್ಲೂ ಇವರು ಹಾಗೆಯೇ ಇದ್ದಾರೆಯೆ?
ಕಿರುತೆರೆಯ ಟಿಆರ್ ಪಿ ರೇಟಿಂಗ್ ನೋಡಿದ್ರೆ ಹಲವಾರು ಸಮಯದಿಂದ ನಂಬರ್ 1 ಸ್ಥಾನವನ್ನು ಗಟ್ಟಿಪಡಿಸಿಕೊಂಡಿರೋ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu). ಪುಟ್ಟಕ್ಕ ಮತ್ತು ಆಕೆಯ ಮೂರು ಜನ ಹೆಣ್ಣು ಮಕ್ಕಳ ಕತೆ ಇದು. ಪುಟ್ಟಕ್ಕನಾಗಿ ಉಮಾಶ್ರೀಯವರ ಪಾತ್ರದ ಬಗ್ಗೆ ಹೇಳುವಂತೆಯೇ ಇಲ್ಲ. ಅವರೊಬ್ಬ ಪ್ರಬುದ್ಧ ನಟಿ. ಇನ್ನೂ ಅವರ ಮೂವರು ಮಕ್ಕಳ ನಟನೆಯೂ ಅದ್ಭುತ ಎಂದು ಸೀರಿಯಲ್ ನೋಡುಗರು ಹೇಳುತ್ತಿದ್ದಾರೆ.
ಧಾರಾವಾಹಿಯಲ್ಲಿ ಯಾವಾಗಲೂ ಸೀರೆಯುಟ್ಟು, ಪಕ್ಕಾ ಗ್ರಾಮೀಣ ಹೆಣ್ಣಿನಂತೆ, ಜೋರಾಗಿ ಮಾತನಾಡಿದರೆ ಬೆಚ್ಚಿ ಬೀಳುವ ಹುಡುಗಿ ಅಂದ್ರೆ ಪುಟ್ಟಕ್ಕನ ಹಿರಿಯ ಮಗಳು ಸಹನಾ. ಮುಗ್ದತೆಯ ಪ್ರತಿಬಿಂಬದಂತಿರುವ ಸಹನಾ, ಈಗ ಲವ್ ಮಾಡಿ, ಮುರಳಿ ಮೇಷ್ಟ್ರ ಜೊತೆ ಮದ್ವೆನೂ ಆಗಿದ್ದಾರೆ. ಆದ್ರೆ ಸಹಾನಾ ಅವರು ನಿಜ ಜೀವನ ಹೇಗಿದೆ ನಿಮಗೆ ಗೊತ್ತಾ?
ಸಹನಾ ಅವರ ನಿಜವಾದ ಹೆಸರು ಅಕ್ಷರಾ (Akshara). ಆದರೆ ನಿಜ ಜೀವನದಲ್ಲಿ ಸಹನಾ ಪಾತ್ರದ ಸರಿ ಉಲ್ಟಾ ಇರುವಂತ ಕ್ಯಾರೆಕ್ಟರ್ ಅಕ್ಷರಾ ಅವರದ್ದಂತೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಅಕ್ಷರಾ, ಆವಾಗವಾಗ ಫೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.
ಧಾರಾವಾಹಿಯಲ್ಲಿ ಯಾವಾಗ್ಲೂ ಸೀರೆಯುಟ್ಟು ಮಿಂಚುವ ಸಹನಾ ರಿಯಲ್ ಲೈಫ್ ನಲ್ಲಿ (real life) ಮಾಡರ್ನ್ ಹುಡುಗಿ ಅಂದ್ರೆ ತಪ್ಪಾಗಲ್ಲ. ಅವರು ಹಾಕಿರೋ ಒಂದೊಂದು ಫೋಟೋಗಳಲ್ಲೂ ಅವರು. ಸುರಸುಂದರಿಯಂತೆ ಕಾಣುತ್ತಿದ್ದಾರೆ. ಅಕ್ಷರಾ ಅವರ ಫೋಟೋಗಳನ್ನು ನೋಡುತ್ತಾ ಇದ್ದರೆ, ಒಂದು ಕ್ಷಣ ಸಹನಾ ಅವರೇನಾ ಎನ್ನುವ ಅನುಮಾನ ಮೂಡದೆ ಇರುವುದಿಲ್ಲ
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರೋ ಅಕ್ಷರಾ, ಡಿಗ್ರಿ ಓದಿ ಮುಗಿಸಿದ್ದಾರೆ. ಜೊತೆಗೆ ಸೀರಿಯಲ್. ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (social media) ಸದಾ ಆಕ್ಟೀವ್ ಆಗಿರುವ ಅಕ್ಷರಾ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ತಮ್ಮ ಫಾಲೋವರ್ಸ್ ಜೊತೆಗೆ ಸದಾ ಸಂಪರ್ಕದಲ್ಲಿರುತ್ತಾರೆ. ಸುಮಾರು 26 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.
ಪುಟ್ಟಕ್ಕನ ಮಕ್ಕಳು ಸೆಟ್ನಲ್ಲಿ ಯಾವ ರೀತಿ ಎಂಜಾಯ್ ಮಾಡ್ತಾರೆ ಅನ್ನೋದನ್ನೆಲ್ಲಾ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ತಿಳಿಸುತ್ತಿರೋ ಈ ನಟಿ, ಟೀಂ ಜೊತೆಗೆ ಸದಾ ರೀಲ್ಸ್ ಮಾಡುತ್ತಾ ಅದನ್ನೂ ತಮ್ಮ ಖಾತೆಯಲ್ಲಿ ಶೇರ್ ಮಾಡಿ ಖುಷಿ ಹಂಚಿಕೊಳ್ಳುತ್ತಾರೆ. ಜೊತೆಗೆ ಟ್ರೆಡಿಶನಲ್ ವೇರ್ ನಲ್ಲಿ (traditional wear)ಸಾಕಷ್ಟು ಫೋಟೋ ಶೂಟ್ ಕೂಡ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರೋ ಇವರು, ಅವರನ್ನು ನೋಡಿಯೇ ತಾನು ಇವರಂತೆ ನಟನಾ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕೆಂದು ಬಯಸಿದರಂತೆ. ಇವರು ಈ ಮೊದಲು ರಕ್ಷಾ ಬಂಧನ ಸೀರಿಯಲ್ ನಲ್ಲಿ ನಟಿಸಿದ್ದರು, ಬಳಿಕ ಅಮ್ನೋರ್ ಸೀರಿಯಲ್ ನಲ್ಲಿ ದುರ್ಗಾ ಪಾತ್ರದಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಮನರಂಜನಾ ಕ್ಷೇತ್ರದಲ್ಲಿ ಮತ್ತಷ್ಟು ಮಿಂಚಲಿ ಎಂದು ನಾವು ವಿಶ್ ಮಾಡೋಣ.