- Home
- Entertainment
- TV Talk
- ಹೊಸ ಜೀವನಕ್ಕೆ ಕಾಲಿಟ್ಟ Puttakkana Makkalu Serial ಮುಂಗುಸಿ! ಗಜೇಂದ್ರ ಮರಸಣಿಗೆ ಫೋಟೋಗಳಿವು!
ಹೊಸ ಜೀವನಕ್ಕೆ ಕಾಲಿಟ್ಟ Puttakkana Makkalu Serial ಮುಂಗುಸಿ! ಗಜೇಂದ್ರ ಮರಸಣಿಗೆ ಫೋಟೋಗಳಿವು!
ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಮುಂಗುಸಿ ಪಾತ್ರದಲ್ಲಿ ಗಜೇಂದ್ರ ಅವರು ನಟಿಸುತ್ತಿದ್ದಾರೆ. ಕಂಠಿ ಸ್ನೇಹಿತನ ಪಾತ್ರದಲ್ಲಿ ಗಜೇಂದ್ರ ನಟಿಸುತ್ತಿದ್ದಾರೆ.

ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಗಜೇಂದ್ರ ಅವರು ನಾಟಕಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈಗ ಅವರು ರಿಯಲ್ ಲೈಫ್‌ನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟ ಗಜೇಂದ್ರ ಅವರು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದು, ಸಾಕಷ್ಟು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಗಜೇಂದ್ರ ಅವರು ಅಣ್ಣತಂಗಿ, ಪಾರ್ವತಿ ಪರಮೇಶ್ವರ, ಪರಿಣಿತ, ಅನುಬಂಧ ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಆ ಬಳಿಕ ಕ್ರೇಜಿಲೋಕ ಸಿನಿಮಾ ಮಾಡಿದರು.
ಇಲ್ಲಿಯವರೆಗೆ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಗಜೇಂದ್ರ ಅವರು ಗಟ್ಟಿಪಾತ್ರದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಅವರು ಪಾಸಿಟಿವ್, ನೆಗೆಟಿವ್ ಪಾತ್ರಗಳಲ್ಲಿ ನಟಿಸಿದ್ದಾರೆ.
ನಟ ಗಜೇಂದ್ರ ಮರಸಣಿಗೆ ಅವರು ಇತ್ತೀಚೆಗೆ ಮದುವೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಶ್ವೇತಾ ಎನ್ನುವವರ ಜೊತೆ ಗಜೇಂದ್ರ ಮದುವೆ ಆಗಿದೆ. ತುಂಬ ಖಾಸಗಿಯಾಗಿ ಈ ಮದುವೆ ನಡೆದಿದೆ. ಶ್ವೇತಾ ಯಾರು? ಏನು? ಹೇಗೆ ಪರಿಚಯ ಆಯ್ತು ಎಂಬ ಬಗ್ಗೆ ಗಜೇಂದ್ರ ಅವರು ಹೇಳಬೇಕಿದೆ.
ನಟ ಗಜೇಂದ್ರ ಅವರು ಲವ್ ಮ್ಯಾರೇಜ್ ಆಗಿದ್ದಾರಾ? ಅರೇಂಜ್ ಮ್ಯಾರೇಜ್ ಆಗಿದ್ದಾರಾ ಎಂಬ ಬಗ್ಗೆ ಮಾಹಿತಿ ಇಲ್ಲ. ಕಳಸದಲ್ಲಿ ಅವರ ಮದುವೆ ನಡೆದಿರುವಂತಿದೆ.