- Home
- Entertainment
- TV Talk
- ಪ್ರಿಯಾಂಕ - ಉಪೇಂದ್ರ ಮನೆಯಲ್ಲಿ ಅದ್ಧೂರಿಯಾಗಿ ನಡೆದ ಗಣೇಶ ಹಬ್ಬ… ಸಂಭ್ರಮ ಹೇಗಿತ್ತು ನೋಡಿ
ಪ್ರಿಯಾಂಕ - ಉಪೇಂದ್ರ ಮನೆಯಲ್ಲಿ ಅದ್ಧೂರಿಯಾಗಿ ನಡೆದ ಗಣೇಶ ಹಬ್ಬ… ಸಂಭ್ರಮ ಹೇಗಿತ್ತು ನೋಡಿ
ಕನ್ನಡದ ಜನಪ್ರಿಯ ಸೆಲೆಬ್ರಿಟಿ ಜೋಡಿ ಪ್ರಿಯಾಂಕಾ ಮತ್ತು ಉಪೇಂದ್ರ ಮನೆಯಲ್ಲಿ ಅದ್ಧೂರಿಯಾಗಿ ಗಣೇಶ ಹಬ್ಬ ನಡೆದಿತ್ತು, ಸಂಭಮದ ಕ್ಷಣಗಳನ್ನು ಪ್ರಿಯಾಂಕಾ ಹಂಚಿಕೊಂಡಿದ್ದಾರೆ.

ಚಂದನವನದ ಮುದ್ದಾದ ಸ್ಟಾರ್ ಕಪಲ್ ಗಳಾದ ಉಪೇಂದ್ರ ಮತ್ತು ಪ್ರಿಯಾಂಕಾ ಜೋಡಿ, ತಮ್ಮ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಅದ್ಧೂರಿಯಾಗಿಯೇ ಆಚರಿಸಿಕೊಂಡು ಬಂದಿದ್ದಾರೆ. ಗಣೇಶ ಹಬ್ಬವನ್ನು ಸಹ ತುಂಬಾನೆ ಸಂಭ್ರಮದಿಂದ ಆಚರಿಸಿದ್ದು, ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಪ್ರಿಯಾಂಕಾ ಉಪೇಂದ್ರ ತಮ್ಮ ಮನೆಯಲ್ಲಿ ಈ ಬಾರಿಯೂ ಅದ್ಧೂರಿಯಾಗಿ ಗೌರಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಜೊತೆಗೆ ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಪುಟ್ಟದಾದ ಗಣೇಶ ಹಾಗೂ ಗೌರಿಯ ವಿಗ್ರಹವನ್ನು ಸ್ಥಾಪನೆ ಮಾಡಿ ಬಲು ಸಭ್ರಮದಿಂದ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ತಮ್ಮ ಭವ್ಯವಾದ ಬಂಗಲೆಯಲ್ಲಿ ವಿಗ್ರಹ ಪ್ರತಿಷ್ಟಾಪನೆ ಮಾಡಿದ್ದು ಫೋಟೊಗಳು ಸಹ ಸುಂದರವಾಗಿವೆ.
ಹಬ್ಬದ ದಿನ ಈ ಸೂಪರ್ ಸ್ಟಾರ್ ಜೋಡಿಗಳು ತಮ್ಮ ಮನೆಯಲ್ಲಿ ಗಣಹೋಮವನ್ನು ಸಹ ಮಾಡಿಸಿದ್ದು, ತಾವಿಬ್ಬರೇ ಮುಂದೆ ಕುಳಿತು ಹಬ್ಬವನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ತಮ್ಮ ಕುಟುಂಬದ ಸದಸ್ಯರನ್ನು ಸಹ ಹಬ್ಬಕ್ಕೆ ಆಹ್ವಾನಿಸಿದ್ದಾರೆ.
ಪ್ರಿಯಾಂಕಾ ಹಾಗೂ ಉಪೇಂದ್ರ ಇಬ್ಬರೂ ಕೂಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಿಯಾಂಕಾ ತಿಮರೋ2 ಸಿನಿಮಾ ಇತ್ತೀಚೆಗೆ ತೆರೆ ಕಂಡಿದೆ. ಅಲ್ಲದೇ ಇವರು ಕ್ಯಾಪ್ಚರ್, ಡಿಟೆಕ್ಟಿವ್ ತೀಕ್ಷ್ಣ ಮತ್ತು ವೈರಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನು ಉಪೇಂದ್ರ ಅವರು ಇತ್ತೀಚೆಗೆ ಕೂಲಿ ಸಿನಿಮಾದಲ್ಲಿ ರಜನಿಕಾಂತ್ ಜೊತೆ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಲ್ಲದೇ ಅವರು ಅರ್ಜುನ್ ಜನ್ಯ ಅವರ 45 ಸಿನಿಮಾದಲ್ಲಿ ಶಿವರಾಜಕುಮಾರ್ ಹಾಗೂ ರಾಜ್ ಬಿ ಶೆಟ್ಟಿ ಜೊತೆ ನಟಿಸುತ್ತಿದ್ದಾರೆ.