- Home
- Entertainment
- TV Talk
- ಲಕ್ಷ್ಮೀ ಬಾರಮ್ಮ 3 ಆಗ್ತಿದ್ಯಾ ‘ಪ್ರೇಮ ಕಾವ್ಯ’.... ಅದೇ ಬೆಟ್ಟ, ಅದೇ ದೆವ್ವದ ಕಥೆ ಇಲ್ಲೂ ಶುರು
ಲಕ್ಷ್ಮೀ ಬಾರಮ್ಮ 3 ಆಗ್ತಿದ್ಯಾ ‘ಪ್ರೇಮ ಕಾವ್ಯ’.... ಅದೇ ಬೆಟ್ಟ, ಅದೇ ದೆವ್ವದ ಕಥೆ ಇಲ್ಲೂ ಶುರು
Prema Kavya Serial: ಈಗಂತೂ ವೀಕ್ಷಕರು ಕಥೆಯಲ್ಲಿ ಚೇಂಜ್ ಕೇಳುತ್ತಲೇ ಇರುತ್ತಾರೆ. ಜೊತೆಗೆ ಧಾರಾವಾಹಿಗಳಲ್ಲಿ ಅದೇ ಫ್ಯಾಮಿಲಿ ಡ್ರಾಮಾ, ಎಲ್ಲಾ ವಾಹಿನಿಗಳಲ್ಲೂ ಒಂದೇ ಕಥೆ ಎಂದು ಹೇಳುತ್ತಿದ್ದಾರೆ. ವೀಕ್ಷಕರು ಹೇಳುವಂತೆ ಇದೀಗ ಪ್ರೇಮ ಕಾವ್ಯಾ ಧಾರಾವಾಹಿಯಲ್ಲಿ ಲಕ್ಷ್ಮೀ ಬಾರಮ್ಮ ಕಥೆ ತಂದಂತಿದೆ.

ಪ್ರೇಮ ಕಾವ್ಯಾ
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಅಕ್ಕ ತಂಗಿಯರ ಕಥೆಯನ್ನು ಒಳಗೊಂಡಿರುವ ಕಥೆ ‘ಪ್ರೇಮ ಕಾವ್ಯ’. ಆದರೆ ವೀಕ್ಷರು ಎಲ್ಲಾ ಧಾರಾವಾಹಿಯಲ್ಲಿ ಒಂದೇ ಕಥೆ ಎನ್ನುತ್ತಿರುವಾಗ ಈ ಧಾರಾವಾಹಿಯಲ್ಲಿ ಮತ್ತೆ ಲಕ್ಷ್ಮೀ ಬಾರಮ್ಮ ಕಥೆಯನ್ನು ತಂದ್ರಾ ಸೀರಿಯಲ್ ತಂಡವರು.
ಏನಾಗ್ತಿದೆ ಧಾರಾವಾಹಿಯಲ್ಲಿ?
ರಾಮ್ ನನ್ನು ಪ್ರೀತಿಸುತ್ತಿರುವ ಸ್ನೇಹಾ, ಹೇಗಾದರು ಮಾಡಿ ಅವನನ್ನು ಪಡೆದೇ ತೀರಬೇಕು ಎನ್ನುವ ಕಾರಣದಿಂದ, ರಾಮ್ ಹಾಗು ಪ್ರೇಮ ಪ್ರವಾಸದಲ್ಲಿದ್ದಾಗ, ಪ್ರೇಮಾಳನ್ನು ಬೆಟ್ಟದಿಂದ ತಳ್ಳಿ ಕೊಲೆ ಮಾಡುತ್ತಾಳೆ ಸ್ನೇಹ. ಈ ಕಥೆ ‘ಲಕ್ಷ್ಮಿ ಬಾರಮ್ಮ’ದ ಅದೇ ಕಥೆಯನ್ನು ನೆನಪಿಸುತ್ತಿದೆ.
ಅಷ್ಟಕ್ಕೂ ಲಕ್ಷ್ಮೀ ಬಾರಮ್ಮದಲ್ಲಿ ಆಗಿರೋದು ಏನು?
ಲಕ್ಷ್ಮಿ ಬಾರಮ್ಮ ಧಾರವಾಹಿಯನ್ನು ಸಹ ಕಾವೇರಿ ಕೀರ್ತಿಯನ್ನು ಬೆಟ್ಟದಿಂದ ತಳ್ಳಿ ಕೊಲೆ ಮಾಡಿದ್ದಳು. ನಂತರ ಕೀರ್ತಿ ದೆವ್ವದಂತೆ ಬಂದು ವಿವಿಧ ರೀತಿಯಲ್ಲಿ ಕಾವೇರಿಗೆ ತೊಂದರೆಯನ್ನು ನೀಡಿದ್ದರು. ಈಗ ಪ್ರೇಮ ಕಾವ್ಯದಲ್ಲಿ ಅದೇ ಆಗುತ್ತಿದೆ. ಬೆಟ್ಟದಿಂದ ಬಿದ್ದಿರುವ ಪ್ರೇಮ ಇದೀಗ ದೆವ್ವದಂತೆ ಬಂದು ಸ್ನೇಹಾಗೆ ಕಾಣಿಸಿಕೊಂಡಿದ್ದಾಳೆ. ಅಂದರೆ ನಿಜವಾಗಿಯೂ ಪ್ರೇಮ ಸಾವನಪ್ಪಿದ್ದಾಳೆಯೇ ಅಥವಾ ಇದು ಕೇವಲ ಸ್ನೇಹ ಭ್ರಮೆಯೇ ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ.
ಪ್ರೇಮಾ ಪಾತ್ರ ಅಂತ್ಯವಾಗುವುದೇ?
ಇನ್ನೂ ಕೆಲವರು ಹೇಳುವಂತೆ ಬೆಟ್ಟದಿಂದ ಬಿದ್ದಿರುವುದರಿಂದ, ಪ್ರೇಮ ಮುಖವನ್ನು ಬದಲಾಯಿಸಿ ಬೇರೆ ನಟಿಯನ್ನು ಸೀರಿಯಲ್ ಗೆ ತರುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ. ಹಾಗಾದರೆ ಇನ್ನು ಮುಂದೆ ಪ್ರಿಯ ಆಚಾರ್ ಧಾರಾವಾಹಿಯಲ್ಲಿ ನಟಿಸುತ್ತಿಲ್ಲವೇ? ಅವರ ಪಾತ್ರಕ್ಕೆ ಬೇರೆ ನಟಿಯ ಎಂಟ್ರಿಯಾಗಿದೆಯೇ ಕಾದು ನೋಡಬೇಕು.
ಧಾರಾವಾಹಿ ಕಥೆ ಏನು?
ಹೆಚ್ಚು ವಿದ್ಯಾವಂತೆ ಅಲ್ಲದ ಪ್ರೇಮಾ, ತನ್ನ ಬಾಲ್ಯದ ಗೆಳೆಯ ವೈದ್ಯನಾಗಿರುವ ರಾಮ್ ನನ್ನು ಪ್ರೀತಿಸುತ್ತಾಳೆ. ಅವನನ್ನೆ ಮದುವೆಯಾಗಲು ನಿರ್ಧರಿಸಿ, ಎಲ್ಲರೆದುರು ರಾಮ್ ತನಗೆ ತಾಳಿ ಕಟ್ಟಿದ್ದಾನೆ ಎನ್ನುತ್ತಾಳೆ. ನಂತರ ಅವರ ಜೀವನದಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ಅವರ ಕಥೆ. ಇನ್ನು ತಂಗಿ ಕಾವ್ಯ, ಸೈಂಟಿಸ್ಟ್ ಆಗುವ ಕನಸು ಕಂಡಿರುತ್ತಾಳೆ. ಆದರೆ ಅಕ್ಕ ಮಾಡಿದ ತಪ್ಪಿನಿಂದಾಗಿ ವಿದ್ಯೆ ಇಲ್ಲದ ಮಾದೇವನನ್ನು ಮದುವೆಯಾಗುವ ಪರಿಸ್ಥಿತಿ ಬರುತ್ತದೆ. ಇಬ್ಬರು ಜೊತೆಯಾಗಿ ಬದುಕುತ್ತಾರೋ, ಕಾವ್ಯಾಗೆ ಮಾದೇವನ ಮೇಲೆ ಪ್ರೀತಿ ಆಗುತ್ತೋ ಕಾದು ನೋಡಬೇಕು.
ಯಾರೆಲ್ಲಾ ನಟಿಸುತ್ತಿದ್ದಾರೆ?
ಪ್ರೇಮಾ ಕಾವ್ಯ ಧಾರಾವಾಹಿಯಲ್ಲಿ ಪ್ರೇಮಾ ಆಗಿ ಪ್ರಿಯಾ ಆಚಾರ್, ಕಾವ್ಯಾ ಪಾತ್ರದಲ್ಲಿ ವೈಷ್ಣವಿ ಕೌಂಡಿನ್ಯ, ರಾಮ್ ಆಗಿ ವಿಕಾಸ್ ಹಾಗೂ ಮಾದೇವನಾಗಿ ರಘು, ಅಮ್ಮನಾಗಿ ಸ್ವಾತಿ ಸೇರಿ ಹಲವಾರು ನಟ-ನಟಿಯರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

