ಅಂಗಡಿ ಬಿಟ್ಟು ಆನ್‌ಲೈನ್‌ಗೆ ಬಂದ ಪವಿತ್ರಾ ಗೌಡ, ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಬ್ಯೂಟಿ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಪವಿತ್ರಾ ಗೌಡ ಅವರು ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಐಷಾರಾಮಿ ಉಡುಪುಗಳು ಮತ್ತು ವಧುವಿನ ಲೆಹೆಂಗಾಗಳನ್ನು ಒಳಗೊಂಡ ಈ ಸ್ಟುಡಿಯೋದ ಉಡುಪುಗಳನ್ನು ಈಗ ಆನ್‌ಲೈನ್ ಮೂಲಕ ಖರೀದಿಸಬಹುದು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಹಾಗೂ ನಟ ದರ್ಶನ್ ತೂಗುದೀಪ ಗೆಳತಿ ಪವಿತ್ರಾ ಗೌಡ ಹೊಸ ಅಪ್‌ಡೇಟ್ ನೀಡಿದ್ದಾರೆ.
ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅವರು ಸಖತ್ ಆಕ್ಟೀವ್ ಆಗಿದ್ದಾರೆ. ಹೊಸ ಹೊಸ ಅಪ್‌ಡೇಟ್‌ಗಳನ್ನು ನೀಡುತ್ತಿದ್ದಾರೆ.
ಇನ್ಸ್‌ಟಾಗ್ರಾಮ್‌ನಲ್ಲಿ ವಿರಹದ ಪೋಸ್ಟ್‌ಗಳು, ಭಗವದ್ಗೀತೆಯ ಸಾಲುಗಳು, ರಾಘವೇಂದ್ರ ಸ್ವಾಮಿಯವರ ಕುರಿತಾದ ಪೋಸ್ಟ್‌ಗಳನ್ನು ಪವಿತ್ರಾ ಗೌಡ ಹಂಚಿಕೊಳ್ಳುತ್ತಿದ್ದರು.
ಕೊಲೆ ಕೇಸ್ ಬಳಿಕ ಅಂದಾಜು 6 ತಿಂಗಳು ಪರಪ್ಪನ ಅಗ್ರಹಾರದಲ್ಲಿ ಉಳಿದುಕೊಂಡ ಬಳಿಕ ದೇವರ ಮೇಲಿನ ಪ್ರೀತಿ ಹೆಚ್ಚಾಗಿದೆ ಎನ್ನುವ ಕಾಮೆಂಟ್‌ಗಳೂ ಇವರ ಪೋಸ್ಟ್‌ಗೆ ಬರುತ್ತಿದ್ದವು.
ಹೀಗಿರುವಾಗ ಪವಿತ್ರಾ ಗೌಡ ತಾವು ಸ್ಥಾಪಿಸಿದ್ದ ರೆಡ್ ಕಾರ್ಪೆಟ್ ಸ್ಟುಡಿಯೋ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಐಷಾರಾಮಿ ಉಡುಪುಗಳು, ವಧುವಿನ ಲೆಹೆಂಗಾಗಳು, ಇಂಡೋ-ವೆಸ್ಟರ್ನ್ ಡ್ರೆಸ್ ಸ್ಟುಡಿಯೋವನ್ನು ಇವರು ಸ್ಥಾಪನೆ ಮಾಡಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಇರುವ ಈ ಸ್ಟುಡಿಯೋ ಬಗ್ಗೆಯೂ ನಿರಂತರ ಅಪ್‌ಡೇಟ್ ಅನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇಲ್ಲಿಯವರೆಗೂ ಆಫ್‌ಲೈನ್‌ನಲ್ಲಿ ಮಾತ್ರವೇ ಲಭ್ಯವಿದ್ದ ರೆಡ್ ಕಾರ್ಪೆಟ್ ಸ್ಟುಡಿಯೋ ಈಗ ಆನ್‌ಲೈನ್‌ನಲ್ಲೂ ಲಭ್ಯವಿದೆ ಎಂದು ಪವಿತ್ರಾ ಗೌಡ ಹೇಳಿದ್ದಾರೆ.
ಅಂದರೆ, ಇಲ್ಲಿಯವರೆಗೂ ರೆಡ್ ಕಾರ್ಪೆಟ್ ಸ್ಟುಡಿಯೋದ ಡ್ರೆಸ್‌ಗಳನ್ನು ಅವರ ಶಾಪ್‌ಗೆ ಹೋಗಿ ಖರೀದಿ ಮಾಡಬೇಕಿತ್ತು. ಈಗ ಅಪ್ಲಿಕೇಶನ್‌ಅನ್ನು ರಿಲೀಸ್ ಮಾಡಿದ್ದು, ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ರೂ ಮನೆಗೆ ಡೆಲಿವರಿ ಸಿಗಲಿದೆ.
ಈ ಬಗ್ಗೆ ಬರೆದುಕೊಂಡಿರುವ ಪವಿತ್ರಾ ಗೌಡ, 'REDCARPET Studio777 ಶೀಘ್ರದಲ್ಲೇ ಆನ್‌ಲೈನ್ ಶಾಪಿಂಗ್ ಅನ್ನು ಪ್ರಾರಂಭಿಸುತ್ತಿದೆ ಎಂದು ಘೋಷಿಸಲು ನಾವು ಉತ್ಸುಕರಾಗಿದ್ದೇವೆ! ಪ್ರಕ್ರಿಯೆಯು ನಡೆಯುತ್ತಿದೆ ಅಪ್‌ಡೇಟ್‌ಗಳಿಗೆ ಟ್ಯೂನ್ ಆಗಿರಿ ಮತ್ತು ನಿಮ್ಮ ಬೆರಳ ತುದಿಯಲ್ಲಿ ಐಷಾರಾಮಿ ಫ್ಯಾಷನ್ ಅನುಭವಿಸಲು ಸಿದ್ಧರಾಗಿ' ಎಂದು ಬರೆದಿದ್ದಾರೆ.
ಆಂಡ್ರಾಯ್ಡ್ ಮತ್ತು ಐಓಎಸ್ ಅಪ್ಲಿಕೇಶನ್‌ಗಳು ಬಿಡುಗಡೆಗೆ ಸಿದ್ಧವಾಗಿದೆ ಎಂದು ಮಾಹಿತಿ ನೀಡಿದ್ದು, ಯಾವಾಗ ರಿಲೀಸ್ ಆಗಲಿದೆ ಅನ್ನೋ ಮಾಹಿತಿ ನೀಡಿಲ್ಲ.
ಡೆನಿಮ್ ಜೀನ್ಸ್, ಬ್ಲ್ಯಾಕ್ ಟಾಪ್ ಹಾಗೂ ಡೆನಿಮ್ ಜಾಕೆಟ್ ಧರಿಸಿ ಅವರ ಹೊಸ ಫೋಟೋಶೂಟ್‌ನೊಂದಿಗೆ ಈ ವಿಚಾರವನ್ನು ಪವಿತ್ರಾ ಗೌಡ ತಿಳಿಸಿದ್ದಾರೆ.
ಎಂದಿನಂತೆ ಅವರ ಹೊಸ ಹೆಜ್ಜೆಗೆ ಶುಭವಾಗಲಿ ಎಂದು ಹಲವರು ಕಾಮೆಂಟ್ ಮಾಡಿದ್ದರೆ, ಹೆಚ್ಚಿನವರು 'ಎಷ್ಟೇ ಆದ್ರೂ ನಮ್ ಅತ್ಗೆ ಅಲ್ವಾ..' ಎಂದು ದರ್ಶನ್‌ನನ್ನು ನೆನಪಿಸಿಕೊಂಡಿದ್ದಾರೆ.
ಈಗಲಾದ್ರೂ ಬಾಸ್ ಹೆಸರು ಹೇಳೋದನ್ನು ಬಿಡಿ. ಈಗ ನೆಮ್ಮದಿಯಾಗಿ ಇದ್ದಾರೆ. ಮೊದಲು ಡೆವಿಲ್ ಮೂವಿ ಬಗ್ಗೆ ಗಮನ ಕೊಡಿ. ಇದು ಎಲ್ಲಾ ಡಿಬಾಸ್ ಅಭಿಮಾನಿ ಗಳಿಗೆ ನನ್ನ ಕೋರಿಕೆ ಎಂದು ದರ್ಶನ್ ಅಭಿಮಾನಿಯೊಬ್ಬ ಪವಿತ್ರಾ ಗೌಡ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.