- Home
- Entertainment
- TV Talk
- Niranjan Deshpandeಯಂತೆ ರಿಯಾಲಿಟಿ ಶೋನಲ್ಲಿಯೇ ಮದುವೆ ಆಗಲಿರೋ No 1 ಸೀರಿಯಲ್ ನಟಿ; ಯಾರದು?
Niranjan Deshpandeಯಂತೆ ರಿಯಾಲಿಟಿ ಶೋನಲ್ಲಿಯೇ ಮದುವೆ ಆಗಲಿರೋ No 1 ಸೀರಿಯಲ್ ನಟಿ; ಯಾರದು?
ಕೆಲವೇ ದಿನಗಳ ಹಿಂದೆ ನಿರಂಜನ್ ದೇಶಪಾಂಡೆ-ಯಶಸ್ವಿನಿ ಅವರು ‘ಮಜಾ ಭಾರತ’ ರಿಯಾಲಿಟಿ ಶೋನಲ್ಲಿ ಮದುವೆ ಆಗಿದ್ದರು. ಈಗ ಇನ್ನೋರ್ವ ನಟಿ ಕೂಡ ಕಪಲ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು, ಈಗ ಮದುವೆ ಆಗಲು ರೆಡಿ ಆಗಿದ್ದಾರೆ.

‘ಬಾಲಿಕಾ ವಧು’ ನಟಿ
‘ಬಾಲಿಕಾ ವಧು’ ಧಾರಾವಾಹಿ ನಟಿ ಅವಿಕಾ ಗೋರ್ ಕೂಡ ಮದುವೆ ಆಗಲು ರೆಡಿಯಾಗಿದ್ದಾರೆ. ‘ಬಾಲಿಕಾ ವಧು’ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಈ ಸೀರಿಯಲ್ ಕನ್ನಡದಲ್ಲಿ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಪ್ರಸಾರ ಆಗಿತ್ತು. ಈ ‘ಬಾಲಿಕಾ ವಧು’ ಧಾರಾವಾಹಿ ನಟಿ ಮದುವೆ ಆಗಿದ್ದಾರೆ.
'ಪತಿ ಪತ್ನಿ ಔರ್ ಪಂಗಾ' ರಿಯಾಲಿಟಿ ಶೋನಲ್ಲಿ ಮದುವೆ
'ಪತಿ ಪತ್ನಿ ಔರ್ ಪಂಗಾ' ರಿಯಾಲಿಟಿ ಶೋನಲ್ಲಿ ಮಿಲಿಂದ್ ಚಂದ್ವಾನಿ ಹಾಗೂ ಅವಿಕಾ ಗೋರ್ ಭಾಗವಹಿಸಿದ್ದರು. ಈಗ ಈ ಜೋಡಿ ರಿಯಾಲಿಟಿ ಶೋನಲ್ಲಿ ಮದುವೆ ಆಗಲಿದೆಯಂತೆ. ಈಗಾಗಲೇ ಮದುವೆ ಆಹ್ವಾನ ಪತ್ರಿಕೆ ಕೂಡ ರೆಡಿಯಾಗಿದೆ. ಮದುವೆ ಆಹ್ವಾನ ಪತ್ರಿಕೆಯನ್ನು ಮೊದಲು ರಾಧೇ ಮಾಗೆ ನೀಡಿದ್ದಾರೆ.
ಅದ್ದೂರಿಯಾದ ಆಹ್ವಾನ ಪತ್ರಿಕೆ
'ಪತಿ ಪತ್ನಿ ಔರ್ ಪಂಗಾ' ಶೋನ ಇತ್ತೀಚಿನ ಪ್ರೊಮೊದಲ್ಲಿ ಅವಿಕಾ ಮತ್ತು ಮಿಲಿಂದ್ ದೊಡ್ಡ ಅವರು ದೊಡ್ಡ ಬಾಕ್ಸ್ ತಂದಿದ್ದಾರೆ. ಅಲ್ಲಿ ಮದುವೆ ಮಂಟಪ ಕೂಡ ಇದೆ. ಅಲ್ಲಿ ಒಂದು ಸೀಕ್ರೆಟ್ ರೂಮ್ ಇದ್ದು, ಅಲ್ಲಿ ಮದುವೆ ಆಹ್ವಾನ ಪತ್ರಿಕೆ ಇದೆ. ಅಷ್ಟು ಸುಂದರವಾದ ಆಹ್ವಾನ ಪತ್ರಿಕೆ ನೋಡಿ ನಟಿ ರುಬಿನಾ ದಿಲೈಕ್, ಗುರ್ಮೀತ್ ಚೌಧರಿ, ಇತರ ಸ್ಪರ್ಧಿಗಳು ಖುಷಿಪಟ್ಟರು.
ಜಗತ್ತಿನ ಮುಂದೆ ಮದುವೆ
ಅವಿಕಾ ಮಾತನಾಡಿ, "ಕಲರ್ಸ್ ವಾಹಿನಿಯೊಂದಿಗೆ ನನ್ನ ಸಂಬಂಧ ಬಹಳ ಹಳೆಯದು. ಇಲ್ಲಿ ಈ ರೀತಿಯ ಮಂಟಪ ಮಾಡ್ತೀವಿ, ಇಡೀ ಜಗತ್ತಿನ ಮುಂದೆ, ನಮ್ಮ ಮದುವೆ ನಡೆಯಲಿದೆ" ಮಿಲಿಂದ್ ಹೇಳಿದ್ದಾರೆ.
ರೀಲ್ ವಧು, ಈಗ ರಿಯಲ್ ವಧು
"ಈ ಚಾನೆಲ್‌ನಲ್ಲಿ ರೀಲ್ ಲೈಫ್‌ನಲ್ಲಿ ಈ ವಧು ತಯಾರಾಗಿದ್ದಳು, ಈಗ ರಿಯಲ್ ಲೈಫ್‌ನಲ್ಲಿ ನನ್ನ ವಧು ಕೂಡ ಇಲ್ಲಿಯೇ ರೆಡಿಯಾಗಲಿದ್ದಾಳೆ" ಎಂದು ಮಿಲಿಂದ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಎಲ್ಲರನ್ನು ಈ ಮದುವೆಗೆ ಆಹ್ವಾನಿಸಿದ್ದಾರೆ. ಸೆಪ್ಟೆಂಬರ್ 27 ರಂದು ಮದುವೆ ಶಾಸ್ತ್ರಗಳು ಪ್ರಸಾರ ಆಗಲಿವೆ.
ಲಿವ್ ಇನ್ ರಿಲೇಶನ್‌ಶಿಪ್
ಅವಿಕಾ ಮತ್ತು ಮಿಲಿಂದ್ ಐದು ವರ್ಷಗಳಿಂದ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ. 2020 ರ ನವೆಂಬರ್‌ನಲ್ಲಿ ಅವಿಕಾಅವರು ಮಿಲಿಂದ್‌ರನ್ನು ತಮ್ಮ ಬಾಯ್‌ಫ್ರೆಂಡ್ ಎಂದು ಹೇಳಿದ್ದರು.
ಬಾಲಿಕಾ ವಧು ಧಾರಾವಾಹಿ ನಟಿ
ಅವಿಕಾ ಅವರು ‘ಬಾಲಿಕಾ ವಧು’ ಧಾರಾವಾಹಿಯಲ್ಲಿ ಆನಂದಿಯಾಗಿ ನಟಿಸಿದ್ದರು. ಈ ಸೀರಿಯಲ್, ಈ ಪಾತ್ರ ಎಲ್ಲರ ಮನಗೆದ್ದಿತ್ತು. ಆಮೇಲೆ 2009 ರಲ್ಲಿ ಶ್ರೇಷ್ಠ ಬಾಲ ಕಲಾವಿದೆ ಎಂದು ರಾಜೀವ್ ಗಾಂಧಿ ಪ್ರಶಸ್ತಿಯನ್ನು ಪಡೆದರು. ನಂತರ ‘ಸಸುರಾಲ್ ಸಿಮರ್ ಕಾ’ ಧಾರಾವಾಹಿಯಲ್ಲಿ ರೋಲಿ ದ್ವಿವೇದಿ ಪಾತ್ರ ಮಾಡಿದ್ದರು. ಅವಿಕಾ ಅವರು 2009 ರಲ್ಲಿ ಹಿಂದಿ ಸಿನಿಮಾ, ‘ಮಾರ್ನಿಂಗ್ ವಾಕ್’ ಸಿನಿಮಾ ಮಾಡಿದರು. 2013 ರಲ್ಲಿ ತೆಲುಗು ಸಿನಿಮಾ ‘ಉಯ್ಯಾಲ ಜಂಪಾಲ’ ಕೂಡ ಮಾಡಿದರು. ‘ಪಾಠಶಾಲೆ’, ‘1920: ಹಾರರ್ಸ್ ಆಫ್ ದಿ ಹಾರ್ಟ್’, ‘ಬ್ಲಡಿ ಇಶ್ಕ್’ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಮಿಲಿಂದ್ ಚಂದ್ವಾನಿ ಯಾರು?
ಮಿಲಿಂದ್ ಚಂದ್ವಾನಿ ಅವರು ಎನ್‌ಜಿಒವನ್ನು ನಡೆಸುತ್ತಾರೆ. 9 ರಿಂದ 5ರ ಕಾರ್ಪೊರೇಟ್ ಉದ್ಯೋಗದಲ್ಲಿ ಕೆಲಸ ಮಾಡುತ್ತಾರೆ. ಇವರಿಬ್ಬರೂ ಈಗ 'ಪತಿ ಪತ್ನಿ ಔರ್ ಪಂಗಾ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಹಿನಾ ಖಾನ್-ರಾಕಿ ಜೈಸ್ವಾಲ್, ರುಬಿನಾ ದಿಲೈಕ್-ಅಭಿನವ್ ಶುಕ್ಲಾ, ಸ್ವರಾ ಭಾಸ್ಕರ್-ಫಹದ್ ಅಹ್ಮದ್, ಸುದೇಶ್ ಲೆಹರಿ-ಮಮತಾ ಲೆಹರಿ, ಗುರ್ಮೀತ್ ಚೌಧರಿ-ದೆಬಿನಾ ಬೋನರ್ಜಿ, ಗೀತಾ ಫೋಗಟ್-ಪವನ್ ಕುಮಾರ್ ಅವರು ಜೋಡಿಗಳಾಗಿ ಭಾಗವಹಿಸಿದ್ದಾರೆ. ಈ ಶೋವನ್ನು ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

