- Home
- Entertainment
- TV Talk
- Karna Serial ಯಾರೂ ಊಹಿಸದ ಟ್ವಿಸ್ಟ್: ತೇಜಸ್ ಕ್ಷಮೆ ಕೋರಿ ಫೋನ್ ಮಾಡಿದ್ರೂ ನಿತ್ಯಾ ಮಾಡಿದ್ದೇ ಬೇರೆ!
Karna Serial ಯಾರೂ ಊಹಿಸದ ಟ್ವಿಸ್ಟ್: ತೇಜಸ್ ಕ್ಷಮೆ ಕೋರಿ ಫೋನ್ ಮಾಡಿದ್ರೂ ನಿತ್ಯಾ ಮಾಡಿದ್ದೇ ಬೇರೆ!
ಕಿಡ್ನಾಪ್‌ನಿಂದ ತಪ್ಪಿಸಿಕೊಂಡು ಬಂದಿರುವ ತೇಜಸ್, ತನ್ನ ಅಪಹರಣಕ್ಕೆ ಕರ್ಣನೇ ಕಾರಣ ಎಂದು ತಪ್ಪಾಗಿ ಭಾವಿಸಿದ್ದಾನೆ. ಅನಿರೀಕ್ಷಿತವಾಗಿ ಫೋನ್‌ನಲ್ಲಿ ನಿತ್ಯಾಳ ದನಿ ಕೇಳಿದಾಗ, ಆತನ ಸ್ಥಿತಿ ತಿಳಿಯದ ನಿತ್ಯಾ, ತನ್ನನ್ನು ತೊರೆದು ಹೋದದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾಳೆ.

ತೇಜಸ್ ಆಗಮನ
ಕರ್ಣ ಸೀರಿಯಲ್ (Karna Serial) ಸದ್ಯ ತೇಜಸ್ ಆಗಮನವಾಗಿದೆ. ಕರ್ಣನೇ ತನ್ನನ್ನು ಕಿಡ್ನ್ಯಾಪ್ ಮಾಡಿದ್ದು ಎಂದು ಆತ ತಪ್ಪು ತಿಳಿದುಕೊಂಡಿದ್ದಾನೆ. ಇದಕ್ಕೆ ಕಾರಣ, ಕಿಡ್ನ್ಯಾಪ್ ಮಾಡಿಸಿದ್ದ ರಮೇಶ್, ತನ್ನ ರೌಡಿಗಳ ಬಳಿ ಫೋನ್ ಮಾಡಿಸಿದಾಗ ಕರ್ಣನ ಹೆಸರನ್ನು ಹೇಳಿಸಿರೋದು.
ಸಂಜಯ್ ಗೂಢಾಚಾರಿಕೆ
ಇದೀಗ, ಅಚಾನಕ್ ಸ್ಥಿತಿಯಲ್ಲಿ ತೇಜಸ್ ಮತ್ತು ನಿಧಿಯ ಭೇಟಿಯಾಗಿದೆ. ಅತ್ತ ಸಂಜಯ್ ಮತ್ತು ರಮೇಶ್ಗೆ ತೇಜಸ್ ತಪ್ಪಿಸಿಕೊಂಡಿರೋದು ತಿಳಿದಿರುವ ಹಿನ್ನೆಲೆಯಲ್ಲಿ, ನಿತ್ಯಾಳ ಮೇಲೆ ಅವರು ಕಣ್ಣಿಟ್ಟಿದ್ದಾರೆ. ಅವಳಿಗೆ ಬರುವ ಕರೆಗಳ ಮೇಲೂ ಸಂಜಯ್ ಗಮನ ಇಟ್ಟಿದ್ದಾನೆ.
ಕಿಡಿಯಾದ ನಿತ್ಯಾ
ಆದರೆ ನಿಧಿ ಕರ್ಣನ ಫೋನ್ಗೆ ಕಾಲ್ ಮಾಡಿ ನಿತ್ಯಾಳಿಗೆ ನೀಡುವಂತೆ ಕೇಳಿದ್ದಾಳೆ. ಅತ್ತ ಕಡೆಯಿಂದ ತೇಜಸ್ ದನಿ ಕೇಳುತ್ತಿದ್ದಂತೆಯೇ ನಿತ್ಯಾ ಕೆಂಡಾಮಂಡಲ ಆಗಿದ್ದಾಳೆ.
ನೋವಿನ ಸರಮಾಲೆ
ಹೇಗಿದ್ಯಾ ಎಂದು ಸಂಜಯ್ ಕೇಳಿದಾಗ, ಅವನಿಗೆ ಏನಾಗಿತ್ತು ಎನ್ನೋದನ್ನು ತಿಳಿಯದ ನಿತ್ಯಾ, ಕೈಕೊಟ್ಟು ಓಡಿಹೋದ ಬಗ್ಗೆ ಕಿಡಿ ಕಾರಿದ್ದಾಳೆ. ತಾನು ಅನುಭವಿಸಿದ ನೋವಿನ ಸರಮಾಲೆಗಳ ಬಗ್ಗೆ ತಿಳಿಸಿದ್ದಾರೆ. ನಿನ್ನ ಮುಖ ನೋಡೋಕೂ ಅಸಹ್ಯ ಆಗುತ್ತದೆ ಎಂದಿದ್ದಾಳೆ.
ಮನೆಗೆ ಬರಲ್ಲ ಎಂದ ತೇಜಸ್
ಅತ್ತ ನಿಧಿ ಫೋನ್ ತೆಗೆದುಕೊಂಡು ಮೊದಲು ಇಬ್ಬರೂ ಕುಳಿತು ಮಾತನಾಡಿ, ಆಮೇಲೆ ಏನು ಎನ್ನುವುದು ಗೊತ್ತಾಗುತ್ತದೆ ಎಂದಿದ್ದಾಳೆ. ಮನೆಗೆ ಕರೆದುಕೊಂಡು ಬರುತ್ತೇನೆ ಎಂದಾಗ ಅಲ್ಲಿ ಕಿಡ್ನ್ಯಾಪ್ ಮಾಡಿಸಿರೋ ಕರ್ಣ ಇದ್ದಾನೆ ಎಂದು ಸಂಜಯ್ ಬೇಡ ಎಂದಿದ್ದಾನೆ.
ಮುಂದೇನು?
ಇದೀಗ ಇಬ್ಬರೂ ಕುಳಿತು ಮಾತನಾಡುವುದು ಯಾವಾಗ, ತನ್ನನ್ನು ಕಿಡ್ನ್ಯಾಪ್ ಮಾಡಿಸಿದ್ದು ಯಾರು ಎನ್ನುವುದು ತೇಜಸ್ಗೆ ತಿಳಿಯುವುದು ಯಾವಾಗ? ನಿತ್ಯಾ ಮೇಲೆ ಕಣ್ಣು ಇಟ್ಟಿರೋ ಸಂಜಯ್ ಇಬ್ಬರನ್ನೂ ಭೇಟಿ ಮಾಡಿಸ್ತಾನಾ ಇತ್ಯಾದಿ ಪ್ರಶ್ನೆಗಳು ಸದ್ಯ ಎಲ್ಲರನ್ನೂ ಕಾಡ್ತಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

