- Home
- Entertainment
- TV Talk
- ಮಗು ಹೆತ್ತು Karna Serialನಿಂದ ನಟಿ ನಮ್ರತಾ ಗೌಡ ದೂರ? ನಿತ್ಯಾ ಆಗ್ತಿರೋ ಹೊಸ ನಟಿ ಯಾರು
ಮಗು ಹೆತ್ತು Karna Serialನಿಂದ ನಟಿ ನಮ್ರತಾ ಗೌಡ ದೂರ? ನಿತ್ಯಾ ಆಗ್ತಿರೋ ಹೊಸ ನಟಿ ಯಾರು
ಕರ್ಣ ಸೀರಿಯಲ್ನಲ್ಲಿ ಮಗುವಿಗೆ ಜನ್ಮ ನೀಡಿದ ನಿತ್ಯಾ ಬದುಕಿದ್ದಾಳೆ ಎಂದು ಹೊಸ ಪ್ರೊಮೋದಲ್ಲಿ ತೋರಿಸಲಾಗಿದೆ. ಆದರೆ, ನಟಿ ನಮ್ರತಾ ಗೌಡ ಈ ಧಾರಾವಾಹಿಯಿಂದ ಹೊರಬರುತ್ತಿದ್ದಾರಾ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ನಿತ್ಯಾ ಸತ್ತಿಲ್ಲ
ಕರ್ಣ ಸೀರಿಯಲ್ (Karna Serial)ನಲ್ಲಿ ನಿತ್ಯಾಗೆ ಮಗುವಾಗಿದೆ. ಆದರೆ ಮಗು ಹೆತ್ತು ನಿತ್ಯಾ ಸಾಯುತ್ತಾಳೆ ಎಂಬ ರೀತಿಯಲ್ಲಿ ಈ ಹಿಂದೆ ವಾಹಿನಿ ಪ್ರೊಮೋ ಬಿಡುಗಡೆ ಮಾಡಿತ್ತು. ಭುವನೇಶ್ವರಿಯೇ ನಿನ್ನ ಅಮ್ಮ ಎಂದು ಕರ್ಣನಿಗೆ ಹೇಳುವ ಸಲುವಾಗಿ ಅಲ್ಲಿರುವ ಭುವನೇಶ್ವರಿ ದೇವಿಯ ಫೋಟೋ ತೋರಿಸಿ, ನಿತ್ಯಾ ಕೊನೆಯುಸಿರು ಎಳೆಯುವಂತೆ ತೋರಿಸಲಾಗಿತ್ತು.
ಬದುಕಿದ್ದಾಳೆ ನಿತ್ಯಾ
ಆದರೆ, ಇಂದು ಬಿಡುಗಡೆಯಾಗಿರುವ ಪ್ರೊಮೋದಲ್ಲಿ ನಿತ್ಯಾ ಸತ್ತಿಲ್ಲ ಎಂದು ತೋರಿಸಲಾಗಿದೆ. ನಿತ್ಯಾ ಮತ್ತು ಮಗು ಎರಡನ್ನೂ ಕರ್ಣ ಕಾಪಾಡಿದ್ದಾನೆ ಎಂದು ಹೇಳಲಾಗಿದೆ. ಆದರೆ ಈಗಿರುವ ಕುತೂಹಲ ಎಂದರೆ, ನಿತ್ಯಾ ಪಾತ್ರ ಮಾಡ್ತಿರೋ ನಟಿ ನಮ್ರತಾ ಗೌಡ ಸೀರಿಯಲ್ ಬಿಟ್ಟು ಹೋಗ್ತಾರಾ ಎನ್ನುವುದು.
ಪ್ರಾಜೆಕ್ಟ್ ಬಿಡುತ್ತಿದ್ದೇನೆ ಎಂದ ನಟಿ
ಏಕೆಂದರೆ, ಕೆಲ ದಿನಗಳ ಹಿಂದೆ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಮ್ರತಾ ಗೌಡ ಅವರು, ಪ್ರಾಜೆಕ್ಟ್ ಒಂದರಿಂದ ನಾನು ಒಳ್ಳೆಯ ರೀತಿಯಲ್ಲಿ ಹೊರಕ್ಕೆ ಹೋಗುತ್ತಿದ್ದೇನೆ ಎಂದಿದ್ದರು. ಅಲ್ಲಿ ಅವರು ಯಾವುದೇ ಸೀರಿಯಲ್ ಹೆಸರು ಹೇಳಿರಲಿಲ್ಲ. ಆದರೆ ಸದ್ಯ ಅವರು ಮಾಡ್ತಿರೋ ಸೀರಿಯಲ್ ಕರ್ಣ ಆಗಿರುವ ಕಾರಣ, ನಟಿ ಈ ಸೀರಿಯಲ್ ಬಿಟ್ಟು ಹೋಗ್ತಾರಾ ಎನ್ನುವ ಪ್ರಶ್ನೆ ಇದೆ.
ನಮ್ರತಾ ಗೌಡ ಅಸಮಾಧಾನ
ಇದೇ ಸಂದರ್ಶನದಲ್ಲಿ ನಟಿ ನಮ್ರತಾ ಗೌಡ, ನಿತ್ಯಾ ಪಾತ್ರದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ತಾವು ಅಂದುಕೊಂಡಿದ್ದೇ ಒಂದು, ಆದರೆ ಈ ಪಾತ್ರ ಬೇರೆಯದ್ದೇ ರೀತಿಯಲ್ಲಿ ತೋರಿಸಲಾಗಿದೆ. ಅಷ್ಟಕ್ಕೂ ವೀಕ್ಷಕರು ಇಷ್ಟಪಡುವ ರೀತಿಯಲ್ಲಿ ಕಥೆಯನ್ನು ಬದಲಾಯಿಸುವುದು ಸಹಜ. ಆದರೆ ಹೀಗೆ ಎಂದುಕೊಂಡಿದ್ದರೆ ನಾನು ಈ ಪಾತ್ರ ಒಪ್ಪಿಕೊಳ್ತಿದ್ನೋ ಇಲ್ಲವೋ ಎಂದಿದ್ದರು.
ಸೀರಿಯಲ್ ಬಿಡ್ತಾರಾ ನಟಿ ನಮ್ರತಾ ಗೌಡ?
ಇವೆಲ್ಲವನ್ನೂ ನೋಡಿದರೆ ನಟಿ ನಮ್ರತಾ ಗೌಡ (Namratha Gowda) ಸೀರಿಯಲ್ ಬಿಟ್ಟು ಹೋಗುವುದು ಬಹುತೇಕ ಖಚಿತವಾಗಿದೆ. ಒಳ್ಳೆಯ ರೀತಿಯಲ್ಲಿ, ನಿರ್ದೇಶಕ ಜೊತೆ ಮಾತನಾಡಿ, ಯಾರಿಗೂ ಸಮಸ್ಯೆ ಆಗದ ರೀತಿಯಲ್ಲಿ ಪ್ರಾಜೆಕ್ಟ್ ಬಿಡುತ್ತಿದ್ದೇನೆ ಎಂದಿದ್ದರು ನಟಿ.
ಯಾರು ಹೊಸ ನಟಿ?
ಆದ್ದರಿಂದ ಈಗ ಮಗುವಾಗುವ ಒಂದು ಹಂತ ತಲುಪಿದೆ. ಇನ್ನು ಆಸ್ಪತ್ರೆಯಿಂದ ಹೊರಬರುವ ನಿತ್ಯಾ ಬೇರೆಯವರು ಆಗ್ತಾರಾ, ಒಂದು ವೇಳೆ ಹಾಗಾದರೆ ನಿತ್ಯಾ ಪಾತ್ರಕ್ಕೆ ಯಾವ ನಟಿ ಬರಲಿದ್ದಾರೆ ಎನ್ನುವ ಕುತೂಹಲ ಇದೆ. ಅಷ್ಟಕ್ಕೂ ನಮ್ರತಾ ಗೌಡ ಅವರ ಜಾಗದಲ್ಲಿ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲು ಅವರ ಅಭಿಮಾನಿಗಳು ಇಷ್ಟಪಡಲ್ಲ ಎನ್ನುವುದೂ ಸತ್ಯವೇ. ಆದರೂ ಸತ್ಯ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













