- Home
- Entertainment
- TV Talk
- ಜೀವನದಲ್ಲಿ ಏನೇ ಆದರೂ ನಾನು ಯಾವಾಗ್ಲೂ ಜೊತೆ ಇರ್ತೀನಿ.... ವಿಕಾಶ್ ಹುಟ್ಟುಹಬ್ಬಕ್ಕೆ ನಿಶಾ ಸ್ಪೆಷಲ್ ವಿಶ್
ಜೀವನದಲ್ಲಿ ಏನೇ ಆದರೂ ನಾನು ಯಾವಾಗ್ಲೂ ಜೊತೆ ಇರ್ತೀನಿ.... ವಿಕಾಶ್ ಹುಟ್ಟುಹಬ್ಬಕ್ಕೆ ನಿಶಾ ಸ್ಪೆಷಲ್ ವಿಶ್
ಅಣ್ಣಯ್ಯ ಧಾರಾವಾಹಿ ನಾಯಕ ಶಿವು ಆಲಿಯಾಸ್ ವಿಕಾಶ್ ಉತ್ತಯ್ಯ ಇವತ್ತು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ನಿಶಾ ರವಿಕೃಷ್ಣನ್ ಮುದ್ದಾಗಿ ವಿಶ್ ಮಾಡಿದ್ದಾರೆ.

ಝೀ ಕನ್ನಡದಲ್ಲಿ ತನ್ನ ವಿಭಿನ್ನ ಕತೆಯ ಮೂಲಕ ಅದ್ಧೂರಿಯಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗುತ್ತಿರುವ ಧಾರಾವಾಹಿ ಅಣ್ಣಯ್ಯ (Annayya Serial). ಈ ಧಾರಾವಾಹಿಯ ನಾಯಕ ಶಿವು ಪಾತ್ರದಲ್ಲಿ ಮಿಂಚುತ್ತಿರುವ ವಿಕಾಶ್ ಉತ್ತಯ್ಯ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ವಿಕಾಶ್ ಹುಟ್ಟುಹಬ್ಬಕ್ಕೆ ಅಣ್ಣಯ್ಯ ಸೀರಿಯಲ್ ಪಾರು ಖ್ಯಾತಿಯ ನಟಿ ನಿಶಾ ರವಿಕೃಷ್ಣನ್ (Nisha Ravikrishnan)ತುಂಬಾನೆ ಮುದ್ದು ಮುದ್ದಾಗಿರುವ ಇಬ್ಬರ ಫೋಟೊಗಳನ್ನು ಶೇರ್ ಮಾಡುವ ಮೂಲಕ ತಮ್ಮ ಸ್ನೇಹಿತನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ನಿಶಾ ಅಣ್ಣಯ್ಯ ಧಾರಾವಾಹಿಯ ಕೆಲವು ಫೋಟೊಗಳು ಹಾಗೂ, ಇಬ್ಬರ ಮತ್ತಿತರ ಫೋಟೊಗಳನ್ನು ಶೇರ್ ಮಾಡಿ, ನಗುವ ನಯನ ಮಧುರ ಮೌನ ಹಾಡನ್ನು ಹಿನ್ನೆಲೆಯಲ್ಲಿ ಹಾಕಿದ್ದು, ಅದರ ಜೊತೆಗೆ ಇದ ಹಾಡಲು ಕವಿ ಬೇಕೇ ಎಂದಿದ್ದಾರೆ.
ಅದರ ಜೊತೆ ಜೊತೆಗೆ ಅದ್ಭುತ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು... ನನ್ನ ಆತ್ಮೀಯ ಸ್ನೇಹಿತ, ಮತ್ತು ಫಾರೆವರ್ ಫೇವರಿಟ್ !!!! ನಿಮಗೆ ಅಂತ್ಯವಿಲ್ಲದಷ್ಟು ಸಂತೋಷ, ಯಶಸ್ಸು ಮತ್ತು ನೀವು ಅರ್ಹವಾದ ಎಲ್ಲಾ ಸಂತೋಷವು ನಿಮಗೆ ಸಿಗಲೆಂದು ಹಾರೈಸುತ್ತೇನೆ ಎಂದು ನಿಶಾ ಶುಭ ಕೋರಿದ್ದಾರೆ.
ಅಷ್ಟೇ ಅಲ್ಲದೇ ಜೀವನವು ನಮಗೆ ಏನೇ ಎಸೆದರೂ ನಾನು ಯಾವಾಗಲೂ ನಿಮಗಾಗಿ ಇರುತ್ತೇನೆ ಅನ್ನೋದು ನೆನಪಿರಲಿ ಎನ್ನುವ ಸಾಲುಗಳನ್ನು ಸಹ ಸೇರಿಸಿದ್ದಾರೆ. ಇಬ್ಬರ ಫೋಟೊಗಳು ನಿಶಾ ಬರೆದಿರುವ ಸಾಲುಗಳನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಬೆಳಿಗ್ಗಿನಿಂದ ನಿಮ್ಮ ವಿಶ್ ಗಾಗಿ ಕಾಯುತ್ತಿದ್ದೆವು. ಇಬ್ಬರು ಮೇಡ್ ಫಾರ್ ಈಚ್ ಅದರ್, ನಿಮ್ಮ ಮುದ್ದಾದ ಜೋಡಿ ಮೇಲೆ ಯಾರ ದೃಷ್ಟಿಯೂ ಬೀಳದೇ ಇರಲಿ. ಶಿವು ಪಾರು ನಮ್ಮ ಫೇವರಿಟ್ ಜೋಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಅಣ್ಣಯ್ಯ ಧಾರಾವಾಹಿ ಮೂಲಕ ಶಿವು ಮತ್ತು ಪಾರು ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈ ಜೋಡಿ ರಿಯಲ್ ಆಗಿಯೂ ತುಂಬಾನೆ ಒಳ್ಳೆಯ ಸ್ನೇಹಿತರಾಗಿದ್ದು, ಜೊತೆಯಾಗಿ ರೀಲ್ಸ್, ಫೋಟೋಸ್, ಪಾರ್ಟಿ ಕೂಡ ಮಾಡುತ್ತಿರುತ್ತಾರೆ. ಹಾಗಾಗಿ ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಸುದ್ದಿ ಸಹ ಹರಿದಾಡುತ್ತಿರುತ್ತದೆ.
ಹಲವಾರು ಕಾರ್ಯಕ್ರಮಗಳಲ್ಲಿ ಈ ಜೋಡಿ ಜೊತೆಯಾಗಿ ಕೈ ಕೈ ಹಿಡಿದಿರೋದು ಸಹ ವೈರಲ್ ಆಗಿತ್ತು. ಆದರೆ ವಿಕಾಶ್ (Vikash Uthaiah)ಆಗಲಿ, ನಿಶಾ ಆಗಲಿ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.