ಗಟ್ಟಿಮೇಳದ ರೌಡಿ ಬೇಬಿ ಅಂತಲೇ ಫೇಮಸ್ ಆಗಿರುವ ನಿಶಾ ರವಿಕೃಷ್ಣ ಒಂದು ಸ್ವೀಟ್ ಸಾಲುಗಳೊಂದಿಗೆ ಬಂದಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಈ ನಟಿಗೆ ಲವ್ವಾಗಿದ್ಯಾ? ಯಾರ ಮೇಲೆ?
ಗಟ್ಟಿಮೇಳ ಸೀರಿಯಲ್ ಟಾಪ್ 5 ಸೀರಿಯಲ್‌ಗಳಲ್ಲೊಂದು. ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಈ ಸೀರಿಯಲ್ ಸೀರಿಯಲ್‌ನಲ್ಲಿ ರೌಡಿ ಬೇಬಿ ಅಮೂಲ್ಯ ಅಂದರೆ ವೀಕ್ಷಕರೆಲ್ಲರಿಗೂ ಶಾನೇ ಪಿರೂತಿ. ಇಂತಿಪ್ಪ ಕ್ಯೂಟ್ ಹುಡ್ಗಿ ಇದೀಗ ಲವ್ವಲ್ಲಿ ಬಿದ್ದಂತಿದೆ. ಈಕೆ ನಟನೆಯನ್ನು ಬಹಳ ಮಂದಿ ಹೊಗಳ್ತಾರೆ. ಕನ್ನಡ ಮಾತ್ರ ಅಲ್ಲ, ತೆಲುಗು ಸೀರಿಯಲ್‌ನಲ್ಲೂ ಈಕೆ ಫೇಮಸ್. ಅಲ್ಲೂ ದೊಡ್ಡ ಅಭಿಮಾನಿ ಬಳಗ ಈಕೆಗಿದೆ. ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ನಿಶಾ ರವಿಕೃಷ್ಣನ್, ನಟನೆ ಮಾತ್ರ ಅಲ್ಲ, ಸಿಂಗರ್ ಹಾಗೂ ಡ್ಯಾನ್ಸರ್ ಕೂಡ ಆಗಿದ್ದಾರೆ. ಟಿವಿಯಲ್ಲಿ ತನ್ನ 12ನೇ ವಯಸ್ಸಿಗೇ ನಿರೂಪಕಿ ಆಗಿದ್ದವರು ನಿಶಾ ರವಿಕೃಷ್ಣನ್. ಸುಮಾರು ನಾಲ್ಕು ವರ್ಷಗಳ ಕಾಲ ಈಕೆ ನಿರೂಪಕಿಯಾಗಿದ್ದರು. ಸದ್ಯ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಿಶಾ ಅವರಿಗೆ ಎರಡೂ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ. ಇದೀಗ ಈಕೆ ಹೊಸ ಫೋಟೋಗಳನ್ನು ಹಾಕಿ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದಾರೆ.
ಬಹುಮುಖ ಪ್ರತಿಭೆ ನಿಶಾ ಬಾಲ್ಯದಲ್ಲೇ ಕ್ಯಾಮರಾ ಫೇಸ್ ಮಾಡುವುದನ್ನು ಕಲಿತಿದ್ದರು. 'ಸರ್ವ ಮಂಗಳ ಮಾಂಗಲ್ಯೇ' ಎಂಬ ಸೀರಿಯಲ್‌ನಲ್ಲಿ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದರು. ತದನಂತರ ನಿಶಾ 'ಗಟ್ಟಿಮೇಳ' ಸೀರಿಯಲ್ ಮೂಲಕ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಪಾತ್ರದಲ್ಲಿ ಮಿಂಚುತ್ತಿರುವ ನಿಶಾ ಅವರ ಲುಕ್, ಚುರುಕುತನ, ರೌಡಿ ಬೇಬಿ ಥರದ ಮಾತುಗಳನ್ನು ಹಲವು ಪ್ರೇಕ್ಷಕರು ಮೆಚ್ಚಿದ್ದಾರೆ. ಈಕೆ ಧಾರಾವಾಹಿ ಮಾತ್ರವಲ್ಲದೇ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. 'ಅದೊಂದಿತ್ತು ಕಾಲ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. 'ಇಷ್ಟಕಾಮ್ಯ' ಸಿನಿಮಾದ ಹಾಡೊಂದಕ್ಕೆ ಬ್ಯಾಕ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ನಿಶಾ ರವಿಕೃಷ್ಣನ್ ತೆಲುಗಿನಲ್ಲಿ 'ಮುತ್ಯಮಂತ ಮುದ್ದು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನ 'ಅಮ್ಮಾಯಿಗಾರು' ಎಂಬ ಧಾರಾವಾಹಿಯಲ್ಲೂ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ನಿಶಾ ಅವರು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿ ಇರುತ್ತಾರೆ. ಫೋಟೋಶೂಟ್ ಮಾಡಿಸಿ ವಿವಿಧ ಉಡುಗೆಯಲ್ಲಿನ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇನ್ ಸ್ಟಾಗ್ರಾಂನಲ್ಲಿ ಲಕ್ಷಕ್ಕು ಹೆಚ್ಚು ಫಾಲೋವರ್ಸ್ ಇದ್ದಾರೆ. ಹಿಂದೊಮ್ಮೆ ಇನ್ ಸ್ಟಾ ರೀಲ್ಸ್ ಗೆ ಸಂಬಂಧಿಸಿ ಇವರ ತೆಲುಗು ಕಿರುತೆರೆ ಅಭಿಮಾನಿಗಳಿಗೂ, ಕನ್ನಡ ಕಿರುತೆರೆ ಫ್ಯಾನ್ಸ್‌ಗೂ ನಡುವೆ ದೊಡ್ಡ ಜಗಳ ನಡೆದಿತ್ತು. ಇದಕ್ಕೆ ಕೊನೆಗೆ ನಿಶಾ ಅವರೇ ಸ್ಪಷ್ಟನೆ ನೀಡಿದ್ದರು.
Bhagyalaxmi serial : ಭಾಗ್ಯಳ ಬದಲಾವಣೆಯನ್ನೇ ಎದುರು ನೋಡುತ್ತಿರುವ ಪ್ರೇಕ್ಷಕರು, ಭಾಗ್ಯ ಬದಲಾಗ್ತಾಳಾ?
ಇದೀಗ ಇನ್‌ಸ್ಟಾದಲ್ಲಿ ಅಚ್ಚಗನ್ನಡದಲ್ಲಿ ತನ್ನ ಚಂದದ ಫೋಟೋ ಜೊತೆಗೆ ಅಂದವಾದ ಸಾಲನ್ನೂ ಪೋಸ್ಟ್ (Post) ಮಾಡಿದ್ದಾರೆ. ನಿಶಾ ಅವರು ತಮ್ಮ ಫೋಟೋ ಜೊತೆಗೆ 'ನನ್ನ ಎದೆಯ ಬೀದಿಯಲಿ ಹೊಂಗನಸ ವ್ಯಾಪಾರಿ ನೀ' ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಹಲವರಿಗೆ ನಿಶಾ ಅವರ ಮೇಲೆ ಅಭಿಮಾನಿಗಳಿಗೆ ಅನುಮಾನ ಬಂದಿದೆ. ಯಾರು ಆ ಹೊಂಗನಸ ವ್ಯಾಪಾರಿ ಎಂದು ಪ್ರಶ್ನಿಸಿದ್ದಾರೆ. ಫ್ಯಾನ್ಸ್‌ಗಳಿಂದ (Fans)ಏನೇನೋ ಪ್ರಶ್ನೆಗಳು ಬಂದಿವೆ.
ಇಷ್ಟೇ ಅಲ್ಲ, 'ಜೀವನ ಹೂ ಬನ ಚಂದ ಈಗ ನಿನ್ನಿಂದ' ಎಂದೂ ಬರೆದುಕೊಂಡಿದ್ದಾರೆ. ಇದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಇನ್ನೂ ಕೆಲವರು ನಿಶಾ ಅವರ ಸಾಲುಗಳಿಗೆ ಸೋತು ಅವರೂ ಕವಿ ಆಗಿದ್ದಾರೆ. ನಿಶಾಳನ್ನು ಗೊಂಬೆ ಎಂದು ಕರೆದು ಖುಷಿಪಟ್ಟಿದ್ದಾರೆ. ಆದರೆ ಎಂದೂ ಇಲ್ಲದ್ದು ಈಗೀಗ ಯಾಕೆ ನಿಶಾ ಇಂಥಾ ಸಾಲುಗಳನ್ನು ಬರೆಯುತ್ತಿದ್ದಾರೆ, ಇದರ ಹಿಂದೆ ಏನೋ ಇರಬೇಕು, ನಿಶಾಗೆ ಯಾರ ಮೇಲೋ ಲವ್ವಾಗಿರಬೇಕು, ಆ ಅದೃಷ್ಟವಂತ ಯಾರು ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಉತ್ತರವಿನ್ನೂ ಸಿಕ್ಕಿಲ್ಲ. ಅದಕ್ಕೆ ಅವರೇ ಶೀಘ್ರ ಉತ್ತರಿಸಬಹುದು ಅನ್ನೋ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.
