- Home
- Entertainment
- TV Talk
- ಗೃಹಿಣಿಯರ ಡಾನ್ಸ್‌ಗೆ ಅಪಸ್ವರ.. "ಎಲ್ಲೋದ್ರಪ್ಪ ಮೊಸರಲ್ಲಿ ಕಲ್ಲು ಹುಡ್ಕೋರು, ನೋಡಿ ಇದು ಜೀ ಅಂದ್ರೆ" ಅಂದ್ರು ಜನ್ರು
ಗೃಹಿಣಿಯರ ಡಾನ್ಸ್‌ಗೆ ಅಪಸ್ವರ.. "ಎಲ್ಲೋದ್ರಪ್ಪ ಮೊಸರಲ್ಲಿ ಕಲ್ಲು ಹುಡ್ಕೋರು, ನೋಡಿ ಇದು ಜೀ ಅಂದ್ರೆ" ಅಂದ್ರು ಜನ್ರು
Zee Kannada show: ಆಗಾಗ್ಗೆ ಸ್ಟೇಜ್ ಮೇಲೆ ಬಂದು ಎಲ್ಲರನ್ನು ಮನರಂಜಿಸುವ ಇವರು ಈ ಬಾರಿ ರಚಿತಾ ರಾಮ್ ಅವರ 'ಮೀಟ್ ಮಾಡಣ ಇಲ್ಲ ಡೇಟ್ ಮಾಡಣ ..' ಸಾಂಗ್‌ಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಇವರ ಜೊತೆ ಎಲ್ಲಾ ಗೃಹಿಣಿಯರೂ ಹೆಜ್ಜೆ ಹಾಕಿದ್ದಾರೆ.

ಶನಿವಾರ ಮತ್ತು ಭಾನುವಾರ ಪ್ರಸಾರ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, 'ಡಿಕೆಡಿ' ಅಂತಲೇ ಫೇಮಸ್ ಆಗಿರುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', ಹಲವಾರು ವರ್ಷಗಳಿಂದ ಪ್ರಸಾರವಾಗುತ್ತಿದೆ. 'ಡಿಕೆಡಿ'ಗೆ ಪ್ರತ್ಯೇಕ ಫ್ಯಾನ್ಸ್ ಫಾಲೋವರ್ಸ್ ಕೂಡ ಇದ್ದಾರೆ. ಅಂದರೆ ಶನಿವಾರ ಮತ್ತು ಭಾನುವಾರ ಪ್ರಸಾರ ಆಗುವ ಈ ಶೋ ವೀಕ್ಷಿಸಲು ದೊಡ್ಡ ವೀಕ್ಷಕರ ಬಳಗವೇ ಇದೆ.
ಶೋನಲ್ಲಿ ಜಡ್ಜ್ ಆಗಿ ಶಿವಣ್ಣ...
ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿರುವ ಶೋನಲ್ಲಿ ಜಡ್ಜ್ ಆಗಿ ಶಿವಣ್ಣ, ವಿಜಯ್ ರಾಘವೇಂದ್ರ, ರಚಿತಾ ರಾಮ್, ಅರ್ಜುನ್ ಜನ್ಯ ಇದ್ದಾರೆ. ಮಾತಿನ ಮಲ್ಲಿ ಅನುಶ್ರೀ ನಿರೂಪಕಿಯಾಗಿದ್ದಾರೆ.
ಯಾರೆಲ್ಲಾ ಇದ್ದಾರೆ?
ಅದ್ಧೂರಿಯಾಗಿಯೇ ಶುರುವಾದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ನಲ್ಲಿ ಈ ಬಾರಿ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳ ಜೊತೆಗೆ ಕಿರುತೆರೆಯ ಜನಪ್ರಿಯ ನಟ-ನಟಿಯರು ಭಾಗವಹಿಸಿರುವುದು ಶೋಗೆ ಮತ್ತಷ್ಟು ಕಿಕ್ ಕೊಟ್ಟಿದೆ. ಕರ್ಣ ಧಾರಾವಾಹಿ ಖ್ಯಾತಿಯ ನಿಧಿ ಪಾತ್ರಧಾರಿ ಭವ್ಯಗೌಡ, 'ಲಕ್ಷ್ಮೀನಿವಾಸ' ಖ್ಯಾತಿಯ ಸಿದ್ದೇಗೌಡ, 'ಬ್ರಹ್ಮಗಂಟು' ನಟಿ ಸಂಜನಾ, ಅನನ್ಯ, ಅಣ್ಣಯ್ಯ ಖ್ಯಾತಿಯ ಗುಂಡಮ್ಮ, 'ಶ್ರಾವಣಿ ಸುಬ್ರಹ್ಮಣ್ಯ' ನಾಯಕ ಸುಬ್ಬು, ಜಗ್ಗಪ್ಪ ಮುಂತಾದವರು ಶೋನಲ್ಲಿ ಕಾಣಿಸಿಕೊಂಡಿದ್ದಾರೆ.
ಭರ್ಜರಿ ಸ್ಟೆಪ್ ಹಾಕಿ ಎಲ್ಲರ ಮನಗೆದ್ದಿದ್ದ ಗೃಹಿಣಿ
ಶೋ ಆರಂಭದಲ್ಲಿ ಅಂದರೆ 'ಮೆಗಾ ಆಡಿಷನ್'ನಲ್ಲಿ ಗೃಹಿಣಿಯೊಬ್ಬರು ಪುನೀತ್ ರಾಜ್‌ಕುಮಾರ್ ಅವರ 2008 ರಲ್ಲಿ ಬಿಡುಗಡೆಯಾದ 'ಬಿಂದಾಸ್' ಚಲನಚಿತ್ರದ ಥರ ಥರ ಥರ ಒಂಥರಾ ಹಾಡಿಗೆ ಸೀದಾ ಸಾದಾ ಸೀರೆಯುಟ್ಟು ಭರ್ಜರಿ ಸ್ಟೆಪ್ ಹಾಕಿ ಎಲ್ಲರ ಮನಗೆದ್ದಿದ್ದರು. ಇದನ್ನು ನೋಡಿ ತೀರ್ಪುಗಾರರಾಗಿರುವ ಶಿವರಾಜ್‌ಕುಮಾರ್, ವಿಜಯ ರಾಘವೇಂದ್ರ ಮತ್ತು ರಚಿತಾ ರಾಮ್ ಅವರು ಸಹ ಶಾಕ್ ಆಗಿದ್ದಲ್ಲದೆ, ಪ್ರಶಂಸೆ ವ್ಯಕ್ತಪಡಿಸಿದ್ದರು.
ಹೆಜ್ಜೆ ಹಾಕಿದ ಎಲ್ಲಾ ಗೃಹಿಣಿಯರು
ಆ ಗೃಹಿಣಿಗೆ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವುದಕ್ಕೆ ಅವಕಾಶವಿಲ್ಲದಿದ್ದರೂ ನೀವು ನಿಮಗೆ ಇಷ್ಟಬಂದಾಗ ಈ ಶೋಗೆ ಬಂದು ಡಾನ್ಸ್ ಮಾಡಬಹುದು ಎಂದು ಶಿವಣ್ಣ ಹೇಳಿದ್ದರು. ಆಗಾಗ್ಗೆ ಸ್ಟೇಜ್ ಮೇಲೆ ಬಂದು ಎಲ್ಲರನ್ನು ಮನರಂಜಿಸುವ ಇವರು ಈ ಬಾರಿ ರಚಿತಾ ರಾಮ್ ಅವರ 'ಮೀಟ್ ಮಾಡಣ ಇಲ್ಲ ಡೇಟ್ ಮಾಡಣ ..' ಸಾಂಗ್‌ಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಇವರ ಜೊತೆ ಎಲ್ಲಾ ಗೃಹಿಣಿಯರೂ ಹೆಜ್ಜೆ ಹಾಕಿದ್ದಾರೆ.
ಗೃಹಿಣಿಯರ ಡಾನ್ಸ್‌ಗೆ ಮಿಶ್ರ ಪ್ರತಿಕ್ರಿಯೆಗಳು
ಗೃಹಿಣಿಯರ ಡಾನ್ಸ್ ನೋಡಿದ ಶಿವಣ್ಣ ಮನಸಾರೆ ಹಾಡಿ ಹೊಗಳಿದ್ದಾರೆ. ಸದ್ಯ ಶೋನಲ್ಲಿ Dance ಕರ್ನಾಟಕ Dance-2025 & ಕಿಲಾಡಿ Juniors 'ಮಹಾಸಂಗಮ' ನಡೆಯುತ್ತಿರುವುದರಿಂದ ನಟ ಶರಣ್, ನಟಿ ನಿಶ್ವಿಕಾ ನಾಯ್ಡು, ನಿರೂಪಕ ನಿರಂಜನ್ ಕೂಡ ಗೃಹಿಣಿಯರ ಡಾನ್ಸ್ ನೋಡಿ ಪ್ರಶಂಸಿಸಿದ್ದಾರೆ. ಇವರ ಜೊತೆಗೆ ನಿಶ್ವಿಕಾ ನಾಯ್ಡು ಸಹ ಹೆಜ್ಜೆ ಹಾಕಿದ್ದು, ಇದೀಗ ಗೃಹಿಣಿಯರ ಡಾನ್ಸ್‌ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.
ಕಾಮೆಂಟ್ಸ್ ಈ ರೀತಿ ಇವೆ ನೋಡಿ..
ಕೆಲವರು ಹೀಗೆ ಆಂಟಿಗಳು ಡಾನ್ಸ್ ಮಾಡೋದು ನಮ್ಮ ಸಂಸ್ಕೃತಿನಾ ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಟಿಆರ್‌ಪಿಗೋಸ್ಕರ್ ಎಂದಿದ್ದಾರೆ. ಆದರೆ ಇದೆಲ್ಲರ ಮಧ್ಯೆ ಗೃಹಿಣಿಯರ ಪರವಾಗಿ ಮಾತನಾಡಿ ಭೇಷ್ ಅಂದವರು ಇದ್ದು, ಕಾಮೆಂಟ್ಸ್ ಈ ರೀತಿ ಇವೆ ನೋಡಿ..
"ಆಲ್ ದಿ ಬೆಸ್ಟ್, ಒಳ್ಳೆಯದಾಗಲಿ ನಿಮಗೆಲ್ಲ", "ಎಲ್ಲೋದ್ರಪ್ಪ ಮೊಸರಲ್ಲಿ ಕಲ್ಲು ಹುಡ್ಕೋರು, ನೋಡಿ ಇದು ಜೀ ಅಂದ್ರೆ", "ನಮ್ಮ ಗೃಹಿಣಿಯರ ಡ್ಯಾನ್ಸ್ ನೋಡಿ ಯಾರಿಗೆಲ್ಲಾ ಖುಷಿ ಆಯ್ತು" ಎಂದೆಲ್ಲಾ ಪ್ರೀತಿಯಿಂದ ಕಾಮೆಂಟ್ ಮಾಡಿ, ಹೃದಯದ ಇಮೋಜಿ ಹಾಕಿರುವುದನ್ನು ನೀವಿಲ್ಲಿ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
