- Home
- Entertainment
- TV Talk
- ಕಡಿತೈತಾ? ಕಾಮೆಂಟ್ ಹಾಕ್ತೀರಾ? ಕನ್ನಡದಲ್ಲೂ ಒಳ್ಳೇ ಪದ ಇದೆ, ನಮಗೂ ಬರತ್ತೆ: ಸಿಡಿದೆದ್ದ 'ನಂದಗೋಕುಲ' ನಟಿ
ಕಡಿತೈತಾ? ಕಾಮೆಂಟ್ ಹಾಕ್ತೀರಾ? ಕನ್ನಡದಲ್ಲೂ ಒಳ್ಳೇ ಪದ ಇದೆ, ನಮಗೂ ಬರತ್ತೆ: ಸಿಡಿದೆದ್ದ 'ನಂದಗೋಕುಲ' ನಟಿ
ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಇದ್ದು, ನೆಗೆಟಿವ್-ಪಾಸಿಟಿವ್ ಪ್ರತಿಕ್ರಿಯೆ ಬರುತ್ತಲಿರುತ್ತದೆ. ಈಗ ಬೃಂದಾವನ ಧಾರಾವಾಹಿ ನಟಿ ಅನುಪಲ್ಲವಿ ಗೌಡ ಹಾಗೂ ನಂದಗೋಕುಲ ಧಾರಾವಾಹಿ ನಟಿ ಅರ್ಪಿತಾ ಗೌಡರಿಗೆ ನೆಗೆಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಗ್ಗೆ ಅವರು ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ಸಾಕಷ್ಟು ಜನರಿಗೆ ಕೆಲಸವೇ ಇಲ್ಲ!
ಇಂದು ಸಾಕಷ್ಟು ಜನರಿಗೆ ಕೆಲಸವೇ ಇಲ್ಲ, ಲೇಆಫ್ ಆಗುತ್ತಿದೆ. ಜನರಿಗೆ ಕಡಿಯುತ್ತೆ, ಹೀಗಾಗಿ ಕಾಮೆಂಟ್ ಹಾಕುತ್ತಾರೆ. ಸ್ವೈಪ್ ಆಪ್ಶನ್ ಕೂಡ ಇರುತ್ತದೆ, ಎಲ್ಲದನ್ನು ಸ್ಕಿಪ್ ಮಾಡಿಕೊಳ್ಳಿ. ವಿಡಿಯೋ ಮಾಡೋಕೆ ಯೋಗ್ಯತೆ ಇಲ್ಲ, ನೀವು ವಿಡಿಯೋ ಮಾಡಿದ್ರೆ ನಾವು ಲೈಕ್ ಮಾಡ್ತೀವಿ ಎಂದು ಅರ್ಪಿತಾ ಗೌಡ ಅವರು ಹೇಳಿದ್ದಾರೆ.

ಕನ್ನಡದಲ್ಲಿರುವ ಕೆಟ್ಟ ಪದಗಳು ನಮಗೂ ಬರುತ್ತವೆ
ನಾವು ಕೂಡ ದಿನದಿಂದ ದಿನಕ್ಕೆ ಚೆನ್ನಾಗಿ ವಿಡಿಯೋ ಮಾಡಲು ಪ್ರಯತ್ನಮಾಡ್ತೀವಿ. ಆದರೆ ನೀವು ಅದು ದಪ್ಪ, ಇದು ದಪ್ಪ ಎಂದು ಕಾಮೆಂಟ್ ಮಾಡುತ್ತೀರಾ, ನಮಗೆ ನೀವು ಅನ್ನ ತಂದು ಹಾಕೋದಿಲ್ಲ. ಕನ್ನಡದಲ್ಲಿರುವ ಕೆಟ್ಟ ಪದಗಳು ನಮಗೂ ಬರುತ್ತವೆ ಎಂದು ಅರ್ಪಿತಾ ಗೌಡ ಅವರು ಹೇಳಿದ್ದಾರೆ.
ಕೆಟ್ಟ ಕಾಮೆಂಟ್ ಮಾಡಬೇಡಿ
ನಮ್ಮ ಆರೋಗ್ಯ ಹೇಗಿದೆ? ಎಷ್ಟು ಗಂಟೆ ಕೆಲಸ ಮಾಡ್ತೀವಿ ಎನ್ನೋದು ನಮಗೆ ಗೊತ್ತಿದೆ. ದಯವಿಟ್ಟು ಕೆಟ್ಟ ಕಾಮೆಂಟ್ ಮಾಡಬೇಡಿ, ನೀವು ಆರಾಮಾಗಿರಿ, ನಮ್ಮನ್ನು ಆರಾಮಾಗಿ ಇರೋಕೆ ಬಿಡಿ ಎಂದು ಅರ್ಪಿತಾ ಗೌಡ ಅವರು ಹೇಳಿದ್ದಾರೆ.
ಕರ್ಕಿ ನೀನು, ಬುದ್ಧಿ ಇಲ್ವಾ ಎಮ್ಮೆ ಥರ ಆಗಿದ್ಯಾ ಎಂದು ಕಾಮೆಂಟ್ ಮಾಡಿದ್ದಾರೆ ಎಂದು ಅನುಪಲ್ಲವಿ ಗೌಡ ಅವರು ಹೇಳಿದ್ದಾರೆ.
ನಮಗೆ ಯೋಗ್ಯತೆ ಇಲ್ಲ, ಸೋ?
ನಮಗೆ ಯೋಗ್ಯತೆ ಇಲ್ಲ, ನಾನು ನೋಡೋಕೆ ಚೆನ್ನಾಗಿಲ್ಲ, ನಟನೆ ಬರೋದಿಲ್ಲ. ಅದಕ್ಕೆ ನಮ್ಮನ್ನು ಟಿವಿಯಲ್ಲಿ ತೋರಸ್ತಿದ್ದಾರೆ. ನಿಮಗೆ ಟ್ಯಾಲೆಂಟ್ ಇದ್ದರೆ, ಹೊರಗಡೆ ಬನ್ನಿ ಎಂದು ಅರ್ಪಿತಾ ಗೌಡ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

