- Home
- Entertainment
- TV Talk
- ಮದುವೆಯಾಗಿ 4 ವರ್ಷ, ಬೆಂಗಳೂರಿನ ಗಂಡನಿಂದ ದೂರವಾಗ್ತಿದ್ದಾರಾ Naagin Serial ನಟಿ? ಸಿಕ್ಕೇಬಿಡ್ತು ಸುಳಿವು!
ಮದುವೆಯಾಗಿ 4 ವರ್ಷ, ಬೆಂಗಳೂರಿನ ಗಂಡನಿಂದ ದೂರವಾಗ್ತಿದ್ದಾರಾ Naagin Serial ನಟಿ? ಸಿಕ್ಕೇಬಿಡ್ತು ಸುಳಿವು!
Actress Mouni Roy: ನಾಗಿನ್ ಧಾರಾವಾಹಿ ಖ್ಯಾತಿಯ ನಟಿ ಮೌನಿ ರಾಯ್ ಈಗ ಡಿವೋರ್ಸ್ ಪಡೆಯಲಿದ್ದಾರಾ ಎಂಬ ಡೌಟ್ ಶುರು ಆಗಿದೆ. ಇದರ ಹಿಂದಿನ ಕಾರಣ ಏನು? ಯಾಕೆ ಏನಾಯ್ತು? ಮದುವೆಯಾಗಿ ನಾಲ್ಕು ವರ್ಷಕ್ಕೆ ಈ ನಿರ್ಧಾರವೇ ಎಂಬ ಪ್ರಶ್ನೆ ಮೂಡಿದೆ.

Unfollow ಮಾಡ್ತಿದ್ದಾರೆ
ನಟಿ ಮೌನಿ ರಾಯ್ ಹಾಗೂ ಸೂರಜ್ ನಂಬಿಯಾರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಬೇರೆಯವರನ್ನು ಫಾಲೋ ಮಾಡುತ್ತಿರುವ ಇವರಿಬ್ಬರು ಮಾತ್ರ ಫಾಲೋ ಮಾಡ್ತಿಲ್ಲ. ಆದರೆ 2024ರಲ್ಲಿ ಅಪ್‌ಲೋಡ್ ಮಾಡಿದ ಪತಿಯ ಫೋಟೋಗಳನ್ನು ಮಾತ್ರ ಹಾಗೆ ಉಳಿಸಿಕೊಂಡಿದ್ದಾರೆ, ಆ ಬಳಿಕ ಅಪ್‌ಲೋಡ್ ಮಾಡಿದ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ.

ಡಿವೋರ್ಸ್ ಗಾಸಿಪ್
ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ದಂಪತಿಯ ಫೋಟೋಗಳನ್ನು ಡಿಲಿಟ್ ಮಾಡಿದರೆ, ಸೋಶಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿದರೆ, ಅಥವಾ ನಟಿ ತನ್ನ ಪತಿಯ ಸರ್‌ನೇಮ್ ತೆಗೆದು ಹಾಕಿದರೆ ಡಿವೋರ್ಸ್ ಎಂದು ಗಾಸಿಪ್ ಶುರು ಆಗುವುದು. ಇದು ಬಹುತೇಕ ಸೆಲೆಬ್ರಿಟಿಗಳ ಲೈಫ್‌ನಲ್ಲಿ ಹೀಗೆ ಆಗಿದ್ದು, ಡಿವೋರ್ಸ್ ಕೂಡ ಆಗಿದೆ.
2022 ರಲ್ಲಿ ಮದುವೆ!
2022 ರಲ್ಲಿ ಮೌನಿ ರಾಯ್ ಹಾಗೂ ಸೂರಜ್ ಅವರು ಮದುವೆಯಾಗಿದ್ದರು. ಗೋವಾದಲ್ಲಿ ಈ ಮದುವೆ ನಡೆದಿತ್ತು. ಮೂರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು.2019ರಲ್ಲಿ ದುಬೈನಲ್ಲಿ ಈ ಜೋಡಿ ಫಸ್ಟ್ ಟೈಮ್ ಭೇಟಿ ಆಗಿತ್ತು.
ಜಡ್ಡ್ ಆಗಿದ್ದ ನಟಿ
ಮೌನಿ ರಾಯ್ ಅವರು ಹಿಂದಿ ಕಿರುತೆರೆಯಲ್ಲಿ ಫೇಮಸ್ ಆಗಿದ್ದಾರೆ.'ನಾಗಿನ್' ಧಾರಾವಾಹಿಯಲ್ಲಿ ಮೌನಿ ನಟಿಸಿದ್ದರು. ಅಷ್ಟೇ ಅಲ್ಲದೆ ಕೆಲ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಕೂಡ ಆಗಿದ್ದರು. ಅಂದಹಾಗೆ ಸೂರಜ್ ಅವರು ಬೆಂಗಳೂರು ಮೂಲದವರು. ಜೈನ ಕುಟುಂಬಕ್ಕೆ ಸೇರಿದ ಸೂರಜ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. KGF ಸಿನಿಮಾದಲ್ಲಿ ಮೌನಿ ರಾಯ್ ಅವರು ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.
ಇನ್ನೂ ಉತ್ತರ ಕೊಟ್ಟಿಲ್ಲ
ಡಿವೋರ್ಸ್ ಬಗ್ಗೆ ಸೂರಜ್ ಆಗಲೀ, ಮೌನಿ ಆಗಲೀ ಉತ್ತರ ಕೊಟ್ಟಿಲ್ಲ. ಸದ್ಯ ಡೌಟ್ ಶುರುವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ, ಅಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

