- Home
- Entertainment
- TV Talk
- Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!
ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ, ಅಂಬಿಕಾ ಕಾಣಿಸಿಕೊಳ್ಳುವ ಸತ್ಯ ತಿಳಿದ ಮಾಳವಿಕಾ ದುರ್ಗಾಳನ್ನು ಮುಗಿಸಲು ಸಂಚು ರೂಪಿಸುತ್ತಿದ್ದಾಳೆ. ಇನ್ನೊಂದೆಡೆ, ಅಪ್ಪ-ಮಗಳನ್ನು ಒಂದು ಮಾಡಲು ಯತ್ನಿಸುತ್ತಿರುವ ದುರ್ಗಾಳಿಗೆ ಶರತ್‌ನಿಂದ ಅಪ್ಪುಗೆ ಸಿಕ್ಕಿದ್ದು, ಇದು ದುರ್ಗಾಳ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡಿದೆ.

ದುರ್ಗಾಳ ಮುಗಿಸಲು ಸ್ಕೆಚ್
ನಾ ನಿನ್ನ ಬಿಡಲಾರೆ (Naa Ninna Bidalaare) ನಲ್ಲಿ ಸದ್ಯ ವಿಲನ್ಗಳ ಕೈ ಮೇಲಾಗುತ್ತಿದೆ. ಇದಾಗಲೇ ದುರ್ಗಾಳಿಗೆ ಅಂಬಿಕಾ ಕಾಣಿಸಿಕೊಳ್ಳುವ ವಿಷಯ ಮಾಳವಿಕಾಗೆ ತಿಳಿದಿದೆ. ದುರ್ಗಾಳನ್ನು ಮುಗಿಸಲು ಆಕೆ ಸ್ಕೆಚ್ ಹಾಕುತ್ತಿದ್ದಾಳೆ.
ಅಕ್ಕ-ತಂಗಿ ಸಂಬಂಧ
ಆಕೆಯ ಮಾಯಾವಿ ಕರ್ಣ ಪಿಶಾಚಿ, ದುರ್ಗಾ ಮತ್ತು ಅಂಬಿಕಾಗೆ ಸಂಬಂಧ ಇರುವ ಬಗ್ಗೆ ತಿಳಿಸಿದೆ. ಆದರೆ ಅಕ್ಕ- ತಂಗಿ ಎನ್ನುವುದು ಮಾತ್ರ ಗೊತ್ತಿಲ್ಲ. ಅದೇನೇ ಇದ್ದರೂ ಹೆಜ್ಜೆ ಹೆಜ್ಜೆಗೂ ಹಿತಾಳನ್ನು ಕಾಪಾಡುವ ದುರ್ಗಾಳನ್ನು ಮುಗಿಸುವ ಪ್ರಯತ್ನದಲ್ಲಿ ಇದ್ದಾಳೆ ಮಾಳವಿಕಾ.
ಅಪ್ಪ-ಮಗಳು ದೂರ
ಅದೇ ಇನ್ನೊಂದೆಡೆ, ಹಿತಾ ಮತ್ತು ಶರತ್ ಅಪ್ಪ-ಮಗಳನ್ನು ದೂರ ಮಾಡಲು ಮಾಯಾ ಇನ್ನಿಲ್ಲದಂತೆ ಪ್ರಯತ್ನ ಪಡುತ್ತಿದ್ದಾಳೆ. ಇದಾಗಲೇ ಆಕೆ ಒಂದು ಹಂತದಲ್ಲಿ ಸಕ್ಸಸ್ ಕೂಡ ಆಗಿದ್ದಾಳೆ.
ತಬ್ಬಿಕೊಂಡ ಶರತ್
ಆದರೆ, ದುರ್ಗಾ ಎಲ್ಲಾ ಶಕ್ತಿ ಮೀರಿ ಅಪ್ಪ-ಮಗಳನ್ನು ಒಂದು ಮಾಡಲು ನೋಡುತ್ತಿದ್ದಾಳೆ. ಇದೀಗ ಹಿತಾ ಅಪ್ಪನ ಪರವಾಗಿ ಇರುವುದನ್ನು ನೋಡಿದಾಗ ಶರತ್ ಖುಷಿಯಿಂದ ದುರ್ಗಾಳನ್ನು ತಬ್ಬಿಕೊಂಡಿದ್ದಾನೆ.
ಮಾಯಾ ಹೊಟ್ಟೆ ಉರಿ
ಇದನ್ನು ನೋಡಿ ಮಾಯಾ ಹೊಟ್ಟೆ ಉರಿದುಕೊಂಡರೆ, ಅಂಬಿಕಾ ಮಾತ್ರ ಖುಷಿಯಿಂದ ಕಣ್ಣೀರಾಗಿದ್ದಾಳೆ. ಆಕೆಗೆ ಹೇಗಾದರೂ ಮಾಡಿ ದುರ್ಗಾ ಮತ್ತು ಶರತ್ನನ್ನು ಒಂದು ಮಾಡುವ ಹಂಬಲ.
ಏಕೈಕ ಮಹಿಳೆ
ಇದರ ಪ್ರೊಮೋ ರಿಲೀಸ್ ಆಗುತ್ತಲೇ, ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಇದಾಗಲೇ ಈ ದೆವ್ವ ಅಂಬಿಕಾ ಬರೀ ಬೆಡ್ರೂಮ್ನಲ್ಲೇ ಇರೋದು ಯಾಕೆ ಎಂದು ಪ್ರಶ್ನಿಸ್ತಾ ಇದ್ದರು. ಇದೀಗ ದುರ್ಗಾಳನ್ನು ತನ್ನ ಗಂಡ ಶರತ್ ತಬ್ಬಿಕೊಂಡಾಗ ಆಕೆ ಖುಷಿ ಪಡುವುದನ್ನು ನೋಡಿದ ನೆಟ್ಟಿಗರು, ಹೀಗೆ ಖುಷಿ ಪಡುವ ಜಗತ್ತಿನ ಏಕೈಕ ಮಹಿಳೆ ಎನ್ನುತ್ತಿದ್ದಾರೆ.
ಪ್ರಾಣಕ್ಕೆ ಅಪಾಯ
ಒಟ್ಟಿನಲ್ಲಿ ದುರ್ಗಾಳ ಮೇಲೂ ಈಗ ಸಾವಿನ ತೂಗುಗತ್ತಿ ಇದೆ. ಆಕೆಗೆ ಈ ಬಗ್ಗೆ ಏನೂ ಗೊತ್ತಿಲ್ಲ. ತನ್ನಲ್ಲಿರುವ ಶಕ್ತಿಯೂ ಗೊತ್ತಿಲ್ಲ. ಆದರೆ ಆಕೆಗೆ ಅಂಬಿಕಾ ಕಾಣಿಸಿಕೊಳ್ತಿರೋ ವಿಷಯ ತಿಳಿದಿರುವ ಹಿನ್ನೆಲೆಯಲ್ಲಿ ಆಕೆಯ ಪ್ರಾಣಕ್ಕೆ ಅಪಾಯವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

