- Home
- Entertainment
- TV Talk
- Bigg Boss ಮನೆಯಲ್ಲಿ ನಡುರಾತ್ರಿ ಇದೇನಿದು? ಒಟ್ಟಿಗೇ ಮಲಗಿ ಸಿಕ್ಕಿಬಿದ್ದ ಸ್ಪರ್ಧಿಗಳು! ಇದೆಂಥ ದುರಂತ?
Bigg Boss ಮನೆಯಲ್ಲಿ ನಡುರಾತ್ರಿ ಇದೇನಿದು? ಒಟ್ಟಿಗೇ ಮಲಗಿ ಸಿಕ್ಕಿಬಿದ್ದ ಸ್ಪರ್ಧಿಗಳು! ಇದೆಂಥ ದುರಂತ?
ತಮಿಳು ಬಿಗ್‌ಬಾಸ್‌ನಲ್ಲಿ ಸ್ಪರ್ಧಿ ವಿ.ಜೆ ಪಾರ್ವತಿ ಮಧ್ಯರಾತ್ರಿ ಸಹ ಸ್ಪರ್ಧಿ ಕಮರುದ್ದೀನ್ ಅವರ ಕಂಬಳಿಯೊಳಗೆ ನುಸುಳಿದ ಘಟನೆ ನಡೆದಿದೆ. ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಪ್ರಸಾರವಾಗಿದ್ದು, ಟಿಆರ್‌ಪಿಗಾಗಿ ಅಸಭ್ಯತೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ

ಬಿಗ್ಬಾಸ್ ಎಂದರೆ...
Bigg Boss (ಬಿಗ್ಬಾಸ್) ಮನೆಯಲ್ಲಿ ಜಗಳ, ಕಾಮಿಡಿ, ಗದ್ದಲ, ಪ್ರೀತಿ ಪ್ರೇಮ ಎಲ್ಲವೂ ಕಾಮನ್. ಆದರೆ ಕೆಲವೊಮ್ಮೆ ಸ್ಪರ್ಧಿಗಳ ವರ್ತನೆ ಮಿತಿಮೀರಿ ಹೋಗುವುದು ಇದೆ. ಕೆಲವು ಭಾಷೆಗಳ ಬಿಗ್‌ಬಾಸ್‌ನಲ್ಲಿ ಇದಾಗಲೇ ಅಶ್ಲೀಲತೆಯ ಗಡಿ ದಾಟಿದ್ದೂ ಇದೆ. ಅಂಥ ದೃಶ್ಯಗಳ ಪ್ರಸಾರಕ್ಕೆ ಕಡಿವಾಣ ಹಾಕುವ ಬದಲು TRP ಹೆಚ್ಚಿಸಿಕೊಳ್ಳಲು ಇಂಥ ದೃಶ್ಯಗಳ ಪ್ರಸಾರ ವಿವಿಧ ಭಾಷೆಗಳ ಬಿಗ್‌ಬಾಸ್‌ನಲ್ಲಿ ಸಾಕಷ್ಟು ಬಾರಿ ಆಗಿದೆ. ಅದನ್ನು ಬೈದುಕೊಳ್ಳುತ್ತಲೇ ಎಂಜಾಯ್ ಮಾಡುವ ದೊಡ್ಡ ವರ್ಗವೂ ಇದೆ ಎನ್ನುವ ಸತ್ಯವೂ ಅವರಿಗೆ ತಿಳಿದಿದೆ!
ಒಂದೇ ಹಾಸಿಗೆಯಲ್ಲಿ...
ಎಲ್ಲೆಯನ್ನು ಮೀರಿ ಹೋಗಿರುವ ಘಟನೆಗಳು ಕನ್ನಡದ ಬಿಗ್‌ಬಾಸ್‌ನಲ್ಲಿ (Kannada Bigg Boss) ನಡೆದಿಲ್ಲ ಎನ್ನುವ ಸಮಾಧಾನ ವೀಕ್ಷಕರದ್ದು. ಆದರೆ, ಇದೀಗ ಬಿಗ್ಬಾಸ್ ಮನೆಯಲ್ಲಿ ಅಂಥದ್ದೇ ಒಂದು ಅಸಭ್ಯ ಘಟನೆ ನಡೆದಿದ್ದು, ಇದರ ಪ್ರಸಾರ ಕೂಡ ಆಗಿದೆ. ಇದರಲ್ಲಿ ಮಹಿಳಾ ಸ್ಪರ್ಧಿಯೊಬ್ಬರು, ಮಧ್ಯರಾತ್ರಿ ಪುರುಷ ಸ್ಪರ್ಧಿಯ ಪಕ್ಕದಲ್ಲಿಯೇ ಮಲಗಿ ಅವರ ಕಂಬಳಿಯೊಳಗೆ ನುಸುಳಿ ಹೋಗಿರುವ ದೃಶ್ಯ. ಇದರ ಬಗ್ಗೆ ಭಾರಿ ಟೀಕೆಗಳು ಕೇಳಿಬರುತ್ತಿವೆ.
ಟ್ರೋಲ್ನಿಂದಲೇ ಉಳಿದುಕೊಂಡಿರೋ ಸ್ಪರ್ಧಿ
ಅಷ್ಟಕ್ಕೂ ಇದು ನಡೆದಿರುವುದು ತಮಿಳಿನ ಬಿಗ್‌ಬಾಸ್‌ನಲ್ಲಿ (Tamil Bigg Boss). ಇದರಲ್ಲಿ ಹವಾ ಸೃಷ್ಟಿಸ್ತಿರೋ ಸ್ಪರ್ಧಿಗಳ ಪೈಕಿ ವಿ.ಜೆ ಪಾರ್ವತಿ ಕೂಡ ಒಬ್ಬರು. ಮೊದಲಿನಿಂದಲೂ ಇವರ ವರ್ತನೆಯ ಬಗ್ಗೆ ಟೀಕೆಗಳು ಕೇಳಿ ಬರುತ್ತಿದ್ದರೂ, ಇದೇ ವರ್ತನೆಯ ಕಾರಣದಿಂದಲೇ ಇಲ್ಲಿಯವರೆಗೂ ಉಳಿದುಕೊಂಡಿದ್ದಾರೆ ಎನ್ನುವುದೂ ಸುಳ್ಳಲ್ಲ. ಏಕೆಂದರೆ, ತಮಿಳಿನ ಷೋ ಆರಂಭವಾದದ್ದು ಡಿಸೆಂಬರ್ 25ರಂದು. ಇದರ ಅರ್ಥ ಇದಾಗಲೇ 83 ದಿನಗಳು ಮುಗಿದಿವೆ. ಇಷ್ಟು ಸುದೀರ್ಘ ಅವಧಿಯವರೆಗೆ ಇನ್ನೂ ಎಲಿಮಿನೇಟ್ ಆಗದೇ ಇರುವುದಕ್ಕೆ ಕಾರಣವೇನು ಎಂದು ಬೇರೆ ಹೇಳಬೇಕಾಗಿಲ್ಲ! ಈ ವಾರ ಮನೆಯ ಕ್ಯಾಪ್ಟನ್ ಕೂಡ ಆಗಿದ್ದಾರೆ ಪಾರ್ವತಿ.
ಮದುವೆಯ ಸುದ್ದಿ
ತಮಿಳು ಬಿಗ್ಬಾಸ್ ಮನೆಯಲ್ಲಿ ಇರುವ ಕಮರುದ್ದೀನ್ ಮತ್ತು ಪಾರ್ವತಿ ಜೋಡಿ ಈ ಬಿಗ್ಬಾಸ್ ವೀಕ್ಷಕರಿಗೆ ಹಾಟ್ ಟಾಪಿಕ್. ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಕೂಡ ಇದೆ! ಅದರಲ್ಲಿಯೂ ಪಾರ್ವತಿಯವರು ಕಮರುದ್ದೀನ್ ವಿಷಯದಲ್ಲಿ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ ಎನ್ನುವ ಆರೋಪವೂ ಇದೆ.
ಕಂಬಳಿಯೊಳಗೆ ನುಸುಳಿ...
ಇದರ ನಡುವೆ, ಕಮರುದ್ದೀನ್ ಅವರಿಗೆ ನೀಡಿರುವ ಕೊಠಡಿಯಲ್ಲಿ ಅವರು ಮಲಗಿಕೊಂಡಾಗ ವಿಜಿ ಪಾರ್ವತಿ ನಡುರಾತ್ರಿ ಕದ್ದುಮುಚ್ಚಿ ಕಮರುದ್ದೀನ್ ಹಾಸಿಗೆಯ ಮೇಲೆ ಹೋಗಿ ಅವರ ಪಕ್ಕವೇ ಮಲಗಿ ಅವರು ಹೊದ್ದುಕೊಂಡ ಕಂಬಳಿಯ ಒಳಗೆ ನುಸುಳಿದ್ದಾರೆ. ಪ್ರತಿ ಹೆಜ್ಜೆಯಲ್ಲಿಯೂ ಕ್ಯಾಮೆರಾ ನೋಡುತ್ತಿದೆ ಎನ್ನುವುದು ತಿಳಿದರೂ ಅವರು ಹೀಗೆ ಮಾಡಿರುವುದಕ್ಕೆ ಕಾರಣ ಮಾತ್ರ ಅವರೇ ಬಲ್ಲರು!
ಸ್ಪರ್ಧಿಗೆ ಜ್ಞಾನೋದಯ
ಆ ಕ್ಷಣದಲ್ಲಿ, ಕ್ಯಾಮೆರಾ ಇರುವುದು ಕಮರುದ್ದೀನ್ ಅವರಿಗೆ ಫ್ಲ್ಯಾಷ್ ಆಗಿದೆ. ಅದಕ್ಕೆ ಅವರು, ಪಾರ್ವತಿ ಅವರನ್ನು ಎಚ್ಚರಿಸಿ ಅಲ್ಲಿಂದ ಹೋಗಲು ಹೇಳಿದ್ದಾರೆ. ಸ್ಪರ್ಧೆಯ ನಿಯಮಗಳನ್ನು ಉಲ್ಲಂಘಿಸಿದರೆ ಮನೆಯಿಂದ ಔಟ್ ಆಗಬೇಕಾಗುತ್ತದೆ ಎಂದು ನೆನಪಿಸಿದ ಮೇಲೆ ಪಾರ್ವತಿ ಅವರಿಗೆ ಜ್ಞಾನೋದಯ ಆಗಿ ಅಲ್ಲಿಂದ ಹೊರಕ್ಕೆ ಬಂದಿದ್ದಾರೆ. ಇವಿಷ್ಟೂ ಕ್ಯಾಮೆರಾ ಇರುವುದು ತಿಳಿದಾಗ ಆಗಿರುವ ಘಟನೆ! ಅದನ್ನು ಬಿಗ್ಬಾಸ್ ಕೂಡ ಪ್ರಸಾರ ಮಾಡಿದೆ.
ಭಾರಿ ಚರ್ಚೆ
ಇದರ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪಾರ್ವತಿ ಮತ್ತು ಕಮರುದ್ದೀನ್ ಸಂಬಂಧ ಏನೋ ಗೊತ್ತಿಲ್ಲ, ಆದರೆ ಇಂಥ ವರ್ತನೆ ತೋರುತ್ತಿರುವ ಇಂಥ ಸ್ಪರ್ಧಿಗಳನ್ನು ಕೊನೆಯವರೆಗೂ ಉಳಿಸಿಕೊಂಡು, ಒಳ್ಳೆಯತನ ಮೆರೆಯುವ ಸ್ಪರ್ಧಿಗಳನ್ನು ಕೆಲವೇ ವಾರಗಳಲ್ಲಿ ಔಟ್ ಮಾಡುವುದು ಮಾತ್ರ ಅಚ್ಚರಿಯ ಸಂಗತಿ ಎಂದಿದ್ದಾರೆ. ಅದೇನೇ ಇದ್ದರೂ ಎಷ್ಟೇ ಬೈದುಕೊಂಡರೂ ಇಂಥ ಷೋಗಳನ್ನು ವೀಕ್ಷಣೆ ಮಾಡುವ ದೊಡ್ಡ ವರ್ಗವೆ ಇದೆ ಎನ್ನುವ ಸತ್ಯ ಆಯೋಜಕರಿಗೂ ಗೊತ್ತಲ್ಲವೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

