ಚಿರು ನೆನಪುಗಳನ್ನೂ ಜೀವಂತವಾಗಿಟ್ಟು ಸುಂದರ ಮನೆಯ ಹೋಮ್ ಟೂರ್ ಮಾಡಿಸಿದ ಮೇಘನಾ ರಾಜ್!
meghana raj home tour new house ನಟಿ ಮೇಘನಾ ರಾಜ್ ಅವರ ಹೊಸ ಮನೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಮನೆಯ ವಿನ್ಯಾಸ, ಒಳಾಂಗಣ, ಚಿರಂಜೀವಿ ಸರ್ಜಾ ಅವರ ನೆನಪುಗಳನ್ನು ಒಳಗೊಂಡಂತೆ ಮನೆಯ ಪ್ರತಿಯೊಂದು ವಿವರವನ್ನು ಹಂಚಿಕೊಂಡಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ನಟಿ ಮೇಘನಾ ರಾಜ್ ಹೊಸ ಮನೆ ಕಟ್ಟಿಸಿ, ಒಂದು ವರ್ಷದ ಹಿಂದೆ ಅದರ ಗೃಹಪ್ರವೇಶ ಮಾಡಿದ್ದರು. ಎರಡು ಫ್ಲೋರ್ ಇರುವ ಅದೇ ಮನೆಯಲ್ಲಿ ತಮ್ಮ ಪುತ್ರ ರಾಯನ್ ಸರ್ಜಾ ಜೊತೆ ಅವರು ವಾಸವಿದ್ದಾರೆ. ಮನೆ ಗೃಹಪ್ರವೇಶ ಆದ ಬಳಿಕ ಮೇಘನಾ ರಾಜ್ ಅವರ ಮನೆಯ ಒಳಾಂಗಣ ಹೇಗಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಸ್ವತಃ ಮೇಘನಾ ರಾಜ್ ಕೂಡ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇದರ ಬಗ್ಗೆ ಹೇಳಿಕೊಂಡಿದ್ದರು.
ಇತ್ತೀಚೆಗೆ ಅವರು ತಮ್ಮ ಸುಂದರ ಮನೆಯ ಹೋಮ್ ಟೂರ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇಡೀ ಮನೆಯನ್ನು ತಮ್ಮ ಇಷ್ಟದ ಹಾಗೆ ಕಟ್ಟಿಸಿರುವ ಮೇಘನಾ ರಾಜ್, ಮನೆಯ ಇಂಚಿಂಚನ್ನೂ ವಿವರಿಸಿದ್ದಾರೆ. ಅದರೊಂದಿಗೆ ಮನೆಯ ಒಟ್ಟಾರೆ ಥೀಮ್, ಟೈಲ್ಸ್‌ನ ಬಣ್ಣಗಳನ್ನು ಎಲ್ಲವನ್ನೂ ವಿವರಿಸಿದ್ದಾರೆ.
ಮನೆಯ ಗ್ರೌಂಡ್‌ಫ್ಲೋರ್‌ಅನ್ನು ಹೆಚ್ಚಾಗಿ ಪಾರ್ಕಿಂಗ್‌ಗೆ ಮೀಸಲಾಗಿ ಇಡಲಾಗಿದೆ. ಅದರಲ್ಲಿ ಅವರ ಕಾರ್‌ಗಳು ನಿಂತಿರುತ್ತವೆ. ಇನ್ನು ಮೊದಲ ಮಹಡಿಯಲ್ಲಿ ಮನೆ ಇದ್ದು, ಅದಕ್ಕೆ ಥಂಬ್ ಲಾಕಿಂಗ್ ವ್ಯವಸ್ಥೆ ಇದೆ. ಅಂದರೆ, ಮೇಘನಾ ರಾಜ್ ಅವರ ಥಂಬ್ ಹಾಕಿದರೆ ಮಾತ್ರವೇ ಮನೆಯ ಡೋರ್ ತೆಗೆಯುತ್ತದೆ.
ದೊಡ್ಡದಾದ ಲಿವಿಂಗ್ ರೂಮ್ ಇದ್ದು, ಅದರಲ್ಲಿ ನಾಲ್ಕು ಬೃಹತ್ ಸೋಫಾಗಳನ್ನು ಹಾಕಿದ್ದಾರೆ. ಸೋಫಾಕ್ಕೆ ಜೋಡಿಸಿಕೊಂಡಂತೆ ಸಣ್ಣ ಟೇಬಲ್ ಇದ್ದು ಅದರ ವಿಶೇಷತೆಯನ್ನೂ ಕೂಡ ಅವರು ತಿಳಿಸಿದ್ದಾರೆ. ಮನಗೆ ಬಂದ ಅತಿಥಿಗಳಿಗೆ ಚಹಾ ಕಾಫಿ ಕೊಟ್ಟಾಗ ಅದನ್ನು ಇರಿಸಿಕೊಳ್ಳಲು ಪ್ರತ್ಯೇಕವಾದ ಮೇಜು ಇಡುವ ಅಗತ್ಯವಿಲ್ಲ. ಇದರ ಮೇಲೆ ಇರಿಸಿಕೊಳ್ಳಬಹುದು ಎಂದಿದ್ದಾರೆ.
ಅದರೊಂದಿಗೆ ಅವಾರ್ಡ್‌ಗಳನ್ನು ಇಡಲು ವಿಶೇಷ ಜಾಗವನ್ನು ಅವರು ತೋರಿಸಿದ್ದಾರೆ. ಜೆಪಿ ನಗರದ ಹಳೆಯ ಮನೆಯಲ್ಲಿದ್ದ ಅವಾರ್ಡ್ ಕಬೋರ್ಡ್‌ಅನ್ನೂ ಹೊಸ ಮನೆಯಲ್ಲಿ ಹಾಕಿರುವ ಮೇಘನಾ ರಾಜ್, ಅದಕ್ಕೆ ಹೊಸ ಮನೆಯ ಥೀಮ್‌ಗೆ ತಕ್ಕಂತೆ ಬಣ್ಣವನ್ನು ಬಳಿದಿದ್ದಾರೆ. ಅದರೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ತಂದೆ ಸುಂದರ್ ರಾಜ್, ತಾಯಿ ಪ್ರಮೀಳಾ ಜೋಷಾಯ್‌ಗೆ ಸಿಕ್ಕ ಅವಾರ್ಡ್‌ಗಳು, ತಮ್ಮ ಪ್ರಶಸ್ತಿಗಳನ್ನು ಇರಿಸಿಕೊಂಡಿದ್ದಾರೆ.
ಬೃಹತ್ ಟಿವಿ ರೂಮ್ ಇದ್ದು, ಇದು ಮನೆಯ ತಮ್ಮ ಇಷ್ಟದ ಪ್ಲೇಸ್ ಎಂದಿದ್ದಾರೆ. ಟಿವಿ ರೂಮ್, ಡೈನಿಂಗ್‌ರೂಮ್ ಹಾಗೂ ಕಿಚನ್ ಒಂದೇ ಸಾಲಿನಲ್ಲಿ ಇದ್ದು, ಟಿವಿ ನೋಡುತ್ತಾ ಮಾತುಕತೆ ನಡೆಸಬಹುದು ಎಂದಿದ್ದಾರೆ.
ಚಿರಂಜೀವಿ ಸರ್ಜಾಗೆ ನೀಡಿದ ಫಿಲ್ಮ್‌ಫೇರ್ ಅವಾರ್ಡ್‌ಅನ್ನು ಟಿವಿ ವಾರ್ಡ್‌ರೋಬ್‌ಮೇಲೆ ಇರಿಸಿಕೊಂಡಿದ್ದಾರೆ. ಅದರೊಂದಿಗೆ ಚಿರಂಜೀವಿ ಅವರ ಬೃಹತ್ ಫೋಟೋ ಕೂಡ ಮನೆಯಲ್ಲಿ ಗಮನ ಸೆಳೆಯುತ್ತದೆ.
ಮನೆಯ ಮೇಲ್ಭಾಗದಲ್ಲಿ ಒಟ್ಟು ಮೂರು ರೂಮ್‌ಗಳಿವೆ. ಬೃಹತ್ ಟೆರಸ್ ಬಾಲ್ಕನಿ ಇದ್ದು, ಮೇಘನಾ ರಾಜ್ ಅವರ ಬೆಡ್‌ರೂಮ್‌ನಿಂದಲೂ ಅದಕ್ಕೆ ಆಕ್ಸೆಸ್ ಇದೆ.
ಬೆಡ್ ರೂಮ್‌ನಲ್ಲಿ ಬುಕ್ ಶೆಲ್ಫ್ ಹಾಗೂ ಆಕರ್ಷಕ ಕುರ್ಚಿಯನ್ನೂ ಅವರು ಇರಿಸಿದ್ದಾರೆ. ಇದೇ ರೂಮ್‌ನಲ್ಲಿಯೇ ರಾಯನ್ ಹಾಗೂ ತಾವು ಮಲಗುವುದಾಗಿಯೂ ತಿಳಿಸಿದ್ದಾರೆ.
ಇನ್ನು ರಾಯನ್ ಸರ್ಜಾ ಅವರಿಗೂ ಒಂದು ರೂಮ್ ಮೀಸಲಿಡಲಾಗಿದ್ದು, ಅದನ್ನೀಗ ಗೆಸ್ಟ್ ರೂಮ್, ಪ್ಲೇಯಿಂಗ್ ರೂಮ್ ರೀತಿ ಬಳಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆ ರೂಮ್‌ಗೂ ದೊಡ್ಡದಾದ ವಾರ್ಡ್‌ರೋಬ್‌ಅನ್ನು ಹಾಕಲಾಗಿದೆ.
ಇನ್ನೊಂದು ಬೆಡ್‌ರೂಮ್ ಇದ್ದರೂ, ಅದನ್ನು ವಾಕಿಂಗ್ ವಾರ್ಡ್‌ರೋಬ್/ಮೇಕಪ್ ರೂಮ್ ಆಗಿ ಬದಲಾಯಿಸಲಾಗಿದೆ. ಇಡೀ ರೂಮ್‌ನಲ್ಲಿ ವಾರ್ಡ್‌ರೋಬ್‌ಗಳಿದ್ದು, ಅದರಲ್ಲಿ ಹ್ಯಾಂಡ್‌ಬ್ಯಾಗ್, ಶೂ ರಾಕ್ ಹಾಗೂ ಪರ್ಪ್ಯೂಮ್‌ಗಳಿಗಾಗಿಯೇ ಪ್ರತ್ಯೇಕ ಸ್ಥಳವಿದೆ.
ಇದೇ ರೂಮ್‌ನಲ್ಲಿ ಚಿರಂಜೀವಿ ಸರ್ಜಾ ಅವರ ಸಹಿ ಇರುವ ಮೇಕಪ್ ಮಿರರ್ ಇರಿಸಲಾಗಿದೆ. ಚಿರಂಜೀವಿ ಸರ್ಜಾ ಸಹಿ ಅದರಲ್ಲಿ ಇರುವ ಕಾರಣ, ಅದನ್ನು ಹೇಗಿದೆಯೋ ಹಾಗಯೇ ಮೇಘನಾ ಸರ್ಜಾ ಉಳಿಸಿಕೊಂಡಿದ್ದಾರೆ. ಇನ್ನು ಬಾತ್‌ರೂಮ್‌ಗೆ ತಮ್ಮ ಆಯ್ಕೆಯ ಟೈಲ್ಸ್‌ಗಳನ್ನೇ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.