ಬ್ಲ್ಯಾಕ್ ಡ್ರೆಸ್ಸಲ್ಲಿ ಪೋಸ್ ಕೊಟ್ಟ ಮೇಘಾ ಶೆಟ್ಟಿ… ಪಡ್ಡೆಗಳ ನಿದ್ದೆ ಹಾರೋಯ್ತಂತೆ!
ಕನ್ನಡ ನಟಿ ಮೇಘಾ ಶೆಟ್ಟಿ ಬ್ಲ್ಯಾಕ್ ಗೌನ್ ಧರಿಸಿ ಪೋಸ್ ಕೊಟ್ಟಿದ್ದು, ನಟಿಯ ಅಂದ ಚೆಂದ ನೋಡಿ, ಪಡ್ಡೆ ಹುಡುಗರ ನಿದ್ದೆ ಹಾಳಾಗಿದ್ಯಂತೆ.

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಜನಮನ ಗೆದ್ದ ನಟಿ ಮೇಘಾ ಶೆಟ್ಟಿ (Megha Shetty), ಸದ್ಯ ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.
ಸೋಶಿಯಲ್ ಮಿಡೀಯಾದಲ್ಲಿ ಆಕ್ಟಿವ್ ಆಗಿರುವ ಮೇಘಾ ಶೆಟ್ಟಿ, ಹೊಸ ಹೊಸ ಫೋಟೊ ಶೂಟ್(Photo shoot) ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ನಟಿ ಹಂಚಿಕೊಂಡಿರುವ ಫೋಟೊಗಳಂತೂ ಪಡ್ಡೆಗಳ ನಿದ್ದೆ ಕೆಡಿಸುತ್ತಿದೆ. ಅಷ್ಟಕ್ಕೂ ಆ ಫೋಟೊಗಳಲ್ಲಿ ಅಂತದ್ದೇನಿದೆ ಅನ್ನೋದನ್ನು ನೋಡೋಣ.
ಮೇಘಾ ಶೆಟ್ಟಿ ಕಪ್ಪು ಬಣ್ಣದ, ಸ್ಲೀವ್ ಲೆಸ್, ಥೈ ಹೈ ಸ್ಲಿಟ್ ಶಾರ್ಟ್ ಡ್ರೆಸ್ ಧರಿಸಿದ್ದು, ಜೊತೆ ಸ್ಲಿಮ್ ಆಂಡ್ ಟ್ರಿಮ್ ಆಗಿ ಕಾಣಿಸುತ್ತಿದ್ದು, ಅವರ ಫಿಟ್ನೆಸ್ ಎದ್ದು ಕಾಣುತ್ತಿದೆ. ಕಪ್ಪು ಡ್ರೆಸಲ್ಲಿ ದಂತದ ಗೊಂಬೆಯಂತಿರುವ ಮೇಘಾ ಶೆಟ್ಟಿ ಅಂದ ಎದ್ದು ಕಾಣುತ್ತಿದ್ದು, ಇದನ್ನು ನೋಡಿ, ಹುಡುಗರು ಕವಿಗಳಾಗಿ ಹಾಡಿ ಹೊಗಳುತ್ತಿದ್ದಾರೆ.
ಮೇಘಾ ಶೆಟ್ಟಿ ತುಂಬಾನೆ ಸುಂದರವಾಗಿ ಕಾಣಿಸ್ತಿದ್ದೀರಿ, ನೀವು ದೇವತೆ, ಕ್ಲಾಸ್ 1 ಫೋಟೊಗ್ರಾಫಿ, ನಿಮ್ಮ ಸುಂದರ ಹೇರ್ ಸ್ಟೈಲ್, ಕೊಲ್ಲುವಂತಹ ಕಣ್ಣುಗಳು, ನಿಮ್ಮ ಮಿಲ್ಕಿ ಬ್ಯೂಟಿ ಎಲ್ಲವೂ ಸೇರಿ ನಮ್ಮನ್ನು ಸೆಳೆಯುತ್ತಿದೆ ಎನ್ನುತ್ತಿದ್ದಾರೆ ಜನ. ಜೊತೆಗೆ ಹಾರ್ಟ್ ಇಮೋಜಿ ಮೂಲಕ ಸೂಪರ್ ಅಂತಿದ್ದಾರೆ.
ಅಂದ ಹಾಗೆ ಸದ್ಯ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ಹಾಗೂ ಸೀರಿಯಲ್ ನಿರ್ಮಾಣಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದೆ ನಟಿ ಒಂದೆರಡು ಸೀರಿಯಲ್ ಗಳನ್ನು ನಿರ್ಮಾಣ ಮಾಡಿದ್ದರು. ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ (Muddu Sose) ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಮೇಘಾ ಶೆಟ್ಟಿ ಈಗಾಗಲೇ ಕನ್ನಡಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಜೊತೆ ಟ್ರಿಪಲ್ ರೈಡಿಂಗ್, ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು ಜೊತೆ ದಿಲ್ ಪಸಂದ್ ಹಾಗೂ ಧನ್ವೀರ್ ಜೊತೆ ಕೈವಾ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ನಟಿಗೆ ಜೊತೆ ಜೊತೆಯಲಿ ಸೀರಿಯಲ್ ತಂದು ಕೊಂಡ ಯಶಸ್ಸು ಯಾವ ಸಿನಿಮಾದಲ್ಲೂ ಸಿಕ್ಕಿಲ್ಲ.
ಇನ್ನು ಮೇಘಾ ಶೆಟ್ಟಿ ಕೈಯಲ್ಲಿ ಮೂರು ಸಿನಿಮಾಗಳಿದ್ದು, ಶೂಟಿಂಗ್ ಗಳಲ್ಲಿ ನಟಿ ಪೂರ್ತಿ ಬ್ಯುಸಿಯಾಗಿದ್ದಾರೆ. ಆಫ್ಟರ್ ಆಪರೇಶನ್ ಲಂಡನ್ ಕೆಫೆ, ಚೀತಾ, ಗ್ರಾಮಾಯಣ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ. ಆದರೆ ಯಾವ ಸಿನಿಮಾ ಮೊದಲು ರಿಲೀಸ್ ಆಗುತ್ತೆ ಅನ್ನೋದು ಗೊತ್ತಿಲ್ಲ.