- Home
- Entertainment
- TV Talk
- Bigg Boss Kannada 12: ಮಾಳು ನಿಪನಾಳ ಮಕ್ಕಳ ಅಬ್ಬರಕ್ಕೆ ಬೆರಗಾದ ಗಿಲ್ಲಿ ನಟ; ಅಂಥದ್ದೇನು ಮಾಡಿದ್ರು?
Bigg Boss Kannada 12: ಮಾಳು ನಿಪನಾಳ ಮಕ್ಕಳ ಅಬ್ಬರಕ್ಕೆ ಬೆರಗಾದ ಗಿಲ್ಲಿ ನಟ; ಅಂಥದ್ದೇನು ಮಾಡಿದ್ರು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಫ್ಯಾಮಿಲಿ ರೌಂಡ್ ಇದ್ದು, ಈಗಾಗಲೇ ಮನೆಗೆ ಎಲ್ಲ ಸ್ಪರ್ಧಿಗಳ ಮನೆಯವರು ಎಂಟ್ರಿ ಕೊಟ್ಟಿದ್ದಾರೆ. ಈಗ ಮಾಳು ನಿಪನಾಳ ಅವರ ಕುಟುಂಬ ಕೂಡ ದೊಡ್ಮನೆಗೆ ಬಂದಿದೆ.

ಡ್ರ್ಯಾಗನ್ ಹೇರ್‌ಸ್ಟೈಲ್
ಮಾಳು ನಿಪನಾಳ ಅವರು ಟಾಸ್ಕ್ ಸಲುವಾಗಿ ಡ್ರ್ಯಾಗನ್ ಹೇರ್‌ಸ್ಟೈಲ್ ಮಾಡಿಕೊಂಡಿದ್ದರು. ಅಂತೆಯೇ ಅವರ ಇಬ್ಬರು ಗಂಡು ಮಕ್ಕಳು ಕೂಡ ಈ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿ ಮಾಳು ಅವರು ಫುಲ್ ಖುಷಿಯಾಗಿದ್ದಾರೆ.
ಸ್ಟ್ಯಾಂಡ್ ತಗೋಳಲ್ಲ, ಮಾತು ಆಡಲ್ಲ
ಮಾಳು ನಿಪನಾಳ ಅವರು ಈ ಮನೆಯಲ್ಲಿ ಸ್ಟ್ಯಾಂಡ್ ತಗೋಳಲ್ಲ, ಮಾತು ಆಡಲ್ಲ, ಕಾಣಿಸಿಕೊಳ್ಳೋದಿಲ್ಲ ಎಂಬ ಆರೋಪ ಇದೆ. ಉತ್ತರ ಕರ್ನಾಟಕದಲ್ಲಿ ಇವರಿಗೆ ಬೆಂಬಲ ಇದೆ ಎಂದು ದೊಡ್ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂಬ ಮಾತು ಕೂಡ ಇದೆ.
ಮಾಳು ನಿಪನಾಳ ಮಕ್ಕಳ ಬಿಂದಾಸ್ ಆಟ
ಮಾಳು ನಿಪನಾಳ ಅವರ ಮಕ್ಕಳು ದೊಡ್ಮನೆಯಲ್ಲಿ ಬಿಂದಾಸ್ ಆಗಿ ಆಟ ಆಡಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಆಡಿದ್ದಾರೆ, ಬಾಲ್ ಹಿಡಿದುಕೊಂಡು ಓಡಾಡಿದ್ದಾರೆ. ಗಿಲ್ಲಿ ನಟ ಅವರಂತೂ ಮಕ್ಕಳನ್ನು ಆಡಿಸಿದ್ದಾರೆ. ಅಂದಹಾಗೆ ಮಾಳು ಪತ್ನಿ ಕೂಡ ಗಾಯಕಿ, ಹೀಗಾಗಿ ಅವರು ಕೂಡ ಮಾಳು ಜೊತೆ ಹಾಡು ಹಾಡಿದ್ದಾರೆ.
ಗಿಲ್ಲಿ ನಟ ಕೂಡ ಸರ್ಪ್ರೈಸ್
ಮಾಳು ಮಕ್ಕಳು ಬಿಂದಾಸ್ ಆಗಿ ಆಟ ಆಡಿದ್ದಾರೆ, ಅವರು ಯಾವುದಕ್ಕೂ ಹೆದರಿಲ್ಲ. ಇದನ್ನು ಕಂಡು ಗಿಲ್ಲಿ ನಟ ಕೂಡ ಸರ್ಪ್ರೈಸ್ ಆಗಿದ್ದಾರೆ. ಏನಣ್ಣಾ, ಇವರು ಯಾವುದಕ್ಕೂ ಹೆದರೋದಿಲ್ಲ ಎಂದು ಗಿಲ್ಲಿಯೇ ಹೇಳಿದ್ದಾರೆ.
ಕುಟುಂಬಸ್ಥರು ಆಗಮನ
ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ, ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ ಗೌಡ, ಧನುಷ್ ಗೌಡ, ಧ್ರುವಂತ್, ಸೂರಜ್, ರಘು ಅವರು ಕುಟುಂಬಸ್ಥರು ಆಗಮಿಸಿದ್ದರು. ಆ ವೇಳೆ ಗಿಲ್ಲಿ ನಟನ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ, ಗಿಫ್ಟ್ ಕೂಡ ನೀಡಿದ್ದಾರೆ. ಅಂದಹಾಗೆ ಇನ್ನು ಫಿನಾಲೆಗೆ 20 ದಿನಗಳು ಬಾಕಿ ಉಳಿದಿವೆ. ಹೀಗಾಗಿ ಯಾರು ವಿನ್ ಆಗ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

