- Home
- Entertainment
- TV Talk
- Landlord Movie: ದುನಿಯಾ ವಿಜಯ್, Rachita Ram ಸಿನಿಮಾದಲ್ಲಿ ವಿಗ್ ಹಾಕಿ ನಟಿಸಿದ್ದೇಕೆ ರಾಜ್ ಬಿ ಶೆಟ್ಟಿ?
Landlord Movie: ದುನಿಯಾ ವಿಜಯ್, Rachita Ram ಸಿನಿಮಾದಲ್ಲಿ ವಿಗ್ ಹಾಕಿ ನಟಿಸಿದ್ದೇಕೆ ರಾಜ್ ಬಿ ಶೆಟ್ಟಿ?
Landlord Movie Release: ನಟ ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದ 'ಲ್ಯಾಂಡ್ ಲಾರ್ಡ್' ಸಿನಿಮಾದ ಸರ್ವೈವರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಜಡೇಶ್ ಕೆ ಹಂಪಿ ನಿರ್ದೇಶನದ ‘ದಿ ರೂಲರ್’ ಟೀಸರ್ ಬಿಡುಗಡೆಯಾಗಿದೆ. ‘ದಿ ರೂಲರ್’ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ.

ವಿಗ್ ಹಾಕಿ ನಟಿಸಿದೆ: ರಾಜ್ ಬಿ ಶೆಟ್ಟಿ
ನಟ ರಾಜ್ ಬಿ ಶೆಟ್ಟಿ ಮಾತನಾಡಿದ್ದು, ನಿರ್ದೇಶಕ ಜಡೇಶ್ ಅವರು ಕಾರಣಕ್ಕೆ ಸಿನಿಮಾ ಒಪ್ಪಿಕೊಂಡೆ. ನಾನು ಒಬ್ಬ ನಿರ್ದೇಶಕ ಗೆಲ್ಲಲ್ಲೇಬೇಕು ಎಂದು ಬಯಸುತ್ತೇನೆ. ಈ ಸಿನಿಮಾದಲ್ಲಿ ನನ್ನದು ಶೋಷಕ ವರ್ಗದಲ್ಲಿರುವಂತಹ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವಂತಹ ವ್ಯಕ್ತಿಯ ಪಾತ್ರ. ಈ ಪಾತ್ರಕ್ಕೆ ಕೂದಲಿರಬೇಕು ಎಂದು ನಿರ್ದೇಶಕರು ಹೇಳಿದರು. ನಾನು ಬೇಕಾ? ಎಂದು ಕೇಳಿದೆ. ಏಕೆಂದರೆ ಕೆಲವು ವಿಗ್‌ಗಳು ನನಗೆ ಸೆಟ್ ಆಗುವುದಿಲ್ಲ. ನಾನೊಂದು ಕಡೆ, ಅದೊಂದು ಕಡೆ ಆಗುತ್ತದೆ. ನಾನು ಹಾಗೂ ವಿಗ್ ಇಬ್ಬರೂ ಒಟ್ಟಿಗೆ ನಟಿಸಬೇಕು ಅಂತ ವಿಗ್ ಬೇಕು ಅಂತ ಹೇಳಿದೆ. ಹೀಗಾಗಿ ನನಗೆ ತಿಳಿದಿರುವವರ ಬಳಿ ವಿಗ್ ತರಿಸಿಕೊಳ್ಳುತ್ತೇನೆ. ಅವರು ನನಗೆ ಸರಿ ಹೊಂದುವ ವಿಗ್ ಕೊಡುತ್ತಾರೆ ಎಂದೆ. ಟೀಸರ್ ನೋಡಿದಾಗ ನನ್ನ ತಲೆಗೆ ವಿಗ್ ಸರಿ ಹೊಂದಿದೆ ಎನಿಸಿತು. ಕೋಲಾರ ಭಾಷೆಯಲ್ಲಿ ನನ್ನ ಡೈಳಾಗ್ ಇರುತ್ತದೆ. ದುನಿಯಾ ವಿಜಯ್ ಜೊತೆಗೆ ಮೊದಲ ಬಾರಿಗೆ ನಟಿಸಿದ್ದೇನೆ. ಬಹಳ ಖುಷಿಯಾಗಿದೆ. ನಿರ್ಮಾಪಕರಿಗೆ ಒಳ್ಳೆಯದಾಗಲಿ. ಈ ಸಿನಿಮಾ” ಯಶಸ್ವಿಯಾಗಲಿ ಎಂದರು.
ನಮ್ಮನ್ನು ಆಡ್ಕೊಂಡೋರು ತುಂಬ ಜನ ಇದ್ದಾರೆ
ದುನಿಯಾ ವಿಜಯ್ ಮಾತನಾಡಿ, “ನಾನು 20 ವರ್ಷಗಳ ಹಿಂದೆ ನನ್ನ ಬಳಿ ಎರಡು ಟೊಮ್ಯಾಟೋ ಇತ್ತು, ಹದಿನೈದು ರೂಪಾಯಿ ಇದೆ ಅಂತ ಬಂದೆ. ರಾಜ್ ಬಿ ಶೆಟ್ಟಿ ಒಂದು ಮೊಟ್ಟೆ ಇಟ್ಟುಕೊಂಡು ಬಂದವರು. ಆಗ ನಮ್ಮನ್ನು ಎಷ್ಟು ಜನ ಆಡಿಕೊಂಡಿದ್ದಾರೆ. ಕೊನೆಗೆ ನಾನೇ ಸರ್ವೈವರ್, ಅವರೆ ರೂಲರ್ ಆಗಿದ್ದೀವಿ. ಆಡಿಕೊಂಡವರಿಗೆಲ್ಲ ತುಂಬು ಹೃದಯದ ಧನ್ಯವಾದಗಳು. ಈ ಸಿನಿಮಾದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ. ಜಡೇಶ್ ಕಥೆ ಕೇಳಿ ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಜನವರಿ 23 ರಂದು ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ 3 ಹಾಡುಗಳು, ಟ್ರೇಲರ್ ಅನಾವರಣವಾಗಲಿದೆ” ಎಂದಿದ್ದಾರೆ.
ತಾಯಿ ಪಾತ್ರದಲ್ಲಿ ರಚಿತಾ ರಾಮ್
ನಿರ್ದೇಶಕ ಜಡೇಶ್ ಕೆ ಹಂಪಿ ಮಾತನಾಡಿ, ಮೊದಲು ಈ ಸಿನಿಮಾದ ಕಥೆ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದ ನಿರ್ಮಾಪಕರಿಗೆ ಧನ್ಯವಾದಗಳು. ಇನ್ನೂ ಈ ಸಿನಿಮಾದಲ್ಲಿ ನಟಿಸಿರುವ ದುನಿಯಾ ವಿಜಯ್ ಅವರು 50 ವರ್ಷ ವಯಸ್ಸಾದವರ ಪಾತ್ರದಲ್ಲಿ, ರಚಿತಾ ರಾಮ್ ಅವರು ಒಂದು ಮಗುವಿನ ತಾಯಿಯ ಪಾತ್ರದಲ್ಲಿ, ರಾಜ್ ಬಿ ಶೆಟ್ಟಿ ಅವರು ‘ದಿ ರೂಲರ್’ ಪಾತ್ರದಲ್ಲಿ ಹೀಗೆ ಅವರೆಲ್ಲರೂ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪರಾಗಲಿ ಹಾಗೂ ಕಲಾವಿದರಾಗಲಿ ನನಗೆ ಪೂರ್ಣ ಸ್ವತಂತ್ರ್ಯ ಕೊಟ್ಟಿದ್ದಾರೆ. ಯಾರು ಕೂಡ ಯಾವುದನ್ನು ಪ್ರಶ್ನೆ ಮಾಡಲಿಲ್ಲ. ಅದರಿಂದ ನಾನು ಅಂದಕೊಂಡ ಹಾಗೆ ಈ ಸಿನಿಮಾ ಬರಲು ಸಾಧ್ಯವಾಯಿತು ಎಂದರು.
‘ದಿ ರೂಲರ್’ ಟೀಸರ್ ಅನಾವರಣ
ಕಳೆದ ತಿಂಗಳು ನಮ್ಮ ಚಿತ್ರದ ‘ದಿ ಸರ್ವೈವರ್’ ಟೀಸರ್ ಬಿಡುಗಡೆಯಾಗಿತ್ತು. ಈಗ ‘ದಿ ರೂಲರ್’ ಟೀಸರ್ ಅನಾವರಣವಾಗಿದೆ. ನಮ್ಮ ಸಿನಿಮಾದಲ್ಲಿ ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ ಅವರಿಬ್ಬರು ನಟಿಸಿರುವುದು ಬಹಳ ಸಂತೋಷವಾಗಿದೆ. ಆರಂಭದಿಂದಲೂ ತಾವು ನೀಡುತ್ತಿರುವ ಪ್ರೋತ್ಸಾಹ ಹೀಗೆ ಮುಂದುವರೆಯಲಿ ಎಂದು ನಿರ್ಮಾಪಕ ಹೇಮಂತ್ ಗೌಡ ಹೇಳಿದರು.
ಈ ಸಿನಿಮಾ ರಿಲೀಸ್ ಯಾವಾಗ?
“ನಾನು ಈ ಸಿನಿಮಾದಲ್ಲಿ ಪದ್ಮಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೋಲಾರ ಭಾಷೆಯಲ್ಲೇ ನನ್ನ ಸಂಭಾಷಣೆ ಕೂಡ ಇರುತ್ತದೆ” ಎಂದು ನಟಿ ಭಾವನಾ ರಾವ್ ತಿಳಿಸಿದರು.
ಸಂಭಾಷಣೆ ಬರೆದಿರುವ ಮಾಸ್ತಿ, ಶ್ರೀಕಾಂತ್, ಮಂಜುನಾಥ್ (ಕೋಲಾರ ಭಾಗ),ರಾಕೇಶ್ ಅಡಿಗ, ಶಿಶಿರ್, ಮಿತ್ರ, ಅಭಿಷೇಕ್ ದಾಸ್, ಮಹಾಂತೇಶ್ ಈ ಸಿನಿಮಾದಲ್ಲಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಸ್ವಾಮಿ ಜೆ ಗೌಡ ಛಾಯಾಗ್ರಹಣ, ಕೆಎಂ ಪ್ರಕಾಶ್ ಸಂಕಲನವಿದೆ. ಸಾರಥಿ ಫಿಲಂಸ್ ಲಾಂಛನದಲ್ಲಿ ಕೆವಿ ಸತ್ಯಪ್ರಕಾಶ್ - ಹೇಮಂತ್ ಗೌಡ ಕೆಎಸ್ ನಿರ್ಮಿಸಿದ್ದಾರೆ.
ದಿ ರೂಲರ್’ ಟೀಸರ್ ನೋಡಿದ ರಾಜ್ ಬಿ ಶೆಟ್ಟಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ 2026ರ ಜನವರಿ 23 ರಂದು ಬಿಡುಗಡೆಯಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

