ಮದುವೆ ವ್ಲಾಗ್ ಪೋಸ್ಟ್ ಮಾಡಿ ಕೋಟಿ ಬಾಚಿಕೊಂಡ ವ್ಲಾಗರ್
ವ್ಲಾಗರ್ ಗಳಿಗೆ ಸೋಶಿಯಲ್ ಮೀಡಿಯಾ ಬಂಗಾರದ ಮೊಟ್ಟೆ ಇಡುವ ಕೋಳಿ. ಭಾರತದ ಪ್ರಸಿದ್ಧಿ ಹಾಗೂ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೌರವ್ ಜೋಶಿ ಮದುವೆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಕೋಟ್ಯಾಂತರ ರೂಪಾಯಿ ಬಾಚಿಕೊಂಡಿದ್ದಾರೆ.

ಸೌರವ್ ಜೋಶಿ ಯಾರು ?
ಸೌರವ್ ಜೋಶಿ ಭಾರತದ ಅತಿದೊಡ್ಡ ಯೂಟ್ಯೂಬರ್ಗಳಲ್ಲಿ ಒಬ್ಬರು. ಅವರ ಚಾನೆಲ್, ಸೌರವ್ ಜೋಶಿ ವ್ಲಾಗ್ಸ್, ಲಕ್ಷಾಂತರ ಸಬ್ಸ್ಕ್ರೈಬರ್ ಹೊಂದಿರುವ ದೇಶದ ಅತ್ಯಂತ ಜನಪ್ರಿಯ ವ್ಲಾಗಿಂಗ್ ಚಾನೆಲ್. ಉತ್ತರಾಖಂಡ ಮೂಲದ ಸೌರವ್ 2019 ರಲ್ಲಿ ವ್ಲಾಗಿಂಗ್ ಶುರು ಮಾಡಿದ್ರು. ಫ್ಯಾಮಿಲಿ ವ್ಲಾಗ್, ಟ್ರಾವೆಲ್ ಮತ್ತು ಲೈಫ್ಸ್ಟೈಲ್ ವಿಷಯದ ಮೂಲಕ ಎಲ್ಲಾ ವಯಸ್ಸಿನ ಬಳಕೆದಾರರನ್ನು ಅವರು ಸೆಳೆದಿದ್ದಾರೆ. ವರದಿ ಪ್ರಕಾರ ಸೌರವ್ ಜೋಶಿ ತಮ್ಮ ವ್ಲಾಗ್ ಮೂಲಕ ತಿಂಗಳಿಗೆ ಸುಮಾರು 4 ಕೋಟಿ ಸಂಪಾದನೆ ಮಾಡ್ತಿದ್ದಾರೆ.
ಸೌರವ್ ಜೋಶಿ ಮದುವೆ
ಸೌರವ್ ಜೋಶಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವಂತಿಕಾ ಭಟ್ ಜೊತೆ ಅವರು ಸಪ್ತಪದಿ ತುಳಿದಿದ್ದಾರೆ. ಅವರ ಮದುವೆ ಬಗ್ಗೆ ಬಳಕೆದಾರರಿಗೆ ಸಾಕಷ್ಟು ಕುತೂಹಲವಿತ್ತು. ಮದುವೆಯಾಗ್ತಿರುವ ಹುಡುಗಿ ಯಾರು ಎಂಬುದನ್ನು ನೋಡಲು ಬಳಕೆದಾರರು ಆಸಕ್ತರಾಗಿದ್ದರು.
ಹಣ ಗಳಿಸೋ ಮೂಲವಾಯ್ತು ಮದುವೆ
ಸೌರವ್ ತಾವು ಮದುವೆ ಆಗುವ ಹುಡುಗಿ ಮುಖವನ್ನು ತೋರಿಸಿರಲಿಲ್ಲ. ಈಗ ಮದುವೆಯ ಎಲ್ಲ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾರೆ. ಮದುವೆಯ ಪ್ರತಿಯೊಂದು ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ವ್ಲಾಗ್ ರೂಪದಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಇದು ಸಬ್ಸ್ಕ್ರೈಬರ್ ಹೆಚ್ಚಿಸಿದ್ದಲ್ಲದೆ ಗಳಿಕೆ ಡಬಲ್ ಮಾಡಿದೆ.
ಕೋಟಿ ಕೋಟಿ ವೀಕ್ಷಣೆ
ಸೌರವ್ ಜೋಶಿ, ಮದುವೆಗೆ ಮುನ್ನ ನಡೆದ ತಯಾರಿಯಿಂದ ಮದುವೆ ಎಲ್ಲಿ ನಡೆಯುತ್ತೆ ಎನ್ನುವವರೆಗೆ ಎಲ್ಲವನ್ನೂ ವ್ಗಾಲ್ ಮಾಡಿದ್ದರು. ಮದುವೆ ನಂತ್ರ ಹಲ್ಡಿ ವ್ಲಾಗ್, ಮೆಹಂದಿ ವ್ಲಾಗ್, ಮದುವೆ ವ್ಲಾಗ್, ಮನೆಗೆ ಬಂದ ವಧು ಅಂತ ಅನೇಕ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಪ್ರತಿಯೊಂದು ವಿಡಿಯೋ ಪೋಸ್ಟ್ ಮಾಡಿದ ಒಂದೇ ದಿನದಲ್ಲಿ ಮದುವೆ ವಿಡಿಯೋ 1.1 ಕೋಟಿಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.
ಸೌರವ್ ಜೋಶಿ ಗಳಿಕೆ
ಬರೀ ಮದುವೆ ವ್ಲಾಗ್ ಮೂಲಕವೇ ಸೌರವ್ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ. ಆಡ್ ಮೇಲೆ ಯೂಟ್ಯೂಬ್ ಹಣ ಪಾವತಿ ಮಾಡುತ್ತೆ. 10 ಮಿಲಿಯನ್ ವೀಕ್ಷಣೆಗಳಿಗೆ 2 ರಿಂದ 10 ಲಕ್ಷದವರೆಗೆ ಸಂಪಾದನೆ ಮಾಡ್ಬಹುದು. ಅದು ಸಬ್ಸ್ಕ್ರೈಬರ್ ಹಾಗೂ ಆಡ್ ಅವಲಂಬಿಸಿದೆ. ಸೌರವ್ ಜೋಶಿ ಮದುವೆಯ ಪ್ರತಿ ವ್ಲಾಗ್ ಗೆ YouTube AdSense ನಿಂದ ಸರಾಸರಿ 8 ಲಕ್ಷಕ್ಕಿಂತ ಹೆಚ್ಚು ಗಳಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಇದಲ್ದೆ ಇನ್ಸ್ಟಾಗ್ರಾಮ್ ನಲ್ಲಿ ಕೂಡ ಸೌರವ್ ಮದುವೆ ವಿಡಿಯೋ ಮೂಲಕ ಸಾಕಷ್ಟು ಹಣ ಸಂಪಾದನೆ ಮಾಡಿದ್ದಾರೆ ಎನ್ನಲಾಗ್ತಿದೆ.
ಅವಂತಿಕಾ ಭಟ್ ಯಾರು ?
ಅವಂತಿಕಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. . ಅವಂತಿಕಾ ಇನ್ಸ್ಟಾಗ್ರಾಮ್ನಲ್ಲಿ 400,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅವಂತಿಕಾ ಭಟ್ ಅವರ ಅಜ್ಜ, ದಿವಂಗತ ಹರಿದತ್ ಭಟ್, ಪ್ರಸಿದ್ಧ ಜ್ಯೋತಿಷಿಯಾಗಿದ್ದರು.ಅವರ ತಂದೆ, ಪ್ರಕಾಶ್ ಚಂದ್ರ ಭಟ್ ಕೂಡ ಜ್ಯೋತಿಷಿ.
ಹಣ ಸಂಪಾದನೆಗೆ ಹೊಸ ದಾರಿ
ಈಗಿನ ದಿನಗಳಲ್ಲಿ ಖಾಸಗಿ ವ್ಲಾಗ್ ಗಳಿಕೆ ಹೆಚ್ಚಾಗ್ತಿದೆ. ಖಾಸಗಿ ವಿಷ್ಯವನ್ನು ವೈರಲ್ ಮಾಡಿ ತ್ವರಿತವಾಗಿ ಹಾಗೂ ಹೆಚ್ಚಿನ ಮಟ್ಟದಲ್ಲಿ ಹೇಗೆ ಹಣ ಸಂಪಾದನೆ ಮಾಡ್ಬಹುದು ಎಂಬುದನ್ನು ಇದು ತೋರಿಸ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

